Saturday, 23rd November 2024

90 ಸಾವಿರಕ್ಕಿಂತ ಇಳಿಕೆ ಕಂಡ ಪ್ರಕರಣ: ನಿಯಂತ್ರಣದಲ್ಲಿ ಮಹಾಮಾರಿ ವೈರಸ್‌

ನವದೆಹಲಿ : ಕಳೆದ 24 ಗಂಟೆಗಳಲ್ಲಿ 84,332 ಹೊಸ ಸೋಂಕುಗಳು ದಾಖಲಾಗುವ ಮೂಲಕ ಕರೋನಾ ವೈರಸ್ ಕಾಯಿಲೆ ಶನಿವಾರ 29,359,155 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಎರಡು ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ದೈನಂದಿನ ಪ್ರಕರಣಗಳು 90,000 ಕ್ಕಿಂತ ಕಡಿಮೆಯಾಗಿದೆ. ಶುಕ್ರವಾರ 91,702 ಪ್ರಕರಣಗಳು ದಾಖಲಾಗಿವೆ.

ಇನ್ನು ವೈರಸ್ ನಿಂದ 4,002 ಜನರು ಮೃತಪಟ್ಟಿದ್ದು, 121,311 ಜನರು ಚೇತರಿಸಿಕೊಂಡರು, ಸಕ್ರಿಯ ಪ್ರಕರಣಗಳು 1,080,690 ಕ್ಕೆ ಇಳಿದಿವೆ ಮತ್ತು ಕೇಸ್ ಲೋಡ್ ನ ಶೇ.3.83 ರಷ್ಟಿದೆ.