Saturday, 14th December 2024

ವಸ್ತ್ರಸಂಹಿತೆ ಶಿಸ್ತು ಟಾಪ್‌ಗೇರ್‌ನಲ್ಲಿ

ಅಭಿಪ್ರಾಯ

ರಮಾನಂದ ಶರ್ಮಾ

ನಮ್ಮ ಭಾಷೆ ಕೇವಲ ಸಂವಹನಕ್ಕೆ ಮಾತ್ರ ಸೀಮಿತವಾಗಿಲ್ಲ. ಅದನ್ನು ಮೀರಿ ಸೃಜನಾತ್ಮಕವಾದ ಸಾಹಿತ್ಯ ಸೃಷ್ಟಿ, ಸಂಶೋಧನೆ, ಆಲೋಚನೆ, ಅಭಿಪ್ರಾಯಗಳನ್ನು ಮಂಡಿಸಲು, ಇವುಗಳನ್ನು ಮುಂದಿನ ತಲೆಮಾರಿಗೆ ಕೊಂಡೊ ಯ್ಯಲು ಭಾಷೆಯು ಬಹಳ ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ. ಭಾಷೆಯನ್ನು ಕೇವಲ ಒಂದು ಸಂವಹನ ಮಾಧ್ಯಮ ವಾಗಿ ನೋಡದೇ ಅದು ಒಳಗೊಳ್ಳುವ ಮತ್ತು ಮುಖ್ಯವಾಗುವ ಎಲ್ಲ ಬಗೆಯ ಕಾಣ್ಕೆಗಳನ್ನು ನಾವು ನೋಡಬೇಕು.

ಕೇಂದ್ರ ತನಿಖಾ ಸಂಸ್ಥೆ (Central Bureau Of Investigation)ಯ ಡೈರೆಕ್ಟರ್ ಅಗಿ ಇತ್ತೀಚೆಗೆ ನೇಮಕವಾದ ಸುಬೋಧ ಕುಮಾರ ಜೈಸ್ವಾಲ್ ಅವರು ತಮ್ಮ ಕಚೇರಿಗಳಲ್ಲಿ ಸಿಬ್ಬಂದಿಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿzರೆ. ಈ ಸಂಹಿತೆ ಪ್ರಕಾರ ಸಿಬ್ಬಂದಿ ಕಚೇರಿಗೆ ಫಾರ್ಮಲ್ ಡ್ರೆಸ್‌ನಲ್ಲಿ ಬರಬೇಕು.

ಇನ್ನು ಮೇಲೆ ಯಾವ ಸಿಬ್ಬಂದಿಯೂ ಜೀನ್ಸ್, ಟಿ ಶರ್ಟ್, ಕಾಲರ್ ಇಲ್ಲದ ಶರ್ಟ್ ಮತ್ತು ಸ್ಪೋಟ್ಸ್ ಶೂ, ಚಪ್ಪಲ್ ಮತ್ತು ಸ್ಲಿಪ್ಪರ್ ಧರಿಸಿ ಬರಬಾರದು. ಪುರುಷ ಸಿಬ್ಬಂದಿ ಪ್ಯಾಂಟ್, ಕಾಲರ್ ಇರುವ ಶರ್ಟ್, ಶೂ ಧರಿಸಿ ಬರಬೇಕು ಮತ್ತು ಕ್ಲೀನ್ ಆಗಿ ಶೇವ್ ಮಾಡಿರಬೇಕು. ಮಹಿಳಾ ಸಿಬ್ಬಂದಿ ಸೀರೆ ಅಥವಾ ಸಲ್ವಾರ್ ಕಮೀಜ್, ಶರ್ಟ್ ಮತ್ತು ಟ್ರೌಸರ್‌ಗಳಲ್ಲಿ ಬರಬೇಕು.

ಅಧಿಕಾರಿಗಳು ಮೊದಲು ಫಾರ್ಮಲ್ ಡ್ರೆಸ್‌ನಲ್ಲಿ ಬರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಕ್ಯಾಜುವಲ್ ಡ್ರೆಸ್ ಧರಿಸುತ್ತಿರುವುದನ್ನು ನೋಡಿ ಮತ್ತು ಸರಿಯಾಗಿ ಡ್ರೆಸ್ ಧರಿಸದಿರುವುದನ್ನು (not attired properly) ನೋಡಿ ಈ ಆದೇಶವನ್ನು ನೀಡಲಾಗಿದೆಯಂತೆ. ಇಂಥಹ ವಸ್ತ್ರಸಂಹಿತೆ ಆದೇಶ ಹೊಸ ಪರಿಕಲ್ಪನೆ ಏನಲ್ಲ. ವರ್ಷಗಳ ಹಿಂದೆ ಬ್ಯಾಂಕೊಂದು ಇಂಥಹ ಉಡುಪು ಸಂಹಿತೆಗೆ ಉದ್ದೇಶಿಸಿತ್ತು. ಈ ಸಂಹಿತೆ ಪ್ರಕಾರ ಸಿಬ್ಬಂದಿ ಚಪ್ಪಲ್ಲಿಯ ಬದಲು ಸ್ವವಾದ ಶೂ ಧರಿಸಬೇಕು, ಟಿ ಶರ್ಟ್, ಜೀನ್ಸ್ ಮತ್ತು ಸ್ಪೋಟ್ಸ್ ಶೂ ಧರಿಸಬಾರದು, ಹಿರಿಯ ಸಿಬ್ಬಂದಿ ಅಚ್ಚುಕಟ್ಟಾದ ಫಾರ್ಮಲ್ ಉಡುಪುಗಳನ್ನು ಧರಿಸಬೇಕು.

ಮಹಿಳಾ ಸಿಬ್ಬಂದಿ ಭಾರತೀಯ ಶೈಲಿ ಅಥವಾ ಪಾಶ್ಚಿಮಾತ್ಯ ರೀತಿಯ ಫಾರ್ಮಲ್ ದಿರಿಸುಗಳನ್ನು ಧರಿಸಿ ಕಚೇರಿಗೆ ಬರಬೇಕು
ಎಂದು ಸೂಚಿಸಲಾಗಿತ್ತಂತೆ. ಗಡ್ಡ ಬಿಟ್ಟುಕೊಂಡು ಮತ್ತು ಬೇಕಾಬಿಟ್ಟಿಯಾಗಿ ಕೂದಲು ಬೆಳೆಸಿಕೊಂಡು ಕಚೇರಿಗೆ ಬರಬಾರದು, ಗಡ್ಡವನ್ನು ಶೇವ್ ಮಾಡಬೇಕು ಅಥವಾ ನೀಟಾಗಿ ಟ್ರಿಮ್ ಮಾಡಬೇಕು, ಬೆವರಿನ ವಾಸನೆ ಬರುವಂತೆ ಕಚೇರಿಗೆ ಬರಬಾರದು, ಶೂಗಳು ಕೊಳೆಯಾಗಿರುವಂತಿಲ್ಲ, ಶೂ ಮತ್ತು ಸೊಂಟದ ಬೆಲ್ಟ್ ಒಂದೇ ಬಣ್ಣದ್ದಿರಬೇಕು, ಪ್ಯಾಂಟ್ ಬಣ್ಣಕ್ಕೆ ಒಪ್ಪುವ ಸಾಕ್ಸ್
ಧರಿಸಬೇಕು, ಪ್ಲೇನ್ ಶರ್ಟ್ ಇದ್ದರೆ ಡಿಸೈನ್ ಟೈ ಇರಬೇಕು ಮತ್ತು ಚೆಕ್ಸ್ ಶರ್ಟ್ ಇದ್ದರೆ ಪ್ಲೇನ್ ಕಲರ್ ಟೈ ಇರಬೇಕು ಎಂದು ಸೂಚಿಸಲಾಗಿತ್ತಂತೆ.

ಕಾರಣಾಂತರಗಳಿಂದ ಈ ಸಂಹಿತೆ ಜಾರಿಯಾಗಲಿಲ್ಲ. ಈ ಪ್ರಸ್ತಾವನೆ ಬಗೆಗೆ ಸಿಬ್ಬಂದಿ, ಕಾರ್ಮಿಕ ನಾಯಕರ, ಬುದ್ಧಿಜೀವಿಗಳ
ಮತ್ತು ಸಾರ್ವಜನಿಕರ ಪ್ರತಿಕ್ರಿಯೆ, ಬೆಂಬಲ ಅಥವಾ ವಿರೋಧ ವ್ಯಕ್ತವಾಗುವ ಮೊದಲೇ ಇದು ಮೂಲೆ ಸೇರಿತ್ತು. ಸಿಬ್ಬಂದಿ ಉಡುಪು ಶುಭ್ರವಾಗಿರಬೇಕು, ಅಂದವಾಗಿರಬೇಕು, ಉಡುಪು ಗಮನ ಸೆಳೆಯುವಂತಿರಬೇಕು ಮತ್ತು ಸಿಬ್ಬಂದಿ ನೀಟಾಗಿ ಕಾಣಿಸಿ ಕೊಂಡಿರಬೇಕು ಎನ್ನುವುದರ ಬಗೆಗೆ ಸಹಮತವಿದ್ದರೂ, ಮ್ಯಾಚಿಂಗ್ ಪರಿಕಲ್ಪನೆ, ನೆಕ್ ಟೈ, ಮತ್ತು ಶೂ ಧರಿಸಬೇಕೆನ್ನುವ
ಒತ್ತಾಸೆಗೆ ಕೆಲವರ ಅಪಸ್ವರ ಕೇಳಿತ್ತು.

ಕೆಲವರು ಇದು ವಸ್ತ್ರಸಂಹಿತೆಯಷ್ಟೇ ಆಗಿದ್ದು, ಸಮವಸ್ತ್ರ ಸಂಹಿತೆಯಲ್ಲ ಎಂದು ಮುಖ್ಯವಾಗಿ ಮಹಿಳಾ ಸಿಬ್ಬಂದಿ ನಿಟ್ಟುಸಿರು
ಬಿಟ್ಟಿದ್ದರಂತೆ. ಅಕಸ್ಮಾತ್ ಇದು ಸಮವಸ ಆಗಿದ್ದರೆ, ಅದರ ವೆಚ್ಚ ಬ್ಯಾಂಕ್ ಭರಿಸಬೇಕಾಗುತ್ತಿತೇನೋ? ದಶಕಗಳ ಹಿಂದೆ ಬ್ಯಾಂಕ್ ಸಿಬ್ಬಂದಿಗೆ ಸಮವಸ್ತ್ರದ  ಪ್ರಸ್ತಾಪವೂ ಮೇಲ್ಮೆಗೆ ಬಂದು, ಅಷ್ಟೇ ದಿಢೀರ್ ಎಂದು ಹಿನ್ನೆಲೆಗೆ ಹೋಗಿತ್ತಂತೆ. ಈ ನಿಟ್ಟಿನಲ್ಲಿ ಒಂದು ಬಟ್ಟೆ ಕಂಪನಿಯೊಂದಿಗೆ ಮಾತುಕತೆಯೂ ನಡೆದ ವದಂತಿಗಳು ಹರಿದಾಡಿತ್ತಂತೆ. ಈ ಪ್ರಸ್ತಾಪ ಮೇಲ್ಮೆಗೆ ಬಂದಾಗ ಕೆಲವು
ಬ್ಯಾಂಕಿಂಗ್ ಹಿತೈಷಿಗಳು ಬ್ಯಾಂಕಿಂಗ್‌ನಲ್ಲಿ ಸಮವಸ್ತ್ರ ಮತ್ತು ವಸ್ತ್ರಸಂಹಿತೆಗಳಿಗಿಂತ ಗಂಭೀರವಾದ ಮತ್ತು ಚಿಂತಿಸಬೇಕಾದ ವಿಷಯಗಳು ಸಾಕಷ್ಟು ಇವೆ ಎಂದು ಪ್ರತಿಕ್ರಿಯಿಸಿದ್ದರು.

ಕಚೇರಿಗಳಲ್ಲಿ ಈ ರೀತಿಯ ವಸ್ತ್ರಸಂಹಿತೆಯನ್ನು ಜಾರಿಗೊಳಿಸುವುದರಿಂದ ಸಿಬ್ಬಂದಿಯಲ್ಲಿ ಹೆಚ್ಚಿನ ಶಿಸ್ತನ್ನು ಮೂಡಿಸಲು ಮತ್ತು ಅಳವಡಿಸಲು ಮತ್ತು ಸಮಾನತೆಯ ಮನೋಭಾವವನ್ನು ಹೆಚ್ಚಿಸಲು ಸಹಾಯವಾಗುತ್ತದೆ ಎಂದು ಇದರ ಹಿಂದಿನ ಪ್ರಾಯೋಜಕರು ಅಭಿಪ್ರಾಯ ಪಡುತ್ತಾರೆ. ಹಾಗೆಯೇ ಇದು ಒಂದು ರೀತಿಯಲ್ಲಿ ಉದ್ಯೋಗಿಗಳಿಗೆ ಐಡೆಂಟಿಟಿಯನ್ನು ನೀಡುತ್ತದೆ ಎಂದೂ ಹೇಳುತ್ತಾರೆ. ಸಿಬ್ಬಂದಿಯಲ್ಲಿ ಕ್ಯಾಜುವಲ್ ಲುಕ್ ಮತ್ತು ಅಟಿಟ್ಯೂಡ್ ಮರೆಯಾಗಿ ಗಂಭೀರತೆ ಎದ್ದು ಕಾಣುತ್ತದೆ
ಎಂದೂ ಸಮರ್ಥಿಸಿಕೊಳ್ಳಲಾಗುತ್ತದೆ. ಸಮವಸದಿಂದ ಸಮಾನತೆಗೆ ಇಂಬು ಸಿಗುತ್ತದೆ ಎನ್ನುವುದು ಒಪ್ಪಬಹುದಾದ ವಾದವಾಗಿದ್ದು, ಸ್ಕೂಲ್ ಮತ್ತು ಕಾಲೇಜುಗಳಲ್ಲಿಮಕ್ಕಳಲ್ಲಿ ಈ ಮನೊಭಾವನೆಯನ್ನು ಹುಟ್ಟುಹಾಕಲು ಸಮವಸ್ತ್ರವನ್ನು ಕಡ್ಡಾಯ ಮಾಡುತ್ತಾರೆ. ಆದರೆ, ವಸ್ತ್ರಸಂಹಿತೆ ಈ ನಿಟ್ಟಿನಲ್ಲಿ ಸಹಾಯಕವಾಗುತ್ತದೆ ಎನ್ನುವುದು ಚರ್ಚಾಸ್ಪದವಾಗಿ ಕಾಣುತ್ತದೆ. ಅದರೂ ಕೆಲವು ಕೇಂದ್ರ ಸರಕಾರದ ಉದ್ಯಮಗಳಲ್ಲಿ ಸಮವಸ್ತ್ರ ತೀರಾ ಸಾಮಾನ್ಯವಾಗಿದ್ದು, ಇದು ಐಡೆಂಟಿಟಿಗಾಗಿ ಇರುತ್ತದೆ
ಎಂದು ಹೇಳಲಾಗುತ್ತದೆ.

ಕೆಲವು ಕೇಂದ್ರ ಸರಕಾರದ ಉದ್ಯಮಗಳಲ್ಲಿ ಆಡಳಿತಾತ್ಮಕ ವಿಭಾಗಗಳಲ್ಲೂ ಸಮವಸದ ಸಂಹಿತೆ ಇರುವುದನ್ನು ನೋಡ ಬಹುದು. ಈ ವಸ್ತ್ರಸಂಹಿತೆಯ ಹಿಂದಿನ ಉದ್ದೇಶ ಶಿಸ್ತು ಎನ್ನುವುದರಲ್ಲಿ ವಿಶೇಷ ಅರ್ಥವಿದೆ. ಯಾವುದೇ ಒಂದು ಉದ್ಯಮ, ಸಂಬಂಧ ಅಥವಾ ವ್ಯವಹಾರ ಯಶಸ್ವಿಯಾಗಲು ಶಿಸ್ತು ಮುಖ್ಯ. ಟಾಟಾ ಸಮೂಹ ಸಂಸ್ಥೆಗಳ ಪಿತಾಮಹ ಜೆಆರ್‌ಡಿ ಟಾಟಾ ಮತ್ತು ಪ್ರಖ್ಯಾತ ನ್ಯಾಯವಾದಿ ಮತ್ತು ಸಂವಿಧಾನ- ತೆರಿಗೆ ತಜ್ಞ ನಾನಿ ಪಾಲ್ಕಿವಾಲಾ ತಮ್ಮ ಜೀವನದುದ್ದಕ್ಕೂ, ಜೀವನದ ಪ್ರತಿರಂಗದಲ್ಲೂ, ದಿನದ 24 ಗಂಟೆಗಳಲ್ಲೂ ಶಿಸ್ತನ್ನು ಅಳವಡಿಸಿಕೊಳ್ಳುವುದರ ಬಗೆಗೆ ಒತ್ತಿ ಹೇಳುತ್ತಿದ್ದರು.

ಇಂದು ಟಾಟಾ ಸಮೂಹ ಉತ್ತುಂಗದಲ್ಲಿದ್ದರೆ ಅದರ ಹಿಂದಿನ ಕಾರಣ ಅವರು ಅಳವಡಿಸಿಕೊಂಡು ಬಂದ ಶಿಸ್ತು ಎನ್ನುವುದು ದೇಶ ತಿಳಿದು ಕೊಂಡಿರುವ ಸತ್ಯ. ಹಾಗೆಯೇ ನಮ್ಮ ದೇಶ ನಿರೀಕ್ಷಿಸಿದಷ್ಟು ಪ್ರಗತಿ ಸಾಧಿಸದಿರುವುದರ ಹಿಂದೆ ಶಿಸ್ತು ಇಲ್ಲದಿರು ವುದೇ ಕಾರಣ ಎನ್ನುವುದೂ ಸತ್ಯ. ಮುಂಬೈನ ಬಾಂಬೇ ಹೌಸ್‌ನ ತಮ್ಮ ಕಚೇರಿಯಲ್ಲಿ ಸರಿಯಾಗಿ ಶೇವ್ ಮಾಡಿಕೊಳ್ಳದೇ, ಸರಿಯಾಗಿ ಇಸ್ತ್ರಿ ಮಾಡಿರದ ಶರ್ಟ್ ಹಾಕಿಕೊಂಡು ಸಾದಾ ಚಪ್ಪಲ್ಲಿ ಧರಿಸಿಕೊಂಡು ಬಂದ ಸಿಬ್ಬಂದಿಯೊಬ್ಬ ನನ್ನು ಟಾಟಾ ಅವರು, ದಿನಾಲು ಶೇವ್ ಮಾಡು ಅಥವಾ ಗಡ್ಡವನ್ನು ಸರಿಯಾಗಿ ಟ್ರಿಮ್ ಮಾಡು.

ಕಚೇರಿಗೆ ಸರಿಯಾದ ಇಸ್ತ್ರಿ ಮಾಡಿದ ಬಟ್ಟೆಯನ್ನು ಹಾಕಿಕೊಂಡು, ಶೂ ಧರಿಸಿ ಬಾ ಎಂದು ಹೇಳಿದ್ದರಂತೆ. ಕಂಪನಿ ತನ್ನ ಸಿಬ್ಬಂದಿಯನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ತಪ್ಪು ಸಂದೇಶ ಹೊರಜಗತ್ತಿಗೆ ಹೋಗುತ್ತದೆ ಎಂದು ತಿಳಿಸಿ ಹೇಳಿದ್ದ ರಂತೆ ಮತ್ತು ಕಚೇರಿ ಮ್ಯಾನೇಜರ್‌ಗೆ ಖಡಕ್ ಎಚ್ಚರಿಕೆ ನೀಡಿ ಹೋಗಿದ್ದರಂತೆ. ಭಾರತದಲ್ಲಿ ವಸ್ತ್ರ ಸಂಹಿತೆ ಎನ್ನುವ ಪರಿಕಲ್ಪನೆ ಇನ್ನೂ ಸರಿಯಾಗಿ ಬೇರು ಬಿಟ್ಟಿಲ್ಲ. ಕೆಲವು ದೇಶಗಳಂತೆ ಯಾವ ಸಂದರ್ಭದಲ್ಲಿ, ಎಲ್ಲಿ ಯಾವ ರೀತಿ ಉಡುಪನ್ನು ಧರಿಸಬೇಕು ಎನ್ನುವ ಪ್ರಜ್ಞೆ ಇನ್ನೂ ಶೈಶವಾವಸ್ತೆಯಲ್ಲಿ ಇದೆ. ಮೈ ಮುಚ್ಚಲು ಒಂದು ಉಡುಪು ಇದ್ದರೆ ಸಾಕು ಎನ್ನುವುದು ಬಹುತೇಕರ ಮನಸ್ಥಿತಿ. ಕೆಲವರಿಗೆ ಇದನ್ನು ಅನುಸರಿಸಲು ಅರ್ಥಿಕ, ಧಾರ್ಮಿಕ, ಸಾಮಾಜಿಕ ಸಮಸ್ಯೆಗಳು ಮತ್ತು ಕಟ್ಟಳೆಗಳು ಎದುರಾಗುತ್ತವೆ.

ಬಡಕುಟುಂಬಗಳಲ್ಲಿ ಮತ್ತು ಹಳ್ಳಿಗಳಲ್ಲಿ ಪ್ರತಿಯೊಬ್ಬರಿಗೂ ಇರುವುದೇ ಒಂದೆರಡು ಜತೆಯಾಗಿದ್ದು, ಅವುಗಳನ್ನೇ ತೊಳೆದು ಒಣಗಿಸಿ ಹಾಕಿಕೊಳ್ಳುವ ಪದ್ಧತಿ ಇರುತ್ತದೆ. ಇಲ್ಲಿ ವಸ ಸಂಹಿತೆ ಎಷ್ಟು ಪ್ರಸ್ತುತ? ಉಡುಪು ಮಾನ ಮುಚ್ಚುವಂತಿರಬೇಕು, ಗೌರವಾನ್ವಿತ ಇರಬೇಕು ಮತ್ತು ಇದನ್ನು ನೋಡಿ ಇನ್ನೊಬ್ಬರು ಅಡಿಕೊಳ್ಳುವಂತಿರಬಾರದು ಎನ್ನುವುದು ಈ ವಸ್ತ್ರ
ಸಂಹಿತೆಯ ಹಿಂದಿನ ಧ್ಯೇಯ ವಾಗಿರಬೇಕು. ಇಂಥಹ ಬಟ್ಟೆಗಳೇ ಇರಬೇಕು ಎನ್ನುವುದು ಅಷ್ಟು ಸರಿ ಎನಿಸುವುದಿಲ್ಲ. ಹಾಗೆಯೇ ನಮ್ಮ ನಾಡು- ನುಡಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು.

ಬೀಫ್ ಬ್ಯಾನ್ ವಿಚಾರದಲ್ಲಿ ‘ನಮ್ಮ ಆಹಾರ, ನಮ್ಮ ಹಕ್ಕು’ ಎಂದು ಪ್ರತಿಭಟಿಸಿದಂತೆ, ಉಡುಪಿನ ವಿಚಾರದಲ್ಲೂ ‘ನಮ್ಮ
ಉಡುಪು, ನಮ್ಮ ಹಕ್ಕು’ ಎಂದು ಗಂಟಲು ನರ ಉಬ್ಬಿಸಿ, ಮುಷ್ಟಿ ಏರಿಸಿ ಪ್ರತಿಭಟಿಸುವುದನ್ನು ಅಲ್ಲಗಳೆಯಲಾಗದು. ಬ್ಯಾಂಕಿನಲ್ಲಿ ಲಾಕರ್ ಗ್ರಾಹಕನೊಬ್ಬ ಶಾರ್ಟ್ಸ್ ಮತ್ತು ಟಿ ಶರ್ಟ್‌ನಲ್ಲಿ ಲಾಕರ್ ಅಪರೇಷನ್‌ಗೆ ಬ್ಯಾಂಕಿಗೆ ಬರಲು, ಮಹಿಳಾ ಅಧಿಕಾರಿಯು ಆ ಗ್ರಾಹಕನಿಗೆ ಗೌರವಾನ್ವಿತ ಉಡುಪಿನಲ್ಲಿ ಬರುವಂತೆ ಹೇಳಿ ಲಾಕರ್ ಅಪರೇಟ್ ಮಾಡಲು ನಿರಾಕರಿಸದ್ದಳಂತೆ.

ಆ ಗ್ರಾಹಕನು ಗ್ರಾಹಕರಿಗೂ ಉಡುಪು ಸಂಹಿತೆ ಇದೆಯಾ ಎಂದು ತರಾಟೆ ಮಾಡಲು, ಆ ಅಧಿಕಾರಿ ಇದು ಕಾನೂನು ಮತ್ತು
ನಿಯಮಾವಳಿ ಪ್ರಶ್ನೆಯಾಗಿರದೇ ನೈತಿಕತೆ ಮತ್ತು ಕಾಮನ್‌ಸೆನ್ಸ್ ಪ್ರಶ್ನೆ ಎಂದು ಉತ್ತರಿಸಿದ್ದಳಂತೆ. ಇಂಥವುಗಳನ್ನು ಎಲ್ಲೂ ಫಲಕದಲ್ಲಿ ನೋಟಿಸ್‌ಬೋಡ್ ನಲ್ಲಿ ನಮೂದಿಸುವುದಿಲ್ಲ. ಇದು ತನ್ನಿಂದ ತಾನೇ ತಿಳಿದುಕೊಳ್ಳುವ ವಿಚಾರ ಎಂದು ಹೇಳಿ ಆ ಗ್ರಾಹಕ ಎತ್ತಿದ ವಿವಾದಕ್ಕೆ ತೆರೆ ಎಳೆದಿದ್ದಳಂತೆ. ಕಚೇರಿಗಳಲ್ಲಿ ಸಮವಸ್ತ್ರ ಮತ್ತು ಉಡುಪು ಸಂಹಿತೆಯನ್ನು ಅಳವಡಿಸುವುದರಲ್ಲಿ
ತಪ್ಪೇನೂ ಇಲ್ಲ. ಆದರೆ, ಇದನ್ನು ಕಾಯಿದೆ, ಕಾನೂನು ಮತ್ತು ನಿಯಮಾವಳಿ ಮೂಲಕ ಮಾಡುವಾಗ ಅಡೆತಡೆಗಳು ಬರುವ ಸಾಧ್ಯತೆ ಇರುತ್ತದೆ. ಇದು ಸರಿಯೋ ತಪ್ಪೋ ಎನ್ನುವುದು ಬೇರೆ ಮಾತು.

ಆದರೆ, ದೇಶದಲ್ಲಿ ರಾಷ್ಟ್ರಪ್ರೇಮ, ರಾಜ್ಯದಲ್ಲಿ ಕನ್ನಡ ಜಾಗೃತಿ ಟಾಪ್ ಗೇರ್ ನಲ್ಲಿ ಇರುವಂತೆ, ಸಾಮಾಜಿಕ-ಧಾರ್ಮಿಕ ವಲಯ ದಲ್ಲಿ ಉಡುಪು ಸಂಹಿತೆ ಕೂಡಾ ತೀವ್ರವಾಗಿ ಹಬ್ಬುತ್ತಿದೆ. ಒಂದೊಂದೇ ದೇವಸ್ಥಾನಗಳು ಕ್ರಮೇಣ ಉಡುಪು ಸಂಹಿತೆ ಯನ್ನು ಅಳವಡಿಸಿಕೊಳ್ಳುತ್ತಿವೆ ಮತ್ತು ಈ ಪ್ರಕ್ರಿಯೆ ಯಾವುದೇ ಪ್ರತಿರೋಧ ಇಲ್ಲದೇ ಜಾರಿಗೊಳ್ಳುತ್ತಿದೆ.