ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಗುರುವಾರ ಸೆನ್ಸೆಕ್ಸ್ 33.61 ಪಾಯಿಂಟ್’ನಿಂದ ಆರಂಭವಾಗಿ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 3.30 ಪಾಯಿಂಟ್‌ಗಳ ಲಾಭದೊಂದಿಗೆ ಪ್ರಾರಂಭವಾಯಿತು.
ಬಿಎಸ್‌ಇ ಸೆನ್ಸೆಕ್ಸ್ 51051.13 ಮಟ್ಟದಲ್ಲಿ, ಎನ್‌ಎಸ್‌ಇ ನಿಫ್ಟಿ 3.30 ಪಾಯಿಂಟ್‌ಗಳ ಲಾಭದೊಂದಿಗೆ 15305.30 ಕ್ಕೆ ಪ್ರಾರಂಭ ವಾಯಿತು. ಬಿಎಸ್‌ಇಯಲ್ಲಿ ಒಟ್ಟು 1,235 ಷೇರುಗಳು ಏರಿಕೆಗೊಂಡರೆ, 360 ಷೇರುಗಳು ತೆರೆದು ಕುಸಿದವು. 62 ಕಂಪನಿಗಳ ಷೇರು ಬೆಲೆಗಳು ಕಡಿಮೆಯಾಗದೆ ಅಥವಾ ಹೆಚ್ಚಾಗದೆ ತೆರೆಯಲ್ಪಟ್ಟವು.
ಬಿಪಿಸಿಎಲ್ ಷೇರುಗಳು 14 ರೂ ಏರಿಕೆಗೊಂಡು 485.70 ರೂ., ಯುಪಿಎಲ್‌ನ ಷೇರುಗಳು 7 ರೂ.ಗಳ ಲಾಭದೊಂದಿಗೆ 819.10 ರೂ., ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು 7 ರೂ.ಗಳ ಏರಿಕೆ ಕಂಡು 828.25 ರೂ.ಗೆ ತಲುಪಿದೆ. ಟೆಕ್ ಮಹೀಂದ್ರಾ ಷೇರು 9 ರೂ. ಹೆಚ್ಚಾಗಿ 1,017.25 ರೂ., ಸನ್ ಫಾರ್ಮಾ ಷೇರುಗಳು 6 ರೂ. ಏರಿಕೆಗೊಂಡು 709.45 ರೂ. ತಲುಪಿದೆ.