Wednesday, 11th December 2024

ಒಂದು ಗಂಟೆ ಯೋಗಕ್ಕೆ ಮೀಸಲಿಟ್ಟು, 23 ಗಂಟೆ ನೆಮ್ಮದಿಯಾಗಿರಿ: ಶ್ವಾಸಗುರು ಶ್ರೀ ವಚನಾನಂದ

ವಿಶ್ವವಾಣಿ ಕ್ಲಬ್‌’ಹೌಸ್‌ ಸಂವಾದ – 3

ಯೋಗ ಜನರ ಇಂದಿನ ಅಗತ್ಯ: ಶ್ವಾಸಗುರು ವಚನಾನಂದ

ರೋಗಕ್ಕಾಗಿ ಯೋಗ ಮಾಡುವ ಜನ ಹೆಚ್ಚಾಗಿದ್ದಾರೆ

ಒತ್ತಡದ ಜೀವನದಲ್ಲಿರುವ ಇಂದಿನ ಸಮುದಾಯಕ್ಕೆ  ಯೋಗ ಅನಿವಾರ್ಯ. ಒಂದು ಗಂಟೆ ಯೋಗಕ್ಕೆ ಮೀಸಲಿಟ್ಟು ೨೩ ಗಂಟೆ ನೆಮ್ಮದಿಯಾಗಿರಬಹುದು ಎಂದು ಶ್ವಾಸಗುರು, ಪಂಚಮಸಾಲಿ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿಗಳು ಹೇಳಿದರು.

ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಭಾಗಿಯಾಗಿದ್ದ ವಚನಾನಂದ
ಸ್ವಾಮೀಜಿಗಳು ಮಾತನಾಡಿದರು. ಯೋಗ ಇಂದಿನ ಅವಶ್ಯಕತೆ. ನಾಳೆಯ ಅನಿವಾರ್ಯತೆ. ಇಂದಿನ ಆಧುನಿಕ ಜಗತ್ತಿನಲ್ಲಿ ಒತ್ತಡ, ಖಿನ್ನತೆ ಸಾಮಾನ್ಯವಾಗಿದೆ. ಡಿಜಿಟಲ್ ಜಗತ್ತಿನಲ್ಲಿ ಈ ಎಲ್ಲ ಒತ್ತಡಗಳಿಂದ ಹೊರಬರಲು ಯೋಗ ಅತ್ಯುತ್ತಮ ಎಂದರು.

ಪ್ರಾಣಾಯಾಮ ಸೇರಿದಂತೆ ವಿವಿಧ ಯೋಗಾಸನ ಗಳಿಂದ ಹಲವು ಪ್ರಯೋಜನ ಪಡೆಯಬಹುದಾಗಿದೆ. ದಿನದ 24 ಗಂಟೆಯಲ್ಲಿ 24 ನಿಮಿಷ ಪ್ರಾಣಾಯಾಮ ಮಾಡಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಯೋಗಾಸನದಲ್ಲಿ ಕೆಲವು ಸೂಕ್ಷ್ಮ ಯೋಗಾ ಸನಗಳಿವೆ. ಇವುಗಳನ್ನು ಎಲ್ಲಿಯಾದರೂ ಕುಳಿತು ಮಾಡಬಹುದಾಗಿದೆ. ಅದನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಪಾಶ್ಚಾತ್ಯರಿಗೆ ಯೋಗದ ಮಹತ್ವದ ತಿಳಿದಿದೆ: ೧೯ನೇ ಶತಮಾನದಲ್ಲಿ ಪಾಶ್ಚಾತ್ಯದಲ್ಲಿ ಯೋಗದ ಬಗ್ಗೆ ಹೆಚ್ಚು ಒಲವು ಇರ ಲಿಲ್ಲ. ಅನೇಕರು ಯೋಗ, ಧಾನ್ಯದಿಂದ ಒಂದು ಗಂಟೆ ವ್ಯರ್ಥ ಎನ್ನುವ ಮಾತನ್ನು ಆಡುತ್ತಿದ್ದರು. ಆದರೆ, ಅಮೆರಿಕದ ಮೆನೆಂಜರ್ ಎನ್ನುವ ಸಂಶೋಧನಾ ಕೇಂದ್ರ ಭಾರತದ ಯೋಗಿ ಸ್ವಾಮಿ ರಾಮ್ ಅವರನ್ನು ಆಹ್ವಾನಿಸಿದರು.

104 ವರ್ಷ ಜೀವಿಸಿದ್ದ ಯೋಗಿ ಸ್ವಾಮಿ ರಾಮ್ ಅವರು, ಪ್ರಾಣಾಯಾಮದ ಶಕ್ತಿಯ ಮೂಲಕ ಹೃದಯವನ್ನು ನಿಲ್ಲಿಸಿದರು. ಸಂಶೋಧಕರು ಅಚ್ಚರಿಗೊಂಡರು. ಇದೇ ಸಂಶೋಧನಾ ಕೇಂದ್ರಕ್ಕೆ ಕರ್ನಾಟಕ ಮೂಲದ ನಾದಬ್ರಹ್ಮಾನಂದ ಅವರನ್ನು
ಆಹ್ವಾನಿಸಿದರು. ಅವರನ್ನು ಹಾಗೂ ಒಂದು ಮಂಗವನ್ನು ಪ್ರತ್ಯೇಕ ಗಾಜಿನ ಬಾಕ್ಸ್‌ನಲ್ಲಿ ಇಡಲಾಯಿತು. ಮಂಗ ಕೇವಲ ಐದು
ನಿಮಿಷಕ್ಕೆ ಮೂರ್ಛೆ ಹೋದರೆ, ನಾದಬ್ರಹ್ಮಾನಂದರು ಒಂದು ಗಂಟೆಗೂ ಹೆಚ್ಚು ಕಾಲ ತಬಲ ನುಡಿಸಿದರು.

ಇದು ಯೋಗದ ಶಕ್ತಿ. ಇದಾದ ಬಳಿಕ ಪಾಶ್ಚಾತ್ಯದವರು ಯೋಗದತ್ತ ವಾಲಿದರು. ಈಗ ನ್ಯೂಯಾರ್ಕ್‌ನಲ್ಲಿ ಪ್ರತಿ 10 ಕಿ.ಮೀಗೆ ಒಂದು ಯೋಗ ಕೇಂದ್ರ ಇರುವುದು ನಾವು ಕಾಣಬಹುದಾಗಿದೆ. ಇದೀಗ ವಿಶ್ವದ 172 ದೇಶಗಳು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿವೆ ಎಂದು ಹೇಳಿದರು.

ನಿಧಾನ ಉಸಿರಾಟ ದೀರ್ಘ ಬಾಳುವ ಗುಟ್ಟು: ಇಂದು ಎಲ್ಲರೂ ಅವಸರದಲ್ಲಿದ್ದಾರೆ. ಮನುಷ್ಯರು ಸಹ ಅನೇಕರು ಅವಸರದ ಉಚ್ಛಾಸ- ನಿಶ್ವಾಸ ಮಾಡುತ್ತಿದ್ದಾರೆ. ನಿಧಾನ ಉಸಿರಾಟದಿಂದ ದೀರ್ಘ ಜೀವಿಸಲು ಸಹಾಯವಾಗುತ್ತದೆ. ಈ ಹಿಂದೆ ಯೋಗಿಗಳು ವಿವಿಧ ಪ್ರಾಣಿಗಳನ್ನು ಗಮನಿಸಿ ಯೋಗಾಸನವನ್ನು ರೂಪಿಸಿದರು. ಮೊಸಳೆ ನಿಮಿಷಕ್ಕೆ ಕೇವಲ ನಾಲ್ಕರಿಂದ ಐದು ಬಾರಿ ಉಚ್ಛಾಸ-ನಿಶ್ವಾಸ ಮಾಡುತ್ತದೆ. ಇದರಿಂದ ಅದು 400 ರಿಂದ 500 ವರ್ಷ ಬಾಳುತ್ತದೆ. ಆಮೆ 3-4 ಬಾರಿ ಮಾಡುತ್ತದೆ. ಆದ್ದರಿಂದ ಇನ್ನಷ್ಟು ಹೆಚ್ಚು ವರ್ಷ ಬಾಳುತ್ತದೆ ಎಂದು ಹೇಳಿದರು.

ಯೋಗ-ವ್ಯಾಯಾಮದ ವ್ಯತ್ಯಾಸವೇನು?
ಯೋಗ ಮತ್ತು ವ್ಯಾಯಾಮದ ವ್ಯತ್ಯಾಸದ ಬಗ್ಗೆ ಹೇಳುವಂತೆ ಕೇಳುಗರೊಬ್ಬರು ಕೇಳಿದರು. ಇದಕ್ಕೆ ಉತ್ತರಿಸಿದ ಶ್ರೀಗಳು, ವ್ಯಾಯಾಮ ಎನ್ನುವುದು ಸರ್ಕಸ್ ಇದ್ದ ರೀತಿ. ಯೋಗ ಎನ್ನುವುದು ಸೇವೆ ಇದ್ದಂತೆ. ಯೋಗವನ್ನು ಸರಿಯಾಗಿ ಮಾಡಿದರೆ, ಆಗಲೂ ಸಿಕ್ಸ್ ಪ್ಯಾಕ್ ಪಡೆಯಬಹುದು. ವ್ಯಾಯಾಮದಿಂದ ಕೇವಲ ದೇಹ ಬೆಳೆಯುತ್ತದೆ. ಆದರೆ ಯೋಗದಿಂದ ಆತ್ಮದ
ಬೆಳವಣಿಗೆ ಸಾಧ್ಯ ಎಂದರು.

ಭಟ್ಟರ ಅಂಕಣ ಸಂಗ್ರಹ
ನನಗೆ ವಿಶ್ವೇಶ್ವರ ಭಟ್ ಅವರು ಸ್ಫೂರ್ತಿ. ಅವರು ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದ ಅಂಕಣಗಳನ್ನು ನಾನು ಸಂಗ್ರಹಿಸಿ ಟ್ಟುಕೊಳ್ಳುತ್ತಿದ್ದೆ. ಪ್ರತಿ ಗುರುವಾರ ಬರುತ್ತಿದ್ದ ಅವರ ಅಂಕಣವನ್ನು ನಾನು ಕಟ್ ಮಾಡಿಕೊಂಡು ಪುಸ್ತಕದಲ್ಲಿ ಅಂಟಿಸಿ ಕೊಳ್ಳುತ್ತಿದ್ದೆ. ಬಳಿಕ ನನ್ನ ಮೊದಲ ಪುಸ್ತಕಕ್ಕೆ ಅವರಿಂದಲೇ ಮುನ್ನುಡಿ ಬರೆಸಿದ್ದೇನೆ ಎಂದು ನೆನಪು ಮಾಡಿಕೊಂಡರು.

ಯೋಗದಿಂದ ಎಂದಿಗೂ ದೂರಾಗಿಲ್ಲ
ಕ್ಲಬ್‌ಹೌಸ್ ಸಂವಾದದಲ್ಲಿ ಒಬ್ಬರು, ಪಂಚಮಸಾಲಿ ಪೀಠಕ್ಕೆ ಬಂದ ಬಳಿಕ ಯೋಗದ ಮೇಲಿನ ಆಸಕ್ತಿ ವಚನಾನಂದರಿಗೆ ಕಡಿಮೆ ಯಾಗಿದೆಯೇ ಎನ್ನುವ ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಟಿವಿಯಲ್ಲಿ ಬರಲಿಲ್ಲ ಎನ್ನುವ ಮಾತ್ರಕ್ಕೆ ಯೋಗದ ಮೇಲಿನ ಆಸಕ್ತಿ ಕಡಿಮೆಯಾಗಿದೆ ಎಂದಲ್ಲ. ಈಗಲೂ ನಾನು ಬೆ.4 ರಿಂದ 10ಗಂಟೆವರೆಗೆ ಯೋಗಕ್ಕೆ ಮೀಸಲು ಇಟ್ಟಿದ್ದೇನೆ. ಪಂಚಮಸಾಲಿ ಪೀಠಾಧಿಪತಿಯಾಗಿದ್ದರಿಂದ, ಅದನ್ನು ನಿರ್ವಹಿಸುತ್ತಿದ್ದೇನೆ.

ಪಂಚಮಸಾಲಿ ಪೀಠ ನನ್ನ ಗಂಡನಾಗಿರುವುದರಿಂದ ಅದಕ್ಕೆ ನಿಷ್ಠೆಯಿದೆ. ಆದರೆ, ನನ್ನ ತವರಾದ ಯೋಗವನ್ನು ಮರೆತಿಲ್ಲ. ಯೋಗದಿಂದ ನಾನು ದೂರವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಪಂಚಮಸಾಲಿಯಲ್ಲಿ ಹುಟ್ಟಿರುವುದರಿಂದ, ಅಲ್ಲಿಗೆ ಹೋಗಿದ್ದೇನೆ. ಅಲ್ಲಿನ ಋಣ ತೀರಿಸಲು ಹೋಗಿದ್ದೇನೆ. ನಾನು ಎಲ್ಲ ಸಮುದಾಯದವರಿಗೂ ಲಭ್ಯ ಎಂದರು.

ಯೋಗ ಇಂದು ವ್ಯವಹಾರವಾಗಿರುವುದನ್ನು ನಾನು ಒಪ್ಪಲೇಬೇಕು. ಯೋಗದಿಂದ ಅನೇಕರಿಗೆ ಕೆಲಸ ಸಿಕ್ಕಿದೆ. ಚೀನಾ ಒಂದರಲ್ಲೇ ಭಾರತದ ೧೦ ಸಾವಿರ ಮಂದಿ ಯೋಗದಿಂದ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಯೋಗದಲ್ಲಿ ಸಾಮಾನ್ಯ ಯೋಗ ಹಾಗೂ ಸಾಧಕರ
ಯೋಗವಿದೆ. ಇತ್ತೀಚಿಗೆ ಅನೇಕರು ರೋಗದ ಸಲುವಾಗಿ ಯೋಗ ಮಾಡುತ್ತಿzರೆ. ಆದ್ದರಿಂದ ಯೋಗ ದೇವರನ್ನು ಅಥವಾ ಮೋಕ್ಷ ಪಡೆಯಲು ಮಾರ್ಗ.