ಟೆಕ್ ಫ್ಯೂಚರ್
ವಸಂತ ಗ ಭಟ್
ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಲಭ್ಯವಿರುವ ಈ ದಿನಗಳಲ್ಲಿ ಆಯ್ಕೆ ನಿಜಕ್ಕೂ ಕಷ್ಟದ್ದು. ರು.30000 ಆಸುಪಾಸಿನ ಬೆಲೆಯ ಸ್ಮಾರ್ಟ್ ಫೋನ್‌ಗಳ ಮಾಹಿತಿ ಇಲ್ಲಿದೆ.
ಇತ್ತೀಚಿಗೆ ಒಂದು ಹೊಸ ಮೊಬೈಲ್ ಖರೀದಿಸಬೇಕು ಎಂದು ಅಂತರ್ಜಾಲದಲ್ಲಿ ಮೊಬೈಲ್ ಗಳ ಬಗೆಗಿನ ಮಾಹಿತಿಯನ್ನು ಹುಡುಕಲು ಆರಂಭಿಸಿ, ಸಾಕಷ್ಟು ಗೊಂದಲ ಶುರುವಾಯಿತು. ಮೊಬೈಲ್ ನಲ್ಲಿರುವ ವೈಶಿಷ್ಟ್ಯತೆಗಳು ಚೆನ್ನಾಗಿದ್ದರೆ ಒಂದೋ ಮೊಬೈಲ್ ಉತ್ತಮ ಬ್ರಾಂಡ್ ನzಗಿರುವುದಿಲ್ಲ, ಇಲ್ಲವೇ ಅತ್ಯಂತ
ದುಬಾರಿಯಾಗಿರುತ್ತದೆ. ಈ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಯೂಟ್ಯೂಬ್ ನಲ್ಲಿ ನೋಡೋಣವೆಂದರೆ ಒಂದೇ ಮೊಬೈಲ್‌ಗೆ ಒಬ್ಬ ವಿಮರ್ಶಕ ಉತ್ತಮ ಮೊಬೈಲ್ ಎಂದರೆ ಇನ್ನೊಬ್ಬ ಸಾಧಾರಣ ಎಂದು ಹೇಳಿರುತ್ತಾರೆ.
ಇದು ಇನ್ನಷ್ಟು ಗೊಂದಲಕ್ಕೆ ಈಡುಮಾಡುತ್ತದೆ. ನನ್ನ ಒಂದು ತಿಂಗಳ ಅಧ್ಯಯನದ ನಂತರ ರು.30000 ಸಾವಿರದ ಆಸುಪಾಸಿನ ಉತ್ತಮ ಅನ್ದ್ರೋಯಿಡ್ ಮೊಬೈಲ್ ಬಗೆಗಿನ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದೇನೆ. ರಿಯಲ್ ಮಿ ಎಕ್ಸ್ 7 ಪ್ರೊ ಫೆಬ್ರವರಿ 4 ರಂದು ಭಾರತದಲ್ಲಿ ಬಿಡುಗಡೆಯಾದ ರಿಯಲ್
ಮಿ ಸಂಸ್ಥೆಯ ಎಕ್ಸ್ 7 ಪ್ರೊ ಉತ್ತಮವಾಗಿ ಮಾರಾಟಗೊಳ್ಳುತ್ತಿರುವ ಸ್ಮಾರ್ಟ್ ಫೋನ್.
6.55 ಇಂಚಿನ ದೊಡ್ಡ ಪರದೆಯನ್ನು ಹೊಂದಿರುವ ಮೊಬೈಲ್ 1800 ಗಿ 2400 ಪಿಕ್ಸಲ್ ಡೆನ್ಸಿಟಿಯನ್ನು ಹೊಂದಿದೆ. 4500 ಎಂಹೆಚ್ ನ ಬಾಟರಿ ಇದ್ದು, ಒಮ್ಮೆ ಚಾರ್ಜ್ ಮಾಡಿದರೆ ಒಂದು ದಿನ ಸುಲಭವಾಗಿ ಬಳಸಬಹುದು. ಅನ್ದ್ರೋಯಿಡ್ 10 ಆಪರೇಟಿಂಗ್ ಸಿಸ್ಟಮ್ ನೊಂದಿಗೆ ಬರುವ ಮೊಬೈಲ್ ಅನ್ನು ಅನ್ದ್ರೋಯಿಡ್ 11 ಗೆ ಉಚಿತವಾಗಿ ಮೇಲ್ದರ್ಜೆಗೆ ಏರಿಸಬಹುದು. ಹಿಂಬದಿಯಲ್ಲಿ 64 ಮೆಗಾ ಪಿಕ್ಸೆಲ್, 8ಮೆಗಾ ಪಿಕ್ಸೆಲಗ್, 2 ಮೆಗಾ ಪಿಕ್ಸೆಲ್, 2 ಮೆಗಾ ಪಿಕ್ಸೆಲ್ ನ ನಾಲ್ಕು ಕ್ಯಾಮೆರಾ ಲಭ್ಯವಿದ್ದು ಮುಂಭಾಗದಲ್ಲಿ 32 ಪಿಕ್ಸೆಲ್ ನ ಒಂದು ಕ್ಯಾಮೆರಾ ಇದೆ. 128 ಜಿಬಿ ಮತ್ತು 256 ಜಿಬಿಯ ಆಂತರಿಕ ಸಂಗ್ರಹಣಾ ಸಾಮರ್ಥ್ಯದ ಆಯ್ಕೆಯಿದ್ದು 6 ಅಥವಾ 8 ಜಿಬಿಯ ರ‍್ಯಾಮ್ ಹೊಂದಿದೆ. ಈ ಮೊಬೈಲ್ ನ ಬೆಲೆ ರು.29000 ದಿಂದ ಆರಂಭ.
ಎಂಐ 11 ಎಕ್ಸ್
2021ರ ಏಪ್ರಿಲ್ ನಲ್ಲಿ ಬಿಡುಗಡೆಯಾದ ಎಂಐ 11 ಎಕ್ಸ್, 6.68 ಇಂಚಿನ ಪರದೆ ಹೊಂದಿದ್ದು, 1800 ಗಿ 2400 ಪರದೆ ಡೆನ್ಸಿಟಿಯನ್ನು ಹೊಂದಿದೆ. 4520 ಎಂಹೆಚ್‌ನ ಶಕ್ತಿಯುತ ಬ್ಯಾಟರಿ ಸಾಮರ್ಥ್ಯ ಮತ್ತು ವೇಗದ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. 48 ಮೆಗಾ ಪಿಕ್ಸೆಲ್, 8 ಮೆಗಾ ಪಿಕ್ಸೆಲ್ ಮತ್ತು 5 ಮೆಗಾ ಪಿಕ್ಸೆಲ್‌ನ ಹಿಂಬದಿ ಕ್ಯಾಮೆರವನ್ನು ಹೊಂದಿದ್ದು 20 ಮೆಗಾ ಪಿಕ್ಸೆಲ್‌ನ ಮುಂಬದಿ ಕ್ಯಾಮೆರಾ ಹೊಂದಿದೆ. 128 ಜಿಬಿ ಯ ಆಂತರಿಕ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಮೊಬೈಲ್ 6 ಅಥವಾ 8 ಜಿಬಿ ಯ ರ‍್ಯಾಮ್‌ನ ಆಯ್ಕೆಯನ್ನು ಹೊಂದಿದೆ. ಮೊಬೈಲ್ ನ ಆರಂಭಿಕ ಬೆಲೆ ರು.30000/-.
ಒನ್ ಪ್ಲಸ್ ನೊರ್ಡ್ ಸಿಈ ೫ ಜಿ
ಕಳೆದ ತಿಂಗಳ 11 ನೇ ತಾರೀಕಿನಂದು ಬಿಡುಗಡೆಯಾದ ಒನ್ ಪ್ಲಸ್ ನೋರ್ಡ್ ಸಿಈ 5 ಜಿ, ಈ ವರ್ಷದ ಅತ್ಯಂತ ನೀರಿಕ್ಷಿತ ಮೊಬೈಲು ಗಳಲ್ಲಿ ಒಂದು.
6.43 ಇಂಚಿನ ಪರದೆಯನ್ನು ಹೊಂದಿರುವ ಮೊಬೈಲ್ 4500 ಎಂ ಹೆಚ್ ನ ಬ್ಯಾಟರಿಯನ್ನು ಹೊಂದಿದ್ದು, ವೇಗದ ಚಾರ್ಜಿಂಗ್ ಸಹ ಲಭ್ಯವಿದೆ. ಅನ್ದ್ರೋಯಿಡ್ 11 ಆಕ್ಸಿಜನ್ ಒಎಸ್ ಅನ್ನು ಹೊಂದಿರುವ ಮೊಬೈಲ್ ಮೂಲ ಅನ್ದ್ರೋಯಿಡ್‌ನ ಎಲ್ಲ ಅವಕಾಶಗಳನ್ನು ಹೊಂದಿದೆ. 128 ಜಿಬಿ ಮತ್ತು 256 ಜಿಬಿ ಯ ಆಂತರಿಕ ಸಂಗ್ರಹ, 8 ಜಿಬಿ ರ‍್ಯಾಮ್ ಹೊಂದಿದೆ. 64 ಮೆಗಾ ಪಿಕ್ಸೆಲ್, 8 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್ ನ ಮೂರು ಕ್ಯಾಮೆರಾಗಳನ್ನು ಹಿಂಭಾಗದಲ್ಲಿ ಹೊಂದಿರುವ ಮೊಬೈಲ್, 16 ಮೆಗಾ ಪಿಕ್ಸೆಲ್ ನ ಒಂದು ಕ್ಯಾಮೆರಾವನ್ನು ಮುಂಭಾಗದಲ್ಲಿ ಹೊಂದಿದೆ. ಬೆಲೆ ರು.23000೦ದಿಂದ ಆರಂಭ.
ಐ ಕ್ಯೂ 7 5ಜಿ
ನೀವು ಯಾವುದೇ ಗೊಂದಲ ಇಲ್ಲದೆ ರು.30000 ಆಸುಪಾಸಿನ ಮೊಬೈಲ್ ಖರೀದಿಬೇಕೆಂದರೆ ಐಕ್ಯೂ 7 5ಜಿ ಖಂಡಿತ ವಾಗಿಯೂ ನಿಮ್ಮ ಆಯ್ಕೆಯಾಗಬಹುದು. ಸ್ನಾಪ್ ಡ್ರಾಗನ್ 885 ಜಿ ಪ್ರೋಸೇಸರ್ ಅನ್ನು ಹೊಂದಿರುವ ಐಕ್ಯೂ 7 5ಜಿ ಮೊಬೈಲ್ ಅನ್ನು ಗೇಮಿಂಗ್ ಉದ್ದೇಶಕ್ಕಾಗಿ ವಿಶೇಷವಾಗಿ ರೂಪಿಸಲಾಗಿದೆ. ಪರದೆಯ ಕೆಳಗಿರುವ ಗ್ರಫಿನ್ ಪದರ, ನೀವು ಘಂಟೆಗಳ ಕಾಲ ಮೊಬೈಲ್‌ನಲ್ಲಿ ಆಟವಾಡಿದರೂ ಪರದೆ ಬಿಸಿಯಾಗದಂತೆ ತಡೆಯಲಿದೆ. 4500 ಎಂಹೆಚ್ ನ ಬಾಟರಿ, 63 ವಾಟ್‌ನ ಫಾಸ್ಟ್ ಚಾರ್ಜಿಂಗ್ ಹೊಂದಿದೆ.
ಇದರಿಂದಾಗಿ ನೂರು ಪ್ರತಿಶತ ಚಾರ್ಜ್ ಆಗಲು ಕೇವಲ 20 ನಿಮಿಷ ಸಾಕು. 48 ಮೆಗಾ ಪಿಕ್ಸೆಲ್, 13 ಮೆಗಾ ಪಿಕ್ಸೆಲ್, 2 ಮೆಗಾ ಪಿಕ್ಸೆಲ್‌ನ ಮೂರು ಸೋನಿ ಕ್ಯಾಮೆರಗಳನ್ನು ಹಿಂಭಾಗದಲ್ಲಿ ಹೊಂದಿರುವ ಮೊಬೈಲ್ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ನ ಸೆಲಿ ಕ್ಯಾಮೆರವನ್ನು ಹೊಂದಿದೆ. ಮೊಬೈಲ್ ನಲ್ಲಿ 128 ಜಿಬಿ, 256 ಜಿಬಿ ಸಂಗ್ರಹಣಾ ಸಾಮರ್ಥ್ಯ ಮತ್ತು ೮ಜಿಬಿ ಅಥವಾ 16 ಜಿಬಿಯ ರ‍್ಯಾಮ್ ಆಯ್ಕೆ ಲಭ್ಯ. ಮೊಬೈಲ್ ನ ಬೆಲೆ ರು.30000 ಸಾವಿರದಿಂದ ಆರಂಭ.