ಅಭಿಮತ
ಡಾ.ವೆಂಕಟೇಶ್ ಮೂರ್ತಿ ಕೆ.
20 ಶತಮಾನ ಕಂಡ ಪ್ರಭಾವಿ ಅರ್ಥಶಾಸ್ತ್ರಜ್ಞರ ಸಾಲಿನಲ್ಲಿ ಜಾನ್ ಮೇನಾರ್ಡ್ ಕೇನ್ಸ್ ಹೆಸರು ಮುಂಚೂಣಿಯಲ್ಲಿರು ವುದನ್ನು
ಗಮನಿಸಬಹುದಾಗಿದೆ. ವಿನೂತನ ರೀತಿಯ ಅರ್ಥಶಾಸ್ತ್ರದ ಅಧ್ಯಯನಕ್ಕೆ ಅವರ ಕೊಡುಗೆ ಇಂದಿಗೂ ಪ್ರಸ್ತುತ ಮತ್ತು
ತಳಪಾಯವಾಗಿದೆ ಎಂದರೆ ತಪ್ಪಾಗಲಾರದು.
13 ಕೃತಿಗಳು, ಸಂಶೋಧನಾ ಪ್ರಬಂಧಗಳು ಹಾಗೂ ವಿವಿಧ ದೇಶಗಳಲ್ಲಿನ ಅವರ ಭಾಷಣಗಳು ಇದು ಅವರು ಅರ್ಥಶಾಸ್ತ್ರದ ಚಿಂತನೆ ಮತ್ತು ಅಧ್ಯಯನಕ್ಕೆ ನೀಡಿದ ಬಹುಮುಖ್ಯ ಕೊಡುಗೆಯಾಗಿದೆ. ಆಡಂ ಸ್ಮಿತ್ ಆಧುನಿಕ ಜಗತ್ತಿನ ಅರ್ಥಶಾಸ್ತ್ರದ
ಪಿತಾಮಹನಾದರೆ ಜೆ.ಎಂ. ಕೇನ್ಸ್ ಆಧುನಿಕ ಜಗತ್ತಿನ ಅರ್ಥಶಾಸದ ನಾಯಕನೆಂದರೆ ತಪ್ಪಾಗಲಾರದು. 1883ರ ಜೂನ್ 5 ರಂದು ಮೊದಲ ಮಗನಾಗಿ ಜನಿಸಿದ ಕೇನ್ಸ್ ಬಹಳ ಶಿಸ್ತು, ಸಂಯಮ, ಚತುರನಾಗಿ ಪ್ರಶ್ನೆ ಮಾಡುವ ಮನೋಭಾವ ರುಡಿಸಿಕೂಂಡಿದ್ದ.
ತಂದೆ ಜಾನ್ ನೇವಿಲ್ ಕೇನ್ಸ್ ಅರ್ಥಶಾಸ್ತ್ರಜ್ಞನಾದರೆ, ತಾಯಿ ಫ್ಲಾರೆನ್ಸಾ ಅಡಾ ಕೇನ್ಸ್ ಕೇಂಬ್ರಿಡ್ಜ್‌ನ ಪ್ರಥಮ ಪ್ರಜೆಯಾಗಿ ಜನಪರ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಕೇನ್ಸ್, ಈಟನ್ ಕಾಲೇಜಿ ನಲ್ಲಿ ವಿದ್ಯಾರ್ಥಿವೇತನವನ್ನು ಪಡೆದು ಗಣಿತಶಾಸ್ತ್ರ ಮತ್ತು ಇತಿಹಾಸವನ್ನು ಅಭ್ಯಾಸ ಮಾಡಿದರು. 1902ರಲ್ಲಿ ಕಿಂಗ್ಸ್ ಕಾಲೇಜಿ ನಲ್ಲಿ ಪ್ರಖ್ಯಾತ ಅರ್ಥಶಾಸ್ತ್ರಜ್ಞರಾದ ಪ್ರೊ.ಆಲ್ರೆಡ್ ಮಾರ್ಷಲ್ ಮತ್ತು ಎ.ಸಿ. ಪಿಗೊ ಅವರ ಆಶ್ರಯದಲ್ಲಿ ಅರ್ಥಶಾಸ್ತ್ರ ಮತ್ತು ಗಣಿತಶಾಸ್ತ್ರವನ್ನು ಕಲಿತು 1904 ರಲ್ಲಿ ಬಿ.ಎ ಪದವಿ ಪಡೆದು ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞರಾದರೂ ಪದವಿಯಲ್ಲಿ ಕಡಿಮೆ ಅಂಕವನ್ನು ಗಳಿಸಿದ ಕೇನ್ಸ್ ವಿದ್ಯಾರ್ಥಿಯಾಗಿ ಹೇಳಿದ ಮಾತುಗಳಿವು: ’’The Examiners presumably knew less than i
did’ ಅಂದರೆ ನಾನು ಅರ್ಥಶಾಸ್ತ್ರವನ್ನು ತಿಳಿದಿರುವುದಕ್ಕಿಂತ ನನ್ನ ಮಾರ್ಗದರ್ಶಕರು ಕಡಿಮೆ ತಿಳಿದಿರುವರೆಂದು.
ತಂದೆಯ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ 1906ರಲ್ಲಿ ಬ್ರಿಟಿಷ್ ನಾಗರಿಕ ಸೇವೆಯನ್ನು ತೇರ್ಗಡೆ ಹೊಂದಿ ಲಂಡನ್ನ ಭಾರತೀಯ ಕಚೇರಿಯಲ್ಲಿ ಸೇವೆ ಮಾಡಿದ ಕೇನ್ಸ್ 1908ರಲ್ಲಿ ಸ್ವಯಂ ನಿವೃತ್ತಿ ಹೊಂದಿ ಅರ್ಥಶಾಸ್ತ್ರದಲ್ಲಿನ ಕೆಲವು ಸಂದೇಹ ಮತ್ತು ಅದಕ್ಕೆ ಉತ್ತರವನ್ನು ಕಂಡುಕೊಂಡು ವಾಕ್ಯರೂಪವನ್ನು ನೀಡುವ ನಿಟ್ಟಿನಲ್ಲಿ ಕೇಂಬ್ರಿಡ್ಜ್‌ಗೆ ಮರಳಿ ಉಪನ್ಯಾಸ ವೃತ್ತಿ ಕೈಗೊಳುತ್ತಾನೆ. ಇದು ಕೇನ್ಸ್‌ನಲ್ಲಿ ಇದ್ದ ವಿಷಯದ ಮೆಲಿನ ಆಸಕ್ತಿ ಎಷ್ಟು ಇದ್ದಿರಬಹುದಂದು ತೂರಿಸುವುದರಲ್ಲಿ ಸಂದೇಹವಿಲ್ಲ.
ಬ್ರಿಟಿಷ್ ಸರಕಾರದಿಂದ ಆಳಲು ಪಟ್ಟ ಭಾರತವು ಆರ್ಥಿಕತೆಯೂ ಹಿನ್ನಡೆಯನ್ನು ಗಮನಿಸಿದ ಕೇನ್ಸ್‌ನ ತನ್ನ ಮೊಟ್ಟಮೊದಲ ಪ್ರಬಂದವಾದ ’The Effect of a recent Global Economic Downturn on India’ ಎಂಬ ಸಂಶೊಧನಾ ಬರಹವನ್ನು The Econo
mic Jurnal ಎಂಬ ನಿಯತಕಾಲಿಕೆ ಪ್ರಕಟಣೆ ಮಾಡಿ. ನಂತರ ಅದೇ ನಿಯತಕಾಲಿಕೆಯ ಸಂಪಾದಕ ನಾದರು. ವಿವಿಧ ಆರ್ಥಿಕ ಚಿಂತನೆಯ ಮೂಲಕ ಬರವಣಿಗೆಯನ್ನು ಪ್ರಾರಂಭಿಸಿದ ಕೇನ್ಸ್‌ನ 1913ರಲ್ಲಿ Indian Currency and Finance ಎಂಬ ಮೊಟ್ಟ ಮೊದಲ ಕೃತಿಯನ್ನು ಭಾರತದ ಕುರಿತು ಬರೆದಿರುವುದು ಭಾರತೀಯರ ಹಮ್ಮೆಯೇ ಸರಿ.
ಹಣ ಮತ್ತು ಅರ್ಥಶಾಸ್ತ್ರದ ವಿಷಯದಲ್ಲಿ ಪಾಂಡಿತ್ಯವನ್ನು ಪಡೆದ್ದಿದ್ದ ಕೇನ್ಸ್‌ಗೆ ವಿವಿಧ ಸಮಿತಿಯ ಸದಸ್ಯನಾಗಲು ಆಹ್ವಾನಗಳು ಬಂದವು. ಹಾಗೆ 1913ರಲ್ಲಿ ಸರ್ ಆಸ್ಟ್‌ನ್ ಚೆಂಬರ್‌ಲೀನ್‌ರವರ ಅಧ್ಯಕ್ಷತೆಯ The Royal Commission on Indian Finance
and Currency ಯ ಸದಸ್ಯನಾಗಿ ಭಾರತದ ಮೂರು ಪ್ರೆಸಿಡೆಂಸಿ ಬ್ಯಾಂಕುಗಳನ್ನು ವಿಲಿನಗೂಳಿಸಿ Imperial Bank of India ನಿರ್ಮಾಣ ಮಾಡುವಲ್ಲಿ ಮತ್ತು ಭಾರತಕ್ಕೆ ಕೇಂದ್ರ ಬ್ಯಾಂಕಿನ ನಿರ್ಮಾಣಕ್ಕೆ ಅಡಿಪಾಯ ವನ್ನು ಹಾಕುವಲ್ಲಿ ಕೇನ್ಸ್‌ನ ಪಾತ್ರ ಅಮೂಲ್ಯವಾಗಿದೆ.
ಹಣಕಾಸಿನ ವಿಷಯದಲ್ಲಿ ಪ್ರಾಮುಖ್ಯತೆ ಪಡೆದಿದ್ದ ಕೇನ್ಸ್‌ಗೆ ಮೊದಲ ಮಹಾಯದ್ದದ ಸಮಯದಲ್ಲಿ ಸೇವೆಗೆಂದು ಕರೆ ನೀಡಿದಾಗ ಕೇನ್ಸ್ ಸಾರಸಗಟಾಗಿ ತಿರಸ್ಕರಿಸಿ ಕೇಂಬ್ರಿಡ್ಜ್‌ನಲ್ಲಿ ಬೋಧನೆಯನ್ನು ಮುಂದುವರೆಸುತ್ತಾನೆ. 1915ರಲ್ಲಿ ಸರಕಾರದ ಖಜಾಂಚಿ ಯಾಗಿ ಸೇವೆ ಸಲ್ಲಿಸಿದ ಕೇನ್ಸ್, 1919, ಜೂನ್ 28ರಂದು ಫ್ರಾನ್ಸ್‌ನ ಅರಮನೆಯಲ್ಲಿ ನಡೆದ Versailles Peace Conference ನ ಬ್ರಿಟಿಷ್ ಮುಖ್ಯ ಪ್ರತಿನಿಧಿಯಾಗಿ ಭಾಗವಹಿಸಿದ.
ಜರ್ಮನಿ ಮತ್ತು ಅದರ ಮೈತ್ರಿ ಕೂಟಗಳು 31.4 ಬಿಲಿಯನ್ ಡಾಲರಷ್ಟು ಯುದ್ದ ನಷ್ಟ ಪರಿಹಾರವನ್ನು ಭರಿಸಬೇಕೆಂದಾಗ, ಕೇನ್ಸ್ ಈ ನಷ್ಟ ಪರಿಹಾರ ವಿಧಿಸಿರುವುದು ಕ್ರೂರ ಮತ್ತು ವಿಪರೀತ ಎಂದು ವಾದಿಸಿದ. 1928ರ ಹೊತ್ತಿಗಾಗಲೇ ಅಮೆರಿಕ ಸೇರಿದಂತೆ ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ಥಿಕ ಕುಸಿತ ಕಂಡುಬಂದಿತ್ತು 1929, ಅಕ್ಟೋಬರ್ 29ರಂದು ಅರ್ಥಿಕ ಮುಗ್ಗಟ್ಟು ಸಂಭವಿಸಿ BLACK TUESDAY ಎಂದು ನಾಮಾಂಕಿತವಾಯಿತು. ಈ ಅರ್ಥಿಕ ಮುಗ್ಗಟು ಅಮೆರಿಕದ ಜಿಡಿಪಿ
ಬೆಳವಣಿಗೆಯನ್ನು -26.7 ಮತ್ತು ಉದ್ಯೋಗದ ಪ್ರಮಾಣ -24.4ಕ್ಕೆ ಕುಸಿದು ತೀರ್ವ ಆರ್ಥಿಕ ಸಮಸ್ಯೆಯನ್ನು ತಂದೂಡ್ಡಿತು.
1934 ರಲ್ಲಿ ಅಮೆರಿಕ ಸಂಸ್ಥಾನಗಳಿಗೆ ಭೇಟಿ ನೀಡಿದ ಕೇನ್ಸ್ ಆರ್ಥಿಕ ಮುಗ್ಗಟ್ಟಿನ ನಿವಾರಣೆಗೆ ಹಲವು ಕ್ರಮಗಳನ್ನು ಶಿಫಾರಸು ಮಾಡಿದರು. ಮುಂದುವರಿದ ದೇಶಗಳಲ್ಲಿ ಕೇನ್ಸ್‌ನ ವಾಕ್ಯವಾದ ’Digging the holes and filling them back up again’ ಉದ್ಯೋಗ ಮರುಸೃಷ್ಟಿ ಮಾಡುವಲ್ಲಿ ಯಶಸ್ವಿಯಾಯಿತು. ಈ ಮಹಾಆರ್ಥಿಕ ಕುಸಿತದ ಬಗ್ಗೆ ಅಧ್ಯಯನ ಮಾಡಿದ ಕೇನ್ಸ್ ಹಲವಾರು ತಪ್ಪು ಕಲ್ಪನೆಗಳನ್ನು ಕಂಡುಹಿಡಿದು ಅವನದೇ ಆದ Keynesian Theory ಎಂದು ಪ್ರಚಾರಪಡಿಸಿದಲ್ಲದೇ 1936ರಲ್ಲಿ ’The General Theory of Employment, Interest and Money” ಎಂಬ ಹೆಸರಿನ ಗ್ರಂಥವನ್ನು ಬಿಡುಗಡೆ ಮಾಡಿದ.
2008ರಲ್ಲಿ ಮರುಕಳಿಸಿದ ಜಾಗತಿಕ ಆರ್ಥಿಕ ಹಿಂಜರಿತ 1929ರ ಮಹಾಅರ್ಥಿಕ ಮುಗ್ಗಟ್ಟನೇ ಹೋಲುವಂತಿತ್ತು. ಈ ಪರಿಸ್ಥಿತಿಗೆ ಕೇನ್ಸ್‌ನ ಪ್ರತಿಪಾದನೆ ವರದಾನಯಿತು. ಪ್ರಸ್ತುತ ಕರೋನಾ ಮಹಾಮರಿಯ ಪರಿಣಾಮಕ್ಕೆ 1.3 ಬಿಲಿಯನ್ ಜನಸಂಖ್ಯೆ ಹೊಂದಿ ರುವ ಭಾರತ ಮತ್ತು ಅನೇಕ ದೇಶಗಳಿಗೆ ಕೇನ್ಸ್‌ನ ನೀತಿಗಳಾದ ಸರಕಾರದ ಮಧ್ಯಪ್ರವೇಶ, ಆರ್ಥಿಕ ಉತ್ತೇಜನೆ, ವಿತ್ತಿಯ ವಿಸ್ತರಣೆ ಅಂದರೆ ಒಂದು ರಾಷ್ಟ್ರಕ್ಕೆ ಅನಿಶ್ಚಿತ ವೆಚ್ಚವನ್ನು ಭರಿಸಲು ಸಂಪನ್ಮೂಲದ ಅಭಾವ ಎದುರಾದರೆ ಕೊರತೆಯ ಬಜೆಟ್ ಮಂಡಿಸಿ ಅನಿಶ್ಚಿತ ವೆಚ್ಚವನ್ನು ಭರಿಸಲು, ಈ ನೀತಿಗಳು ಇಂದಿಗೂ ಸಹಾಯಕವಾಗಿದೆ.
1944ರಲ್ಲಿ ಅಮೆರಿಕದ ಜರುಗಿದ ಸಮಾವೇಶದಲ್ಲಿ ಕೇನ್ಸ್ ಬ್ರಿಟಿಷ್ ತಜ್ಞರ ಪ್ರತಿನಿಧಿಯಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ನಿರ್ಮಾಣದ ಕುರಿತ ಮಾತುಕತೆಗಳಲ್ಲಿ ಭಾಗವಹಿಸಿ ಮತ್ತು ಸಮಾವೇಶದ ನಾಯಕನಾಗಿ ಹೊರ ಹೊಮ್ಮಿದ ಕೇನ್ಸ್ ಹ್ಯಾರಿ ಡೆಕ್ಸಟರ್ ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳೂಂದಿಗೆ ಒಂದು ಯೋಜನೆಯನ್ನು ಸಿದ್ಧಪಡಿಸಿದ. ಬಹುಮಖ ಪ್ರತಿಭೆ ಯನ್ನು ಹೊದಿದ್ದ ಕೇನ್ಸ್ ಅರ್ಥಶಾಸ್ತ್ರಜ್ಞನಾಗಿ, ಸಂಪಾದಕನಾಗಿ, ಹಣಕಾಸಿನ ಸಲಹೆಗಾರನಾಗಿ, ಪ್ರಾಧ್ಯಾಪಕನಾಗಿ ಮತ್ತು ಸರಕಾರದ ಪ್ರತಿನಿಧಿಯಾಗಿ ಹಲವು ವಿಧಗಳಲ್ಲಿ ಸೇವೆ ಸಲ್ಲಿಸಿದ ಕೇನ್ಸ್‌ಗೆ ಬ್ರಿಟಿಷ್ ಸರಕಾರವು 1942ರಲ್ಲಿ ಲಾರ್ಡ್ ಪ್ರಶಸ್ತಿ ಯನ್ನು ನೀಡಿ ಗೌರವಿಸಿತು. ಅಂದಿನಿಂದ ಅವರು ಲಾರ್ಡ್ ಕೇನ್ಸ್ ಆದ.