Saturday, 23rd November 2024

ಯಾರು ಏನೇ ಹೇಳಲಿ, ನಾನು ಆ ನರಭಕ್ಷಕ ಹುಲಿ ಪರ!

ಬೇಟೆ

‘ಸಾಮಾಜಿಕ ಜಾಲತಾಣ ಎಂಬುದು ಭಾರತದಲ್ಲೊಂದೇ ಹತ್ತು ವರ್ಷಗಳ ಹಿಂದೆ ಬಂದಿದ್ದರೆ, ಈ ದೇಶದಲ್ಲಿ ಬಡತನ, ಹಸಿವು, ನಿರುದ್ಯೋೋಗ, ಅನಕ್ಷರತೆ ಸೇರಿದಂತೆ ಯಾವ ಸಮಸ್ಯೆೆಯೂ ಇರುತ್ತಿಿರಲಿಲ್ಲ. ಅಷ್ಟೇ ಅಲ್ಲ, ಭಾರತ ಅಮೆರಿಕ ಸೇರಿದಂತೆ ಜಗತ್ತಿಿನ ಎಲ್ಲಾ ರಾಷ್ಟ್ರಗಳನ್ನೂ ಹಿಂದಕ್ಕೆೆ ಹಾಕಿಬಿಡುತ್ತಿಿತ್ತು.’

ಹಾಗಂತ ನನಗೆ ಅನೇಕ ಸಲ ಅನಿಸಿದೆ. ಕಾರಣ ಇಷ್ಟೇ, ನಾವು ಅನುಭವಿಸುವ ಎಲ್ಲಾ ಸಮಸ್ಯೆೆಗಳಿಗೆ ಸಾಮಾಜಿಕ ಜಾಲತಾಣಿಗರಲ್ಲಿ ಪರಿಹಾರವಿದೆ. ಯಾರು ಏನು ಮಾಡಬೇಕು ಎಂಬುದನ್ನು ಅವರಷ್ಟು ಪರಿಣಾಮಕಾರಿಯಾಗಿ ಯಾರೂ ಹೇಳುವುದಿಲ್ಲ. ದೇಶದ, ವಿಶ್ವದ ಎಲ್ಲ ವಿಷಯಗಳೂ ಅವರಿಗೆ ಗೊತ್ತು ಮತ್ತು ಅವುಗಳಿಗೆ ಅವರು ಪ್ರತಿಕ್ರಿಿಯಿಸುತ್ತಾಾರೆ. ಲ್ಸೈೃ್‌ ಒತ್ತುತ್ತಾಾರೆ, ಕಾಮೆಂಟ್ ಬರೆಯುತ್ತಾಾರೆ. ಅವರಿಗೆ ಪ್ರತಿ ವಿಷಯದಲ್ಲೂ ಆಸಕ್ತಿಿ. ಪ್ರತಿ ವಿಷಯಕ್ಕೂ ಅವರಿಗೆ ಅಭಿಪ್ರಾಾಯ, ನಿಲುವು ಎಂಬುದಿದೆ. ‘ವೃಷಭಾವತಿ ನದಿಯನ್ನು ಉಳಿಸೋಣ ಬನ್ನಿಿ’ ಎಂದು ಕರೆಕೊಟ್ಟರೆ, ಲ್ಸೈೃ್‌ ಒತ್ತಿಿ ತಾವು ಆ ಅಭಿಯಾನದಲ್ಲಿ ಭಾಗವಹಿಸಿದ್ದೇವೆ ಎಂದು ಭಾವಿಸುತ್ತಾಾರೆ. ಗ್ರಾಾಮ ಪಂಚಾಯತಿ ಸದಸ್ಯನಿಂದ ಅಮೆರಿಕ ಅಧ್ಯಕ್ಷನ ತನಕ ಎಲ್ಲರನ್ನೂ ಅವರು ವಿಚಾರಿಸಿಕೊಳ್ಳುತ್ತಾಾರೆ. ಅಷ್ಟೇ ಅಲ್ಲ, ಅವರು ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆೆ ಉಪದೇಶ ಕೊಡಬಲ್ಲರು.

ಇಂಥ ಅದ್ಭುತ ವ್ಯವಸ್ಥೆೆ ಹತ್ತು ವರ್ಷಗಳ ಮೊದಲು ಬರಬೇಕಿತ್ತು ಅಂದಿದ್ದು ಅದಕ್ಕೆೆ. ಆಯಾ ದಿನ ಏನೇ ಆಗಲಿ, ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಸುಪ್ರೀಂ ಕೋರ್ಟ್ ಜಡ್‌ಜ್‌‌ಗಳೇ! ಪ್ರತಿಯೊಬ್ಬರೂ ತಮಗೆ ತೋಚಿದಂತೆ ಜಡ್‌ಜ್‌‌ಮೆಂಟ್ ಪಾಸು ಮಾಡಿರುತ್ತಾಾರೆ. ಹಾಗೆ ಮಾಡುವುದು ಎಷ್ಟು ಸರಿ, ತಾನು ಅಂತ ತೀರ್ಪು ಕೊಡಲು ಅರ್ಹನಾ ಎಂದೂ ಸಹ ನೋಡಲು ಹೋಗುವುದಿಲ್ಲ. ಅನಿಸಿದ್ದನ್ನು ಚಕ್ಕನೆ ಫೇಸ್ ಬುಕ್ ಅಥವಾ ಟ್ವಿಿಟ್ಟರ್‌ನಲ್ಲಿ ಹೇಳಿಬಿಡಬೇಕು, ಇಲ್ಲದಿದ್ದರೆ ತಿಂದಿದ್ದು ಅರಗುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಈ ಸಾಮಾಜಿಕ ಜಾಲತಾಣಗಳೇ ಇಡೀ ಚರ್ಚೆಯನ್ನು ದಾರಿ ತಪ್ಪಿಿಸಿಬಿಡುತ್ತವೆ. ಇಲ್ಲವೇ ಸರಕಾರ ಅಥವಾ ಅಧಿಕಾರಶಾಹಿ ಮೇಲೆ ಅನಗತ್ಯ ಒತ್ತಡ ಬೀರುತ್ತವೆ. ಇನ್ನು ಕೆಲವರಂತೂ ತಾವೇ ಒತ್ತಡ ಹೇರುವ ಶಕ್ತಿಿಗಳಂತೆ ಕೆಲಸ ಮಾಡುತ್ತಾಾರೆ.

ಇಷ್ಟೆೆಲ್ಲಾ ಯಾಕೆ ಹೇಳುತ್ತಿಿದ್ದೇನೆ ಅಂದರೆ, ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ಪ್ರದೇಶದಲ್ಲಿರುವ ಚೌಡಹಳ್ಳಿಿ ಮತ್ತು ಹುಂಡೀಪುರ ಎಂಬ ಎರಡು ಗ್ರಾಾಮಗಳಲ್ಲಿ ನರಭಕ್ಷಕ ಹುಲಿಯೊಂದು ಒಂದು ತಿಂಗಳ ಅವಧಿಯಲ್ಲಿ ಇಬ್ಬರು ರೈತರು, ಹತ್ತಕ್ಕೂ ಹೆಚ್ಚು ಜಾನುವಾರು, ಆನೆ ಮರಿಯನ್ನು ಬಲಿ ಪಡೆಯಿತು. ಇದು ಗ್ರಾಾಮಸ್ಥರಲ್ಲಿ ತೀವ್ರ ಆತಂಕವನ್ನು ಸೃಷ್ಟಿಿಸಿತು. ಆ ಹಳ್ಳಿಿಗಳ ಜನ ಭಯಭೀತರಾದರು. ತಮ್ಮ ತಮ್ಮ ದನ -ಕರುಗಳನ್ನು ಹೊರಗೆ ಮೇಯಲು ಹೋಗದಂತೆ ಕಟ್ಟಿಿಹಾಕಲು ಆರಂಭಿಸಿದರು. ಮಕ್ಕಳಿಗೆ ಮನೆಯಿಂದ ಹೊರ ಹೋಗದಂತೆ ತಾಕೀತು ಮಾಡಿದರು. ಮನೆಯ ಹಿರಿಯರೂ ಹೊಲ-ಗದ್ದೆಗಳಿಗೆ ಹೋಗುವುದನ್ನು ನಿಲ್ಲಿಸಿದರು. ಆ ಗ್ರಾಾಮಗಳಿಗೆ ಬೇರೆ ಕಡೆಗಳಿಂದ ಜನ ಬರುವುದನ್ನು ನಿಲ್ಲಿಸಿದರು. ಆ ಎರಡು ಗ್ರಾಾಮ ಮತ್ತು ಸುತ್ತಮುತ್ತಲ ಹಳ್ಳಿಿಗಳಲ್ಲಿ ಭಯದ ವಾತಾವರಣ ಆವರಿಸಿಕೊಂಡಿತು.

ಆ ಗ್ರಾಾಮಸ್ಥರ ಒಂದೇ ಒಂದು ಬೇಡಿಕೆಯೆಂದರೆ, ಆ ನರಭಕ್ಷಕ ಹುಲಿಯನ್ನು ಸಾಯಿಸಬೇಕು. ತಮ್ಮ ಊರಿನ ಇಬ್ಬರನ್ನು ಸಾಯಿಸಿದ ಆ ಹುಲಿಯನ್ನು ಯಾವ ಕಾರಣಕ್ಕೂ ಬಿಡಬಾರದು, ಬಲಿ ತೆಗೆದುಕೊಳ್ಳಲೇಬೇಕು. ಆ ಹುಲಿಯನ್ನು ಸೆರೆ ಹಿಡಿಯುವುದನ್ನು ನಾವು ಒಪ್ಪುುವುದಿಲ್ಲ, ಸಾಯಿಸುವುದೊಂದೇ ಪರಿಹಾರ. ಇದು ಅವರ ಆಕ್ರೋೋಶಭರಿತ ಒತ್ತಾಾಯದ ಬೇಡಿಕೆ. ಪ್ರಾಾಯಶಃ ಅವರ ಸ್ಥಿಿತಿಯಲ್ಲಿ ಬೇರೆ ಯಾರೇ ಇದ್ದರೂ ಹಾಗೆಯೇ ಪ್ರತಿಕ್ರಿಿಯಿಸುತ್ತಿಿದ್ದರೋ ಏನೋ? ಅವರ ಬೇಡಿಕೆ ಸರಿ ಇಲ್ಲ ಎಂದು ಅವರ ಹತ್ತಿಿರ ವಾದ ಮಾಡುವುದರಲ್ಲಿ ಅರ್ಥವೇ ಇರಲಿಲ್ಲ. ಕಾರಣ ತಮ್ಮವರನ್ನು ಕಳೆದುಕೊಂಡ ದುಃಖ ಅವರಿಗೇ ಗೊತ್ತು. ಬೇರೆಯವರು ಏನೇ ಹೇಳಿದರೂ ಅದಕ್ಕೆೆ ಅರ್ಥವಿಲ್ಲ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಯಿತು ನೋಡಿ ಚರ್ಚೆ, ಕಾಮೆಂಟುಗಳ ಭರಾಟೆ. ಜನ ಸರಿಯಾಗಿ ಇಬ್ಭಾಾಗವಾಗಿ ಹೋದರು. ಹುಲಿಯನ್ನು ಸಾಯಿಸಲೇಬೇಕು ಮತ್ತು ಯಾವ ಕಾರಣಕ್ಕೂ ಹುಲಿಯನ್ನು ಸಾಯಿಸಬಾರದು ಎಂದು ಎರಡು ಗುಂಪುಗಳು ಕಾದಾಡಲಾರಂಭಿಸಿದವು. ಎರಡೂ ಗುಂಪುಗಳಿಗೂ ವಾದ ಮಾಡಲು ವಿಷಯಗಳಿದ್ದವು. ಇಬ್ಬರೂ ತಮ್ಮ ತಮ್ಮ ಮೂಗಿನ ನೇರಕ್ಕೆೆ ಸರಿಯೇ. ಈ ಹುಲಿಯನ್ನು ಬಿಟ್ಟರೆ ಅದು ಮತ್ತಷ್ಟು ಜನರ ಮೇಲೆ ದಾಳಿ ಮಾಡಿ ಸಾಯಿಸಬಹುದು, ಆದ್ದರಿಂದ ಸಾಯಿಸುವುದೊಂದೇ ದಾರಿ ಎಂದು ಕೆಲವರು ವಾದ ಮಾಡಿದರೆ, ಇನ್ನು ಕೆಲವರು ಅದನ್ನು ಸಾಯಿಸುವ ಬದಲು ಸೆರೆ ಹಿಡಿಯಬೇಕು ಎಂದು ವಾದ ಮಾಡಿದರು. ಈ ಎರಡೂ ಗುಂಪುಗಳ ಸದಸ್ಯರೇನಾದರೂ ಬೀದಿಯಲ್ಲಿ ಎದುರು-ಬದುರಾಗಿದ್ದರೆ, ನಾಲ್ಕು ಹೆಣ ಬೀಳುತ್ತಿಿದ್ದವೇನೋ, ಆ ಪರಿ ಬೈದಾಡಿಕೊಂಡರು.

ಹಾಗಂತ ಇವರೇನೂ ವನ್ಯಜೀವಿ ತಜ್ಞರಲ್ಲ ಅಥವಾ ವಿಷಯ ಪರಿಣತರೂ ಅಲ್ಲ. ಮೂಲತಃ ಇವರು ಕಾಮೆಂಟು-ಲ್ಸೈೃ್‌ ವೀರರು. ಯಾರೂ ಸಹ ಇನ್ನೊೊಬ್ಬರ ವಾದ ಅಥವಾ ವಿಚಾರಗಳನ್ನು ಕೇಳುವ ಸಂಯಮ, ವಿವೇಚನೆ ಹೊಂದಿದವರಲ್ಲ. ತಮ್ಮ ವಾದವೇ ಸರಿ ಎಂದು ವಾದಿಸುವವರು. ಅವರಿಗೆ ಸಮಸ್ಯೆೆ ಬಗೆಹರಿಯಬೇಕು ಎಂಬುದಕ್ಕಿಿಂತ ತಮ್ಮ ವಾದವೇ ಗೆಲ್ಲಬೇಕು, ತಾವು ಹೇಳಿದ್ದೇ ನಿಜವಾಗಬೇಕು ಎಂಬ ಹಠ. ಹೀಗಾಗಿ ಒಂದೇ ದಿಕ್ಕಿಿನಲ್ಲಿ, ಒಂದೇ ಧಾಟಿಯಲ್ಲಿ ಕಾಮೆಂಟ್ ಹಾಕುತ್ತಿಿದ್ದರು. ಹುಲಿಯನ್ನು ಹಿಡಿಯಬೇಕೋ ಅಥವಾ ಸಾಯಿಸಬೇಕೋ ಎಂಬುದು ಆ ದಿನ ಜಾಗತಿಕ ಸಮಸ್ಯೆೆಯಾಗಿ ಬೃಹದಾಕಾರದಲ್ಲಿ ಆ ಎರಡೂ ಗುಂಪುಗಳ ಮುಂದೆ ನಿಂತುಬಿಟ್ಟಿಿತು. ಕೆಲವರಂತೂ ತೀರಾ ಕೆಟ್ಟ ಪದಗಳಲ್ಲಿ ಬೈದುಕೊಂಡರು, ಪರಸ್ಪರ ನಿಂದಿಸಿಕೊಂಡರು. ಇನ್ನು ಕೆಲವರು ನರಭಕ್ಷಕ ಹುಲಿಗಿಂತ ಭೀಕರವಾಗಿ ವರ್ತಿಸಿದರು.

ಈ ಸಂದರ್ಭದಲ್ಲಿ ನಿಜಕ್ಕೂ ಗಲಿಬಿಲಿ ಹಾಗೂ ಆತಂಕಕ್ಕೊೊಳಗಾದವರೆಂದರೆ ಗ್ರಾಾಮಸ್ಥರಲ್ಲ, ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು. ಅವರ ಮೇಲೆ ಕ್ಷಣ ಕ್ಷಣಕ್ಕೂ ಒತ್ತಡ ಹೆಚ್ಚುತ್ತಲೇ ಇತ್ತು. ಹುಲಿಯನ್ನು ಸಾಯಿಸಿದರೂ ಕಷ್ಟ, ಸೆರೆ ಹಿಡಿದರೂ ಕಷ್ಟ ಎಂಬ ಸ್ಥಿಿತಿಗೆ ಅವರು ಬಂದಿದ್ದರು. ಅಂದರೆ ಏನು ಮಾಡಿದರೂ ತಪ್ಪೇ. ಅಕ್ಷರಶಃ ಅಧಿಕಾರಿಗಳು ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾಗಿದ್ದರು. ಹುಲಿಯನ್ನು ಸೆರೆ ಹಿಡಿದರೆ, ಗ್ರಾಾಮಸ್ಥರು ಬಿಡುವುದಿಲ್ಲ. ಸಾಯಿಸಿದರೆ ವನ್ಯಜೀವಿಪ್ರಿಿಯರು ಬಿಡುವುದಿಲ್ಲ. ಆನಂತರ ಈ ಎರಡೂ ಗುಂಪುಗಳನ್ನು ಬೆಂಬಲಿಸುವ ಸಾಮಾಜಿಕ ಜಾಲತಾಣಿಗರಂತೂ ಬಿಡುವ ಪ್ರಶ್ನೆೆಯೇ ಇಲ್ಲ.

ಈ ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು ನನಗೆ ಹೇಳಿದ್ದೇನೆಂದರೆ – ‘ಈ ಕೆಲಸವನ್ನು ನಮಗೇ ಬಿಟ್ಟಿಿದ್ದರೆ ನಾವು ಅದನ್ನು ನಿರುಮ್ಮಳವಾಗಿ ಮಾಡಿ ಮುಗಿಸುತ್ತಿಿದ್ದೆವು. ಆದರೆ ಈ ಸಾಮಾಜಿಕ ಜಾಲತಾಣಿಗರಿದ್ದಾರಲ್ಲ, ಅವರ ಕಾಟದಿಂದ ಹೊರಬರುವ ಹೊತ್ತಿಿಗೆ ನಾವು ಹೈರಾಣಾಗಿ ಹೋದೆವು. ಹುಲಿಯ ಬಾಯಿಗೆ ಸಿಲುಕಿದವರು ಗ್ರಾಾಮಸ್ಥರೋ ಅಥವಾ ನಾವೋ ಎಂಬ ಅನುಮಾನ ನಮ್ಮನ್ನು ಕೆಲಕಾಲ ಕಾಡಿದ್ದು ನಿಜ. ಇಂಥ ಸಂದರ್ಭದಲ್ಲಿ ಸಾರ್ವಜನಿಕರು ಮಾಡುವ ದೊಡ್ಡ ಉಪಕಾರವೆಂದರೆ, ತಮ್ಮ ಪಾಡಿಗೆ ತಾವಿರುವುದು ಮತ್ತು ನಮ್ಮ ಪಾಡಿಗೆ ಕೆಲಸ ನಿರ್ವಹಿಸಲು ನಮಗೆ ಅವಕಾಶ ಮಾಡಿಕೊಡುವುದು. ಆದರೆ ಅಂದು ಅದೇಕೋ ಯಾರೂ ಹೀಗೆ ಮಾಡಲಿಲ್ಲ.’

ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಮ್ಮ ವಾದ ಹಿಡಿದು ಜಗಳ ಮಾಡುವವರಿಗೆ ತಮ್ಮ ಈ ಕಚ್ಚಾಾಟದಿಂದ, ಕಾರ್ಯಾಚರಣೆಯಲ್ಲಿ ತೊಡಗಿದವರ ಮೇಲೆ ಎಂಥ ಪರಿಣಾಮ ಮತ್ತು ಒತ್ತಡ ಬೀರುತ್ತದೆ ಎಂಬ ಸಣ್ಣ ಗ್ರಹಿಕೆಯೂ ಇರುವುದಿಲ್ಲ. ಆ ಕಾಡಿನಲ್ಲಿ ಹುಲಿಯನ್ನು ಹಿಡಿಯಲೋ ಅಥವಾ ಸಾಯಿಸಲೋ ಅವಿರತ ಕಾರ್ಯಾಚರಣೆ ನಡೆಯುತ್ತಿಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ತರಾವರಿ ಸಲಹೆಗಳು ಬರುತ್ತಿಿದ್ದವು. ಯಾರೋ ಒಬ್ಬ ಘನಂದಾರಿ ವನ್ಯಜೀವಿ ತಜ್ಞ ಎಂಬ ಪಡಪೋಸಿ, ‘ಹುಲಿ ಹೋದ ಜಾಡನ್ನು ಹಿಡಿದು ಹತ್ತಾಾರು ಕಡೆ ನಾಯಿಯನ್ನು ಸಾಯಿಸಿ ಅದರ ದೇಹಕ್ಕೆೆ ವಿಷ ಲೇಪಿಸಿ ಇಡಬಾರದೇ, ನಾಯಿ ಮಾಂಸ ತಿನ್ನಲು ಬಂದ ಹುಲಿ, ಮಾಂಸ ತಿಂದು ಸತ್ತು ಹೋಗುತ್ತದೆ’ ಎಂಬ ಸಲಹೆ ನೀಡಿದ್ದ. ಅದಕ್ಕೆೆ ಪಕ್ಕಾಾ ಕಾಮನ್ ಸ್ಸ್‌ೆ ಇರುವ ವ್ಯಕ್ತಿಿಯೊಬ್ಬ, ‘ಬಾಯಿ ಮುಚ್ಚಿಿಕೊಂಡು ಸುಮ್ಮನಿರುತ್ತೀರಾ? ನಿಮ್ಮ ಮಾತು ಕೇಳಿದರೆ, ಆ ವಿಷ ಲೇಪಿತ ಮಾಂಸವನ್ನು ಹುಲಿಯೊಂದೇ ತಿನ್ನಬೇಕು ಎಂದು ಬೋರ್ಡು ಬರೆಯಿಸಬೇಕು. ಇಲ್ಲದಿದ್ದರೆ ಬೇರೆ ಪ್ರಾಾಣಿಗಳು ತಿಂದು ಸತ್ತು ಹೋದರೆ?’ಎಂದು ವ್ಯಂಗ್ಯವಾಡಿದ.

ಇದಕ್ಕೆೆ ಶ್ವಾಾನ ಪ್ರಿಿಯರು ಬೆನ್ನಟ್ಟಿಿ ಬಂದರು. ‘ಹತ್ತಾಾರು ನಾಯಿಗಳನ್ನು ಸಾಯಿಸಲು ನಾವು ಬಿಡ್ತೇವಾ? ನಾಯಿ ಅಂದರೆ ನಿಮಗೆ ಅಷ್ಟೊೊಂದು ಕೀಳಾ? ಈ ಕಾರಣಕ್ಕೆೆ ಬೀಡಾಡಿ ನಾಯಿಗಳನ್ನು ಸಾಯಿಸಿದರೂ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಹುಲಿಯಂತೆ ನಾಯಿಯೂ ಒಂದು ಪ್ರಾಾಣಿ ಎಂಬುದು ನಿಮಗೆ ಗೊತ್ತಿಿರಲಿ. ಅದರ ಜೀವಕ್ಕೂ ಬೆಲೆಯಿದೆ. ನಾವು ನಾಯಿಯನ್ನು ಮನುಷ್ಯರಷ್ಟೇ ಪ್ರೀತಿ ಮಾಡುತ್ತೇವೆ. ಹುಲಿ ಹಿಡಿಯಲು ಅಥವಾ ಸಾಯಿಸಲು ನಾಯಿ ಬಲಿ ಕೊಡುವುದನ್ನು ನಾವು ಸಹಿಸುವುದಿಲ್ಲ’ ಎಂದು ಅವರು ಸಹ ಮೈಮೇಲೆ ಬಂದರು. ಪ್ರಾಾಣಿ ದಯಾ ಸಂಘದ ಸದಸ್ಯರೂ ಇದಕ್ಕೆೆ ದನಿಗೂಡಿಸಿದರು. ಒಂದು ಪ್ರಾಾಣಿ ಉಳಿಸಲು ಮತ್ತೊೊಂದು ಪ್ರಾಾಣಿಯನ್ನು ಸಾಯಿಸುವುದು ಯಾವ ಧರ್ಮ, ಇದನ್ನು ನಾವು ವಿರೋಧಿಸುತ್ತೇವೆ ಎಂದು ಅವರೂ ದನಿಗೂಡಿಸಿದರು. ಒಟ್ಟಿಿನಲ್ಲಿ ಮೇಲ್ನೋೋಟಕ್ಕೆೆ ಆ ನರಭಕ್ಷಕ ವ್ಯಾಾಘ್ರವನ್ನು ಸೆರೆ ಹಿಡಿಯುವ ಅಥವಾ ಸಾಯಿಸುವ ಕಾರ್ಯಾಚರಣೆ ಹಳ್ಳ ಹಿಡಿಯುವ ಎಲ್ಲಾ ಸೂಚನೆಗಳು ಗೋಚರಿಸಲಾರಂಭಿಸಿದವು.

ಆದರೆ ನಿಜಕ್ಕೂ ನಾನು ಆ ಅರಣ್ಯ ಅಧಿಕಾರಿಗಳನ್ನು ಮೆಚ್ಚುತ್ತೇನೆ. ನೀವೂ ಅವರಿಗೆ ಒಂದು ಸಲಾಮು ಹಾಕಲೇಬೇಕು. ಕಾರಣ ಆ ಕಾಡಿನಲ್ಲಿ ಇಂಟರ್ನೆಟ್ ಬರುತ್ತಿಿರಲಿಲ್ಲ. ಹೀಗಾಗಿ ಅವರಾರೂ ಈ ಸಾಮಾಜಿಕ ಜಾಲತಾಣದ ಚರ್ಚೆಗಳನ್ನು ಓದಲೇ ಇಲ್ಲ. ಒಂದು ವೇಳೆ ಓದಿದ್ದರೆ ತಲೆಚಿಟ್ಟು ಹಿಡಿಸಿಕೊಳ್ಳುತ್ತಿಿದ್ದರು ಅಥವಾ ಹುಲಿಯನ್ನು ಸಾಯಿಸುತ್ತಿಿದ್ದರು. ಈ ಚರ್ಚೆಗಳನ್ನು ಕೇಳಿಸಿಕೊಳ್ಳದಿದ್ದರಿಂದಲೇ ಅವರು ಹುಲಿಯನ್ನು ಜೀವಸಹಿತ ಸೆರೆ ಹಿಡಿದಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯ ಬಾಲಚಂದರ್, ಡಾ.ನಾಗರಾಜ, ಡಾ.ಮುಜೀಬ್, ಡಾ.ಪ್ರಯಾಗ, ಡಿ.ರಾಜಕುಮಾರ, ಡ್ರೋೋನ್ ಆಪರೇಟರುಗಳಾದ ನಿತಿನ್ ಸೇರಿದಂತೆ ಒಟ್ಟು ಇಪ್ಪತ್ತೊೊಂದು ಮಂದಿ ಪರಿಶ್ರಮ ಮತ್ತು ಸಾಹಸವನ್ನು ಮೆಚ್ಚಲೇಬೇಕು. ಒಂದು ವೇಳೆ ಆ ಹುಲಿಯನ್ನು ಹಿಡಿಯದಿದ್ದರೆ, ದಿನದಿಂದ ದಿನಕ್ಕೆೆ ಬೊಬ್ಬೆೆ ಜಾಸ್ತಿಿಯಾಗುತ್ತಿಿತ್ತು. ಅದು ಮುಖ್ಯಮಂತ್ರಿಿ ಯಡಿಯೂರಪ್ಪನವರನ್ನು ದಾಟಿ ಕಳಂಕ ಮೋದಿ ತನಕ ತಟ್ಟುತ್ತಿಿತ್ತು. ಒಂದು ವೇಳೆ ಅದನ್ನು ಸಾಯಿಸಿದ್ದರೆ, ಗ್ರಾಾಮಸ್ಥರಿಗೆ ಸಂತಸವಾಗುತ್ತಿಿತ್ತು. ಆದರೆ ವನ್ಯಜೀವಿಪ್ರಿಿಯರ ಕೆಂಗಣ್ಣಿಿಗೆ ಗುರಿಯಾಗಬೇಕಾಗುತ್ತಿಿತ್ತು. ಅವರು ಇನ್ನು ಹತ್ತು ವರ್ಷವಾದರೂ ಈ ಘಟನೆಯನ್ನು ಮರೆಯುತ್ತಿಿರಲಿಲ್ಲ. ಆಗಲೂ ಈ ಘಟನೆ ಶಮನವಾಗುತ್ತಿಿರಲಿಲ್ಲ. ಆದರೆ ಈಗ ಹುಲಿಯನ್ನು ಹಿಡಿದಿರುವುದರಿಂದ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿಿದ್ದಾರೆ. ಇತ್ತೀಚಿನ ವರ್ಷಗಳಲ್ಲಿಯೇ ಅತ್ಯಂತ ಸಾಹಸಮಯವೆನ್ನುವ ಕಾರ್ಯಾಚರಣೆ ಮಾಡಿದ ಈ ಎಲ್ಲಾ ಅರಣ್ಯಸಿಬ್ಬಂದಿಯನ್ನು ಮುಖ್ಯಮಂತ್ರಿಿ ಅವರು ಕರೆಯಿಸಿ ಒಂದು ಮೆಚ್ಚುಗೆಯ ಮಾತನ್ನು ಹೇಳಬಹುದು ಎಂದು ಆಶಿಸೋಣ.

ಹುಲಿ ಸಂತತಿಯನ್ನು ಉಳಿಸುವ ಬಗ್ಗೆೆ ನಮಗೆ ಎಷ್ಟೇ ಜಾಗೃತಿ ಮೂಡಿದೆಯೆಂದರೂ ನಮ್ಮ ತಿಳಿವಳಿಕೆ ಕೆಲವು ಸಂದರ್ಭಗಳಲ್ಲಿ ಕೈಕೊಡುತ್ತವೆ. ನಾನೇನೂ ಹುಲಿ ತಜ್ಞ ಉಲ್ಲಾಸ ಕಾರಂತನೂ ಅಲ್ಲ, ಸಂಜಯ ಗುಬ್ಬಿಿಯೂ ಅಲ್ಲ. ಆದರೆ ನನಗೊಂದಿಷ್ಟು ಇರುವ ಕಾಮನ್ ಸ್ಸ್‌ೆ ಆಧಾರದ ಮೇಲೆ ಹೇಳುವುದಾದರೆ, ಹುಲಿ ಮನುಷ್ಯರ ಮೇಲೆ ದಾಳಿ ಮಾಡಿದರೆ ಅಥವಾ ದಾಳಿ ಮಾಡಿ ಮನುಷ್ಯರನ್ನು ಸಾಯಿಸಿದರೆ, ಅದಕ್ಕೆೆ ಪ್ರತಿಯಾಗಿ ಹುಲಿಯನ್ನು ಸಾಯಿಸುವುದು ಉತ್ತರವಲ್ಲ. ಆ ರೀತಿ ಯೋಚನೆಯೇ ಸರಿಯಲ್ಲ. ಹುಲಿಗಳಿಗೆ ಮನುಷ್ಯರ ಮೇಲೆ ಯಾವ ಜಿದ್ದು, ಪ್ರತೀಕಾರ ಭಾವ ಇರುವುದಿಲ್ಲ. ಅವುಗಳಿಗೆ ಮುಯ್ಯಿಿ ತೀರಿಸಿಕೊಳ್ಳಬೇಕೆಂಬ ಇರಾದೆಯೂ ಇರುವುದಿಲ್ಲ. ಇನ್ನು ಮನುಷ್ಯರ ವಿರುದ್ಧ, ತೀರಿಸಿಕೊಳ್ಳಬೇಕಾದ ಹಳೆ ದ್ವೇಷವೂ ಇರುವುದಿಲ್ಲ. ಆ ಮೂಕ ಪ್ರಾಾಣಿಗಳಿಗೆ ಅಮಾಯಕ ಗ್ರಾಾಮಸ್ಥರ ಮೇಲೆ ಅದೆಂಥ ಸೇಡು ಇದ್ದಿರಬಹುದು?

ಎಲ್ಲರಿಗೂ ಗೊತ್ತಿಿರುವ ಸತ್ಯ ಸಂಗತಿ ಏನೆಂದರೆ, ವನ್ಯ ಪ್ರಾಾಣಿಗಳ ವಾಸಸ್ಥಾಾನ ಅಥವಾ ಅವುಗಳ ಗಡಿಯೊಳಗೆ ಮನುಷ್ಯರು ಅತಿಕ್ರಮ ಪ್ರವೇಶ ಮಾಡಿದ್ದರಿಂದ, ಅವುಗಳ ಪರಿಸರ ಕುಂಠಿತವಾಗಿವೆ. ಮನುಷ್ಯಅವುಗಳ ವಾಸಸ್ಥಾಾನಕ್ಕೆೆ ನುಗ್ಗಿಿದ್ದರಿಂದ ಸಹಜವಾಗಿ ಅವುಗಳ ಕಾರ್ಯಕ್ಷೇತ್ರ ಕ್ಷೀಣಿಸಿದೆ. ಯಾರಾದರೂ ತಮ್ಮ ಗಡಿಯೊಳಗೆ ಬಂದವರನ್ನು ಬಿಡ್ತಾಾರಾ? ಬಂಡೀಪುರದದಲ್ಲಿ ಇರುವ ಕಾಡಿನ ವಿಸ್ತೀರ್ಣಕ್ಕಿಿಂತ ಹೆಚ್ಚಾಾಗಿ ಅಲ್ಲಿ ಹುಲಿಗಳ ಸಂಖ್ಯೆೆಯಿದೆ. ಕಳೆದ ಹತ್ತು ವರ್ಷಗಳಲ್ಲಿ. ಹುಲಿಗಳ ಸಂಖ್ಯೆೆಗೆ ಹೋಲಿಸಿದರೆ, ಕಾಡುಗಳ ಪ್ರಮಾಣ ಜಾಸ್ತಿಿಯಾಗಿಲ್ಲ. ಅಲ್ಲದೇ ಹುಲಿಗಳ ಸಂಖ್ಯೆೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಸಾಕಾಗುತ್ತಿಿಲ್ಲ.

ಪ್ರತಿಯೊಂದು ಹುಲಿಗೂ ತನ್ನದೇ ಆದ ಸರಹದ್ದು ಎನ್ನುವುದಿರುತ್ತದೆ. ಒಂದು ಹುಲಿ ತನ್ನದಲ್ಲದ ಸರಹದ್ದಿನಲ್ಲಿ ಹೋಗಲು ಬಯಸುವುದಿಲ್ಲ. ಅಲ್ಲದೆ ಬೇರೆ ಹುಲಿಗಳೂ ಅದಕ್ಕೆೆ ಅವಕಾಶ ಮಾಡಿಕೊಡುವುದಿಲ್ಲ. ಆ ನರಭಕ್ಷಕ ಹುಲಿ ತನ್ನ ನೆಲೆ ಕಂಡುಕೊಳ್ಳುವುದಕ್ಕಾಾಗಿ, ಕಳೆದ ಒಂದು ವರ್ಷದ ಅವಧಿಯಲ್ಲಿ ನಾಗರಹೊಳೆಯಿಂದ ಬಂಡೀಪುರ ಅರಣ್ಯದ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಕಿಮೀ ದೂರವನ್ನು ಕ್ರಮಿಸಿತ್ತು. ಈ ಅರಣ್ಯ ಪ್ರದೇಶದಲ್ಲಿ ಕಾಡು ಅದೆಷ್ಟು ದಟ್ಟವಾಗಿದೆಯೆಂದರೆ, ಆ ನರಭಕ್ಷಕ ಹುಲಿಗೆ ತನ್ನ ಸರಹದ್ದನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಅದು ಕಾಡಿನಿಂದ ಹೊರಗೆ ಅಲೆದಾಡಲಾರಂಭಿಸಿತ್ತು. ಗ್ರಾಾಮಸ್ಥರ ಮೇಲೆ ದಾಳಿ ಮಾಡುವ ಮುನ್ನ ಹದಿನೈದು ದಿನಗಳ ಕಾಲ ಅದಕ್ಕೆೆ ಕಾಡಿನೊಳಗೆ ಪ್ರವೇಶಿಸಲು ಸಾಧ್ಯವಾಗದೇ, ಹೊರಗಡೆಯೇ ತಿರುಗುತ್ತಿಿತ್ತು.

ಸಾಮಾನ್ಯವಾಗಿ ಕಾಡಿನಿಂದ ಹೊರ ಬಂದ ಹುಲಿಗಳು ವಿಚಿತ್ರವಾಗಿ, ಅಸಹಜವಾಗಿ ವರ್ತಿಸುವುದು ಸಹಜ. ಕಾಡೊಳಗೆ ನೆಲೆ ಕಂಡುಕೊಳ್ಳಲಾಗದೇ, ಊರೊಳಗೂ ಭಯಭೀತಿಗೆ ಕಾರಣವಾಗಿ, ಎಲ್ಲೆಡೆಯಿಂದಲೂ ತಿರಸ್ಕಾಾರಕ್ಕೆೆ ತುತ್ತಾಾಗುತ್ತವೆ. ಗ್ರಾಾಮಸ್ಥರು ಹುಲಿಯನ್ನು ಕಂಡ ತಕ್ಷಣ ಅದನ್ನು ಬೆದರಿಸಲು, ಓಡಿಸಲು, ಹಿಂಸಿಸಲು ಪ್ರಯತ್ನಿಿಸುತ್ತಾಾರೆ. ನೂರಾರು ಸಂಖ್ಯೆೆಯಲ್ಲಿ ಗ್ರಾಾಮಸ್ಥರು ಒಟ್ಟಾಾಗಿ ಹುಲಿಯ ಮೇಲೆ ಕೈಗೆ ಸಿಕ್ಕಿಿದ ವಸ್ತುಗಳನ್ನು ಎಸೆಯುತ್ತಾಾರೆ. ಪಟಾಕಿ ಸಿಡಿಸಿ ಗೌಜು-ಗದ್ದಲ ಎಬ್ಬಿಿಸುತ್ತಾಾರೆ. ಇಂಥ ಸಂದರ್ಭದಲ್ಲಿ ಹುಲಿ ಕಂಗಾಲಾಗಿಬಿಡುತ್ತದೆ. ಕೆಲವು ಸಲ ಕಪಿಯಂತೆ ವರ್ತಿಸುತ್ತದೆ. ಮೊನ್ನೆೆ ಆಗಿದ್ದೂ ಅದೇ.

ಇಲ್ಲಿ ಯಾರನ್ನು ದೂಷಿಸೋಣ? ಆ ಮೂಕ ಪ್ರಾಾಣಿಯಾದರೂ ಏನು ಮಾಡುತ್ತದೆ? ಯಾರು ಏನೇ ಹೇಳಲಿ, ನಾನಂತೂ ಆ ಮೂಕ ಪ್ರಾಾಣಿಗಳ ಪರ. ಯಾವಾಗ ದನ-ಕರುಗಳ ಮೇಲೆ ದಾಳಿ ಮಾಡಿತೋ, ಆಗಲೇ ಗ್ರಾಾಮಸ್ಥರು ಎಚ್ಚೆೆತ್ತುಕೊಳ್ಳಬೇಕಿತ್ತು. ಕಾರಣ ಹುಲಿ ತನ್ನ ಮನಸ್ಸಿಿನಲ್ಲಿ ಏನಿದೆ ಎಂಬುದನ್ನು ಆ ಮೂಲಕ ಊರವರಿಗೆ ತಿಳಿಸಿತ್ತು. ಮೂರು-ನಾಲ್ಕು ದಿನಗಳ ಅಂತರದಲ್ಲಿ ಅದು ಜಾನುವಾರುಗಳ ಮೇಲೆ ದಾಳಿ ಮಾಡಿ ಸಾಯಿಸುತ್ತಲೇ ಇತ್ತು. ಒಬ್ಬನನ್ನು ಸಾಯಿಸಿದ ನಂತರವಂತೂ, ಹುಲಿ ಬಗ್ಗೆೆ ಊರಿನ ಜನ ಮತ್ತಷ್ಟು ಜಾಗೃತರಾಗಬೇಕಿತ್ತು. ಆಗ ಊರಿನ ಜನ ಶಾಂತಚಿತ್ತರಾಗಿ ವರ್ತಿಸುವ ಬದಲು ಮತ್ತಷ್ಟು ವ್ಯಗ್ರರಾದರು. ಹುಲಿಯನ್ನು ಸಾಯಿಸಲು, ಪ್ರತೀಕಾರ ತೆಗೆದುಕೊಳ್ಳಲು ಹೊಂಚು ಹಾಕಿದರು. ಅತ್ತ ಹುಲಿಯ ಮನಸ್ಸಿಿನೊಳಗೆ ಏನು ನಡೆಯುತ್ತಿಿದೆ ಎಂಬುದನ್ನು ತಿಳಿದುಕೊಳ್ಳುವ ಸಣ್ಣ ಪ್ರಯತ್ನವನ್ನು ಸಹ ಯಾರೂ ಮಾಡಲಿಲ್ಲ. ಊರಲ್ಲಿ ಒಂದೆರಡು ಸಲ ಹುಲಿ ಕಾಣಿಸಿಕೊಂಡಾಗ, ಜನ ಹುಚ್ಚರನ್ನು ಕಂಡರೆ ಹೇಗೆ ವರ್ತಿಸುತ್ತಾಾರೋ ಆ ರೀತಿ ವರ್ತಿಸಿದರು. ಕೆಲವರಂತೂ ತಾವೇ ಹುಚ್ಚರು ಎಂದು ಭಾವಿಸಿ ವರ್ತಿಸಿದ್ದು ಮಾತ್ರ ಅತಿರೇಕ. ಈ ಎಲ್ಲಾಾ ಘಟನಾವಳಿಗಳಿಂದ ಹುಲಿ ಮಾನಸಿಕವಾಗಿ ಹೈರಾಣಾಗಿ ಹೋಗಿತ್ತು. ಹುಲಿ ನೋಡಲು ಬೇರೆ ಬೇರೆ ಊರುಗಳಿಂದ ಜನ ತಂಡೋಪತಂಡವಾಗಿ ಬರಲಾರಂಭಿಸಿದರು. ಬಂದವರೆಲ್ಲರೂ ತಮ್ಮ ಪಾಲಿನ ಹುಚ್ಚಾಾಟಗಳನ್ನು ಸೇರಿಸಿ ಹೋಗುತ್ತಿಿದ್ದರು.

ಒಂದೇ ಮಾತಿನಲ್ಲಿ ಹೇಳುವುದಾದರೆ ಆ ನರಭಕ್ಷಕ ಹುಲಿ ಮಾನಸಿಕವಾಗಿ, ದೈಹಿಕವಾಗಿ ತೀವ್ರ ಒತ್ತಡಕ್ಕೆೆ ಸಿಲುಕಿತ್ತು. ಅದರ ಮುಂದೆ ಆಯ್ಕೆೆಗಳಿರಲಿಲ್ಲ. ಕಾಡಿನಿಂದ ಅದು ನೆಲೆ ಕಂಡುಕೊಳ್ಳಲಾಗದೇ ಸೋತಿತ್ತು. ಊರಿನಲ್ಲಿ ಅದರ ಪಾಡಿಗೆ ಅದನ್ನು ಬಿಡಲಿಲ್ಲ. ಇಂಥ ಸಂದರ್ಭದಲ್ಲಿ ಮನುಷ್ಯನಾದವ ಸಹ ವಿಚಿತ್ರವಾಗಿ ವರ್ತಿಸುತ್ತಾಾನೆ. ತನ್ನ ಮುಂದಿನ ದಾರಿಗಳೆಲ್ಲ ಬಂದ್ ಆದಾಗ, ಆತ ಎಂಥದೇ ವಿಪರೀತ ಕ್ರಮಕ್ಕೆೆ ಬೇಕಾದರೂ ಮುಂದಾಗುತ್ತಾಾನೆ. ಹೀಗಿರುವಾಗ ಆ ಮೂಕ ಪ್ರಾಾಣಿಯಿಂದ ಸಂತನ ನಡೆವಳಿಕೆ ನಿರೀಕ್ಷಿಸಲು ಸಾಧ್ಯವಾ? ಹೇಳಿ ಕೇಳಿ ಅದು ಹುಲಿ.

ಈ ಸಂಘರ್ಷ ಇಲ್ಲಿಗೇ ಮುಗಿಯುವುದಿಲ್ಲ. ಇದು ನಿರಂತರ. ಮುಂಬರುವ ದಿನಗಳಲ್ಲಿ ಇದರ ತೀವ್ರತೆ ಎದುರಾಗುತ್ತಲೇ ಇರುತ್ತದೆ. ಆದರೆ ಮನುಷ್ಯರಾದ ನಾವು ಒಳ್ಳೆೆಯ ಮನುಷ್ಯರಂತೆ ವರ್ತಿಸದಿದ್ದರೆ, ನಮಗೂ ಆ ಮೂಕ ಪ್ರಾಾಣಿಗಳಿಗೂ ಏನೂ ವ್ಯತ್ಯಾಾಸ ಇರುವುದಿಲ್ಲ.