Saturday, 23rd November 2024

ಸೆನ್ಸೆಕ್ಸ್ 252, ನಿಫ್ಟಿ 84 ಪಾಯಿಂಟ್ಸ್‌ ಏರಿಕೆ

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಮಂಗಳವಾರ ಸಕಾರಾತ್ಮಕ ವಹಿವಾಟು ಆರಂಭಿಸಿದೆ. ಷೇರುಪೇಟೆ ಸೆನ್ಸೆಕ್ಸ್ 252 ಪಾಯಿಂಟ್ಸ್‌ ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 84 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 252.64 ಪಾಯಿಂಟ್ಸ್‌ ಏರಿಕೆಗೊಂಡು, 50904.54 ಪಾಯಿಂಟ್ಸ್‌ಗೆ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 84.20 ಪಾಯಿಂಟ್ಸ್‌ ಹೆಚ್ಚಾಗಿ 15281.90 ಪಾಯಿಂಟ್ಸ್‌ ಮುಟ್ಟಿದೆ. ಸುಮಾರು 1513 ಷೇರುಗಳು ಏರಿಕೆಗೊಂಡರೆ, 53 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಬ್ರಿಟಾನಿಯಾ ಷೇರುಗಳು 102 ರೂ.ಗಳಿಂದ 3,410.00 ರೂ.ಗೆ, ಟಾಟಾ ಮೋಟಾರ್ಸ್ ಷೇರುಗಳು ಸುಮಾರು 4 ರೂ.ಗಳ ಏರಿಕೆ ಕಂಡು 316.10 ರೂ., ಟಾಟಾ ಸ್ಟೀಲ್ ಷೇರುಗಳು 15 ರೂಪಾಯಿ ಏರಿಕೆಗೊಂಡು 1,107.15 ರೂ ಪ್ರಾರಂಭವಾಯಿತು.