ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 800 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 240 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ ಶೇ 1.67ರಷ್ಟು ಹೆಚ್ಚಳಗೊಂಡು 49,845 ಪಾಯಿಂಟ್ಸ್ ಹಾಗೂ ಎನ್ಎಸ್ಇ ಸೂಚ್ಯಂಕ ನಿಫ್ಟಿ 255 ಪಾಯಿಂಟ್ಸ್ ಏರಿಕೆಗೊಂಡು 14757 ಪಾಯಿಂಟ್ಸ್ ತಲುಪಿದೆ. 1628 ಷೇರುಗಳು ಏರಿಕೆಗೊಂಡರೆ, 736 ಷೇರುಗಳು ಕುಸಿದವು, ಮತ್ತು 128 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾಗಿಲ್ಲ.
ಟಾಟಾ ಸ್ಟೀಲ್ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಸುಮಾರು 28 ರೂ.ಗಳ ಏರಿಕೆ ಕಂಡು 795.00 ರೂ. ತಲುಪಿದೆ.