ಮುಂಬಯಿ: ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೋಮವಾರ 508 ಅಂಕಗಳ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ 508.06 ಅಂಕಗಳ ಏರಿಕೆಯೊಂದಿಗೆ 48,386.51 ಅಂಕಗಳೊಂದಿಗೆ, ಎನ್ ಎಸ್ ಇ 143.65 ಅಂಕ ಏರಿಕೆಯಾಗಿ 14,485ರ ಗಡಿ ತಲುಪಿದೆ.
ಸಂವೇದಿ ಸೂಚ್ಯಂಕ ಏರಿಕೆಯಿಂದ ಐಸಿಐಸಿಐ ಬ್ಯಾಂಕ್, ಆಲ್ಟ್ರಾ ಟೆಕ್ ಸಿಮೆಂಟ್, ಎಸ್ ಬಿಐ, ಪವರ್ ಗ್ರಿಡ್, ಬಜಾಜ್ ಆಟೋ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭಗಳಿಸಿದರೆ, ಎಚ್ ಸಿಎಲ್ ಟೆಕ್, ಎಚ್ ಡಿಎಫ್ ಸಿ ಬ್ಯಾಂಕ್, ಮಾರುತಿ, ಸನ್ ಫಾರ್ಮಾ ಮತ್ತು ಟಿಸಿಎಸ್ ಷೇರುಗಳು ನಷ್ಟ ಅನುಭವಿಸಿದೆ.
ಭಾರತದಲ್ಲಿ ಕಳೆದ 24ಗಂಟೆಯಲ್ಲಿ 3,52,991 ಕೋವಿಡ್ ಪ್ರಕರಣ ಪತ್ತೆಯಾಗಿದೆ.