Saturday, 23rd November 2024

ಜೆಶೊರೇಶ್ವರಿ ಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮೋದಿ

ಢಾಕಾ: ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಸತ್ಕಿರ ಜಿಲ್ಲೆಯ ಈಶ್ವರಿಪುರದಲ್ಲಿರುವ ಜೆಶೊರೇಶ್ವರಿ ಕಾಳಿ ದೇವಾ ಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪೂಜೆ ಸಲ್ಲಿಸಿದ ಪ್ರಧಾನಿ ಕಾಳಿ ದೇವತೆಯ ಮೂರ್ತಿಗೆ ಕೈಯಿಂದ ಮಾಡಿದ ಮುಕುಟ ಧರಿಸಿದರು. ಹೊರಗೆ ಚಿನ್ನದ ಕವಚವಿರುವ ಚಿನ್ನದ ಮುಕುಟ ಇದಾಗಿದ್ದು ಭಾರತದ ಸಾಂಪ್ರದಾಯಿಕ ಕಲಾವಿದರು ತಯಾರಿಸಲು ಮೂರು ವಾರ ತೆಗೆದುಕೊಂಡಿದ್ದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪ್ರಧಾನಿ, ಕಾಳಿ ಮಾತೆಯ ಮುಂದೆ ಪ್ರಾರ್ಥನೆ ಸಲ್ಲಿಸುವ ಅವಕಾಶ ಇಂದು ಸಿಕ್ಕಿತು. ಇಡೀ ಮನುಸಂಕುಲವನ್ನು ಕೋವಿಡ್-19 ಸಂಕಷ್ಟದಿಂದ ಪಾರುಮಾಡುವಂತೆ ದೇವಿ ಮುಂದೆ ಪ್ರಾರ್ಥನೆ ಮಾಡಿಕೊಂಡೆ ಎಂದು ಹೇಳಿದ್ದಾರೆ.

ಸಹಸ್ರಾರು ಜನರು ಬರುವಾಗ ಕಾಳಿ ಮಾತೆಯ ಪೂಜೆ ಮಾಡಲು ಕುಳಿತು ಕೊಳ್ಳಲು, ವ್ಯವಸ್ಥೆಗೆ ಸಮುದಾಯ ಸಭಾಭವನ ನಿರ್ಮಿ ಸುವ ಅಗತ್ಯವಿದೆ ಎಂದು ಮನಗಂಡಿದ್ದೇನೆ ಎಂದು ಪ್ರಧಾನಿ ಹೇಳಿದರು. ಈ ಸಮುದಾಯ ಭವನ ಉಪಯುಕ್ತವಾಗಬೇಕು. ಇದು ಚಂಡಮಾರುತದಂತಹ ವಿಪತ್ತುಗಳ ಸಮಯ ದಲ್ಲಿ ಎಲ್ಲರಿಗೂ ಆಶ್ರಯವಾಗಿ ಕಾರ್ಯನಿರ್ವಹಿಸಬೇಕು. ಭಾರತ ಸರ್ಕಾರ ನಿರ್ಮಾಣ ಕಾರ್ಯಗಳನ್ನು ಮಾಡುತ್ತದೆ. ಇದಕ್ಕಾಗಿ ಶುಭ ಹಾರೈಸಿದ ಬಾಂಗ್ಲಾದೇಶ ಸರ್ಕಾರಕ್ಕೆ ಅಭಿನಂದನೆಗಳು ಎಂದು ಹೇಳಿದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily