ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1.73 ಲಕ್ಷ ಕೋವಿಡ್ ಹೊಸ ಪ್ರಕರಣಗಳು ದೃಢಪಟ್ಟಿದ್ದು, 3,617 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ತಿಳಿಸಿದೆ.
ಕಳೆದ 45 ದಿನಗಳಲ್ಲಿ ಕಡಿಮೆ ಪ್ರಕರಣ ಶನಿವಾರ 24 ಗಂಟೆಗಳ ಅಂತರದಲ್ಲಿ ದಾಖಲಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2,77,29,247ಕ್ಕೆ ಏರಿಕೆಯಾಗಿದೆ. ಆ ಪೈಕಿ 3,22,512 ಮಂದಿ ಮೃತಪಟ್ಟಿದ್ದಾರೆ.
ಇದುವರೆಗೆ 2,51,93,410 ಮಂದಿ ಗುಣಮುಖರಾಗಿದ್ದು, ದೇಶದಲ್ಲಿ 22,28,724 ಸಕ್ರಿಯ ಪ್ರಕರಣಗಳಿವೆ.