ಮುಂಬೈ/ನವದೆಹಲಿ: ಭಾರತದ ಷೇರುಪೇಟೆಯು ಬುಧವಾರ ಕುಸಿತದೊಂದಿಗೆ ಆರಂಭ ದಾಖಲಿಸಿದೆ. ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 57 ಪಾಯಿಂಟ್ಸ್ ಕುಸಿತಗೊಂಡಿದ್ದು, ನಿಫ್ಟಿ 18 ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 52.75 ಪಾಯಿಂಟ್ಸ್ ಏರಿಕೆಗೊಂಡು 52803.93 ತಲುಪಿದೆ. ಎನ್ಎಸ್ಇ ಸೂಚ್ಯಂಕ ನಿಫ್ಟಿ 18.30 ಪಾಯಿಂಟ್ಸ್ ಹೆಚ್ಚಾಗಿ 15800 ಮುಟ್ಟಿದೆ. ಆರಂಭಿಕ ವಹಿವಾಟಿನಲ್ಲಿ 1095 ಷೇರುಗಳು ಏರಿಕೆಗೊಂಡರೆ, 748 ಷೇರುಗಳು ಕುಸಿದವು.
ಏಷ್ಯನ್ ಪೇಂಟ್ಸ್ನ ಷೇರುಗಳು 31 ರೂ.ಗಳ ಏರಿಕೆ ಕಂಡು 3,033.00 ರೂ., ಗ್ಲ್ಯಾಂಡ್ನ ಷೇರು 29 ರೂ.ಗಳ ಏರಿಕೆ ಕಂಡು 3,431.30 ರೂ., ಟೈಟಾನ್ ಕಂಪನಿಯ ಷೇರು 17 ರೂ.ಗಳ ಏರಿಕೆ ಕಂಡು 1,779.70 ರೂ.ಗಳಲ್ಲಿ ಪ್ರಾರಂಭವಾಯಿತು.
ಶ್ರೀ ಸಿಮೆಂಟ್ ಷೇರುಗಳು 406 ರೂ.ಗಳ ಇಳಿಕೆ ಕಂಡು 27,362.70 ರೂ, ಟಾಟಾ ಮೋಟಾರ್ಸ್ನ ಷೇರುಗಳು ಸುಮಾರು 6 ರೂ.ಗಳಷ್ಟು ಇಳಿಕೆಯಾಗಿ 311.25 ರೂ., ಇಂಡಸ್ಇಂಡ್ ಬ್ಯಾಂಕ್ ಷೇರುಗಳು 13 ರೂ.ಗಳ ಇಳಿಕೆ 1,018.55 ರೂ.ಗೆ ಪ್ರಾರಂಭವಾಯಿತು.