ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 166 ಪಾಯಿಂಟ್ಸ್ ಜಿಗಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 34 ಪಾಯಿಂಟ್ಸ್ ಏರಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 166.86 ಪಾಯಿಂಟ್ಸ್ ಏರಿಕೆಗೊಂಡು 50804.39 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 34 ಪಾಯಿಂಟ್ಸ್ ಹೆಚ್ಚಾಗಿ 15242.50 ಪಾಯಿಂಟ್ಸ್ ಮುಟ್ಟಿದೆ. ದಿನದ ವಹಿವಾಟು ಆರಂಭಗೊಂಡಾಗ 1220 ಷೇರುಗಳು ಏರಿಕೆಗೊಂಡರೆ, 291 ಷೇರುಗಳು ಕುಸಿದವು, 69 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು 10 ರೂ. ಏರಿಕೆಗೊಂಡು 821.10 ರೂ.ಗೆ, ಟೈಟಾನ್ ಕಂಪನಿಯ ಷೇರುಗಳು 19 ರೂ.ಗಳಷ್ಟು ಏರಿಕೆ ಕಂಡು 1,587.80 ರೂ., ಗ್ರಾಸಿಮ್‌ನ ಷೇರು 14 ರೂ. ಹೆಚ್ಚಾಗಿ 1,388.85 ರೂ., ಸಿಪ್ಲಾ ಷೇರು ಸುಮಾರು 9 ರೂ. ಏರಿಕೆಗೊಂಡು 944.25 ರೂ., ಅಲ್ಟ್ರಾ ಟೆಕ್ ಸಿಮೆಂಟ್ ಷೇರುಗಳು 51 ರೂ. ಹೆಚ್ಚಾಗಿ 6,607.30 ರೂ. ತಲುಪಿದೆ.