Saturday, 14th December 2024

ಹಿಂಬಾಗಿಲಿನಿಂದ ಪಬ್‌ಜಿ ?

ರವಿ ದುಡ್ಡಿನಜಡ್ಡು

ಹಿಂಸೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಪಬ್‌ಜಿ ವಿಡಿಯೋ ಆಟವನ್ನು ಭಾರತದಲ್ಲಿ ಕಳೆದ ವರ್ಷ ನಿಷೇಧಿಸಿದ್ದು ಈಗ ಹಳೆಯ ಸುದ್ದಿ. ಒಬ್ಬರನ್ನೊಬ್ಬರು ಕೊಲ್ಲುವಲ್ಲಿ ಸ್ಪರ್ಧೆಯನ್ನೇರ್ಪಡಿಸುವ ಈ ಆಟದಲ್ಲಿ ಹಿಂಸೆ ಇದ್ದದ್ದು ಒಂದು ವಿಚಾರವಾ ದರೆ, ಚೀನಾ ಮೂಲದ ಸರ್ವರ್‌ಗಳ ಮೂಲಕ ಆ ಆಟವನ್ನು ಆಡುತ್ತಿದ್ದ ಆಟಗಾರರ ಮಾಹಿತಿಯನ್ನು ಮತ್ತು ನಮ್ಮ ದೇಶದ ಭದ್ರತೆಗೆ ಮಾರಕ ಎನಿಸಬಹುದಾದ ಮಾಹಿತಿಯನ್ನು ಚೀನಾ ಕದಿಯುತ್ತಿರಬಹುದು ಎಂಬ ಗುಮಾನಿಯೂ ಆ ಆಟವನ್ನು ನಿಷೇಧಿಸಲು ಪ್ರಮುಖ ಕಾರಣ ಎನಿಸಿತ್ತು.

ಈಗ ಪಬ್‌ಐ ಆಟವನ್ನೇ ತುಸು ಮಾರ್ಪಡಿಸಿ, ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಆಟವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಕ್ರಾಫ್ಟನ್ ಎಂಬ ಸಂಸ್ಥೆಯು ಇದನ್ನು ಬಿಡುಗಡೆಮಾಡಲಿದ್ದು, ಆ ಸಂಸ್ಥೆಯು ಚೀನಾ ಸಹಭಾಗಿತ್ವದ ಟೆನ್‌ಸೆಂಟ್ ಜತೆ ಕೈಜೋಡಿಸಿರುವುದರಿಂದ, ದೇಶದ ಭದ್ರತೆಗೆ ಮಾರಕವಾಗಬಹುದು ಎಂಬ ಗುಲ್ಲು ಎದ್ದಿದೆ ಮತ್ತು ಹಲವು ವಲಯಗಳಿಂದ ಈ ಆಟವನ್ನು ನಿಷೇಧಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ.

ಕಾನಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಈ ಆಟವನ್ನು ನಮ್ಮದೇಶದಲ್ಲಿ ಬಿಡುಗಡೆ ಮಾಡದಂತೆ ಕೇಂದ್ರ ಸರಕಾರದ ರವಿ ಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದೆ. ಈ ವಿಡಿಯೋಗೇಮ್ನ್ನು ಉಪಯೋಗಿಸುವ ಬಳಕೆದಾರರ ವಿವರಗಳು
ಸಿಂಗಪುರ ಮತ್ತು ಇತರ ಹೊರದೇಶಗಳಲ್ಲಿರುವ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುವುದರಿಂದ, ಅದು ಭದ್ರತೆಗೆ ಮಾರಕ ಎಂಬ ಕಳಕಳಿಯನ್ನು ವ್ಯಕ್ತಪಡಿಸಲಾಗಿದೆ.

ಪಬ್‌ಜಿ ಆಟದಲ್ಲಿರುವ ಹಿಂಸೆಯ ತೀವ್ರತೆಯನ್ನು ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಟದಲ್ಲಿ ಕಡಿಮೆ ಮಾಡಲಾಗಿದೆ ಎಂಬ ವಾದವನ್ನು ಮುಂದೂಡಿ ಈ ವಿಡಿಯೋ ಗೇಮ್‌ನ್ನು ಭಾರತೀರಿಗೆ ಪರಿಚಯಿಸಲು ದಕ್ಷಿಣ ಕೊರಿಯಾದ ಕ್ರಾಫ್ಟನ್ ಸಂಸ್ಥೆಯ ಪ್ರಯತ್ನ ನಡೆಸುತ್ತಿದೆ. ಈ ಆಟದಲ್ಲಿ ಹಿಂಸೆ ನಡೆಸಿದಾಗ ಹೊರಬೀಳುವ ರಕ್ತದ ಬಣ್ಣವನ್ನು ಹಸಿರು ಬಣ್ಣದ್ದಾಗಿ ತೋರಿಸುವ ಕ್ರಮವು ಅದರಲ್ಲಿ ಒಂದು!