Saturday, 23rd November 2024

ಚಲಿಸಿದ ಎವರ್‌ಗ್ರೀನ್‌ ಕಂಪನಿಯ ಬೃಹತ್‌ ಕಂಟೇನರ್ ಹಡಗು

ಸುಯೆಜ್‌ (ಈಜಿಪ್ಟ್‌): ಕಾಲುವೆಯಲ್ಲಿ ಅಡ್ಡಲಾಗಿ ಆರು ದಿನಗಳಿಂದ ಸಿಲುಕಿ ಕೊಂಡಿದ್ದ ಬೃಹತ್‌ ಕಂಟೇನರ್ ಹಡಗು ಸೋಮ ವಾರ ಸಡಿಲಗೊಂಡಿದೆ. ಕಾರ್ಯಾಚರಣೆಯಲ್ಲಿದ್ದ ತಜ್ಞ ಸಿಬ್ಬಂದಿ ಹಡಗು ಮತ್ತೆ ಚಲಿಸುವಂತೆ ಮಾಡಿ ದ್ದಾರೆ.

ಎವರ್‌ಗ್ರೀನ್‌ ಕಂಪನಿಯ ಎವರ್‌ ಗಿವೆನ್‌ ಬೃಹತ್‌ ಹಡಗಿನ ಬಳಿಯ ಮರಳು ಮತ್ತು ಮಣ್ಣನ್ನು ತೆಗೆಯುವ ಕಾರ್ಯಾಚರಣೆ ನಡೆಸುವ ಜೊತೆಗೆ ಟಗ್‌ಬೋಟ್‌ ಗಳ ಸಹಕಾರದಿಂದ ಹಡಗಿನ ಪಥ ಬದಲಿಸುವ ಪ್ರಯತ್ನ ನಡೆಸಲಾಗಿತ್ತು.

ಸುಯೆಜ್‌ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಕಂಟೇನರ್‌ ಹಡಗು ಸೋಮವಾರ ಮತ್ತೆ ಚಲಿಸಿದೆ ವರದಿ ಮಾಡಿದೆ. ಎವರ್‌ ಗಿವೆನ್‌ ಹಡಗು ಪಥವನ್ನು ನೇರವಾಗಿಸಿಕೊಂಡು ಸಂಚರಿಸಿದರೆ, ಕಾಲುವೆಯಲ್ಲಿ ನಿರ್ಮಾಣವಾಗಿರುವ ಟ್ರಾಫಿಕ್‌ ಜಾಮ್‌ ಕರಗಲಿದೆ.

ಮಧ್ಯಪ್ರಾಚ್ಯ ದೇಶಗಳಿಂದ ವಿಶ್ವದ ವಿವಿಧೆಡೆಗೆ ಹೋಗಬೇಕಿರುವ ತೈಲವಾಹಕ ಹಡಗುಗಳು ಕಾಲುವೆಯಲ್ಲಿ ಸಿಲುಕಿವೆ. ಹಲವು ಹಡಗುಗಳು ಆಫ್ರಿಕಾವನ್ನು ಬಳಸಿ ಪ್ರಯಾಣಿಸಿರುವುದರಿಂದ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹಡಗು ಸಂಚರಿಸಿ ರುವ ಕುರಿತು ವರದಿಯಾಗುತ್ತಿದ್ದಂತೆ ಏಷ್ಯಾದ ರಾಷ್ಟ್ರಗಳು ಸೇರಿದಂತೆ ಹಲವು ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ದಾಖಲಾಗಿದೆ.

ನಡೆದಿದ್ದು ಇಷ್ಟೇ…

ಮೆಡಿಟರೇನಿಯನ್ ಸಮುದ್ರದಿಂದ ಕೆಂಪು ಸಮುದ್ರದ ಕಡೆಗೆ ಬರುತ್ತಿದ್ದ ಎವರ್‌ ಗಿವೆನ್ ಹಡಗು, ಸುಯೆಜ್ ಕಾಲುವೆಯ ದಕ್ಷಿಣದ ತುದಿಯಲ್ಲಿ ಕೆಟ್ಟು ನಿಂತಿತು. ಇದೇ ವೇಳೆ ಬಿರುಗಾಳಿ ಬೀಸಿದ ಕಾರಣ, ಹಡಗಿನ ಮುಂಭಾಗ ದಕ್ಷಿಣದ ಕಡೆಗೆ, ಹಿಂಭಾಗ ಉತ್ತರದ ಕಡೆಗೆ ತೇಲಿದೆ. ಇದನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಹಡಗು ಕಾಲುವೆಗೆ ಅಡ್ಡವಾಯಿತು. ಆದರೆ, ಹಡಗಿನ ಮುಂಭಾಗ ಮತ್ತು ಹಿಂಭಾಗವು ಕಾಲುವೆಯ ಅಂಚಿನಲ್ಲಿ ಇರುವ ಮರಳಿನಲ್ಲಿ ಸಿಲುಕಿಕೊಂಡಿತ್ತು. ಮರಳಿನಿಂದ ಅದನ್ನು ಬಿಡಿಸಲು ಸಾಧ್ಯ ವಾಗದೆ ಕಾಲುವೆ ಸಂಪೂರ್ಣವಾಗಿ ಬಂದ್ ಆಗಿತ್ತು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily