Saturday, 23rd November 2024

15 ಸಾವಿರ ಗಡಿ ದಾಟಿದ ನಿಫ್ಟಿ, ಷೇರುಪೇಟೆ ಶುಭಾರಂಭ

ಮುಂಬೈ/ ನವದೆಹಲಿ: ಭಾರತೀಯ ಷೇರುಪೇಟೆ ಶುಕ್ರವಾರ ಶುಭಾರಂಭ ಮಾಡಿದೆ. ಸೆನ್ಸೆಕ್ಸ್ 353 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 104 ಪಾಯಿಂಟ್ಸ್‌ ಹೆಚ್ಚಾಗಿ 15 ಸಾವಿರ ಗಡಿಗೆ ಮರಳಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 353.22 ಪಾಯಿಂಟ್ಸ್ ಹೆಚ್ಚಾಗಿ 49918.08 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 104.20 ಪಾಯಿಂಟ್ಸ್‌ ಏರಿಕೆಗೊಂಡು 15010.20 ಪಾಯಿಂಟ್ಸ್‌ ಮುಟ್ಟಿದೆ. ದಿನದ ವಹಿವಾಟು ಆರಂಭಗೊಂಡಾಗ 1275 ಷೇರುಗಳು ಏರಿಕೆಗೊಂಡರೆ, 259 ಷೇರುಗಳು ಕುಸಿದವು ಮತ್ತು 49 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ರೂಪಾಯಿ ಮೌಲ್ಯವು ಈಕ್ವಿಟಿ ಮಾರುಕಟ್ಟೆಯಲ್ಲಿನ ಲಾಭದ ಮೇಲೆ 72.98 ರೂಪಾಯಿಗೆ ಹೆಚ್ಚಾಗಿದೆ. ಹಿಂದಿನ ದಿನ ರೂಪಾಯಿ ಅಮೆರಿಕಾ ಡಾಲರ್‌ ಎದುರು 73.1 ರೂಪಾಯಿಗೆ ಕೊನೆಗೊಂಡಿತು. ಯುಎಸ್ ಡಾಲರ್ ಸೂಚ್ಯಂಕವು ಈಗ 90 ಕ್ಕಿಂತ ಕಡಿಮೆಯಾಗಿದೆ.