ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 20
ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ಡಾ.ಸಿ.ಎನ್.ಮಂಜುನಾಥ್ ಮನದಾಳದ ಮಾತು
ಬೆಂಗಳೂರು: ಯಾವುದೇ ಹೃದ್ರೋಗಿ ನಮ್ಮ ಸಂಸ್ಥೆಗೆ ಚಿಕಿತ್ಸೆಗೆ ಬಂದರೆ ಹಣವಿಲ್ಲದಿದ್ದರೂ, ಚಿಕಿತ್ಸೆ ನೀಡದೆ ವಾಪಸ್ ಕಳುಹಿಸಿಲ್ಲ. ಬಡ ರೋಗಿಗಳೇ ನಮಗೆ ನಿಜವಾದ ವಿಐಪಿಗಳು ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ನಡೆದ ‘ಕಾರ್ಡಿಯಾಲಜಿಯಿಂದ ಕರೋನಾ ತನಕ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡವರನ್ನು
ಕಣ್ಣಿಂದ ಗುರುತಿಸಬೇಕು. ಸಾಕಷ್ಟು ಬಡವರು ಸಾಲ ಮಾಡಿ ರೋಗಿಗಳಿಗೆ ಚಿಕಿತ್ಸೆ ಕೊಡಿಸುತ್ತಾರೆ. ಆದ್ದರಿಂದ ಚಿಕಿತ್ಸೆ ಮೊದಲು, ಹಣ ನಂತರ. ವೈದ್ಯರಿಗೆ ಮಾನವೀಯತೆ ಮುಖ್ಯ. ನಮಗೆ ರೋಗಿಗಳ ಜೀವ ಕಾಪಾಡುವುದೇ ಮೊದಲ ಧ್ಯೇಯ.
ರಾಜ್ಯದಲ್ಲಿ ಶೇ.೩೦ ರಷ್ಟು ಶ್ರೀಮಂತರಿಗೆ ಬಿಪಿಎಲ್ ಕಾರ್ಡ್ಗಳಿವೆ. ಆದರೂ ಚಿಕಿತ್ಸೆಗೆ ಹಣವಿಲ್ಲ ಎನ್ನುತ್ತಾರೆ. ಇಲ್ಲವೆ ಡಿಸ್ಕೌಂಟ್ ಕೇಳುತ್ತಾರೆ ಎಂದು ವಿಷಾದಿಸಿ ದರು. ನಮ್ಮಲ್ಲಿ ರಿಯಾಯಿತಿ ದರದಲ್ಲಿ ಗುಣಮಟ್ಟದ, ವಿಶ್ವ ದರ್ಜೆಯ ಚಿಕಿತ್ಸೆ ಕೊಡುತ್ತಿದ್ದೇವೆ. ಇದನ್ನು ಅಭ್ಯಾಸ ಮಾಡಲು, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈ ಟೀಮ್ ಕೂಡ ಭೇಟಿ ನೀಡಿದೆ. ಆಮೇಲೆ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್, ಲೀಡರ್ಶಿ ಸ್ಕೂಲ್ ಆಫ್ ಸಿಂಗಾಪುರ್, ಯುನೈಟೈಡ್ ಸ್ಟೇಟ್ಸ ಆಸ್ಟ್ರಿಯನ್ ಮೆಡಿಕಲ್ ಸ್ಕೂಲ್ಸನವರೂ ಭೇಟಿ ನೀಡಿ, ನಮ್ಮ ಮಾಡೆಲ್ ಅನ್ನು ಅಭ್ಯಾಸ ಮಾಡಿದ್ದಾರೆ. ಸರಕಾರಿ ಸಂಸ್ಥೆಯಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆ ಎಂದೇ ಹೇಳಬಹುದು ಎಂದರು.
ಕರೋನಾ ಬಗ್ಗೆ ಇರಲಿ ಎಚ್ಚರ: ಕರೋನಾ ಲಸಿಕೆ ಪಡೆದವರಿಗೂ ಸೋಂಕು ಹರಡುವ ಸಾಧ್ಯತೆ ಇದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸ ಬೇಕು. ಲಸಿಕೆ ಪಡೆದವರಿಗೆ ಸೋಂಕು ಬಂದರೂ ಅದರ ತೀವ್ರತೆ ಕಡಿಮೆ ಇದ್ದು, ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಲಸಿಕೆ ಪಡೆದಿದ್ದೇವೆ ಎಂದು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಡಿಸೆಂಬರ್ ತನಕ ಎಚ್ಚರಿಕೆಯಿಂದ ಇರಬೇಕು. ಸರಕಾರ ಜಾರಿ ಮಾಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಮನವಿ ಮಾಡಿದರು. ಕರೋನಾದಿಂದ ಗುಣಮುಖರಾದವರಿಗೆ ತೂಕ ಕಡಿಮೆ, ಸಕ್ಕರೆ ಕಾಯಿಲೆ ಬರಬಹುದು. ಕರೋನಾ ಸೋಂಕಿನಿಂದ ಗುಣಮುಖರಾದ ಶೇ.೫ ರಷ್ಟು ಜನರಲ್ಲಿ ಹೃದ್ರೋಗ ಸಮಸ್ಯೆ ಕಂಡು ಬರುತ್ತಿದೆ. ಮೊದಲೆರೆಡು ಅಲೆಯಲ್ಲಿ ಮಾಡಿದ ತಪ್ಪು ಮರುಕಳಿಸಿದರಿಲಿ. ಆರು ತಿಂಗಳು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಹಳ್ಳಿಯಲ್ಲಿ ವೈದ್ಯರ ಕೊರತೆ: ದೇಶದಲ್ಲಿ 560 ಮೆಡಿಕಲ್ ಕಾಲೇಜು ಇವೆ. ಶೇ.60 ರಷ್ಟು ಕಾಲೇಜುಗಳು ದಕ್ಷಿಣ ಭಾರತದಲ್ಲಿವೆ. ಹಳ್ಳಿಯಲ್ಲಿ ವೈದ್ಯರ ಕೊರತೆ ಇದೆ. ರಾಜ್ಯಕ್ಕೆ ಕೊರತೆ ಇಲ್ಲ. ವೈದ್ಯರು ನಗರಕ್ಕೆ ಸೀಮಿತವಾಗಿzರೆ. ಹಳ್ಳಿಗಳಲ್ಲಿ ವೈದ್ಯರಿಗೆ ಸುರಕ್ಷತೆ ಇಲ್ಲ. ವೈದ್ಯರ ಮೇಲೆ ಹಲ್ಲೆಗಳು ಜಾಸ್ತಿಯಾಗಿವೆ. ಸ್ಥಳೀಯ ಮಟ್ಟದಲ್ಲಿ ದೌರ್ಜನ್ಯ ಹೆಚ್ಚಾಗಿದೆ. ಆದ್ದರಿಂದ ವೈದ್ಯರು ಹಳ್ಳಿಗಳಲ್ಲಿ ಸೇವೆ ಮಾಡಲು ಹಿಂದೇಟು ಹಾಕುತ್ತಿzರೆ ಎಂದು ಕಳವಳ ವ್ಯಕ್ತಪಡಿಸಿದರು.
ಯೋಧರಿಗೆ ಸಿಗುವ ಸ್ಥಾನಮಾನ ವೈದ್ಯರಿಗೂ ನೀಡಿ ಒಂದೂವರೆ ವರ್ಷ ಕರೋನಾ ಜತೆ ಬದುಕಿದ್ದೇವೆ. ಮೊದಲೆರಡು ಅಲೆಯಲ್ಲಿ ಸಾವಿರಾರು ವೈದ್ಯರು ತಮ್ಮ
ಜೀವ ಪಣಕ್ಕಿಟ್ಟಿದ್ದಾರೆ. ಗಡಿಗಳನ್ನು ಯೋಧರು ಕಾಯುತ್ತಿದ್ದಾರೆ. ಯೋಧರು ವೈರಿಗಳ ಜತೆ ಹೋರಾಡಿ ಸಾವನ್ನಪ್ಪಿದರೆ, ಹುತಾತ್ಮರೆಂದು ಕರೆಯುತ್ತಾರೆ. ಅವರ ಕುಟುಂಬಕ್ಕೆ ಸಿಗುವ ಸ್ಥಾನ, ಸೌಲಭ್ಯಗಳು ವೈದ್ಯರ ಕುಟುಂಬಕ್ಕೂ ಸಿಗಬೇಕು ಎಂದು ಡಾ.ಸಿ.ಮಂಜುನಾಥ್ ಹೇಳಿದರು.
***
ಭಾರತ ದೇಶವು ವಿಮಾನದಿಂದ ನೋಡಲು ಅದ್ಭುತವಾಗಿದೆ. ನಿಜವಾದ ದೇಶ ಕಾಣಬೇಕೆಂದರೆ ರೈಲಿನಲ್ಲಿ ದೇಶ ಸುತ್ತಬೇಕು. ಆಗ ನಿಜವಾದ ಬಡತನ ಕಾಣುತ್ತದೆ. ಉಪದೇಶಗಳಿಂದ ಪ್ರಯೋಜನ ಆಗಲ್ಲ.
-ಡಾ.ಸಿ.ಎನ್.ಮಂಜುನಾಥ್, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ