Wednesday, 11th December 2024

ತೆಳು ಆಲೂ ಬಿಸ್ಕತ್‍ಗಳನ್ನು ‘ಸನ್‍ಫೀಸ್ಟ್ ಆಲ್‍ -ರೌಂಡರ್’ ಆಗಿ ಪರಿಚಯಿಸುತ್ತಿದೆ ITC Ltd

ವೇಫರಿನಂತೆ ಬೇಕ್ ಮಾಡಿ ತಯಾರಿಸಲಾದ, ಕ್ರ್ಯಾಕರ್ ತರ ಕ್ರಂಚಿಯಾಗಿರುವ ಹಗುರ ಆಲೂ ಬಿಸ್ಕತ್‍ 

ನವದೆಹಲಿ: ಭಾರತದಲ್ಲಿ ಬಿಸ್ಕತ್‍ ಮತ್ತು ಕೇಕ್‍ಗಳ ಬ್ರ್ಯಾಂಡ್‍ಗಳ ಪೈಕಿ ಅತ್ಯಂತ ಬೇಡಿಕೆಯ ಬ್ರ್ಯಾಂಡ್ ITC Ltd.’s Sunfeast. ಇದು ಬಿಸ್ಕತ್ ಮಾರುಕಟ್ಟೆಗೆ ಹೊಚ್ಚ ಹೊಸ ಅನುಭವ ನೀಡುವಂತಹ ಸನ್‍ಫೀಸ್ಟ್ ಆಲ್‍ರೌಂಡರ್ ಅನ್ನು ಪರಿಚಯಿಸಿದೆ. ಸನ್‍ಫೀಸ್ಟ್ ಆಲ್‍-ರೌಂಡರ್ ಒಂದು ಅತ್ಯಾಕರ್ಷಕ ಹೊಸ ಆಲೂ ಬಿಸ್ಕತ್‍ ಆಗಿದ್ದು, ಅದರ ಮೇಲೆ ಮಸಾಲಾ ಚಿಮುಕಿಸಲಾಗಿದೆ. ಕ್ರಂಚಿಯಾಗಿರುವ ಈ ಬಿಸ್ಕತ್‍ ಭಾರತದಲ್ಲಿ ಇದುವರೆಗೆ ತಯಾರಿಸಲಾಗಿರುವ ಅತ್ಯಂತ ತೆಳುವಾದುದಾಗಿದೆ. ಈ ಸನ್‍ಫೀಸ್ಟ್ ಆಲ್‍-ರೌಂಡರ್. 6,000 ಕೋಟಿ ಮೌಲ್ಯದ ಕ್ರ್ಯಾಕರ್‍ ಬಿಸ್ಕತ್‍ ಕೆಟಗರಿಯಲ್ಲಿ ಹೊಸ ಕ್ರಾಂತಿಕಾರಿ ಅನುಭವವನ್ನು ಈ ಬಿಸ್ಕತ್ ಮೂಲಕ ನೀಡಿದೆ. ಬಿಸ್ಕತ್‍ನ ತಳಭಾಗದಲ್ಲಿ ಆಲೂವನ್ನು ಸೇರ್ಪಡೆಗೊಳಿಸಿರುವುದು ಇಂಥದ್ದೊಂದು ಅನುಭವದ ಭರವಸೆ ಹುಟ್ಟಿಸಿದೆ.

ಸನ್‍ಫೀಸ್ಟ್ ಆಲ್‍-ರೌಂಡರ್ ಒಂದು ಹೊಸ ಮಾದರಿಯ ಬಿಸ್ಕತ್‍ ಆಗಿದ್ದು, ಕ್ರ್ಯಾಕರ್‍ ಬಿಸ್ಕತ್‍ ಕೆಟಗರಿಯಲ್ಲಿ ಸಂಚಲನ ಮೂಡಿಸುವುದಕ್ಕೆ ಸಜ್ಜಾಗಿದೆ. ಲಭ್ಯ ಗ್ರಾಹಕ ಒಳನೋಟದ ಪ್ರಕಾರ, ಗೃಹಿಣಿಯರು ಮತ್ತು ಕೆಟಗರಿ ಗ್ರಾಹಕರು ಸ್ನ್ಯಾಕ್ ವಿಚಾರಕ್ಕೆ ಬಂದರೆ ಸಹಜವಾಗಿ ಖಾರ ಮತ್ತು ಮಸಾಲಾ ರುಚಿಗೆ ಮರುಳಾಗು ತ್ತಾರೆ. ಆದ್ದರಿಂದ, ಈ ಗ್ರಾಹಕರ ವಿಭಾಗದಲ್ಲಿ ಕ್ರ್ಯಾಕರ್ ಬಿಸ್ಕತ್‍ಗಳು ಪ್ರತಿನಿತ್ಯದ ಬಳಕೆಯಲ್ಲಿ ಆದ್ಯತೆಯನ್ನು ಪಡೆದುಕೊಂಡಿದೆ. ಸನ್‍ಫೀಸ್ಟ್ ಆಲ್‍ ರೌಂಡರಿನ ತೆಳು ಮತ್ತು ಕ್ರಂಚಿಯಾಗಿರುವ ಬಿಸ್ಕತ್‍ ಎಲ್ಲ ಕಾಲಕ್ಕೂ ತಿನ್ನಬಹುದಾದ ಸಾರ್ವಕಾಲಿಕ ಸ್ನ್ಯಾಕ್ ಆಗಿದೆ. ತಳದಲ್ಲಿರುವ ಆಲೂ ಈ ಬಿಸ್ಕತ್‍ಗೆ ವಿಶಿಷ್ಟತೆಯನ್ನು ನೀಡಿದೆ. ಬಿಸ್ಕತ್ತಿನ ಮೇಲೆ ಮಸಾಲಾ ಚಿಮುಕಿಸಿರುವ ಕಾರಣ, ಅದರ ಸುವಾಸನೆ ಮತ್ತು ಚಟ್‍ಪಟಾ ರುಚಿ ಗ್ರಾಹಕರಿಗೆ ಪ್ರತಿ ತುತ್ತಿನ ನಂತರವೂ ದೀರ್ಘಕಾಲ ಉಳಿದಿರುತ್ತದೆ.

ಸನ್‍ಫೀಸ್ಟ್ ಆಲ್‍-ರೌಂಡರ್ ಬಿಸ್ಕತ್ತಿನ ಬಿಡುಗಡೆ ಸಂದರ್ಭದಲ್ಲಿ ITC Limited ಬಿಸ್ಕತ್ಸ್ & ಕೇಕ್ಸ್ ಕ್ಲಸ್ಟರ್ ಚೀಫ್ ಆಪರೇಟಿಂಗ್ ಆಫೀಸರ್ ಶ್ರೀ ಅಲಿ ಹ್ಯಾರಿಸ್ ಶೇರೆ ಮಾತನಾಡಿ, “ನಮ್ಮ ಪೋರ್ಟ್ಫೋಲಿಯೋದ ಯಶಸ್ಸಿಗಾಗಿ ಸಂಚಲನ ಮೂಡಿಸುವ ನವೋನ್ವೇಷಣೆಗಾಗಿ ನಮ್ಮದೇ ನಿರ್ದಿಷ್ಟ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಕೆಲಸವನ್ನು ಮುಂದುವರಿಸಿದ್ದೇವೆ. ಡಾರ್ಕ್ ಫ್ಯಾಂಟಸಿ, ಫಾರ್ಮ್‍ಲೈಟ್ ನಟ್ಸ್ ಮತ್ತು ವೇದಾ ಡೈಜೆಸ್ಟಿವ್, ಸನ್‍ಫೀಸ್ಟ್ ಕೇಕರ್ & ಇನ್ನೂ ಅನೇಕವು ನವೋನ್ವೇಷಣೆಯ ಉತ್ಪನ್ನಗಳ ಪಟ್ಟಿಯಲ್ಲಿವೆ. ಇದಕ್ಕೆ ಸನ್‍ಫೀಸ್ಟ್ ಆಲ್‍ ರೌಂಡರ್ ಸೇರ್ಪಡೆಯಾಗಿದ್ದು, ಕ್ರ್ಯಾಕರ್‍ ಮಾದರಿಯಲ್ಲಿ ಪ್ರೀಮಿಯಂ ಕೊಡುಗೆಯಾಗಿ ಗ್ರಾಹಕರನ್ನು ತಲುಪುವ ಉದ್ದೇಶ ಹೊಂದಿದೆ. ಬಿಸ್ಕತ್‍ ಕೆಟಗರಿಯಲ್ಲಿ ಕ್ರ್ಯಾಕರ್‍ ವಿಭಾಗದ್ದೇ ಬಹುಪಾಲು.

ಹೀಗಾಗಿ ನಮ್ಮ ಪೋರ್ಟ್ಫೋಲಿಯೋವನ್ನು ಮತ್ತಷ್ಟು ಬಲಪಡಿಸಲು ಮತ್ತು ಟ್ರೆಂಡ್ ಸೆಟ್ಟಿಂಗ್ ಮತ್ತು ಸಂತೋಷಕರ ಕೊಡುಗೆಯನ್ನು ಗ್ರಾಹಕರಿಗೆ ಒದಗಿಸಲು ಇದು ಸುಸಮಯವೆಂದು ನಾವು ನಂಬಿದ್ದೇವೆ.  ಸನ್‍ಫೀಸ್ಟ್ ಆಲ್‍ ರೌಂಡರ್‍ ಬಿಡುಗಡೆಯೊಂದಿಗೆ ನಾವು ಬಿಸ್ಕತ್‍ಗಳ ಕೆಟಗರಿಯೊಳಗೆ ವಿಶೇಷವಾಗಿ ಕ್ರ್ಯಾಕರ್ ವಿಭಾಗದಲ್ಲಿ ಗ್ರಾಹಕ ಅನುಭವಕ್ಕೆ ಮರುವ್ಯಾಖ್ಯಾನ ನೀಡಲು ಬಯಸಿದ್ದೇವೆ. ಅದೇ ರೀತಿ, ಬಿಸ್ಕತ್‍ಗಳು ಮತ್ತು ಕೇಕ್ಸ್ ಕೆಟಗರಿಯಲ್ಲಿ ಸನ್‍ಫೀಸ್ಟ್ ಅನ್ನು ಚಾಂಪಿಯನ್‍ ಆಗಿಸುವ ಯಶೋಗಾಥೆಯನ್ನು ಬರೆಯಲು ಮುಂದಾಗಿದ್ದೇವೆ’’ ಎಂದು ಹೇಳಿದರು.

ಸನ್‍ಫೀಸ್ಟ್ ಹೊಸ ಕೊಡುಗೆಯು ಎಸ್‍ಕೆಯು ರೂಪದಲ್ಲಿ 32.9 ಗ್ರಾಂ ಮತ್ತು 75 ಗ್ರಾಂ ತೂಕದಲ್ಲಿ ಅನುಕ್ರಮವಾಗಿ 10 ರೂಪಾಯಿ ಮತ್ತು 20 ರೂಪಾಯಿ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸನ್‍ಫೀಸ್ಟ್ ಆಲ್ ರೌಂಡರ್ ದಕ್ಷಿಣ ಭಾರತ, ಪಶ್ಚಿಮ ಬಂಗಾಳ, ಈಶಾನ್ಯ ಭಾರತದ ಮಾರುಕಟ್ಟೆಯಲ್ಲಿ ITCstore.in, ಜನರಲ್ ಟ್ರೇಡ್‍ ಔಟ್‍ಲೆಟ್ ಮತ್ತು ಆಧುನಿಕ ಟ್ರೇಡ್ ಔಟ್‍ಲೆಟ್‍ಗಳಲ್ಲಿ ಸಿಗಲಿವೆ.

ITC Foods ಕಿರು ಪರಿಚಯ: ITC ಲಿಮಿಟೆಡ್ ನ ಒಂದು ವ್ಯವಹಾರ ವಿಭಾಗ

ITC ಯ ಬ್ರ್ಯಾಂಡೆಡ್‌ ಫುಡ್‌ ಉದ್ಯಮದಲ್ಲಿ ಅತಿ ವೇಗವಾಗಿ ಬೆಳೆಯುತ್ತಿದ್ದು ದೇಶದ ಮೂರನೇ ಅತಿದೊಡ್ಡ ಫುಡ್‌ ಕಂಪನಿ ಎನಿಸಿಕೊಂಡಿದೆ. ಆಶೀರ್ವಾದ್, ಸನ್‌ಫೀಸ್ಟ್‌, ಯಿಪ್ಪೀ, ಕಿಚನ್ಸ್‌ ಆಫ್‌ ಇಂಡಿಯಾ, ಬಿ ನ್ಯಾಚುರಲ್, ಮಿಂಟ್‌ಒ, ಕ್ಯಾಂಡಿಮನ್‌, ಫ್ಯಾಬಲ್‍, ಸನ್‍ಬೀನ್‍ ಮತ್ತು ಗಮ್‌ ಆನ್‌ ಬ್ರ್ಯಾಂಡ್‌ಗಳ ಮೂಲಕ ಗ್ರಾಹಕರನ್ನು ತಲುಪುತ್ತಿದ್ದು, ಮಾರುಕಟ್ಟೆಯನ್ನು ವ್ಯಾಪಿಸಿಕೊಂಡಿದೆ. ಫುಡ್‌ ಬಿಸಿನೆಸ್‌ನಲ್ಲಿ ಇಂದು ಹಲವು ವಿಭಾಗಗಳಿವೆ, ಬೇಳೆ ಕಾಳು, ಮಸಾಲೆ, ತಿನ್ನಲು ಸಿದ್ಧವಿರುವ ಆಹಾರ, ಸ್ನ್ಯಾಕ್‌ ಫುಡ್‌, ಬೇಕರಿ ಮತ್ತು ಕನ್ಫೆಷನರಿ ಮತ್ತು ಹೊಸದಾಗಿ ಪರಿಚಯಿಸಲಾದ ಪೇಯ ಮತ್ತು ಪಾನೀಯಗಳು.

ITC Foods ಲಕ್ಷಾಂತರ ಕುಟುಂಬಗಳಲ್ಲಿ ಸಂತಸ ಮೂಡಿಸಿದ್ದು, ಹಲವು ಶ್ರೇಣಿಯ, ಮೌಲ್ಯಯುತ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಿ ನೀಡುತ್ತಿದೆ. ITC ಯ ಸಂಶೋಧನೆ ಮತ್ತು ಅಭಿವೃದ್ಧಿಯ ಸಾಮರ್ಥ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಭಾರತೀಯ ರುಚಿಗಳನ್ನು ಗ್ರಾಹಕರ ಅಗತ್ಯಗಳನ್ನು ಆಳವಾಗಿ ಅರ್ಥ ಮಾಡಿಕೊಂಡು ಕೃಷಿ ಸಂಪನ್ಮೂಲ ಮತ್ತು ಪ್ಯಾಕೇಜಿಂಗ್‌ಗಳನ್ನು ಮತ್ತು ಸರಿಸಾಟಿ ಇಲ್ಲದ ವಿತರಣಾ ಜಾಲದ ಮೂಲಕ ಅಗಾಧವಾಗಿ ಬೆಳೆದಿದೆ.

ITC ಯು ರಾಜೀಯಾಗದ ಬದ್ಧತೆ, ಗ್ರಾಹಕರ ಆರೋಗ್ಯ ಮತ್ತು ಸುರಕ್ಷತೆಯ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಿ, ಅತ್ಯುತ್ಕೃಷ್ಟ ಗುಣಮಟ್ಟ, ಸುರಕ್ಷತೆ ಮತ್ತು ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ, ಉತ್ಪಾದನಾ ಪ್ರಕ್ರಿಯೆಯಲ್ಲಿ ಮತ್ತು ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸುತ್ತಿದೆ. ಎಲ್ಲ ITC  ಮಾಲೀಕತ್ವದ ಉತ್ಪಾದನಾ ಘಟಕೆಗಳು ಅಪಾಯದ ವಿಶ್ಲೇಷಣೆ ಮತ್ತು ನಿರ್ಣಾಯಕ ನಿಯಂತ್ರಣ ಕೇಂದ್ರಗಳಿಂದ ಪ್ರಮಾಣೀಕೃತವಾಗಿವೆ. ಎಲ್ಲ ಉತ್ಪಾದನಾ ಘಟಕೆಗಳ ಕಾರ್ಯಕ್ಷಮತೆಯ ಗುಣಮಟ್ಟವನ್ನು ಆನ್‌ಲೈನ್‌ ಮೂಲಕ ಗಮನಿಸಲಾಗುತ್ತದೆ. ಕೇವಲ ಸಂಸ್ಕರಣೆಯ ನಿಯಂತ್ರಣವಷ್ಟೇ ಅಲ್ಲದೆ, ITC  ತನ್ನ ಆಹಾರ ಉತ್ಪನ್ನಗಳ ತಯಾರಿಕೆಗೆ ಬಳಸುವ ಸಾಮಗ್ರಿಗಳ ಆಯ್ಕೆಯಲ್ಲೂ ಕಟ್ಟುನಿಟ್ಟಾಗಿ ಗುಣಮಟ್ಟದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿರುವುದನ್ನು ಖಾತರಿ ಪಡಿಸುತ್ತದೆ.

ಉತ್ಪಾದನೆ, ವಿತರಣೆ ಮತ್ತು ಮಾರುಕಟ್ಟೆ ವಿಭಾಗಗಳಲ್ಲಿ ಈ ಉದ್ಯಮವು ಹೂಡಿಕೆಯನ್ನು ಮುಂದುವರೆಸುತ್ತಿದ್ದು, ಪ್ಯಾಕೇಜ್ಡ್‌ ಫುಡ್ಸ್‌ ಪೂರೈಸುವ ಬ್ರಾಂಡ್‌ಗಳಲ್ಲಿ ದೇಶದ ಹೆಚ್ಚು ವಿಶ್ವಾಸಾರ್ಹ ಬ್ರ್ಯಾಂಡ್‌ ಆಗಿ ಬೆಳೆಯುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ. ITC Foods ಉತ್ತರ ಅಮೆರಿಕಾ, ಆಫ್ರಿಕಾ, ಮಧ್ಯ ಪ್ರಾಚ್ಯ ಮತ್ತು ಆಸ್ಟ್ರೇಲಿಯಾಕ್ಕೂ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.