ವಿರಾಜಯಾನ
ವಿರಾಜ್ ಕೆ.ಅಣಜಿ
ತನ್ನ ತಂದೆ ತನಗಾಗಿ ತೆಗೆದುಕೊಂಡ ಆ ಅತಿದೊಡ್ಡ ರಿಸ್ಕ್ ಬಗ್ಗೆ ಸ್ಟೆಫಾನೋಸ್‌ಗೆ ಸಂಪೂರ್ಣ ಅರಿವಿತ್ತು. ಅದಕ್ಕಾ ಗಿಯೇ ಆತ ದಿನಂಪ್ರತಿ ಬೆವರು ಹರಿಸುತ್ತಿದ್ದ. ಇದೆಲ್ಲದರ ಫಲವಾಗಿಯೇ ತನಗಿನ್ನೂ 20 ವರ್ಷ ತುಂಬುವ ಮೊದಲೇ, ವಿಶ್ವ ಎಟಿಪಿ ರ‍್ಯಾಂಕ್‌ನಲ್ಲಿ ಟಾಪ್ ೧೫ಕ್ಕೆ ಏರಿದ್ದ ಮತ್ತು ನೆಕ್ಸ್‌ಜೆನ್ ಎಟಿಪಿ ಫೈನಲ್ಸ್ ಟೂರ್ನಿ, ಸ್ಟಾಕ್‌ಹೋಮ್ ಟೂರ್ನಿ ಯಲ್ಲೂ ಟ್ರೋಫಿ ಎತ್ತಿ ಹಿಡಿದಿದ್ದ. ೨೦೧೯ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಟೆನಿಸ್ ದಿಗ್ಗಜ ರೋಜರ್ ಫೆಡರರ್‌ಗೇ ಮಣ್ಣು ಮುಕ್ಕಿಸಿ ಜಗತ್ತೇ ದಂಗಾವಂತೆ ಮಾಡಿದ್ದ ಈ ಸ್ಟಿಫಾನೋಸ್.
ಜೂನ್ 13, 2021, ಫ್ರೆಂಚ್ ಓಪನ್ ಫೈನಲ್ಸ್. ಜಗತ್ತಿನ ಒಂದು ಕಣ್ಣು ಈ ಪಂದ್ಯದ ಮೇಲೆ ನೆಟ್ಟಿತ್ತು. ಏಕೆಂದರೆ, ಫೈನಲ್ಸ್ ಆಡಲು ಕೋರ್ಟ್‌ನಲ್ಲಿ ನಿಂತಿದ್ದು, 19ನೇ ಗ್ರ್ಯಾನ್ ಸ್ಲ್ಯಾಂ ಟೈಟಲ್ ಎತ್ತಿ ಹಿಡಿಯುವ ಛಲ ತೊಟ್ಟು ನಿಂತಿದ್ದ ವಿಶ್ವದ ನಂಬರ್ 1 ಆಟಗಾರ ನೊವಾಕ್ ಜೊಕೊವಿಕ್. ಆತನ ಎದುರಾಳಿ ಸ್ಟಿಫಾನೋಸ್ ಸಿಟ್ಸಿಪಾಸ್ ಎಂಬ ಜಸ್ಟ್ 22 ವರ್ಷದ ಹುಡುಗ.
ಪಂದ್ಯ ಆರಂಭದ ಮುನ್ನವೇ, ಒಂದೆರೆಡು ತಾಸಿನಲ್ಲೇ ಜೊಕೊವಿಕ್ ಫ್ರೆಂಚ್ ಓಪನ್ ಎತ್ತಿ ಹಿಡಿದು ಇತಿಹಾಸ ನಿರ್ಮಿಸಲಿದ್ದಾರೆ ಎಂದು ಹಲವರು ರಿಸಲ್ಟ್ ಕೂಡ ಬರೆದಿಟ್ಟಿದ್ದರು. ಪಂದ್ಯ ಆರಂಭವಾಯ್ತು. ಜೊಕೊವಿಕ್ ಅಬ್ಬರಿಸಿ ಗೆಲ್ಲಲಿದ್ದಾರೆ ಎಂದು ಎಣಿಸಿದವರೆಲ್ಲ ಒಂದು ಕ್ಷಣ ತಬ್ಬಿಬ್ಬು. ನಾನು ಸುಲಭ ತುತ್ತಲ್ಲ ಎಂಬುದನ್ನು ಮೊದಲ ಸೆಟ್‌ನಲ್ಲೇ ಸ್ಟಿಫಾನೋಸ್ ಘಂಟಾ ಘೋಷವಾಗಿ ಸಾರಿ ಹೇಳಿದ್ದರು.
ಸೆಮಿ ಫೈನಲ್ಸ್‌ನಲ್ಲಿ ರಫೆಲ್ ನಡಾಲ್‌ರಿಗೆ ಮಣ್ಣು ಮುಕ್ಕಿಸಿ ಫೈನಲ್ಸ್‌ಗೆ ಬಂದಿದ್ದ ಜೊಕೊವಿಕ್, ಟೆನಿಸ್ ಅಂಕಣದ ಮೂಲೆ ಮೂಲೆಗೂ ಓಡಾಡುವಂತೆ ಸ್ಟಿಫಾನೋಸ್ ಆಟವಾಡುತ್ತಿದ್ದರು. ಭಾರಿ ರೋಚಕತೆಯಿಂದ ಕೂಡಿದ ಮೊದಲ ಸೆಟ್‌ನಲ್ಲಿ
ಇಬ್ಬರೂ ತಲಾ 6 ಗೇಮ್‌ಗಳನ್ನು ಗೆದ್ದ ಕಾರಣ, ಟೈ ಬ್ರೇಕರ್ ಮೊರೆ ಹೋಗಬೇಕಾಯಿತು. ಅಲ್ಲಿಯೂ ಬಗ್ಗದ ಸ್ಟಿಫಾನೋಸ್, ಟೈ ಬ್ರೇಕರ್ ಗೆದ್ದು ಮೊದಲ ಸೆಟ್ ತಮ್ಮದಾಗಿಸಿಕೊಂಡರು. ಜೊಕೊವಿಕ್ ತಮ್ಮ ಕಣ್ಣನ್ನು ಮೇಲೆ ಕೆಳಗೆ ಮಾಡಿಕೊಂಡು ತಬ್ಬಿಬ್ಬಾಗಿ ದ್ದರು. ನಂತರ, ಎರಡನೇ ಸೆಟ್ ಆರಂಭವಾಯ್ತು.
ಇಲ್ಲಂತೂ ಸ್ಟಿಫಾನೋಸ್ ಎಳ್ಳಷ್ಟೂ ಕರುಣೆ ತೋರದೇ ಜೊಕೊವಿಕ್ ಅವರನ್ನು ಬರೋಬ್ಬರಿ 6-2ರಲ್ಲಿ ಮಣ್ಣು ಮುಕ್ಕಿಸಿ ಬಿಟ್ಟರು. ಅಷ್ಟರಲ್ಲಾಗಲೇ, ಜೊಕೊವಿಕ್ ಗೆಲ್ಲುತ್ತಾರೆ ಎಂದ ಬರೆದಿಟ್ಟವರೆಲ್ಲ ಫಲಿತಾಂಶ ಬದಲಿಸಲು ತಮ್ಮ ನೋಟ್‌ಪ್ಯಾಡ್ ಸಿದ್ಧ ಮಾಡಿಕೊಳ್ಳಲು ಆರಂಭಿಸಿದ್ದರು!
ಆದರೆ, ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದ್ದು ರಾತ್ರೋರಾತ್ರಿ ನಂಬರ್ ಒನ್ ಆಗಿದ್ದವರಲ್ಲ. ಅಲ್ಲಿ ಇದ್ದದ್ದು 18 ಗ್ರ್ಯಾನ್ ಸ್ಯಾ ಂಗಳ ಒಡೆಯ, ಟೆನ್ನಿಸ್ ಲೋಕದ ಜಾದೂಗಾರ ಜೋಕೋವಿಕ್. ಪಂದ್ಯದ ದಲಾರ್ಧದಲ್ಲಿ ಡಲ್ ಎಂಬಂತೆ ಕಂಡು ಬಂದ
ಜೊಕೊವಿಕ್, 2 ಸೆಟ್‌ಗಳ ಹಿನ್ನಡೆ ನಂತರ, ತಮ್ಮ ರ‍್ಯಾಕೆಟ್(ಟೆನಿಸ್ ಬ್ಯಾಟ್) ಝಳಪಿಸಲಾರಂಭಿಸಿದರು. ಆದರೂ, ಜೊಕೊಗೆ
ಭರ್ಜರಿ ಪೈಪೋಟಿಯನ್ನು ಸ್ಟಿಫಾನೋಸ್ ನೀಡಿದರೂ, ವಿಶ್ವದ ನಂ.1 ಆಟಗಾರನ ಜಾದೂಗೆ ಗ್ರೀಕ್‌ನ ಆಟಗಾರ ಸಮರ್ಥ ಉತ್ತರ ನೀಡಲು ಸಾಧ್ಯವಾಗಲಿಲ್ಲ. ತಮ್ಮ ಅಸಲಿ ಆಟಕ್ಕೆ ಕುದುರಿಕೊಂಡ ನೊವಾಕ್ 3ನೇ ಹಾಗೂ 4ನೇ ಸೆಟ್‌ಗಳನ್ನು 6-3,
6-2ರಲ್ಲಿ ಗೆದ್ದುಕೊಂಡರು.
ಈಗ ಅಂತಿಮ ಮತ್ತು ನಿರ್ಣಾಯಕ ಸೆಟ್. ಒಂದೆಡೆ ಎಳೆಯ ಹುಡುಗನ ಹುಮ್ಮಸ್ಸು, ಇನ್ನೊಂದೆಡೆ ಅನುಭವಿ ದಿಗ್ಗಜನ ಆಟ. ಅಲ್ಲಿಯೂ ಸಮಬಲದ ಹೋರಾಟ! ಜೊಕೊವಿಕ್ ಆರಂಭಿಕ ಮುನ್ನಡೆ ಸಾಧಿಸಿದರೂ, ಸ್ಟಿಫಾನೋಸ್ ತನ್ನ ಹೋರಾಟ ಬಿಡಲಿಲ್ಲ. ತನ್ನೆಲ್ಲ ಪಟ್ಟುಗಳನ್ನು ಹಾಕಿ ಅಂತಿಮವಾಗಿ 6-4 ಗೇಮ್‌ಗಳಲ್ಲಿ ಜೊಕೊವಿಕ್, ತಮ್ಮ 19ನೇ ಮತ್ತು ಫ್ರೆಂಚ್ ಓಪನ್ ಟೂರ್ನಿಯ ಎರಡನೇ ಗ್ರ್ಯಾನ್ ಸ್ಲ್ಯಾಂ ಗೆದ್ದಿದ್ದರು. ಒಂದು – ಒಂದೂವರೆ ಗಂಟೆ ಪಂದ್ಯ ಎಂದು ಭಾವಿಸಿದ್ದವರೇ ಅವಾಕ್ಕಾಗು ವಂತೆ 4 ಗಂಟೆಗೂ ಹೆಚ್ಚು ಕಾಲ ಪಂದ್ಯ ನಡೆಯಿತು. ಟೂರ್ನಿಯನ್ನು ಜೊಕೊವಿಕ್ ಗೆದ್ದಿದ್ದಕ್ಕಿಂತ ಮಿಗಿಲಾಗಿ, ಸ್ಟಿಫಾನೋಸ್
ವಿರೋಚಿತವಾಗಿ ಸೋತಿದ್ದರು. ಇಷ್ಟೇ ಆಗಿದ್ದರೆ ಇಷ್ಟೆಲ್ಲ ಹೇಳುವ ಅವಶ್ಯಕತೆ ಇರಲಿಲ್ಲ. ಆದರೆ, ಪಂದ್ಯ ಮುಗಿದ ನಂತರ ಸ್ಟಿಫಾನೋಸ್ ಇನ್‌ಸ್ಟಾಗ್ರಾಂನಲ್ಲಿ ಮಾಡಿದ ಒಂದು ಪೋಸ್ಟ್‌ಗೆ ನೊವಾಕ್ ಜೊಕೊವಿಕ್‌ಗೆ ಬಿದ್ದ ಚಪ್ಪಾಳೆಗಳಿಂತ ಹೆಚ್ಚಿನ ಚಪ್ಪಾಳೆ ಬೀಳುವಂತೆ ಮಾಡಿತು. ಅದಕ್ಕಾಗಿಯೇ ಪಂದ್ಯದಲ್ಲಿ ಸೋತರೂ ಕೂಡ ಸ್ಟಿಫಾನೋಸ್ ಹೀರೋ ಎನಿಸುತ್ತಿದ್ದಾನೆ.
ಸ್ಟಿಫಾನೋಸ್‌ನ ಪೋಸ್ಟ್ ಹೀಗಿತ್ತು:Five minutes before entering the court, my very beloved grandmother lost her battle with life. A wise woman, whose faith in life and willingness to give and provide can’t be compared to any other human being that I have ever met. Life isn’t about winning or losing. It’s about enjoying every single moment in life whether that’s alone or with others, living a meaningful life without misery and abjection. Lifting trophies and
celebrating wins is something, but not everything.
ಅಂದರೆ, ಪಂದ್ಯದ ಆರಂಭದ ಬರೀ ಐದೇ ನಿಮಿಷದ ಮುನ್ನ ತನ್ನನ್ನು ಆಡಿಸಿ ಬೆಳೆಸಿದ್ದ, ತಾನೊಬ್ಬ ವಿಶ್ವಮಾನ್ಯ ಟೆನಿಸ್ ಆಟಗಾರ ಆಗಬೇಕು ಎಂದು ಹರಿಸಿದ್ದ ತನ್ನ ಅಜ್ಜಿಯನ್ನು ಸ್ಟಿಫಾನೋಸ್ ಕಳೆದುಕೊಂಡಿದ್ದರು. ಅಜ್ಜಿಯ ಅಗಲಿಕೆ ಸುದ್ದಿಯನ್ನು
ತಿಳಿದರೂ ತನ್ನ ಆಟದ ಮೇಲೆ ಪರಿಣಾಮ ಆಗದಂತೆ ಗಟ್ಟಿಯಾಗಿ ನಿಂತಿದ್ದರು. ಏಕೆಂದರೆ, ಈ ಹಂತಕ್ಕೆ ಸ್ಟಿಫಾನೋಸ್ ಏರಲು ಅಜ್ಜಿಯ ಹಾರೈಕೆ ಅಷ್ಟಿತ್ತು.
ಹಾಗೆ ನೋಡಿದರೆ, ಸ್ಟಿಫಾನೋಸ್ ತಂದೆ – ತಾಯಿ ಇಬ್ಬರೂ ಟೆನಿಸ್ ಆಟಗಾರರು. ಸ್ಟಿಫಾನೋಸ್ ತಾಯಿ ರಷ್ಯಾವನ್ನು 1980-90ರ ದಶಕದಲ್ಲಿ ಪ್ರತಿನಿಧಿಸುತ್ತಿದ್ದರು. ತಂದೆಯೂ ಟೆನಿಸ್ ಆಟಗಾರನಿದ್ದರೂ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶ ಸಿಗಲಿಲ್ಲ. ನಂತರ ಸಿಕ್ಕರೂ ಗೆಲುವುಗಳ ಸಿಹಿ ನಿಲುಕುತ್ತಿರಲಿಲ್ಲ. ಇಷ್ಟರಲ್ಲಾಗಲೇ ದಂಪತಿಗೆ ಸ್ಟಿಫಾನೋಸ್ ಹುಟ್ಟಿದ್ದ, ತಾನೂ ಟೆನಿಸ್ ರ‍್ಯಾಕೆಟ್ ಮೇಲೆ ಒಲವು ತೋರಿಸುತ್ತಿದ್ದ. ಆಗ ಸ್ಟಿಫಾನೋಸ್‌ನ ಅಜ್ಜಿ ಹೇಳಿದ ಒಂದು ಮಾತು ದೊಡ್ಡ ತಿರುವು ನೀಡಿತ್ತು.
ನಿನಗಾಗಲೇ 25 ವರ್ಷ ದಾಟಿದೆ, ಶ್ರಮ ವ್ಯರ್ಥವಾಗುವುದು ಬೇಡ. ಇನ್ಮುಂದೆ ನೀನು ಆಟಗಾರನಲ್ಲ, ನಿನ್ನ ಮಗನ ಕೋಚ್ ಆಗು. ಅವನಿಗೆ ಟೆನಿಸ್ ಹೇಳಿಕೊಡು. ನೀನೇನಾಗಲು ಶ್ರಮಪಟ್ಟು ಸೋಲುತ್ತಿರುವೆಯೋ ಅದನ್ನು ನಿನ್ನ ಮಗ ಖಂಡಿತ ಮಾಡುತ್ತಾನೆ ಎಂದು ಹೇಳಿದ್ದರು ಸ್ಟೆಫಾನೋಸ್ ಅಜ್ಜಿ.
ಅಂದಿನಿಂದಲೇ ಸ್ಟೆಫಾನೋಸ್ ಸಿಲ್ಲಿಪಾಸ್‌ನ ತಂದೆ ಅಪೊಸ್ಟೊಲೋಸ್ ಸಿಟ್ಸಿಪಾಸ್ ತನ್ನಲಿದ್ದ ಕನಸುಗಳನ್ನು ತನ್ನ ಮಗನಲ್ಲಿ ತುಂಬಲು ಆರಂಭಿಸಿದ್ದರು. ಅದರಂತೆಯೇ ಸ್ಟೆಫಾನೋಸ್ ಟೆನಿಸ್‌ನಲ್ಲೇ ಜೀವಿಸತೊಡಗಿದ, ಬೆಳೆಯತೊಡಗಿದ. ತನ್ನ ತಂದೆ ತನಗಾಗಿ ತೆಗೆದುಕೊಂಡ ಆ ಅತಿದೊಡ್ಡ ರಿಸ್ಕ್ ಬಗ್ಗೆ ಸ್ಟೆಫಾನೋಸ್‌ಗೆ ಸಂಪೂರ್ಣ ಅರಿವಿತ್ತು.
ಅದಕ್ಕಾಗಿಯೇ ಆತ ದಿನಂಪ್ರತಿ ಬೆವರು ಹರಿಸುತ್ತಿದ್ದ. ಇದೆಲ್ಲದರ ಫಲವಾಗಿಯೇ ತನಗಿನ್ನೂ 20 ವರ್ಷ ತುಂಬುವ ಮೊದಲೇ, ವಿಶ್ವ ಎಟಿಪಿ ರ‍್ಯಾಂಕ್‌ನಲ್ಲಿ ಟಾಪ್ 15 ಮತ್ತು ನೆಕ್ಸ್‌ಜೆನ್ ಎಟಿಪಿ ಫೈನಲ್ಸ್ ಟೂರ್ನಿ, ಸ್ಟಾಕ್ ಹೋಮ್ ಟೂರ್ನಿಯಲ್ಲೂ ಟ್ರೋಫಿ ಎತ್ತಿ ಹಿಡಿದಿದ್ದ. 2019ರ ಆಸ್ಟ್ರೇಲಿಯನ್ ಓಪನ್ ಟೂರ್ನಿ ಯಲ್ಲಿ ಟೆನಿಸ್ ದಿಗ್ಗಜ ರೋಜರ್ ಫೆಡರರ್‌ಗೇ ಮಣ್ಣು ಮುಕ್ಕಿಸಿ ಜಗತ್ತೇ ದಂಗಾವಂತೆ ಮಾಡಿದ್ದ ಈ ಸ್ಟಿಫಾನೋಸ್. ಮುಂದಿನ ಪಂದ್ಯದಲ್ಲಿ ರಫೆಲ್ ನಡಾಲ್ ವಿರುದ್ಧ ಸೋತರೂ ಕೂಡ ಟೆನಿಸ್ ಲೋಕದಲ್ಲಿ ಮತ್ತೊಬ್ಬ ಸ್ಟಾರ್ ಹುಟ್ಟಿದ್ದಾನೆ ಎಂದು ಸಾರಿ ಹೇಳಿದ್ದ.
ಇತ್ತೀಚಿನ ಪಂದ್ಯದಲ್ಲಿ ಕಂಡ ಅಪಜಯದ ಬಳಿಕ ಅಷ್ಟೇ ವಿನಮ್ರವಾಗಿ ಮಾತನಾಡಿದ್ದ ಸ್ಟೆಫಾನೋಸ್, ನೊವಾಕ್ ಜೊಕೊವಿಕ್ ಅವರ ಸಾಧನೆಗಳಿಂದ ನಾನೂ ಸ್ಫೂರ್ತಿ ಪಡೆದಿದ್ದೇನೆ. ಇಂಥ ದಿಗ್ಗಜರು ಮಾಡಿರುವ ಅರ್ಧದಷ್ಟಾದರೂ ಸಾಧನೆಯನ್ನು ಒಂದಲ್ಲಾ ಒಂದು ದಿನ ಮಾಡುತ್ತೇನೆ ಎಂಬ ನಂಬಿಕೆ ನನಗಿದೆ. ನನ್ನ ಇಂದಿನ ಆಟದ ಬಗ್ಗೆ ಸಂತೋಷವಿದೆ. ಆದರೆ,
ಹಲವಾರು ವರ್ಷಗಳಿಂದ ತಾವೇಕೆ ವಿಶ್ವ ನಂಬರ್ ಒನ್ ಎಂದು ಸಾಬೀತು ಮಾಡುತ್ತಿರುವ ಜೊಕೊ ಅವರಿಗೆ ಈ ದಿನ ಒಲಿದಿದೆ, ಅವರಿಗೆ ಶುಭಾಶಯ ತಿಳಿಸುವೆ.
ಮುಂದಿನ ಬಾರಿ ಮತ್ತೆ ಇಲ್ಲಿ ಆಡಲಿದ್ದೇನೆ ಎಂದು ದಿಟ್ಟವಾಗಿ ಹೇಳಿದ್ದರು. ಇದೊಂದು ರೀತಿ ತಮ್ಮ ಉಚ್ಛಾಯದ ಪರ್ವದಲ್ಲಿ ಸಚಿನ್ ತೆಂಡೂಲ್ಕರ್ ಬಳಿ ವಿರಾಟ್ ಕೊಹ್ಲಿ ಎಂಬ ಎಳೆಗೆನ್ನೆಯ ಹುಡುಗ, ತಾನೂ ಬ್ಯಾಟ್ ಹಿಡಿದು ಬಂದಿದ್ದೇನೆ. ನಿಮ್ಮ ದಾಖಲೆಗಳು ಪುಡಿಪುಡಿ ಆಗುವುದು ಖಂಡಿತ ಎಂದು ಹೇಳಿದಂತಿದೆ. ವಿರಾಟ್ ಕೊಹ್ಲಿಯ ಜತೆ ಸ್ಟಿಫಾನೋಸ್ ಸಿಟ್ಸಿಪಾಸ್‌ನ
ಹೋಲಿಕೆ ಖಂಡಿತ ಅತಿಶಯೋಕ್ತಿಯಲ್ಲ. ಏಕೆಂದರೆ ತಾನು ಭವಿಷ್ಯದ ಆಟಗಾರ ಎಂಬ ಛಾಪನ್ನು ಸ್ಟಿಫಾನೋಸ್ ಮೂಡಿಸಿದ್ದಾರೆ.
ವಿಶ್ವ ಟೆನಿಸ್‌ನ ಈಗಿನ ದಿಗ್ಗಜರಿಗೆ ತನ್ನ ಆಟದ ಝಲಕ್ ತೋರಿಸಿದ್ದಾರೆ. ಟೆನಿಸ್ ದಿಗ್ಗಜರಾದ ನಡಾಲ್ ವಿರುದ್ಧ 9 ರಲ್ಲಿ 2 ಬಾರಿ, ಫೆಡರರ್ ವಿರುದ್ಧ 5 ರಲ್ಲಿ 3 ಬಾರಿ, ಜೊಕೊವಿಕ್ ವಿರುದ್ಧ 8 ರಲ್ಲಿ 2 ಬಾರಿ ಸ್ಟಿಫಾನೋಸ್ ತಮ್ಮ ಟೆನಿಸ್ ಸಾಮರ್ಥ್ಯ ತೋರಿ ದ್ದಾರೆ. ಟೆನಿಸ್ ಬಗ್ಗೆ ಭಕ್ತಿ, ಶ್ರದ್ಧೆ, ತನ್ನ ತಂದೆ ತನಗಾಗಿ ಮಾಡಿದ ತ್ಯಾಗ ಮತ್ತು ತನ್ನ ಅಜ್ಜಿ ತನ್ನ ಮೇಲೆ ಇಟ್ಟ ವಿಶ್ವಾಸ ಹಾಗೂ ನಂಬಿಕೆಯ ಬಲವನ್ನು ಆಟದಲ್ಲಿ ತುಂಬಿಕೊಂಡು ಆಟವಾಡಿದ್ದಾರೆ. ಇದಕ್ಕೆ ತಕ್ಕನಾದ ಯಶಸ್ಸನ್ನೂ ಸ್ಟೆಫಾನೋಸ್ ಪಡೆದಿದ್ದು, ವಿಶ್ವ ಎಟಿಪಿ ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಅಂದರೆ, ರೋಜರ್ ಫೆಡರರ್‌ಗಿಂತ ನಾಲ್ಕು ಸ್ಥಾನ ಮೇಲಿದ್ದು, ಮುಂದಿನ ದಿನಗಳಲ್ಲಿ ಟೆನಿಸ್ ಲೋಕದಲ್ಲಿ ಸ್ಟಿಫಾನೋಸ್ ಸಿಟ್ಸಿಪಾಸ್ ನ ಹೆಸರು ಮತ್ತೆ ಮತ್ತೆ ಕೇಳಿ ಬರುವುದು ಖಚಿತ. ತನ್ನ ಪ್ರೀತ ಪಾತ್ರರನ್ನು ಕಳೆದುಕೊಂಡ ನೋವಿದ್ದರೂ, ವಿಶ್ವದ
ಅತಿದೊಡ್ಡ ಟೂರ್ನಿಯ ಫೈನಲ್ಸ್‌ನಲ್ಲಿ ದಿಗ್ಗಜ ಆಟಗಾರನ ಎದುರಿಗೆ ನಿಂತಿದ್ದರೂ ಒಂದಷ್ಟೂ ವಿಚಲಿತರಾಗದೇ ಸ್ಟಿಫಾನೋಸ್ ಆಡಿದ್ದಾರೆ. ಇದು ಒಬ್ಬ ಸಾಧಕನಾಗಿ ಆತ ರೂಪುಗೊಳ್ಳುತ್ತಿರುವುದರ ಲಕ್ಷಣ. ಈ ಎಲ್ಲ ಹೆಜ್ಜೆಗಳು ಮುಂದೊಂದು ದಿನ ಜಗತ್ತಿಗೇ ಆದರ್ಶವಾಗುವುದು ಖಂಡಿತ.
ಬದುಕಿನಲ್ಲಿ ನಾವು ಅಂದುಕೊಂಡದ್ದೆಲ್ಲವೂ ಆಗಬೇಕು ಎಂದು ಎಣಿಸುವುದೇ ತಪ್ಪು. ಆದರೆ, ಕನಸು ಕಾಣುವುದನ್ನು ಎಂದಿಗೂ ಬಿಡಬಾರದು. ಯಾವುದೇ ಸಾಧಕನ ಹುಟ್ಟು ರಾತ್ರೋ ರಾತ್ರಿ ಆಗಿಬಿಡಲು ಸಾಧ್ಯವಿಲ್ಲ. ಯಶಸ್ಸು, ಕೀರ್ತಿ ಬೇಡವೆಂದು ಯಾರೂ
ಅಂದುಕೊಳ್ಳಲಾರರು. ಆದರೆ, ಅವು ಉಚಿತವಾಗಿ ಯಾರಿಗೂ ಸಿಗಲಾರವು. ಜತೆಗೆ, ಹಾಗೆಯೇ ಪ್ರಯತ್ನ ಪಡದೇ ಸೋಲೂ ಕೂಡ ನಮ್ಮನ್ನು ಅಪ್ಪಿಕೊಳ್ಳಲಾರದು.
ಅಂತಹದರಲ್ಲಿ ಎದ್ದು ನಿಲ್ಲಬೇಕು, ಗೆಲ್ಲಬೇಕು, ಸಾಧಿಸಬೇಕು ಎಂದು ಕೊಂಡಾಗ ಎಷ್ಟೆಲ್ಲ ಪರಿಶ್ರಮ, ಗಟ್ಟಿ ಮನಸ್ಸು, ಇಚ್ಛಾಶಕ್ತಿ ಬೇಕು ಎಂಬುದಕ್ಕೆ ಸ್ಟಿಫಾನೋಸ್ ಸಿಟ್ಸಿಪಾಸ್ ಮತ್ತೊಂದು ಉದಾಹರಣೆಯಾಗಿ ಕಾಣಲು ಆರಂಭಿಸಿದ್ದಾರೆ. ಮುಂದೊಂದು ದಿನ
ಸಾಧಕನಾಗಿ ಗುರುತಿಸಿಕೊಳ್ಳ ಲಿದ್ದಾರೆ. ಅವರತ್ತ ಈಗಿನಿಂದಲೇ ಒಂದು ನೋಟವಿಟ್ಟರೆ, ಬದುಕಿಗೆ ನಮಗೂ ಒಂದಷ್ಟು ಸೂರ್ತಿ ಸಿಗಲಿದೆ. ವಿಶ್ವಮಾನ್ಯ ಬಾಕ್ಸರ್ ಮೊಹಮ್ಮದ್ ಅಲಿ ಹೇಳ್ತಾರೆ, He who is not courageous enough to take risks will
accomplish nothing in life. ಎಷ್ಟು ನಿಜ ಅಲ್ವಾ?