Friday, 13th December 2024

ಹಸುರಿನೊಂದಿಗೆ ಮನ ಬೆಸೆಯಲಿ

ಅಭಿಮತ

ಭಾರತಿ ಎ ಕೊಪ್ಪ

ಹಸುರುಟ್ಟ ಗಿಡಮರಗಳ ನಡುವೆ ಕಿರಿದಾದ ಕಾಲುದಾರಿಯಲ್ಲಿ ಸಾಗುತ್ತಾ, ಪುಟ್ಟ ಝರಿ ತೊರೆಗಳಲ್ಲಿ ಆಟವಾಡುತ್ತಾ ಶಾಲೆಯನ್ನು ತಲುಪುತ್ತಿದ್ದ ಪರಿಸರದೊಂದಿ ಗಿನ ಬಾಂಧವ್ಯದ ನಡಿಗೆಯು ಸುಮಾರು 70-80ರ ದಶಕದಲ್ಲಿ ಶಾಲಾ ಕಾಲೇಜುಗಳಲ್ಲಿ ಓದಿದವರಿಗೆ ಸಹಜವಾಗಿತ್ತು.

ನಿಸರ್ಗದ ಮಡಿಲಿನಲ್ಲಿ ಪ್ರಕೃತಿಯನ್ನು ಆಸ್ವಾದಿಸುತ್ತಾ ಬೆಳೆದಿದ್ದ ಅಂದಿನ ಮಕ್ಕಳಲ್ಲಿ ಪರಿಸರ ಪ್ರೀತಿ, ಪರಿಸರದೊಂದಿಗಿನ ನಂಟು, ನಾಲ್ಕು ಗೋಡೆಗಳ ಮಧ್ಯೆಯ ತರಗತಿಯ ಕಲಿಕೆಯನ್ನೂ ಮೀರಿಸುವಂತ ಹದ್ದು. ಪರಿಸರದೊಂದಿಗಿನ ಒಡನಾಟದಲ್ಲಿ ಪ್ರತಿ ಜೀವಿಯೂ ಮಕ್ಕಳಿಗೆ ಪರಿಚಿತ ಮತ್ತು ಅವುಗಳೊಂದಿಗೆ ಅಗೋಚರ ಸ್ನೇಹದ ಬೆಸುಗೆಯು ಇದ್ದಿತು. ಬದಲಾದ ಕಾಲಘಟ್ಟದಲ್ಲಿ ನಗರೀಕರಣದತ್ತ ದಾಪುಗಾಲು ಹಾಕುತ್ತಾ ನಾಗಾಲೋಟದಲ್ಲಿ ಮುನ್ನುಗ್ಗುವ ಧಾವಂತದಲ್ಲಿ ಪರಿಸರದ ಹಸಿರನ್ನೇ ಉಸಿರಾಗಿಸಿಕೊಂಡು ಬೆಳೆಯುವ ಬದಲು, ಪುಟಾಣಿಗಳು ಕಾಂಕ್ರೀಟ್ ಕಾಡಿನೊಳಗೆ ಬೆಳೆಯುವಂತಾಗಿದೆ.

ಅಂದು ನಿತ್ಯವೂ ಪರಿಸರ ದಿನವೆಂಬತ್ತಿದ್ದ ಸಂಭ್ರಮವು ಬದಲಾಗಿ, ಪರಿಸರದ ಉಳಿವಿನ ದಿನ, ವಿಶ್ವ ಪರಿಸರ ದಿನಕ್ಕಷ್ಟೇ ಸೀಮಿತವಾಗುತ್ತಾ ಬಂದಿತು. ಭೂರಮೆಯು ಹಸಿರಿನಿಂದ ಶೋಭಿತಳಾಗಿ, ನಮ್ಮೆಲ್ಲ ರಿಗೆ ಜೀವ ಸಂಜೀವಿನಿಯಾದ ಆಕ್ಸಿಜನ್, ಶುದ್ಧಗಾಳಿ, ಹಣ್ಣು ಹಂಪಲುಗಳ ಆಗರವೇ ಬೆಳೆಯಲಿ ಎಂಬ ಮಹದಾಶಯದಿಂದ ಗಿಡ ನೆಟ್ಟು ಸಲಹುವ ದೀಕ್ಷೆಯನ್ನು ನಾವು ತೊಡಬೇಕಿದೆ. ಪರಿಸರ ಕಾಳಜಿಯ ಪ್ರತಿಫಲವನ್ನು ಸುದೀರ್ಘವಾಗಿ ಉಳಿಸಲು ಎಳೆಯ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವುದು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯ ಮತ್ತು ಅನಿವಾರ್ಯವಾಗಿದೆ.

ಕಾಂಕ್ರೀಟ್ ಮನೆಗಳ ಇರುವಂತಾಗಿ, ಮನೆಯಿಂದ ಹೆಜ್ಜೆ ಹೊರಗಿಟ್ಟಾಗ ಶಾಲಾ ಬಸ್, ಶಾಲಾ ಆಟೋಗಳನ್ನು ಹತ್ತಿ ಶಾಲೆಗೆ ಹೋಗಿ, ಮತ್ತೆ ಶಾಲೆ ಎಂಬ ನಾಲ್ಕು ಗೋಡೆಗಳ ನಡುವೆ ಕುಳಿತು ಯಾಂತ್ರಿಕವಾಗಿ ಪಾಠ ಕಲಿಯುವ ಇಂದಿನ ಮಕ್ಕಳಲ್ಲಿ ಪರಿಸರದೊಂದಿಗಿನ ಅವಿನಾಭಾವ ಸಂಬಂಧವು ಮರೆಯಾಗುತ್ತಿದೆ.  ಗ್ರಾಮೀಣ ಭಾಗದ ಮಕ್ಕಳು ಕೂಡ ಆಧುನಿಕತೆಯ ಓಟದಲ್ಲಿ ಪರಿಸರದ ಜತೆ ಬೆಳೆಯುತ್ತಿರುವ ಸನ್ನಿವೇಶಗಳು ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಪರಿಸರದ ಒಡನಾಟವು ಆವಿರ್ಭವಿಸಲು ಪರಿಸರ ಪ್ರೀತಿಯನ್ನು ಬೆಳೆಸಬೇಕಿದೆ. ಶಾಲಾ – ಕಾಲೇಜುಗಳಲ್ಲಿ ಅಥವಾ ಮನೆಯಂಗಳದಲ್ಲಿ ಪ್ರತಿ ಮಗುವೂ ವರ್ಷಕ್ಕೆ ಒಂದಾ ದರೂ ಒಂದು ಗಿಡ ನೆಡುವಂತಾಗಬೇಕು.ನೆಟ್ಟ ಗಿಡದ ರಕ್ಷಣೆಯ ಜವಾಬ್ದಾರಿಯನ್ನೂ ಕೂಡ ಆ ಮಗುವಿಗೆ ಕೊಟ್ಟರೆ, ಖಂಡಿತವಾಗಿಯೂ ಆ ಮಗುವು ಒಬ್ಬ ತಾಯಿಯು ತನ್ನ ಮಗುವನ್ನು ಕಾಪಾಡುವಂತೆಯೇ, ಸದಾ ಜತನದಿಂದ ತಾನು ನೆಟ್ಟ ಗಿಡವನ್ನು ಕಾಪಾಡುತ್ತದೆ.

ಆ ಗಿಡದ ಆರೈಕೆ, ಅದರ ಬೆಳವಣಿಗೆಯನ್ನು ನೋಡುತ್ತಾ ಸಂತಸಪಡುತ್ತದೆ. ಜತೆಗೆ ಒಂದಿನಿತು ನೈಜ ಶಿಕ್ಷಣವನ್ನೂ ಸಸ್ಯದ ಬೆಳವಣಿಗೆಯ ಪ್ರತಿ ಹಂತ ದಲ್ಲಿಯೂ ಕೂಡ ಆ ಮಗುವು ಪಡೆಯುತ್ತದೆ. ಪ್ರತಿ ಮಗುವೂ 1ನೇ ತರಗತಿಯಿಂದ ಕನಿಷ್ಠ ದ್ವಿತೀಯ ಪಿ.ಯು.ಸಿ ವರೆಗೆ ವರ್ಷಕ್ಕೆ ಒಂದು ಗಿಡ ನೆಟ್ಟರೆ 12 ಗಿಡಗಳು ಆ ಮಗು ವಿನ ಆಸ್ತಿಯಾದಂತಾಯ್ತಲ್ಲವೇ !? ಅದಲ್ಲದೆ ತನ್ನ ಹುಟ್ಟುಹಬ್ಬಕ್ಕೆ ಒಂದೊಂದು ಗಿಡ ನೆಡುತ್ತಾ ಬಂದರೆ ಆತನನ್ನು ಒಬ್ಬ ನೈಜ ಪರಿಸರ ರಕ್ಷಕ,ಪರಿಸರ ಪ್ರೇಮಿಯ ನ್ನಾಗಿ ಮಾಡಿದ ಹೆಮ್ಮೆ ಹಿರಿಯರಿಗೆ ಸಲ್ಲುತ್ತದೆ.ಮನೆಯಂಗಳದಲ್ಲಿ ಬೆಳೆಯಬಹುದಾದ ಕಡಿಮೆ ಎತ್ತರಕ್ಕೆ ಬೆಳೆಯುವ ಹಣ್ಣಿನ ಗಿಡಗಳು, ಹೂವಿನ ಗಿಡಗಳು ಜತೆಗೆ ಶಾಲೆಯಂಗಳವೋ ಅಥವಾ ಊರ ಬಯಲಿನ ತುದಿಯ ತರಹೇವಾರಿ ಗಿಡಗಳನ್ನು ನೆಟ್ಟು, ಅದರ ಆರೈಕೆಯ ಜವಾಬ್ದಾರಿಯನ್ನು ಹಿರಿಯರು ಮಕ್ಕಳಿಗೆ ಕಲಿಸಿ ಕೊಡಬೇಕಿದೆ.

ಹಸಿರು ಕಾನನದ ನಾಶದಿಂದ ಹಲವಾರು ದುಷ್ಪರಿಣಾಮಗಳನ್ನು ಎದುರಿಸಿದಂಥ ನಾವು, ಇದೀಗ ಎಚ್ಚೆತ್ತುಕೊಳ್ಳುವಂತಾಗಿದೆ.ಪ್ರಮುಖವಾಗಿ ಭಾರತದಲ್ಲಿ ಅರಣ್ಯ
ರಕ್ಷಣೆಯ ಬಗ್ಗೆ ಒಂದಿನಿತು ಕಾಳಜಿ ಮೂಡುತ್ತಿದೆ ಎಂಬುದು ಗಮನಾರ್ಹ ವಿಚಾರ. ಭಾರತೀಯ ಅರಣ್ಯ ಸರ್ವೇ – 2019ರ ಅರಣ್ಯಗಳ ಸ್ಥಿತಿಗತಿಗಳ ವರದಿ ಯಲ್ಲಿ 2017ರ ಸ್ಥಿತಿಗತಿಗಿಂತ ಭಾರತದಲ್ಲಿ ಎರಡು ವರ್ಷಗಳಲ್ಲಿ 5188 ಚದರ ಕಿಲೋ ಮೀಟರ್‌ನಷ್ಟು ಅರಣ್ಯ ವೃದ್ಧಿಯಾಗಿದೆ’ ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಅತಿ ಹೆಚ್ಚು ಅರಣ್ಯ ವೃದ್ಧಿಯಾದ ಹೆಗ್ಗಳಿಕೆ ನಮ್ಮ ಕರ್ನಾಟಕಕ್ಕೆ ಸಲ್ಲುತ್ತದೆ ಎಂಬುದು ಹೆಮ್ಮೆ ಪಡುವ ಸಂಗತಿ.

2017ರಲ್ಲಿ ನಮ್ಮ ಕರ್ನಾಟಕದಲ್ಲಿ ಅರಣ್ಯದ ವ್ಯಾಪ್ತಿ ಪ್ರಮಾಣ 37,550 ಚದರ ಕಿಲೋಮೀಟರ್ ಇತ್ತು, 2019ರಲ್ಲಿ ಕರ್ನಾಟಕದ ಅರಣ್ಯ ವ್ಯಾಪ್ತಿಯು 38,575 ಚದರ ಕಿಲೋಮೀಟರ್ ಆಗಿದೆ. ಅಂದರೆ ಈ ಎರಡು ವರ್ಷಗಳಲ್ಲಿ ರಾಜ್ಯದ ವನ ವಿಸ್ತೀರ್ಣ 1025 ಚದರ ಕಿಲೋ ಮೀಟರ್ ನಷ್ಟು ಹೆಚ್ಚಾಗಿದ್ದು, ಇತರ ರಾಜ್ಯಗಳಿಗಿಂತ ವನ ವಿಸ್ತರಣೆ ಕರ್ನಾಟಕದಲ್ಲಿ ಅಽಕ ಎಂಬುದು ವರದಿಯಲ್ಲಿ ವ್ಯಕ್ತವಾಗಿದೆ.