ಮುಂಬೈ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 54 ಪಾಯಿಂಟ್ಸ್ ಕುಸಿದಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 39 ಪಾಯಿಂಟ್ಸ್ ಇಳಿಕೆ ಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 54.17 ಪಾಯಿಂಟ್ಸ್ ಕುಸಿದು 52420.59 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 39.40 ಪಾಯಿಂಟ್ಸ್ ಇಳಿಕೆಗೊಂಡು 15760 ಪಾಯಿಂಟ್ಸ್ ದಾಖಲಾಗಿದೆ. ವಹಿವಾಟು ಆರಂಭಗೊಂಡಾಗ 1276 ಷೇರುಗಳು ಏರಿಕೆಗೊಂಡರೆ, 791 ಷೇರುಗಳು ಕುಸಿದವು.
ಇನ್ಫೋಸಿಸ್ ಷೇರುಗಳು 23 ರೂ.ಗಳ ಏರಿಕೆ ಕಂಡು 1,469.80 ರೂ., ದೇವಿ ಲ್ಯಾಬ್ಸ್‌ನ ಷೇರುಗಳು 36 ರೂ. ಹೆಚ್ಚಾಗಿ 4,370.60 ಕ್ಕೆ ಪ್ರಾರಂಭವಾಗಿದ್ದು, ವಿಪ್ರೊ ಷೇರು ಸುಮಾರು 4 ರೂ.ಗಳ ಲಾಭದೊಂದಿಗೆ 557.85 ರೂಗಳಲ್ಲಿ ಪ್ರಾರಂಭವಾಯಿತು. ಟಿಸಿಎಸ್ ಷೇರುಗಳು 20 ರೂ.ಗಳ ಏರಿಕೆ ಕಂಡು 3,293.45 ರೂ., ಶ್ರೀ ಸಿಮೆಂಟ್‌ನ ಷೇರು 133 ರೂ.ಗಳ ಏರಿಕೆ ಕಂಡು 28,189.25 ರೂ. ತಲುಪಿದೆ.