ಮುಂಬೈ: ರಾಜ್ಯ ಮೈತ್ರಿ ಸರಕಾರಕ್ಕೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ “ರಿಮೋಟ್ ಕಂಟ್ರೋಲ್” ಆಗಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಬಣ್ಣಿಸಿದ್ದಾರೆ.
ಪವಾರ್ ಅವರು ಮಹಾರಾಷ್ಟ್ರ ಸರಕಾರದ ರಿಮೋಟ್ ಕಂಟ್ರೋಲ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕಾಂಗ್ರೆಸ್ ಯಾವುದೇ ದೊಡ್ಡ ನಾಯಕನ ವಿರುದ್ಧ ಹೇಳಿಕೆ ನೀಡುವುದಿಲ್ಲ, ಆದರೆ ಹೊರಗಿನ ಯಾರೇ ಆಗಲಿ ಹೇಳಿಕೆಗಳನ್ನು ನೀಡುವ ಮೊದಲು ತಮ್ಮದೇ ಪಕ್ಷದತ್ತ ಗಮನಹರಿಸಬೇಕು” ಎಂದು ನಾನಾ ಹೇಳಿದರು.
“ಶರದ್ ಪವಾರ್ ಎನ್ಸಿಪಿ ಮುಖ್ಯಸ್ಥರು, ನಾನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ. ಆದ್ದರಿಂದ ನಾವು ಕ್ರಮವಾಗಿ ನಮ್ಮ ಪಕ್ಷಗಳನ್ನು ಬಲಪಡಿಸಲು ಬಯಸುತ್ತೇವೆ. ಅವರು ರಿಮೋಟ್ ಕಂಟ್ರೋಲ್. ಈ ಮಹಾ ವಿಕಾಸ್ ಅಘಾಡಿ ಸರಕಾರ ಮಾಡುವಲ್ಲಿ ಅವರ ದೊಡ್ಡ ಪಾತ್ರವಿದೆ. ಶರದ್ ಪವಾರ್ ನಮಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಅವರು ಸಮಾಜಾಯಿಷಿ ನೀಡಿದರು.