ನವದೆಹಲಿ: ದೇಶದಾದ್ಯಂತ ಸೋಮವಾರ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ 10 ಸಾವಿರದಷ್ಟು ಕಡಿಮೆಯಾಗಿದೆ.
ಭಾನುವಾರ ದೇಶದಲ್ಲಿ 80 ಸಾವಿರದ 834 ಮಂದಿಗೆ ಇದ್ದ ಸೋಂಕಿನ ಸಂಖ್ಯೆ ಸೋಮವಾರ 70 ಸಾವಿರದ 421ಕ್ಕೆ ಇಳಿಕೆಯಾಗಿದೆ.
ಈ ಮಟ್ಟಕ್ಕೆ ಇಳಿದಿರುವುದು ಕೊರೋನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದ್ದ ದೇಶಕ್ಕೆ ಕೊಂಚ ಸಮಾಧಾನ ವಾದಂತಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 3 ಸಾವಿರದ 921 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಒಟ್ಟು ಸೋಂಕಿತರ ಸಂಖ್ಯೆ 2 ಕೋಟಿಯ 95 ಲಕ್ಷದ 10 ಸಾವಿರದ 410ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3 ಲಕ್ಷದ 74 ಸಾವಿರದ 305ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ನಡುವಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ 9 ಲಕ್ಷದ 73 ಸಾವಿರದ 158ಕ್ಕೆ ಇಳಿಕೆಯಾಗಿದೆ.
14 ಲಕ್ಷದ 92 ಸಾವಿರದ 152 ಮಂದಿಯನ್ನು ಕರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಇದುವರೆಗೆ 37,62,24,626 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.