ಅಭಿವ್ಯಕ್ತಿ
ಡಾ.ಅರ್ಚನಾ ಆರ್.
ವಿದ್ಯಾರ್ಥಿಗಳು ಮಾತ್ರವಲ್ಲದೆ ಶಿಕ್ಷಕ ವರ್ಗವೂ ಕೂಡ ಕಳೆದ ವರ್ಷ ಆನ್‌ಲೈನ್ ಬೋಧನೆಯಿಂದ ಅನೇಕ ಸಮಸ್ಯೆ- ಸವಾಲುಗಳನ್ನು ಎದುರಿಸಿರುವುದುಂಟು. ಕೆಲವು ಶಿಕ್ಷಕರು ಉದ್ಯೋಗ ವಂಚಿತರಾದರೆ ಮತ್ತೆ ಕೆಲವರು ಅರ್ಧ ಸಂಬಳಕ್ಕೆ ದುಡಿದಿzರೆ. ಕಳೆದ ಬಾರಿಯ ಪ್ಯಾಕೇಜ್‌ನಲ್ಲಿ ಖಾಸಗಿ ಶಿಕ್ಷಕರನ್ನು ಸರಕಾರ
ಮರೆತಿತ್ತು. ಅದನ್ನೆ ಮೀರಿಯೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್‌ನಲ್ಲಿ ತರಗತಿಗಳನ್ನು ತೆಗೆದುಕೊಂಡಾಗಲೂ ಕೆಲವು ಕಿಡಿಗೇಡಿಗಳು ನೀಲಿಚಿತ್ರ ಪ್ರದರ್ಶಿಸಿ, ಅಸಭ್ಯವಾಗಿ ವರ್ತಿಸಿದ್ದು ಶಿಕ್ಷಕರ ಆತ್ಮಸ್ಥೈರ್ಯವನ್ನು ಕುಗ್ಗಿಸಿದ್ದವು. ಈ ದುಷ್ಪರಿಣಾಮವನ್ನು ಸರಕಾರ ವಾಗಲೀ, ಶಿಕ್ಷಣ ಸಂಸ್ಥೆಗಳಾಗಲಿ,
ಶಿಕ್ಷಣತಜ್ಞರಾಗಲೀ ಗಂಭೀರವಾಗಿ ತೆಗೆದುಕೊಂಡಂತಿಲ್ಲ.
ಈ ಹಿಂದಿನ ಯಾವುದೇ ಆರೋಗ್ಯ ತುರ್ತುಪರಿಸ್ಥಿತಿಗಳು ಕರೋನಾ ಸಾಂಕ್ರಾಮಿಕ ರೋಗವು ಸೃಷ್ಟಿಸಿರುವಷ್ಟು ನಕಾರಾತ್ಮಕ ಪರಿಣಾಮಗಳನ್ನು ಶಿಕ್ಷಣ
ವ್ಯವಸ್ಥೆಯ ಮೇಲೆ ಬೀರಿದ ಉಖವಿಲ್ಲ. ಈ ಸಾಂಕ್ರಾಮಿಕವೂ ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಬಿಕ್ಕಟ್ಟುಗಳನ್ನು ಎದುರಿಸುವಂತೆ ಮಾಡಿದೆ. ಅದರ ಪರಿಣಾಮವಾಗಿ ಕಳೆದ ವರ್ಷ ಶೈಕ್ಷಣಿಕ ಸಮುದಾಯವು ಬೋಧನಾ ವ್ಯವಸ್ಥೆಯಿಂದ ದೂರ ಉಳಿಯುವಂತೆ ಮತ್ತು ಆನ್‌ಲೈನ್‌ನಂಥ ಬೋಧನಾ ವಿಧಾನಗಳತ್ತ ನಮ್ಮ ಚಿತ್ತ ಹರಿಸುವಂತಾಯಿತು.
ಸಿಬಿಎಸ್‌ಸಿ ಸೇರಿದಂತೆ ರಾಜ್ಯದಲ್ಲಿ ಪಿಯುಸಿ ಪರೀಕ್ಷೆಗಳು ರzದವು. ಎಸ್‌ಎಸ್‌ಎಲ್‌ಸಿ ಮತ್ತು ಪ್ರಥಮ ಪಿಯುಸಿಗೆ ವಿಭಿನ್ನವಾಗಿ ಪರೀಕ್ಷೆ ನಡೆಸುವ ಸರಕಾರದ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ವಿಯಾಗುವುದೋ ಎಂಬುದನ್ನು ಕಾದು ನೋಡಬೇಕಿದೆ. ಇಂಥ ಸಂದಿಗ್ಧತೆಯಲ್ಲಿ ಜುಲೈ ೧ರಿಂದ ಮುಂದಿನ ಶೈಕ್ಷಣಿಕ ವರ್ಷದ ಆರಂಭವಾಗುತ್ತದೆ ಎಂದು ರಾಜ್ಯ ಶಿಕ್ಷಣ ಇಲಾಖೆ ಘೋಷಿಸಿದೆ. ಹಿಂದಿನ ವರ್ಷದ ಅನುಭವಗಳಿಂದ ಸರಕಾರ ಇನ್ನೂ ಪಾಠ ಕಲಿತಂತೆ ಕಾಣುತ್ತಿಲ್ಲ ಎಂಬುದು ಸರಕಾರದ ನಡವಳಿಕೆಯಿಂದ ತಿಳಿಯುತ್ತದೆ. ಈಗಾಗಲೇ ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದು ಹೋಗಿದೆ. ಅಸಂಖ್ಯಾತ ಮಕ್ಕಳ ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ. ಸರಕಾರ ಶಾಲಾ ಕಾಲೇಜುಗಳನ್ನು ಆರಂಭಿಸುವ ಕುರಿತು ಸರಿಯಾದ ನಿಲುವುಗಳನ್ನು ತಾಳುತ್ತಿಲ್ಲ.
ಈಗ ಎಸ್‌ಎಸ್‌ಎಲ್‌ಸಿ ಯಲ್ಲಿರುವ ಮತ್ತು ಪ್ರಥಮ ಪಿಯುಸಿ ಪಾಸಾಗಲಿರುವ ವಿದ್ಯಾರ್ಥಿಗಳಿಗೆ ಕಳೆದ ಬಾರಿಯೂ ಪರೀಕ್ಷೆಗಳು ಸರಿಯಾಗಿ ನಡೆದಿರಲಿಲ್ಲ.
ಮುಂದಿನ ವರ್ಷದ ಇವರ ಭವಿಷ್ಯದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಯಾವುದೇ ಪೂರ್ವ ಯೋಜನೆಯೂ ಇಲ್ಲದ ಕಾರಣ ದ್ಯಾರ್ಥಿಗಳಷ್ಟೇ ಅಲ್ಲದೆ, ಶಿಕ್ಷಕರು, ಶಾಲಾ ಆಡಳಿತ ವರ್ಗ ಹಾಗೂ ಪೋಷಕರು ಸಾಕಷ್ಟು ಒತ್ತಡಕ್ಕೆ ಒಳಗಾಗುವಂತಾಗಿದೆ. ಈ ಎಲ್ಲಾ ಗೊಂದಲಗಳ ನಡುವೆ ಖಾಸಗಿ ಶಿಕ್ಷಣ ಸಂಸ್ಥೆಗಳ ಫೀಸ್ ಟಾರ್ಚರ್ ಆರಂಭವಾಗಿರುವುದು ಪೋಷಕರ ಪಾಲಿಗೆ ನುಂಗಲಾರದ ತುತ್ತಾಗಿದೆ. ಶುಲ್ಕ ಭರಿಸಲಾಗದ ಪೋಷಕರಿಗೆ ಖಾಸಗಿ ಬ್ಯಾಂಕುಗಳ
ಸಹಯೋಗದೊಂದಿಗೆ ಸಾಲ ಯೋಜನೆಗಳನ್ನು ಪ್ರಸ್ತಾಪಿಸುತ್ತಿರುವ ಖಾಸಗಿ ಶಾಲೆಗಳ ವರ್ತನೆ ನಿಜಕ್ಕೂ ಅಮಾನವೀಯ.
ಹೀಗೆ ಶಾಲೆಗಳ ಒತ್ತಡಕ್ಕೆ ಮಣಿದು ದಾಖಲಾತಿ ಮಾಡಲೇಬೇಕಾದ ಒತ್ತಡವಿದ್ದರೂ ಮೂರನೇ ಅಲೆಯಲ್ಲಿ ಮಕ್ಕಳೇ ಸೋಂಕಿತರಾಗುವ ಸಾಧ್ಯತೆ ಅಧಿಕ ಎಂದು
ಈಗಾಗಲೇ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಪೋಷಕರನ್ನ ಹೈರಾಣಾಗಿಸಿವೆ. ಹೀಗಿರುವಾಗ ಈ ವರ್ಷವೂ ವಿದ್ಯಾರ್ಥಿಗಳ ಪಾಲಿಗೆ ತಿಳಿವಿನ ಬಾಗಿಲು ಮುಚ್ಚಲಿವೆಯೇ? ಎಂಬ ಪ್ರಶ್ನೆಗೆ ಉತ್ತರಿಸುವವರಾರು?. ಪದೇ ಪದೆ ಆಗಿರುವ ಲಾಕ್ ಡೌನ್‌ನಿಂದಾಗಿ ಆರ್ಥಿಕವಾಗಿ ಕುಸಿದು ಹೋಗಿರುವ
ಕುಟುಂಬಗಳು ಶುಲ್ಕ ಪಾವತಿಸುವ ಸ್ಥಿತಿಯಲ್ಲೂ ಇಲ್ಲ. ಈಗಾಗಲೇ ಬಾಲಕಾರ್ಮಿಕರ ಸಂಖ್ಯೆ ಅಧಿಕವಾಗಿರುವುದು, ಹೆಣ್ಣುಮಕ್ಕಳು ಹಿಂದೆಂದಿಗಿಂತಲೂ
ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಿರುವುದು ಶಿಕ್ಷಣದಲ್ಲಿ ಶಾಶ್ವತವಾದ ಅಸಮಾನತೆಯನ್ನು ಸೃಷ್ಟಿಸಲು ಪುಷ್ಟಿ ನೀಡಿವೆ.
ಗ್ರಾಮೀಣ ಅಥವಾ ಗುಡ್ಡಗಾಡು ಪ್ರದೇಶದಲ್ಲಿರುವ ಅವರ ಸಾಮಾಜಿಕ ಸ್ಥಿತಿಯನ್ನು ಗಣನೆಗೆ ತೆಗದುಕೊಂಡು ವಿವೇಚಿಸಿದರೆ ಆನ್ ಲೈನ್ ಶಿಕ್ಷಣದ ಜಾರಿಯೂ
ತಳಸಮುದಾಯದ ಮತ್ತು ಸೌಲಭ್ಯ ಇರದಂಥ ಪಾಲಕರ ಮಕ್ಕಳು, ಕರೋನಾದಿಂದ ಅನಾಥರಾದ ಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗುವ
ಸಾಧ್ಯತೆಯಿದೆ. ಇದು ಭವಿಷ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತಂತೆ ಯಾರೂ ಚರ್ಚಿಸುತ್ತಿಲ್ಲ. ಜುಲೈ೧ರಿಂದ ಮುಂದಿನ ಶೈಕ್ಷಣಿಕ ವರ್ಷದ ಆರಂಭವಾಗಲಿದೆ ಎನ್ನುವ ಸರಕಾರ ಈ ಬಾರಿಯೂ ಆನ್‌ಲೈನ್ ಶಿಕ್ಷಣವೇ ಮುಂದುವರಿಯಲಿದೆ ಎಂದಿದೆ.
ಆದರೆ ಅದಕ್ಕಾಗಿ ಎಷ್ಟು ಸಿದ್ಧವಾಗಿದೆ? ಕಳೆದ ಕಳೆದ ವರ್ಷ ಆಗಿರುವ ಶಿಕ್ಷಣದ ವೈಫಲ್ಯಗಳಿಂದ ಎಷ್ಟರಮಟ್ಟಿಗೆ ಪಾಠ ಕಲಿತಿದೆ ಎಂಬುದು ಮಾತ್ರ ಇನ್ನೂ ಉತ್ತರಸಿಗದ ಪ್ರಶ್ನೆಗಳಾಗಿವೆ. ಕರೋನಾದಂಥ ಸಂದಿಗ್ಧತೆಯನ್ನು ಸರಿಯಾಗಿ ಬಳಸಿಕೊಂಡಿದ್ದರೆ ಸರಕಾರಿ ಶಾಲೆಗಳಿಗೆ ಉತ್ತಮ ಕಾಯಕಲ್ಪ ಕಲ್ಪಿಸಬಹುದಿತ್ತು. ಆರ್ಥಿಕ ಬಿಕ್ಕಟ್ಟಿನಿಂದ ನೊಂದ ಪೋಷಕರನೇಕರು ಖಾಸಗಿ ಶಾಲೆಗಳ ಶುಲ್ಕ ಭರಿಸಲಾಗದೆ ಕಳೆದ ವರ್ಷವೇ ಸರಕಾರಿ ಶಾಲೆಗಳತ್ತ ಮುಖ ಮಾಡಿದ್ದರು. ಪೋಷಕರದ ಈ ಬದಲಾವಣೆಯನ್ನು ಶಿಕ್ಷಣ ಇಲಾಖೆ, ಸರಕಾರ ಸಮರ್ಪಕವಾಗಿ ಬಳಸಿಕೊಳ್ಳದೆ ವಿಫಲವಾಗಿದೆ.
ರಾಜ್ಯದ ಬಹುತೇಕ ಖಾಸಗಿ ಶಾಲೆಗಳು ಶುಲ್ಕ ವಸೂಲಿ ಮಾಡುವ ಉದ್ದೇಶದಿಂದ ಮಾತ್ರ ಆನ್ ಲೈನ್ ಶಿಕ್ಷಣವನ್ನು ಜಾರಿಯಲ್ಲಿರಿಸಿದ್ದವು. ಆನ್‌ಲೈನ್ ತರಗತಿಗಳನ್ನು ಕುರಿತ ಯಾವುದೇ ಪೂರ್ವಸಿದ್ಧತೆ ವಿದ್ಯಾರ್ಥಿಗಳಿಗಾಗಲೀ ಶಿಕ್ಷಕರಿಗಾಗಲೀ ಇರಲಿಲ್ಲ. ಸರಕಾರಿ ಶಾಲೆಗಳಲ್ಲಿ ಆನ್ ಲೈನ್ ಶಿಕ್ಷಣ ನೀಡುವ
ಯಾವುದೇ ವ್ಯವಸ್ಥೆ ಇದ್ದಿರಲಿಲ್ಲ. ಮತ್ತು ಸರಕಾರಿ ಶಾಲೆಗಳ ಶಿಕ್ಷಕರು ಬಹುತೇಕರನ್ನ ಕೋವಿಡ್ ಕೆಲಸಕ್ಕಾಗಿ ಸರಕಾರ ಬಳಸಿಕೊಂಡಿತ್ತು. ಹಾಗಾಗಿ ಕಳೆದ
ವರ್ಷ ಆನ್‌ಲೈನ್ ಶಿಕ್ಷಣದಿಂದ ಅತಿಹೆಚ್ಚು ವಂಚಿತರಾದವರು ಸರಕಾರಿ ಶಾಲೆಗಳ ವಿದ್ಯಾರ್ಥಿಗಳೇ, ಇದರಿಂದ ಶೈಕ್ಷಣಿಕವಾಗಿ ಮೇಲುಗೈ ಸಾಽಸುತ್ತಿದ್ದ
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹತಾಶೆ, ಖಿನ್ನತೆ ಉಂಟಾಗಿದ್ದು ಅಲ್ಲದೆ ಅದು ಆತ್ಮಹತ್ಯೆಯ ಹಂತವನ್ನ ತಲುಪಿರುವುದು ಸುಳ್ಳಲ್ಲ.
ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಶಿಕ್ಷಕ ವರ್ಗವೂ ಕೂಡ ಕಳೆದ ವರ್ಷ ಆನ್‌ಲೈನ್ ಬೋಧನೆಯಿಂದ ಅನೇಕ ಸಮಸ್ಯೆ- ಸವಾಲುಗಳನ್ನು ಎದುರಿಸಿರುವುದುಂಟು. ಕೆಲವು ಶಿಕ್ಷಕರು ಉದ್ಯೊಗ ವಂಚಿತರಾದರೆ ಮತ್ತೆ ಕೆಲವರು ಅರ್ಧ ಸಂಬಳಕ್ಕೆ ದುಡಿದಿದ್ದಾರೆ. ಕಳೆದ ಬಾರಿಯ ಪ್ಯಾಕೇಜ್‌ನಲ್ಲಿ
ಖಾಸಗಿ ಶಿಕ್ಷಕರನ್ನು ಸರಕಾರ ಮರೆತಿತ್ತು. ಅದನ್ನೆ ಮೀರಿಯೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್‌ಲೈನ್‌ನಲ್ಲಿ ತರಗತಿಗಳನ್ನು ತೆಗೆದುಕೊಂಡಾಗಲೂ
ಕೆಲವು ಕಿಡಿಗೇಡಿಗಳು ನೀಲಿಚಿತ್ರ ಪ್ರದರ್ಶಿಸಿ, ಅಸಭ್ಯವಾಗಿ ವರ್ತಿಸಿದ್ದು ಶಿಕ್ಷಕರ ಆತ್ಮಸ್ಥೈರ್ಯವನ್ನು ಕುಗ್ಗಿಸಿದ್ದವು. ಈ ದುಷ್ಪರಿಣಾಮವನ್ನು ಸರಕಾರ
ವಾಗಲೀ, ಶಿಕ್ಷಣ ಸಂಸ್ಥೆಗಳಾಗಲಿ, ಶಿಕ್ಷಣತಜ್ಞರಾಗಲೀ ಗಂಭೀರವಾಗಿ ತೆಗೆದುಕೊಂಡಂತಿಲ್ಲ.
ಕಳೆದ ವರ್ಷ ಶಿಕ್ಷಣ ಕ್ಷೇತ್ರದ ಮೇಲೆ ಮತ್ತು ಕರೋನಾ ಬೀರಿದ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ
ಸರಕಾರ ಯಾವ ರೀತಿ ಸಿದ್ಧತೆ ಮಾಡಿಕೊಂಡಿದೆ? ಕನಿಷ್ಠ ಸಾಮಾಜಿಕ ಅಂತರ ಕಾಪಾಡಿಕೊಂಡು ಶಾಲೆಗಳನ್ನು ಆರಂಭಿಸುವ ಉದ್ದೇಶವಂತೂ ಖಂಡಿತ
ಸರಕಾರ ಹೊಂದಿಲ್ಲ. ಹಾಗಾದರೆ ಕಳೆದ ವರ್ಷ ನೆಟ್ವರ್ಕ್, ಇಂಟರ್ನೆಟ್, ಮೊಬೈಲ್, ಲ್ಯಾಪ್‌ಟಾಪ್ ಸೌಲಭ್ಯ ಇಲ್ಲದೆ ಶಿಕ್ಷಣ ವಂಚಿತರಾದ ಮತ್ತು ಅನೇಕ
ಸಮಸ್ಯೆ ಸವಾಲುಗಳನ್ನು ಎದುರಿಸಿದ ಬೋಧಕರ ಸಮಸ್ಯೆಗಳನ್ನು ಕುರಿತು ಸರಕಾರ ಕನಿಷ್ಠ ಸಮೀಕ್ಷೆಯನ್ನೂ ಕೈಗೊಳ್ಳದೆ ಶಾಲಾ ಕಾಲೇಜುಗಳನ್ನು
ಆರಂಭಿಸಲು ಮುಂದಾಗಿರುವುದು ಎಷ್ಟು ಸರಿ?.
ಸೌಲಭ್ಯ ವಂಚಿತರಾದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿ ಗಳನ್ನು ಗುರುತಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವುದು ಸರಕಾರದ ಕರ್ತವ್ಯವಲ್ಲದೆ
ಶಿಕ್ಷಣ ನಮ್ಮ ಮೂಲಭೂತ ಅಗತ್ಯವಾಗಿದೆ. ಆನ್ ಲೈನ್ ಶಿಕ್ಷಣದ ಹೆಸರಲ್ಲಿ ಕೆಲವರಿಗೆ ಮಾತ್ರ ಶಿಕ್ಷಣ ನೀಡಿ ಇನ್ನೊಂದು ವರ್ಗವನ್ನು ವಂಚಿತ ರನ್ನಾಗಿಸಿರುವುದು ಸರಿಯಲ್ಲ. ಅಂತೆಯೇ ಭವಿಷ್ಯದಲ್ಲಿ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಗಲೂ ಬಹುದು. ಸರಕಾರ ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಳ್ಳಬೇಕು.
ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಕಡಿವಾಣ ಹಾಕಿ ಸರಕಾರವು ವಿದ್ಯಾರ್ಥಿಗಳು ಮತ್ತು ಪೋಷಕರ ಪರ ನಿಲ್ಲುವಂತಾಗಬೇಕು. ಸಂಕಷ್ಟದಲ್ಲಿರುವ ಶಿಕ್ಷಕರ ಪಾಲಿಗೆ ನೆರವಾಗಬೇಕು. ಮತ್ತು ಶಾಲಾ ಕಾಲೇಜುಗಳ ಆರಂಭ ಕುರಿತು ನಿರ್ಣಯಿಸುವಾಗ ಸ್ಥಳೀಯ ಪರಿಸ್ಥಿತಿ ಮತ್ತು ಸಮುದಾಯದ ಗ್ರಹಿಕೆಗಳು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬಾರದು. ಏಕೆಂದರೆ ಇಂದಿನ ಮಕ್ಕಳೇ ನಾಳಿನ ಭವಿಷ್ಯ. ಈಗಿನ ಪರಿಸ್ಥಿತಿ ನೋಡಿದರೆ ಇನ್ನೂ ಪರಿಸ್ಥಿತಿ ಕೈಮೀರಿಲ್ಲ. ಸರಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಊರೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಬಹುದು.