Saturday, 23rd November 2024

ಕರೋನಾಗೆ ತತ್ತರಿಸಿದ ಷೇರು ಮಾರ್ಕೆಟ್‌: ಸೆನ್ಸೆಕ್ಸ್ 1,400, ನಿಫ್ಟಿ 14,400 ಅಂಕ ಕುಸಿತ

ಮುಂಬೈ: ದೇಶದಲ್ಲಿ ಕರೋನಾ ಎರಡನೇ ಅಲೆ ತೀವ್ರವಾಗುತ್ತಿದ್ದಂತೆ ಸೋಮವಾರ ಬೆಳಗ್ಗೆ ವಹಿವಾಟು ಆರಂಭಕ್ಕೆ ಸೆನ್ಸೆಕ್ಸ್ 1,400 ಅಂಕಗಳಷ್ಟು ಇಳಿಕೆಯಾಗಿದ್ದು ಹೆಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಗಳು ವಹಿವಾಟು ಆರಂಭಕ್ಕೆ ಭಾರೀ ನಷ್ಟ ಅನುಭವಿಸಿದವು.

30 ಷೇರುಗಳ ಬಿಎಸ್ ಇ ಸೂಚ್ಯಂಕ 1,427 ಅಂಕಗಳಲ್ಲಿ ಕುಸಿತ ಕಂಡುಬಂದು 164.32 ರಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ 431.90 ಅಂಕಗಳಷ್ಟು ಕುಸಿದು 14 ಸಾವಿರದ 403ರಲ್ಲಿ ವಹಿವಾಟು ನಡೆಸುತ್ತಿತ್ತು.

ಇಂಡಸ್ ಇಂಡ್ ಬ್ಯಾಂಕ್ ಬಹಳ ನಷ್ಟ ಅನುಭವಿಸಿದೆ. ಶೇ.8ರಷ್ಟು ನಷ್ಟ ಅನುಭವಿಸಿದ್ದು ನಂತರ ಎಸ್ ಬಿಐ, ಬಜಾಜ್ ಫೈನಾನ್ಸ್, ಬಜಾಜ್ ಆಟೋ, ಟೈಟಾನ್, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್ಸರ್ವ್ ಮತ್ತು ಮಾರುತಿ ಕಂಪೆನಿಗಳಿವೆ. ಸೆನ್ಸೆಕ್ಸ್ 154.89 ಪಾಯಿಂಟ್ ಕಡಿಮೆಯಾಗಿ 49,591.32 ಕ್ಕೆ ತಲುಪಿದೆ. ನಿಫ್ಟಿ 38.95 ಪಾಯಿಂಟ್ ಕುಸಿದು 14,834.85 ಕ್ಕೆ ತಲುಪಿದೆ.

ಇದು ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದ್ದು ಶೇಕಡಾ 11ರಷ್ಟು ಜಿಡಿಪಿ ಮತ್ತು ಶೇ.30ಕ್ಕೂ ಅಧಿಕ ಒಟ್ಟಾರೆ ಆದಾಯದ ಅಂದಾಜಿನ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily