Saturday, 23rd November 2024

ಸಂವೇದಿ ಸೂಚ್ಯಂಕ 300 ಅಂಕ ಕುಸಿತ

ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿ ಷೇರು ಖರೀದಿಯಲ್ಲಿ ಆಸಕ್ತಿ ವಹಿಸದ ಪರಿಣಾಮ ಬುಧವಾರ ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 300 ಅಂಕ ಕುಸಿತ ಕಂಡಿದೆ.

ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 325.15 ಅಂಕ ಕುಸಿತ ಕಂಡಿದ್ದು, 49,726.29 ಅಂಕಗಳ ವಹಿವಾಟು ನಡೆಸಿದೆ. ಎನ್ ಎಸ್ ಇ ನಿಫ್ಟಿ 94.60 ಅಂಕ ಕುಸಿತವಾಗಿದೆ.

ಷೇರುಪೇಟೆ ಸೆನ್ಸೆಕ್ಸ್ ಕುಸಿತದಿಂದ ಒಎನ್ ಜಿಸಿ, ಎಸ್ ಬಿಐ, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್ ಷೇರುಗಳು ನಷ್ಟ ಕಂಡಿವೆ. ಮಂಗಳವಾರ ಷೇರುಗಳ ಖರೀದಿಯಲ್ಲಿ ಹೂಡಿಕೆದಾರರು ಆಸಕ್ತಿ ವಹಿಸಿದ ಪರಿಣಾಮ ಷೇರುಪೇಟೆ ಸಂವೇದಿ ಸೂಚ್ಯಂಕ 280.15 ಅಂಕಗಳ ಏರಿಕೆ ಕಂಡು, 50,151.44ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.