ಹೊಸ ತಂತ್ರಜ್ಞಾನ ಎನಿಸಿರುವ ೫ಜಿ ಎಲ್ಲಾ ಕಡೆ ತನ್ನ ಛಾಪನ್ನು ಒತ್ತಲು ಆರಂಭಿಸಿದೆ. ೫ಜಿ ಉಪಯೋಗಿಸುವ ಸ್ಮಾರ್ಟ್
ಫೋನ್‌ಗಳು ಒಂದೊಂದಾಗಿ ಮಾರುಕಟ್ಟೆಗೆ ಬರುತ್ತಿದ್ದು, ಮೊಬೈಲ್ ಪ್ರಿಯರ ಗಮನ ಸೆಳೆಯಲು ತಮ್ಮದೇ ರೀತಿಯಲ್ಲಿ ಪ್ರಯತ್ನ
ನಡೆಸಿವೆ.
ಈ ವಾರ ಮಾರುಕಟ್ಟೆಗೆ ಬರಲಿರುವ ವಿವೋ ವಿ೨೧ಇ ೫ಜಿ ಸ್ಮಾರ್ಟ್ ಫೋನ್‌ನ ವಿವರಗಳು ಹೊರಬಿದ್ದಿದ್ದು, ಹೊಸ ತಂತ್ರ ಜ್ಞಾನದ ಈ ಸ್ಮಾರ್ಟ್ ಫೋನ್ ಕುರಿತು ಹಲವರಲ್ಲಿ ಆಸಕ್ತಿ ಮೂಡಿಸಿವೆ.
*ವಿವೋ ವಿ೨೧ಎ ೫ಜಿ ಸ್ಮಾರ್ಟ್ ಫೋನ್‌ನಲ್ಲಿ ೧೨೮ ಜಿಬಿ ಮೆಮೊರಿ ಇದ್ದು, ೮ ಜಿಬಿ ರ‍್ಯಾಮ್ ಕಾರ್ಯನಿರ್ವಹಿಸಲಿದೆ. ರ‍್ಯಾಮ್ ವೇಗವನ್ನು ಇನ್ನೂ ಮೂರು ಜಿಬಿ ವಿಸ್ತರಿಸುವ ಅವಕಾಶ.
*ಜೂನ್ ೨೪ರಂದು ಮಾರುಕಟ್ಟೆಗೆ ಬರಲಿರುವ ನಿರೀಕ್ಷೆ.
*೩೨ ಎಂಪಿ ಫ್ರಂಟ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್ ಫೋನ್, ಸೆಲಿ ಪ್ರಿಯರ ಮನ ತಣಿಸಬಲ್ಲದು. ಕಡಿಮೆ ಬೆಳಕಿನಲ್ಲೂ ಉತ್ತಮ ಚಿತ್ರ ನೀಡುವ ಕ್ಯಾಮೆರಾ ಇದರ ವಿಶೇಷ. ಇದರ ಜತೆಯಲ್ಲಿ ೬೪ ಎಂಪಿ ಪ್ರೈಮರಿ ಸೆನ್ಸರ್ ಕ್ಯಾಮೆರಾ ಮತ್ತು ೮ ಎಂಪಿ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿರುತ್ತದೆ.
*೬.೪ ಇಂಚು ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ ೭೦೦ ಪ್ರೊಸೆಸರ್, ೪,೦೦೦ ಎಂಎಎಚ್ ಬ್ಯಾಟರಿ, ೩೦ ನಿಮಿಷಗಳಲ್ಲಿ ೭೨% ಚಾರ್ಜ್ ಮಾಡಬಲ್ಲ ಚಾರ್ಜರ್ ಮತ್ತು ಇತರ ಸೌಲಭ್ಯಗಳನ್ನು ಇದು ಹೊಂದಲಿದೆ.
*ಇದರ ಆರಂಭಿಕ ಬೆಲೆ ಸುಮಾರು.೨೪,೯೯೦/- (ಬದಲಾವಣೆಗೆ ಒಳಪಡಬಹುದು)