ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಸೋಮವಾರ ದಿನದ ವಹಿವಾಟು ಕೊನೆಗೊಳಿಸಿದೆ. ಷೇರುಪೇಟೆ ಸೆನ್ಸೆಕ್ಸ್ 111 ಪಾಯಿಂಟ್ಸ್ ಏರಿಕೆಗೊಂಡರೆ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15200ರ ಗಡಿ ಸಮೀಪಿಸಿದೆ.
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 111.42 ಪಾಯಿಂಟ್ಸ್ ಹೆಚ್ಚಳಗೊಂಡು 50,651.90 ಪಾಯಿಂಟ್ಸ್, ಎನ್ಎಸ್ಇ ಸೂಚ್ಯಂಕ ನಿಫ್ಟಿ 22.40 ಪಾಯಿಂಟ್ಸ್ ಏರಿಕೆಗೊಂಡು 15,197.70 ಪಾಯಿಂಟ್ಸ್ ಮುಟ್ಟಿದೆ. ದಿನದ ವಹಿವಾಟು ಅಂತ್ಯಕ್ಕೆ 1930 ಷೇರುಗಳು ಏರಿಕೆ ಗೊಂಡರೆ, 1218 ಷೇರುಗಳು ಕುಸಿದಿವೆ.
ಐಒಸಿ, ಬಿಪಿಸಿಎಲ್, ಎಸ್ಬಿಐ, ಲಾರ್ಸೆನ್ ಮತ್ತು ಟೌಬ್ರೊ ಮತ್ತು ಆಕ್ಸಿಸ್ ಬ್ಯಾಂಕ್ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರು ಗಳಾಗಿವೆ. ಭಾರತೀಯ ರೂಪಾಯಿ 13 ಪೈಸೆ ಇಳಿಕೆಯಾಗಿ ಪ್ರತಿ ಡಾಲರ್ಗೆ 72.96 ಕ್ಕೆ ತಲುಪಿದೆ.