ಅವಲೋಕನ
ಸ್ವಪನ್ ದಾಸ್ ಗುಪ್ತ, ರಾಜ್ಯಸಭಾ ಸದಸ್ಯರು
ಒಂದು ಕಡೆಯಿಂದ ದೇಶಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಮೋದಿ. ಮತ್ತೊಂದು ಕಡೆ ಅವರನ್ನು ಟೀಕಿಸುವ ಒಂದು ದೊಡ್ಡ ವರ್ಗವೇ ಹುಟ್ಟಿಕೊಂಡಿದೆ. ಹೌದು, ಮೋದಿಯವರ ಹೆಚ್ಚಿನ ವಿಮರ್ಶಕರು ಅದರಲ್ಲೂ ಹೆಚ್ಚಿನವರು ವಿದೇಶಗಳಲ್ಲಿ ನೆಲೆಸಿರುವವರು, ಎಡಪಂಥೀಯ ಚಿಂತನೆ ಹೊಂದಿರುವವರು ಮೋದಿಯನ್ನು ಬಣ್ಣಿಸುವುದೇ ಬೇರೆ ರೀತಿಯಲ್ಲಿ.
ನರೇಂದ್ರ ಮೋದಿಯವರನ್ನು ವಿಶ್ವ ನಾಯಕ ಅಂತಲೇ ಕರೆಯಲಾಗುತ್ತದೆ. ಪ್ರಧಾನಿಯಾಗಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ
ಮೋದಿ ತುಳಿದ ಹಾದಿ ಅವರಿಗೆ ಜಾಗತಿಕ ನಾಯಕನ ಪಟ್ಟವನ್ನು ತಂದುಕೊಟ್ಟಿತು.
ಹೌದು, ಕರೋನಾ ವೈರಸ್‌ನಂಥ ವಿಷಮ ಪರಿಸ್ಥಿತಿಗಳಲ್ಲಿ ದೇಶದ ಹಿತ ಕಾಯುವುದಕ್ಕಾಗಿ ಮೋದಿ ಹಿಡಿದ ದಾರಿಯೇ ವಿಶೇಷ ಹಾಗೂ ವಿಭಿನ್ನ. ಕರೋನ ಜತೆಗೆ ಪ್ರವಾಹ, ಗಡಿಭಾಗದಲ್ಲಿ ತಂಟೆಕೋರ ಚೀನಾ, ಪಾಕಿಸ್ತಾನದ ನಿರಂತರ ಉಪಟಳ, ಆರ್ಥಿಕ ಹಿಂಜರಿತ ಹೀಗೆ ಹಲವಾರು ಸವಾಲುಗಳನ್ನ ಮೋದಿ ನಿಭಾಯಿಸುತ್ತಿರುವ ರೀತಿಗೆ ದೇಶದೊಳಗೆ ಪರ – ವಿರೋಧದ ಚರ್ಚೆ ನಡೆಯುತ್ತಿದೆ. ಇದೆಲ್ಲದರ ನಡುವೆ ಮೋದಿ 7 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದ್ದಾರೆ.
ಟೀಕೆ ಟಿಪ್ಪಣಿಗಳನ್ನು ಸರಿಸಮಾನವಾಗಿ ಸ್ವೀಕರಿಸಿ ಪ್ರಧಾನಿಯಾಗಿ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಈ ಹಾದಿಯಲ್ಲಿ ಅವರಿಗಿರುವ ಬೆಟ್ಟದಷ್ಟು ಸವಾಲನ್ನು ಮೆಟ್ಟಿ ನಿಲ್ಲುವುದು ಸುಲಭದ ವಿಚಾರವಂತೂ ಅಲ್ಲವೇ ಅಲ್ಲ..! ಒಬ್ಬ ಮಹಾನ್ ನಾಯಕ ದೇಶವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಬಗ್ಗೆ ಖ್ಯಾತ ಪತ್ರಕರ್ತ, ಅಂಕಣಕಾರ ಸ್ವಪನ್ ದಾಸ್‌ಗುಪ್ತಾ ಅಂಕಣದಲ್ಲಿ ವಿವರಿಸಿದ್ದಾರೆ.
ಇದರ ಪೂರ್ಣಪಾಠ ಇಲ್ಲಿದೆ ಓದಿ..
ಮಧ್ಯಂತರ ಮೌಲ್ಯಮಾಪನ ಸ್ವಾಭಾವಿಕವಾಗಿ ತಾತ್ಕಾಲಿಕವಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅವುಗಳು ಸಂದರ್ಭದಿಂದಲೇ ಹೆಚ್ಚು ವ್ಯಾಖ್ಯಾನಿಸ ಲ್ಪಡುತ್ತದೆ. ಉದಾಹರಣೆಗೆ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಕಥೆಯನ್ನೇ ತೆಗೆದುಕೊಳ್ಳೋಣ. 1959ರಲ್ಲಿ ತಮ್ಮ ಶಕ್ತಿ ಹಾಗೂ ಜನಪ್ರಿಯತೆ ಯಿಂದ ಉತ್ತುಂಗದಲ್ಲಿದ್ದರು. ಆದರೆ 1963ರಲ್ಲಿ ಭಾರತವು ಚೀನಾ ದೊಂದಿಗಿನ ಯುದ್ಧದಲ್ಲಿ ಅವಮಾನಕ್ಕೊಳಗಾದ ನಂತರ ಎಲ್ಲವೂ ಭಿನ್ನವಾಗಿತ್ತು. ಇಂದಿಗೂ ಕೂಡ ನೆಹರೂ ಅಂದು ತೆಗೆದುಕೊಂಡ ನಿರ್ಧಾರವನ್ನು ವಿವಿಧ ಆಯಾಮಗಳಲ್ಲಿ ಬರೆಯುವ ಲೇಖಕರನ್ನು ನಾವು ಕಾಣಬಹುದು.
ವಿಶೇಷವೆಂದರೆ ಇದು ಲೇಖಕರ ರಾಜಕೀಯ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಬದಲಾಗಿದೆ. ಭೂತಕಾಲವು ವರ್ತಮಾನದ
ದೃಷ್ಟಿಕೋನದೊಂದಿಗೆ ಹೆಣೆದು ಕೊಂಡಿರುವುದರಿಂದ ಇತಿಹಾಸದಲ್ಲಿ ಎಂದಿಗೂ ಕೊನೆಯೆಂಬುದು ಇಲ್ಲ. ಅದರಲ್ಲೂ ಭಾರತದ ಇತಿಹಾಸದಲ್ಲಿ ಖಂಡಿತವಾಗಿಯೂ ಇಲ್ಲ ಅಂದರೆ ತಪ್ಪಾಗಲಾರದು.
ಮೋದಿಗೆ ಬೆಂಬಿಡದ ವಿವಾದ : ಮೋದಿಯವರು 2014ರಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ಸ್ವೀಕರಿಸುವ ಮೊದಲು ಅವರ ಮೇಲೆ ಸಾಕಷ್ಟು ನಿರೀಕ್ಷೆಯೂ ಇತ್ತು, ಆದರೆ ಅವರಿಗೆ ಅಭಿವೃದ್ಧಿಯನ್ನು ಮಾಡುವುದು ಅಷ್ಟೊಂದು ಸುಲಭದ ವಿಚಾರವಾಗಿರಲಿಲ್ಲ. ಏಕೆಂದರೆ ವಿವಾದಗಳು ಅವರನ್ನು ಬೆನ್ನು ಬಿಡದೆ ಕಾಡಲು ಶುರು ಮಾಡಿಕೊಂಡಿ ದ್ದವು. ಇದೆಲ್ಲದರ ನಡುವೆ ಅವರಿಗೆ ತಮ್ಮನ್ನು ತಾವು ನಿರೂಪಿಸಿಕೊಳ್ಳುವಂಥ ದೊಡ್ಡ ಸವಾಲಿದ್ದವು.
ಮೋದಿಗೆ ವಿವಾದಗಳು ಹೊಸದೇನಲ್ಲ ಬಿಡಿ. ಇದಕ್ಕೂ ಮೊದಲು 2001ರಲ್ಲಿ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಯಾಗಿದ್ದಾಗಲೂ ಅವರನ್ನು ಹಣಿಯುವ ಯತ್ನಗಳು ನಡೆದೇ ಇದ್ದವು. ಗುಜರಾತ್‌ನಲ್ಲಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ
ಮೋದಿಯವರನ್ನು ಧ್ರುವೀಕರಿಸುವ ವ್ಯಕ್ತಿ ಎಂದೇ ಹೇಳಲಾಯಿತು. ಇದರಿಂದಾಗಿ ಅವರಿಗೆ ರಾಷ್ಟ್ರೀಯ ನಾಯಕನಾಗಿ ಸಾಗುವ ಹಾದಿಯಲ್ಲಿ ಸಾಕಷ್ಟು ಕಷ್ಟಗಳು ಎದುರಾಗಿದ್ದಂತೂ ನಿಜ.
ಜನಮನ ಗೆದ್ದ ಪ್ರಧಾನಿ : ಆರಂಭದಲ್ಲಿ ಮೋದಿಯ ವಿರುದ್ಧ ಇದ್ದ ಟೀಕೆಗಳು, ವಿವಾದಗಳು ರಾಷ್ಟ್ರೀಯ ಮಟ್ಟದಲ್ಲಿ ಅವರ ವರ್ಚಸ್ಸಿಗೆ ದೊಡ್ಡ ಹೊಡೆತವನ್ನು ನೀಡಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ ಮೋದಿ ವಿಚಾರದಲ್ಲಿ ಹಾಗೆ ಆಗಲಿಲ್ಲ. ನಿಧಾನವಾಗಿ ಜನಮಾನಸದಲ್ಲಿದ್ದ ಎಲ್ಲ ಅನುಮಾನಗಳು ತೊಳೆದು ಹೋದವು. ಭಾರತದ ಜನತೆ ಅವರನ್ನು ನಿಜವಾದ ಬದಲಾವಣೆಯ ಪ್ರತಿನಿಧಿಯಾಗಿ ನೋಡಲು ಆರಂಭಿಸಿದರು.
ಈ ಬದಲಾವಣೆಯು ಸ್ವ-ಸೇವೆಯ ಒಮ್ಮತವನ್ನು ಬಗೆಹರಿಸಿ ಅಭಿವೃದ್ಧಿಗೆ ರಹದಾರಿಯಾಯಿತು. ಜನರಲ್ಲಿ ಮೋದಿ ಒಂದು ರೀತಿಯ ವಿಶ್ವಾಸ, ನಂಬಿಕೆಯನ್ನು ಹುಟ್ಟು ಹಾಕಿದರು. ದೇಶಕ್ಕಾಗಿ ನಾನು ಅನ್ನುವ ಬಲವಾದ ನಂಬಿಕೆಯ ಅಡಿಪಾಯ ವನ್ನು ಹಾಕಿದರು. ಇದೇ ಕಾರಣದಿಂದಲೇ ಮೋದಿಯವರು ಎರಡನೇ ಸಲ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.
ಇದಕ್ಕೆಲ್ಲ ಕಾರಣ ದೇಶದಲ್ಲಿ ಅವರು ತಂದ ಭರವಸೆಯ ಬದಲಾವಣೆಯೇ ಹೊರತೂ ಮತ್ತೇನೂ ಅಲ್ಲ. ಬಹುಶಃ ಇದೇ ಕಾರಣದಿಂದ ಮೋದಿಯ ಎದುರಾಳಿಗಳು ಭಯಭೀತರಾಗಿದ್ದರು. ಮೋದಿಯವರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ ಟೀಕಾಕಾರ ರಿಗೆ ಅವರು ಸರಿಯಾದ ಉತ್ತರವನ್ನು ನೀಡಿ ಬಾಯಿ ಮುಚ್ಚಿಸಿದ್ದರು ಅನ್ನುವುದನ್ನು ಇಲ್ಲಿ ವಿಶೇಷವಾಗಿ ಹೇಳಬೇಕಾಗಿಲ್ಲ. ಈ ನಡುವೆ ಮೋದಿಯೆದುರು ಇರುವುದು ಪ್ರಮುಖ ಪ್ರಶ್ನೆ ಏನೆಂದರೆ ಏಳು ವರ್ಷಗಳಲ್ಲಿ ಭಾರತ ಎಷ್ಟು ಬದಲಾಗಿದೆ ಅನ್ನೋದು?
ಒಂದು ಕಡೆಯಿಂದ ದೇಶಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಮೋದಿ.
ಮತ್ತೊಂದು ಕಡೆ ಅವರನ್ನು ಟೀಕಿಸುವ ಒಂದು ದೊಡ್ಡ ವರ್ಗವೇ ಹುಟ್ಟಿಕೊಂಡಿದೆ. ಹೌದು, ಮೋದಿಯವರ ಹೆಚ್ಚಿನ ವಿಮರ್ಶಕರು ಅದರಲ್ಲೂ ಹೆಚ್ಚಿನವರು ವಿದೇಶಗಳಲ್ಲಿ ನೆಲೆಸಿರುವವರು, ಎಡಪಂಥೀಯ ವಿಚಾರ ಧಾರೆಗಳ ಚಿಂತನೆಯನ್ನು ಹೊಂದಿರುವವರು ಮೋದಿಯನ್ನು ಬಣ್ಣಿಸುವುದೇ ಬೇರೆ ರೀತಿಯಲ್ಲಿ. ಭಾರತದ ಸಾರ್ವಜನಿಕ ಜೀವನ ಅಥವಾ ಆಡಳಿತದ ಮೇಲಿನ ದೋಷಾರೋಪಣೆಯನ್ನು “ಮೋದಿಯವರ ಭಾರತ” ಎಂದು ಹಣೆಪಟ್ಟಿಯೊಂದಿಗೆ ಟೀಕಿಸಿ ಬರೆಯುತ್ತಾರೆ.
ಇಂಥ ಚಿತ್ರಣ ಭಾರತದಲ್ಲಿ ಏನೋ ಕೆಟ್ಟ ಘಟನೆಗಳು ನಡೆಯುತ್ತದೆ ಅನ್ನುವಂಥ ತಪ್ಪು ಮಾಹಿತಿಯನ್ನು ಪಸರಿಸುತ್ತದೆ. ಕೆಟ್ಟದಾಗಿ ಭಾರತದ ಚಿತ್ರಣವನ್ನು ಬಿಂಬಿಸುತ್ತದೆ. ನಾಸ್ಟಾಲ್ಜಿಯಾದ ಇತ್ತೀಚಿನ ಸ್ಫೋಟವು ಇದಕ್ಕೊಂದು ತಾಜಾ ಉದಾರಣೆ.
ಇಂಥ ಘಟನೆಗಳು ದೇಶದ ಘನೆತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳುಗೆಡವುತ್ತದೆ. ಇದೆಲ್ಲ ನೆಗೆಟಿವ್ ಪ್ರಚಾರದ ನಡುವೆ ಮೋದಿಯವರ ಆಡಳಿತದಲ್ಲಿ ನಿಜಕ್ಕೂ ಭಾರತ ಬದಲಾಗಿದೆ ಎಂದು ತೋರುತ್ತದೆ. ಈ ಬದಲಾವಣೆ ಗುರುತಿಸಲಾಗದಂತೆ ಅಲ್ಲ, ಆದರೆ ಹಿಂದಿನ ಇತಿಹಾಸಗಳಿಗೆ ಹೋಲಿಸಿದರೆ ಗಣನೀಯವಾಗಿದೆ.
ಪ್ರಾಚೀನ ಆಡಳಿತಕ್ಕೆ ಸಂಬಂಧಿಸಿದವರ ಅಂಚಿನಲ್ಲಿರುವಿಕೆಯು ಬಹುಶಃ ದೊಡ್ಡ ಬದಲಾವಣೆಯಾಗಿದೆ. ಮೋದಿ ಭಾರತದಲ್ಲಿ ಉದ್ಯಮಶೀಲತೆಗೆ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಗಳ ಮೇಲೆ ಒತ್ತು ನೀಡುವ ಸಾಮಾಜಿಕ ಅಡಿಪಾಯ ಗಳನ್ನು ರೂಪಿಸುವ ಹೊಸ ಕಾರ‍್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದ್ದು ಇದು ನೈಜವಾದ ಬದಲಾವಣೆಗೆ ತೆರೆದುಕೊಂಡಿರುವುದಂತೂ ನಿಜ.
ಭ್ರಷ್ಟಾಚಾರಕ್ಕೆ ಮೋದಿ ಅಸ್ತ್ರ..!
ಭಾರತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈಗಲೂ ಭ್ರಷ್ಟಾಚಾರ ದಿನನಿತ್ಯದ ಸಾರ್ವಜನಿಕ ಜೀವನದ ವಿವಿಧ ಸ್ಥರಗಳಲ್ಲಿ ಜೀವಂತವಾಗಿದೆ. ಮೋದಿಯವರು ಅಧಿಕಾರ ಸ್ವೀಕರಿಸುವ ವೇಳೆ ವಿಕೋಪಕ್ಕೆ ತಿರುಗಿತ್ತು. ಇದರ ವಿರುದ್ಧ ಮೋದಿ ದೊಡ್ಡ ಯುದ್ಧವನ್ನೇ ಮಾಡಿದರು. ಈ ಹೋರಾಟದಲ್ಲಿ ಅವರು ಸಂಪೂರ್ಣವಾಗಿ ಅದನ್ನ ಇಲ್ಲದಾಗಿಸಲಿಲ್ಲ. ಆದರೆ ಅವರು ಮೇಲ್ಭಾಗ ದಲ್ಲಿ ಸ್ವಲ್ಪ ಮಟ್ಟಿಗೆ ಭ್ರಷ್ಟಾಚಾರ ವನ್ನು ಬೇರು ಮಟ್ಟದಿಂದ ಕಿತ್ತು ಹಾಕುವ ಸ್ವಚ್ಛ ಸಮಾಜವನ್ನು ನಿರ್ಮಿಸುವ ಪ್ರಯತ್ನ ಮಾಡಿದ್ದಾರೆ. ಬಡ ಜನರಿಗೆ ಅನುಕೂಲವಾಗುವಂಥ ತಂತ್ರಜ್ಞಾನವನ್ನು ದೇಶಕ್ಕೆ ಪರಿಚಯಿಸಿದ್ದಾರೆ. ಈಗ ದೇಶದಲ್ಲಿ ಭ್ರಷ್ಟಾಚಾರ ಹಿಮ್ಮೆಟ್ಟಿ ಸುವ ಒಂದು ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ. ಇದು ರಾಜಕೀಯ ಇಚ್ಚಾಶಕ್ತಿಯ ವ್ಯತ್ಯಾಸವನ್ನುಂಟು ಮಾಡಿದೆ.
ವಿವಿಧ ಯಶಸ್ವಿ ನಿರ್ಧಾರಗಳ ಸರದಾರ
ನರೇಂದ್ರ ಮೋದಿಯವರು ಎರಡನೇ ಅವಧಿಯಲ್ಲಿ ಒಂದಷ್ಟು ರಾಜಕೀಯ ಬೆಳವಣಿಗೆ ಯನ್ನು ದೇಶದಲ್ಲಿ ಅಚ್ಚರಿಯ ರೀತಿ ಯಲ್ಲಿ ಜಾರಿಗೆ ತಂದರು. ವಿಶೇಷವಾಗಿ ಪರ‍್ಯಾಯ ರಾಷ್ಟ್ರೀಯತವಾದಿ ಒಮ್ಮತವನ್ನು ರೂಪಿಸುತ್ತಿದೆ. ಬಹಳಷ್ಟು ವರ್ಷ ಗಳಲ್ಲಿ ವಿವಿಧ ಸರಕಾರಗಳು ಮಾಡಲು ಸಾಧ್ಯವಾಗದೇ ಇದ್ದ ಕೆಲವು ನಿಯಮಗಳನ್ನು ಬದಲಿಸಿದ್ದು ಮೋದಿ ಕಾಲದ ಬಹು ದೊಡ್ಡ ಸಾಧನೆ. ಅದರಲ್ಲಿ ಒಂದು ತ್ರಿವಳಿ ತಲಾಖ್, ಮತ್ತೊಂದು 370ನೇ ವಿಧಿಯನ್ನು ರದ್ದುಪಡಿಸಿರುವುದು. ಇದು ಪರ – ವಿರೋಧದ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಏನನ್ನೂ ಹೇಳಿತ್ತೋ ಅದರಂತೆಯೇ ನಡೆದುಕೊಂಡಿತ್ತು. ಹಲವಾರು ಪ್ರತಿಭಟನೆಗಳ ಹೊರತಾಗಿಯೂ ಅನ್ನುವುದು ವಿಶೇಷ. ಇದೆಲ್ಲವನ್ನು ನಿಭಾಯಿಸಿದ್ದು ಯಶಸ್ವಿಯಾಗಿ ಕಾರ‍್ಯಗತ ಗೊಳಿಸಿದ್ದು ಒಬ್ಬರೇ ಒಬ್ಬರು… ಅವರೇ ನರೇಂದ್ರ ಮೋದಿ.
ಧೈರ್ಯಕ್ಕೆ ಮತ್ತೊಂದು ಹೆಸರೇ ಮೋದಿ
ಮೋದಿ ನಡೆಯ ಪ್ರತಿ ಹೆಜ್ಜೆಗಳು ಹಾಗೂ ತಪ್ಪುಗಳು ಚರ್ಚೆಯಾಗಬಹುದು. ಆದರೆ ಅವರ ಧೈರ್ಯವು ದೇಶಕ್ಕೆ ಹಿಡಿದ ಕೈಕನ್ನಡಿ ಯಾಗಿದೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅನುಮೋದನೆ ನೀಡಿತು. ಈ ಹೋರಾಟದಲ್ಲಿ ಸಿಕ್ಕ ಜಯದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರಕಾರದ ವತಿಯಿಂದ ಭಾರತದ ಪರ್ಯಾಯ ಕಲ್ಪನೆಯನ್ನು ನೀಡಿದರು.
ಜತೆಗೆ ಅಂಥ ಕಲ್ಪನೆಯುಳ್ಳ ಜನರಿಗೆ ಒಂದು ಭರವಸೆಯ ಆಶ್ವಾಸನೆಯನ್ನು ನೀಡಿದರು. ಹಲವಾರು ಏರಿಳಿತ , ರಾಜಕೀಯ
ಏರಿಳಿತದ ನಡುವೆಯೂ ಭಾರತೀಯ ಜನತಾ ಪಾರ್ಟಿಯನ್ನು ಒಂದು ಶಕ್ತಿಯಂತೆ ಮೋದಿ ರೂಪಿಸಿದರು. ಇದೇ ಕಾರಣಕ್ಕೆ
ಬಿಜೆಪಿ ಎಲ್ಲ ಕಡೆಯೂ ತನ್ನ ಬೇರನ್ನು ಗಟ್ಟಿಗೊಳಿಸಿಕೊಂಡಿದೆ. ತನ್ನ ಸರಕಾರದಲ್ಲಿ ರುದಾರರ ದೊಡ್ಡ ಪರಿವಾರವನ್ನೇ
ಮೋದಿ ಯವರು ಹೊಂದಿದ್ದಾರೆ. ಭಾರತಕ್ಕೆ ಒಂದು ಹೊಸ ರೂಪುರೇಷೆಯನ್ನು ನೀಡುವುದು ಅವರ ಮಹತ್ತರವಾದ ಕನಸಾ ಗಿದೆ. ಈ ಏಳು ವರ್ಷಗಳಲ್ಲಿ ಮೋದಿ ಹಲವಾರು ಸಾಧನೆಯನ್ನು ಮಾಡಿದ್ದಾರೆ. ಹಲವಾರು ವಿಚಾರಗಳನ್ನು ಬದಲಾಯಿಸಿ ಹೊಸ ಶಕೆಗೆ ಮುನ್ನುಡಿ ಬರೆದಿದ್ದಾರೆ. ಈ ಹೊರತಾಗಿಯೂ ಅನೇಕ ಪ್ರಗತಿ ಕಾರ್ಯಗಳು ದೇಶದಲ್ಲಿ ನಡೆಯಬೇಕಿದೆ.
ಮೋದಿ ಭಾರತವು 2024ರಲ್ಲಿ ಹೊಸ ಎತ್ತರವನ್ನು ಏರುವ ಶಪಥ ಮಾಡಿದೆ. ಇಡೀ ದೇಶವೇ ಬದಲಾವಣೆಯ ಮತ್ತೊಂದು ಪರ್ವವನ್ನು ಬರ ಮಾಡಿಕೊಳ್ಳಲು ಕಾತರದಿಂದ ಕಾಯುತ್ತಿದೆ. ಪತ್ರಕರ್ತರು ಹಾಗೂ ರಾಜಕಾರಣಿಯೂ ಆಗಿರುವ ಸ್ವಪನ್
ದಾಸ್ ಗುಪ್ತ ಉತ್ತಮ ವಿಶ್ಲೇಷಕರು. ಪ್ರಸ್ತುತ ರಾಜ್ಯಸಭಾ ಸದಸ್ಯರೂ ಆಗಿರುವ ಇವರು ರಾಜಕಾರಣದಲ್ಲಿಯೂ ಸಕ್ರಿಯವಾಗಿ
ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಯುತರು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.