Saturday, 23rd November 2024

ಷೇರುಪೇಟೆ ವಹಿವಾಟು ಅಂತ್ಯ: ಸೆನ್ಸೆಕ್ಸ್‌ 226 ಪಾಯಿಂಟ್ಸ್‌ ಏರಿಕೆ

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆಯು ಶುಕ್ರವಾರಸಕಾರಾತ್ಮಕವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 226 ಪಾಯಿಂಟ್ಸ್‌ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 70 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 226.04 ಪಾಯಿಂಟ್ಸ್ ಏರಿಕೆಗೊಂಡು 52925.04ರಷ್ಟು ಹಾಗೂ ನ್‌ಎಸ್‌ಇ ಸೂಚ್ಯಂಕ 70 ಪಾಯಿಂಟ್ಸ್‌ ಹೆಚ್ಚಾಗಿ 15860.40 ಮುಟ್ಟಿದೆ.

ಟಾಟಾ ಸ್ಟೀಲ್, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಹಿಂಡಾಲ್ಕೊ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿವೆ. ಬಿಎಸ್‌ಇ ಮಿಡ್‌ ಕ್ಯಾಪ್ ಸೂಚ್ಯಂಕವು ಶೇಕಡಾ 1ರಷ್ಟು ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.4ರಷ್ಟು ಏರಿಕೆಯಾಗಿದೆ.