ಅಭಿಮತ
ರಮಾನಂದ ಶರ್ಮ
ಕೇರಳ ರಾಜ್ಯದ ಕಣ್ಣೂರು ಹತ್ತಿರದ ಸರಕಾರಿ ಸ್ವಾಮ್ಯದ ಬ್ಯಾಂಕೊಂದರ 40 ವರ್ಷ ವಯಸ್ಸಿನ ಎರಡು ಮಕ್ಕಳ ತಾಯಿಯಾದ ಮಹಿಳಾ ಮ್ಯಾನೇಜರ್ ಒಬ್ಬರು ತಾವು ಕೆಲಸ ಮಾಡುತ್ತಿರುವ ಬ್ಯಾಂಕಿನಲ್ಲಿಯೇ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದು ಬ್ಯಾಂಕಿಂಗ್ ಉದ್ಯಮದಲ್ಲಿ ಇಂಥಹ ಮೊದಲ ಅತ್ಮಹತ್ಯೆ ಅಲ್ಲ ಮತ್ತು ಬ್ಯಾಂಕ್ ಸಿಬ್ಬಂದಿಗಳ ಪ್ರಕಾರ ಇದು ಕೊನೆಯ ಘಟನೆ ಅಗುವ ಸಾಧ್ಯತೆ ಕೂಡಾ ಇಲ್ಲ. ಕಾರಣಗಳು ಏನೇ ಇರಲಿ ಈ ದೇಶದಲ್ಲಿ ರೈತನೊಬ್ಬನು, ಸಿನೆಮಾ ನಟನೊಬ್ಬನು (ಸುಶಾಂತ ಸಿಂಗ್ ರಜಪೂತ್), ಟೆಕ್ಕಿಯೊಬ್ಬನು, ಐಐಟಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬನು , ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸಮಾಡುವ ಟೆಕ್ಕಿಯೊಬ್ಬನು, ವೈದ್ಯಕೀಯ ವಿದ್ಯಾರ್ಥಿಯೊಬ್ಬನು, ಉದ್ಯಮಿಯೊಬ್ಬನು ಅತ್ಮಹತ್ಯೆ ಮಾಡಿಕೊಂಡರೆ ಅದು ದೊಡ್ಡ ಸುದ್ದಿಯಾಗಿ ಎ ರೀತಿಯ ಮಾಧ್ಯಮಗಳಲ್ಲಿ ದಿನಗಟ್ಟಲೆ ಚರ್ಚಿತವಾಗುತ್ತದೆ ಮತ್ತು ಅದನ್ನು ಮಾಧ್ಯಮಗಳು ಮುಂದಿನ ದಿನಗಳಲ್ಲಿ follow up ಕೂಡಾ ಮಾಡುತ್ತವೆ.
ಆದರೆ, ಬ್ಯಾಂಕ್ ಸಿಬ್ಬಂದಿಗಳ ಅತ್ಮಹತ್ಯೆಯ ಪ್ರಕರಣಗಳು ಮಾಧ್ಯಮದಲ್ಲಿ ಹೆಡ್ ಲೈನ್ಸ್ ಅಗುವುದಿಲ್ಲ. ಪ್ರತಿ 1000 ಬ್ಯಾಂಕ್
ಸಿಬ್ಬಂದಿಗಳಲ್ಲಿ ಅತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ, ಪ್ರತಿ ಸಾವಿರ ರೈತರಲ್ಲಿ ಅತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಗಿಂತ ಹೆಚ್ಚು ಎನ್ನುವ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಆತ್ಮಹತ್ಯೆಗೆ ಅತಿಯಾದ ಕಾರ್ಯಬಾಹುಲ್ಯ ಮತ್ತು ಒತ್ತಡವೇ ಕಾರಣ ಎಂದು ಬ್ಯಾಂಕ್ ಕಾರ್ಮಿಕ ಸಂಘಗಳು ದೂರುತ್ತಿವೆ.
ತನ್ನ ಸಾವಿನ ನಂತರ ಎರಡು ಹೆಣ್ಣು ಮಕ್ಕಳು ಅನಾಥರಾಗುತ್ತಾರೆ ಎಂದು ತಿಳಿದೂ ಅವಳು ಇಂಥ ನಿರ್ಧಾರ ಮಾಡಬೇಕಿದ್ದರೆ ಅವಳು ಅಂಥ ಒತ್ತಡದಲ್ಲಿ ಸಿಲುಕಿರಬೇಕು ಎಂದು ಬ್ಯಾಂಕ್ ಸಿಬ್ಬಂದಿಗಳು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಂಥ ಹಲವಾರು ಘಟನೆಗಳು ನಡೆದಿವೆ. ಈ ಘಟನೆಗಳ ಹಿಂದೆ ವೈಯಕ್ತಿಕ ಕಾರಣಗಳಿರದೇ, ಕೆಲಸದಲ್ಲಿನ ಒತ್ತಡ, ಮೇಲಧಿಕಾರಿಗಳ ಕಿರುಕುಳ ಮತ್ತು ದೌರ್ಜನ್ಯವನ್ನು ಬೊಟ್ಟು ಮಾಡಿ ತೋರಿಸಲಾಗುತ್ತದೆ.
ಬ್ಯಾಂಕುಗಳಲ್ಲಿ ಅನುತ್ಪಾದಕ ಸಾಲದ ಪ್ರಮಾಣ ಎರಡಂಕಿ ದಾಟಿದ್ದು ಕಳೆದ 6-7 ವರ್ಷಗಳಲ್ಲಿ ಸುಮಾರು 7.5 ಲಕ್ಷ ಕೋಟಿ
ಸಾಲವನ್ನು ರೈಟ್‌ಆಫ್ ಮಾಡಲಾಗಿದೆ. ಸಾಲ ವಸೂಲಾತಿ ನಿರೀಕ್ಷೆ ಪ್ರಮಾಣ ದಲ್ಲಿ ಅಗುತ್ತಿಲ್ಲ. ಗಳಿಸಿದ ಲಾಭದ ಬಹುಭಾಗವು ಅನುತ್ಪಾದಕ ಅಸ್ತಿಗೆ ಹೊಂದಾಣಿಕೆ ಮಾಡಲಾಗುತ್ತಿದ್ದು, ನಿವ್ವಳ ಲಾಭಾಂಶ ಇಳಿಯುತ್ತಿದ್ದು, ನಿರ್ವಹಣಾ ವೆಚ್ಚ ಏರುತ್ತಿದೆ. ಅಂತೆಯೇ ಬ್ಯಾಂಕುಗಳು ತಮ್ಮ ವ್ಯವಹಾರವನ್ನು ಹೆಚ್ಚಿಸಿ ಲಾಭ ವನ್ನು ಹೆಚ್ಚಿಸುವ ಅನಿವಾರ್ಯತೆ ಮತ್ತು ಒತ್ತಡದಲ್ಲಿದ್ದು, ಮ್ಯಾನೇಜರ್‌ಗಳಿಗೆ unreasonable targets ನ್ನು ನೀಡಲಾಗುತ್ತಿದೆ.
ಠೇವಣಿ ಸಂಗ್ರಹ, ಸಾಲ ವಿತರಣೆ , ಸಾಲ ವಸೂಲಿ, ಅನುತ್ಪಾದಕ ಅಸ್ತಿಗಳ (ಸಾಲ) ನಿರ್ವಹಣೆ.. ಹೀಗೆ ಪ್ರತಿಯೊಂದರಲ್ಲೂ ಟಾರ್ಗೆಟ್ ನಿಗದಿಪಡಿಸಲಾಗುತ್ತಿದ್ದು, ಮ್ಯಾನೇಜರ್ ಗಳನ್ನು ಹಿಂಡಿ ಹಿಪ್ಪೆ ಮಾಡಲಾಗುತ್ತದೆ ಎಂದು ಕಾರ್ಮಿಕ ನಾಯಕರು ಅಕ್ರೋಶ ವ್ಯಕ್ತಪಡಿಸುತ್ತಾರೆ.
ಇಂದು ಬ್ಯಾಂಕಿಂಗ್ ಉದ್ಯಮ ಹಿಂದಿನಂತೆ 10 ರಿಂದ 5ರ ಉದ್ಯೋಗವಲ್ಲ. ಅವರು 24 ತಾಸೂ ಸೇವೆಗೆ ಲಭ್ಯರಿರಬೇಕು. ಬ್ಯಾಂಕ್ ಮ್ಯಾನೇಜರ್ ದಿನದ ಕೆಲಸಮುಗಿಸಿ ಮನೆಗೆ ಮರಳುವ ಹೊತ್ತಿಗೆ ಮಕ್ಕಳು ಮಲಗಿರುತ್ತಾರೆ ಮತ್ತು ಮಡದಿ ಶಬರಿಯಂತೆ
ಕಾಯುತ್ತಿರುತ್ತಾಳೆ ಎನ್ನುವ ಮಾತು ಕೇಳಿ ಬರುತ್ತಿದೆ. ಹಾಗೆಯೇ ಜನಸಾಮಾನ್ಯರು ತಿಳಿದಂತೆ ಅವರ ಡ್ಯೂಟಿ ಠೇವಣಿ ಸಂಗ್ರಹ ಮತ್ತು ಸಾಲವಿತರಣೆಗೆ ಸೀಮಿತವಾಗಿಲ್ಲ.
ಸರಕಾರದ ವಿವಿಧ ಜನೋಪಯೋಗಿ ಅರ್ಥಿಕ ಯೋಜನೆಗಳಾದ ಜನಧನ್, ಮುದ್ರಾಸಾಲ ದಿಂದ ಅಟಲ್ ಪಿಂಚಣಿ ಯೋಜನೆ ಮತ್ತು ಹೆದ್ದಾರಿ ಟೋಲ್ ಸಂಗ್ರಹಕ್ಕೆ ವಾಹನಗಳಿಗೆ ಫಾಸ್ಟ್ ಟ್ಯಾಗ್ ವಿತರಣೆಯವರೆಗೆ ಅವರ ಕೆಲಸ ವಿಸ್ತರಣೆಯಾಗಿದೆ.
ಅದಾಯಕರ ಇಲಾಖೆಯ ಮೂರನೇ ಒಂದು ಭಾಗ ಕೆಲಸವನ್ನೂ ಇವರ ತಲೆಗೆ ಸುತ್ತಲಾಗಿದೆಯಂತೆ. ಕೆಲವು ಬ್ಯಾಂಕುಗಳಿಗೆ Adhara card enrollment updation ಕೆಲಸವನ್ನೂ ನೀಡಲಾಗಿದೆಯಂತೆ.
ಮತದಾರರ ಪಟ್ಟಿ ಮತ್ತು ಮತದಾರರರ ಗುರುತಿನ ಚೀಟಿ ನೀಡುವ ಕೆಲಸವನ್ನು ಅವರಿಗೆ ನೀಡುವ ದಿನಗಳು ದೂರವಿಲ್ಲ ಎನ್ನುವ ಜೋಕ್ ಬ್ಯಾಂಕಿಂಗ್ ವಲಯದಲ್ಲಿ ಕೇಳುತ್ತಿದೆ. ವಿಚಿತ್ರವೆಂದರೆ ವಿಮಾ ಪ್ರೊಡಕ್ಟ್‌ಗಳನು ಮತ್ತು ಮ್ಯೂಚುವಲ್ ಫಂಡ್ (sale of third party insurance product mutual funds) ಗಳನ್ನು ಟಾರ್ಗೆಟ್ ನೊಂದಿಗೆ ಮಾರುವ ಕೆಲಸವನ್ನೂ ಅವರಿಗೆ ನೀಡಲಾಗಿದೆಯಂತೆ. ಪರಿ ಶ್ರಮ ಬ್ಯಾಂಕ್ ಸಿಬ್ಬಂದಿಗಳದ್ದು, ಕ್ರೆಡಿಟ್ ವಿಮಾ ಮತ್ತು ಮ್ಯೂಚುವಲ್ ಕಂಪನಿಗಳದ್ದು.
ಸರಕಾರ ಯಾವುದೇ ಹೊಸ ಅರ್ಥಿಕ ನೀತಿಯನ್ನು ಘೋಷಿಸಲಿ, ಯೋಜನೆಗಳನ್ನು ತರಲಿ, ಅದರ ಅನುಷ್ಠಾನದ ಹೊಣೆ ಬ್ಯಾಂಕುಗಳ ತೆಕ್ಕೆಗೆ. ಅದರೆ, ಅದಕ್ಕೆ ಸಮರ್ಪಕವಾಗಿ ಸಿಬ್ಬಂದಿಯನ್ನು ನೀಡುವುದಿಲ್ಲ.
ಅದರ ಬದಲಿಗೆ show your efficiency by managing with existing staff ಎನ್ನುವುದು ಮೇಲಧಿಕಾರಿಗಳ ಅದೇಶ. ಎಲ್ಲವೂ ಗಣಕೀಕರಣವಾದಮೇಲೆ ಏನು ಕೆಲಸ. ಬಟನ್ ಪ್ರೆಸ್ ಮಾಡಿದರೆ ಎಲ್ಲವೂ ರೆಡಿ ಎನ್ನುವ ಮಾತು ಅವರಿಂದ ಕೇಳಿ ಬರುತ್ತಿದೆ ಎನ್ನುವುದು ಸಿಬ್ಬಂದಿಗಳ ದೂರು. ಗಣಕಯಂತ್ರದಲ್ಲಿ ಡಾಟಾ ಫೀಡ್ ಮಾಡಲು ಮತ್ತು ಬಟನ್ ಪ್ರೆಸ್ ಮಾಡಲಾದರೂ ಸಿಬ್ಬಂದಿಗಳು ಬೇಕು ಎನ್ನುವುದು ಮ್ಯಾನೇಜರ್‌ಗಳ ವಾದ. ವರ್ಷಕ್ಕೆ ಒಂದೆರಡು ಬಾರಿಯಾದರೂ ಒಂದು ಸ್ಕೀಮ್ ಮುಗಿಯು ತ್ತಿರುವಂತೆ ಇನ್ನೊಂದು ಸ್ಕೀಮ್ ಧುತ್ತೆಂದು ಬರುತ್ತದೆ.
ಕಳೆದ ಕೆಲವು ವರ್ಷಗಳಿಂದ ಬ್ಯಾಂಕಿಂಗ್ ಉದ್ಯಮದಲ್ಲಿ ಬ್ಯಾಂಕುಗಳ ವಿಲೀನದ ಪ್ರಕ್ರಿಯೆ ನಡೆಯುತ್ತಿದ್ದು, ಅವುಗಳ integration ಸವಾಲಾಗಿ ಪರಿಣಮಿಸಿದೆ. ವಿಲೀನದಲ್ಲಿನ ಸಮಸ್ಯೆ ಗಳನ್ನು ಆಳವಾಗಿ ಪರಾಮರ್ಶಿಸಿದ ಮತ್ತು ಗ್ರಾಹಕರ ಫೀಡ್ ಬ್ಯಾಕ್ ಪಡೆದ ಸಂಸದರ ಸಮಿತಿಯೊಂದು ಇದನ್ನು disaster ಎಂದು ಬಣ್ಣಿಸಿದೆಯಂತೆ. ದಿನನಿತ್ಯದ ವ್ಯವಹಾರದಲ್ಲಿ ಗ್ರಾಹಕರ ಕೋಪ-ತಾಪ ಮತ್ತು ಅಕ್ರೋಶಗಳನ್ನು ನಿಭಾಯಿಸುವದರಲ್ಲಿ ಅವರ ಶಕ್ತಿ ವ್ಯಯವಾಗುವುದಲ್ಲದೇ ಅವರ ಬಿಪಿ ಕೂಡಾ ಹೆಚ್ಚಾಗುತ್ತದೆ ಎಂದು ಎಷ್ಟೋ ಗ್ರಾಹಕರು ಒಪ್ಪಿಕೊಳ್ಳುತ್ತಾರೆ.
ಈ ಮಧ್ಯೆ ಮೇಲಧಿಕಾರಿಗಳಿಂದ ಮ್ಯಾನೇಜರ್ ಗಳ ಸಾಧನೆಯ ಪರಾಮರ್ಶೆ ದಿನನಿತ್ಯ, ವಾರ, ತಿಂಗಳು ಮೂರು ತಿಂಗಳು, ಆರು ತಿಂಗಳು, ವರ್ಷದ ಅಧಾರದ ಮೇಲೆ ನಿರಂತರವಾಗಿ ನಡೆಯುತ್ತದೆ. ಈ ಪರಾಮರ್ಶೆಯ ಮೀಟಿಂಗನ್ನು ತಮ್ಮ ಕಟ್ಟಾ ವಿರೋಧಿ
ಗಳಿಗೂ ಬೇಡವೆಂದು ಇದೇ ರೀತಿ ಅತ್ಮಹತ್ಯೆ ಮಾಡಿ ಕೊಂಡ ಮ್ಯಾನೇಜರ್ ಒಬ್ಬರು ತಮ್ಮ ಅತ್ಮೀಯರಲ್ಲಿ ಹೇಳಿಕೊಂಡಿದ್ದರಂತೆ. ಸಾಲವನ್ನೇನೋ ನೀಡಬಹುದು. ಹೇಗಾದರೂ ಕಷ್ಟಪಟ್ಟು ಟಾರ್ಗೆಟ್ ತಲುಪಬಹುದು.
ಅದರೆ, ವಸೂಲಿ? ಸಾಲ ಮರುಪಾವತಿ ಸಂಸ್ಕೃತಿಗೆ ಜಡ್ಡು ಹಿಡಿದು ದಶಕಗಳೇ ಆಗಿವೆ. ಸಾಲ ಮರು ಪಾವತಿಸಿ ಹೆಮ್ಮೆಯಿಂದ
ಸಮಾಜದಲ್ಲಿ ಹೇಳಿಕೊಂಡು ಅಡ್ಡಾಡುವ ದೃಶ್ಯ ಇಂದು ಅಪರೂಪ. ಬಹುತೇಕ ಸಾಲಗಾರರು ತಮ್ಮ ಸಾಲ ಯಾವುದಾದರೂ ಕಾರಣ ದಲ್ಲಿ ರೈಟ್‌ಆಫ್ ಅಗಬಹುದು, ಏಕಬಾರಿ ತೀರುವಳಿಗೆ ಹೋಗಬಹುದು ಎಂದು ನಿರೀಕ್ಷಿಸುವವರೇ ಹೆಚ್ಚು ಎಂದು ಬ್ಯಾಂಕಿಂಗ್ ಉದ್ಯಮದಲ್ಲಿ ಮಾತು. ಸಾಲ ವಸೂಲಾತಿ ಗಾಗಿ ಸಾಲಗಾರರರ ಮನೆಗೆ ಹೋದ ಮಹಿಳಾ ಮ್ಯಾನೇಜರ್ ಮೇಲೆ ಸಾಲಗಾರ ಹಲ್ಲೆ ಮಾಡಿದ ಉದಾಹರಣೆಯೂ ಇದೆ.
ಸಾಲ ಮಂಜೂರಾತಿ ಮಾಡದಿರುವುದಕ್ಕೆ ಮ್ಯಾನೇಜರ್ ಒಬ್ಬರ ಮೇಲೆ ತಲ್ವಾರನಿಂದ ಹಲ್ಲೆ ಮಾಡಿದ್ದೂ ಇದೆ. ದಕ್ಷಿಣದ ರಾಜ್ಯ ಒಂದರಲ್ಲಿ ಸಾಲ ನೀಡದಿರುವುದಕ್ಕೆ ಬ್ಯಾಂಕ್ ಬಾಗಿಲು ಎದುರಿಗೆ ತ್ಯಾಜ್ಯ ಸುರಿದ ಮತ್ತು ಕಲೆಕ್ಟರ್ ಒಬ್ಬರು ಬ್ಯಾಂಕಿಗೆ ಬೀಗ ಹಾಕಿದ ವರದಿಗಳೂ ಇವೆ. ಅಂತರಿಕವಾಗಿ ಬ್ಯಾಂಕುಗಳಲ್ಲಿ ಬ್ಯಾಂಕಿಂಗ್ ಚೆನ್ನಾಗಿ ತಿಳಿದ ಹಳಬರಿಗೆ ಕಂಪ್ಯೂಟರ್ ತಿಳವಳಿಕೆ
ಕಡಿಮೆ ಯಾದರೆ, ಕಂಪ್ಯೂಟರ್ ತಿಳಿದ ಹೊಸಬರಿಗೆ ಬ್ಯಾಂಕಿಂಗ್ ತಿಳುವಳಿಕೆ ಕಡಿಮೆಯಾಗಿದ್ದು ಕೆಲಸವನ್ನು ಸಮೀಕರಿಸುವುದು ಕಷ್ಟವಾಗುತ್ತಿದೆ. ಈ ಕಷ್ಟಗಳು ಸಾಲದು ಎನ್ನುವಂತೆ ಇತ್ತೀಚಿನ ವರ್ಷ ಗಳಲ್ಲಿ ಸ್ಥಳೀಯ ಭಾಷೆ ಬರದ ಎಲ್ಲಿಂದಲೋ ಬಂದ
ಸಿಬ್ಬಂದಿಗಳೊಂದಿಗೆ ನಿಭಾಯಿಸಿ ಗ್ರಾಹಕ ಸೇವೆ ನೀಡುವ ಅನಿವಾರ್ಯತೆ.
ಇದಕ್ಕೂ ಮೇಲಾಗಿ customer is always right and customer is demanding ಎನ್ನುವ ಅಡಳಿತವರ್ಗ ಸದಾ ಪಠಿಸುವ ಮಂತ್ರ ಮ್ಯಾನೇಜರ್ ಅನ್ನು ಇನ್ನೂ ಒತ್ತಡದಲ್ಲಿ ಸಿಲುಕಿಸು ತ್ತದೆ. ಬೇರೆ ಯಾವುದೇ ಕಚೇರಿಗಳಲ್ಲಿ ಸೇವೆಯಲ್ಲಿನ ನ್ಯೂನತೆ ಮತ್ತು ವಿಳಂಬಕ್ಕೆ ದೂರು ಕೊಡದವರು, ಬ್ಯಾಂಕು ಗಳಲ್ಲಿ ಸಣ್ಣ ಪುಟ್ಟ ನ್ಯೂನತೆ ಮತ್ತು ವಿಳಂಬಕ್ಕೆ ದೂರು ನೀಡಿ ಮ್ಯಾನೇಜರ್‌ಗಳನ್ನು ಸತಾಯಿಸುತ್ತಾರೆ ಎನ್ನುವದರಲ್ಲಿ ಸತ್ಯವಿಲ್ಲದಿಲ್ಲ.
ಗ್ರಾಹಕರು ದೂರು ನೀಡಿದರೆ ದೂರು ದಾರ ತನಗೆ ತೃಪ್ತಿಯಾಯಿತು ಎನ್ನುವವವರೆಗೆ ಅದು ಕಾಡುತ್ತದೆ. ಇನ್ನಿತರ ಕೆಲವು
ಇಲಾಖೆಗಳಂತೆ ಅವುಗಳು ಕಸದ ಬುಟ್ಟಿಗೋ ಅಥವಾ ಕಾಟಾಚಾರದ ವಿಚಾರಣೆಗೋ ಅಂತ್ಯ ಆಗುವುದಿಲ್ಲ. ಈ ಮಧ್ಯೆ ಫೋನ್ ಎಲ್ಲಾ ಲೋನ್ ಉಪಟಳ ಮ್ಯಾನೇಜರ್‌ಗಳನ್ನು ಹೈರಾಣಾಗಿಸುತ್ತದೆ. ಇತ್ತೀಚೆಗೆ ಉತ್ತರ ಭಾರತದ ರಾಜ್ಯ ಒಂದರಲ್ಲಿ ಶಾಸಕ ರೊಬ್ಬರು ತಮ್ಮ ಪಟಾಲಂ ರೊಂದಿಗೆ ಬ್ಯಾಂಕಿಗೆ ತೆರಳಿ ಸಿಬ್ಬಂದಿಗಳಿಗೆ ಬ್ಯಾಂಕಿನ ಅಂತರಿಕ ಕಾರ್ಯದ ಬಗೆಗೆ ಅತಿ ತುಚ್ಛವಾಗಿ ತರಾಟೆಗೆ ತೆಗೆದುಕೊಂಡ ದೃಶ್ಯಾವಳಿಯನ್ನು ಜಾಲತಾಣದಲ್ಲಿ ನೋಡಿದಾಗ, ಕೆಲವು ಮ್ಯಾನೇಜರ್‌ಗಳು ಇಂಥ ಹೆಜ್ಜೆ ಇಡುವ
ಹಿಂದಿನ ಕಾರಣ ಅರ್ಥವಾಗುತ್ತದೆ.
ಅಂತರಿಕವಾಗಿ ಅಥವಾ ಬಾಹ್ಯ ಶಕ್ತಿಗಳು ಮಾಡುವ ಅಪರಾಧಗಳಿಗೆ ಬ್ಯಾಂಕ್ ಅಧಿಕಾರಿಗಳು ಮತ್ತು ಮ್ಯಾನೆಜರ್‌ಗಳು ಬಲಿಯಾಗುವ ದೃಷ್ಟಾಂತಗಳು ಇದ್ದು, ಅವರು ಸದಾ ಎಚ್ಚರಿಕೆಯಿಂದ ಇರಬೇಕಾಗುತ್ತಿದ್ದು, ಅಂತಿಮವಾಗಿ ಇದು ಮೇಲ್ವಿಚಾರಣೆಯ ಕೊರತೆಯ ಹೆಸರಿನಲ್ಲಿ ಇವರ ತಲೆಗೇ ಸುತ್ತುತ್ತದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಒಂದು ಸಾಲ ಮರು
ಪಾವತಿಯಾಗದಿದ್ದರೆ, ಸಾಲ ನೀಡದವನು ಮಾಡಿರಬಹುದಾದ ತಪ್ಪುಗಳೇ ಮೇಲ್ಮೆಗೆ ಬರುತ್ತವೆ ವಿನಃ, ಸಾಲಗಾರನ್ನು ಪ್ರಶ್ನಿಸುವುದಿಲ್ಲ ಎಂದು ಕೆಲವು ಬ್ಯಾಂಕ್ ಮ್ಯಾನೇಜರ್‌ಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ನೀಡಿದ ಟಾರ್ಗೆಟ್ ತಲುಪದಿದ್ದರೆ ದೇಶಾದ್ಯಂತ ವರ್ಗಾವರ್ಗಿ ಶಿಕ್ಷೆ ಎಂದು ಅವರು ಹೇಳುತ್ತಾರೆ. ಬ್ಯಾಂಕ್ ಮ್ಯಾನೇಜರ್ ಒಬ್ಬರ ಆತ್ಮಹತ್ಯೆಯ ನಂತರ ಬ್ಯಾಂಕ್ ಸಿಬ್ಬಂದಿಗಳಿಂದ ಕೇಳಿ ಬರುತ್ತಿರುವ ಈ ಅನಿಸಿಕೆ ಗಳ ಸತ್ಯಾ ಸತ್ಯತೆ ಬೇರೆ ಮಾತು. ಆದರೆ,
ಇದು ಬ್ಯಾಂಕ್ ಸಿಬ್ಬಂದಿಗಳ ಒಕ್ಕೊರಲಿನ ಕೂಗು ಎನ್ನುವುದು ಸತ್ಯ. ಒಂದು ಕಾಲಕ್ಕೆ ಕನ್ಯಾ ಪಿತೃಗಳ ಮತ್ತು ಮನೆ ಮಾಲಿಕರ ಅಚ್ಚುಮೆಚ್ಚಿನ ಅಯ್ಕೆ ಎಂದು ಹೇಳಲ್ಪಡುತ್ತಿದ್ದ ಬ್ಯಾಂಕ್ ಸಿಬ್ಬಂದಿಗಳು ಮದುವೆ ಮಾರುಕಟ್ಟೆಯಲ್ಲೂ ಕೆಳಗಿಳಿದಿದ್ದಾರೆ ಎನ್ನುವ ಜೋಕ್ ನಲ್ಲಿ ಅರ್ಥ ಕಾಣುತ್ತದೆ.
ಬ್ಯಾಂಕ್ ಉದ್ಯೋಗ ಹಿಂದಿನ ಹೊಳಪನ್ನು ಕಳೆದುಕೊಂಡಿರುವುದರ ಹಿಂದೆ ಇದೂ ಕಾರಣ ಇರಬಹುದು ಎಂದು ಪ್ಲೇಸ್‌ಮೆಂಟ್
ಏಜೆನ್ಸಿಗಳು ಹೇಳುತ್ತವೆ. ಕಾಲೇಜಿನಿಂದ ಪದವಿ ಪಡೆದು ಬ್ಯಾಂಕ್ ಸೇರುತ್ತಾರೆ. ಅಷ್ಟೇ ವೇಗದಲ್ಲಿ ಕೆಲಸದ ಒತ್ತಡ, ದೇಶಾದ್ಯಂತ ವರ್ಗಾವರ್ಗಿ, ಟಾರ್ಗೆಟ್ ಭಯದಿಂದ ಭ್ರಮನಿರಸನಗೊಳ್ಳುತ್ತಾರೆ. ಬ್ಯಾಂಕುಗಳು ಸಾರ್ವಜನಿಕ ರಂಗದಲ್ಲಿರುವಾಗಲೇ ಈ
ಪರಿಸ್ಥಿತಿ ಯಾದರೆ, ಜೋರಾಗಿ ಕದ ಬಡಿಯುತ್ತಿರುವ ಲಾಭವೇ ಉದ್ದೇಶವಾಗಿರುವ ಖಾಸಗೀಕರಣ ಅನಾವರಣ ಗೊಂಡರೆ ಹೇಗೆ ಎನ್ನುವ ಚಿಂತನೆ ಮತ್ತು ಭಯ ಬ್ಯಾಂಕ್ ಸಿಬ್ಬಂದಿಗಳನ್ನು ಕಾಡುತ್ತಿದೆ.