ಮುಂಬೈ: ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ (ಎಂಐಡಿಸಿ) ಸರ್ವರ್ ಅನ್ನು ಹ್ಯಾಕ್ ಮಾಡಲಾಗಿದೆ.
ಆದರೆ, ಡೇಟಾ ವಾಪಾಸ್ ಬೇಕೆಂದರೆ 500 ಕೋಟಿ ರೂಗಾಗಿ ಬೇಡಿಕೆ ಇಟ್ಟಿದ್ದಾರೆ. ಸರ್ವರ್ ಹ್ಯಾಕ್ ಆದ ಕೂಡಲೇ, ಎಂಐಡಿಸಿಯ ಎಲ್ಲಾ 16 ಪ್ರಾದೇಶಿಕ ಕಚೇರಿಗಳ ಕೆಲಸ ಸಂಪೂರ್ಣವಾಗಿ ಮುಚ್ಚಲ್ಪಟ್ಟಿತು. ಹಣ ನೀಡದಿದ್ದರೆ ಡೇಟಾ ಅಳಿಸುವುದಾಗಿ ಹ್ಯಾಕರ್ ಗಳು ಬೆದರಿಕೆ ಹಾಕಿದ್ದಾರೆನ್ನಲಾಗಿದೆ.
ಎಲ್ಲಾ ಕೈಗಾರಿಕಾ ಎಸ್ಟೇಟ್ಗಳು, ಉದ್ಯಮಿಗಳು, ಸರ್ಕಾರಿ ಅಂಶಗಳು ಮತ್ತು ಎಂಐಡಿಸಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಸಂಪೂರ್ಣ ಮಾಹಿತಿ ಆನ್‌ಲೈನ್ ವ್ಯವಸ್ಥೆಯಲ್ಲಿ ಲಭ್ಯವಿದೆ. ಕಳೆದ ಸೋಮವಾರದಿಂದ ಸಂಪೂರ್ಣ ಕೆಲಸ ಸ್ಥಗಿತಗೊಂಡಿದೆ. ಎಂಐಡಿಸಿಯಲ್ಲಿ ಕಂಪ್ಯೂಟರ್ ಆನ್ ಮಾಡಿದ ನಂತರ, ಅದರಲ್ಲಿ ವೈರಸ್ ಕಾಣಿಸಿಕೊಂಡಿತು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ