ನವದೆಹಲಿ: ದೇಶದಾದ್ಯಂತ ಕರೋನಾ ಸೋಂಕು ಹರಡುವಿಕೆಯಲ್ಲಿ ಇಳಿಕೆ ಕಂಡಿದೆ. 45,892 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಒಂದೇ ದಿನ 817 ಸೋಂಕಿತರು ಮೃತಪಟ್ಟಿದ್ದು, 44,291 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ದೇಶದಲ್ಲಿ ಒಟ್ಟು 3,07,09,557 ಜನರಿಗೆ ಸೋಂಕು ತಗಲಿದ್ದು, ಈ ಪೈಕಿ 4,05,028 ಮಂದಿ ಮೃತಪಟ್ಟಿದ್ದಾರೆ. 4,60,704 ಸಕ್ರೀಯ ಪ್ರಕರಣಗಳಿದ್ದು 2,98,43,825 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.
ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ಒಟ್ಟಾರೆ ದೇಶದಲ್ಲಿ ಈವರೆಗೆ 36,48,47,549 ಜನರಿಗೆ ಕರೋನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.