ನವದೆಹಲಿ: ಖಾಸಗಿ ಕ್ಷೇತ್ರದ ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕ ವರದಿ ಪ್ರಕಟಿಸಿದೆ. ಬ್ಯಾಂಕಿನ ತ್ರೈಮಾಸಿಕ ಲಾಭವು ವರ್ಷದಿಂದ ವರ್ಷಕ್ಕೆ ಶೇ 16.1 ರಷ್ಟು ಹೆಚ್ಚಾಗಿದೆ.
ಕಳೆದ ವರ್ಷ 6,658,60 ಕೋಟಿ ರೂ. ಲಾಭವಾಗಿತ್ತು. ಆದರೆ ಈ ವರ್ಷದ ತ್ರೈಮಾಸಿಕದಲ್ಲಿ 7,729.60 ಕೋಟಿ ರೂ. ತಲುಪಿದೆ. ಬ್ಯಾಂಕಿನ ಲಾಭವು ತಜ್ಞರ ಅಂದಾಜುಗಿಂತ ಕಡಿಮೆಯಾಗಿತ್ತು. ಆರ್ಥಿಕ ತಜ್ಞರ ಅಂದಾಜಿನಂತೆ ಬ್ಯಾಂಕ್ 7900 ಕೋಟಿ ರೂ. ಲಾಭಗಳಿಸಬಹುದು ಎನ್ನಲಾಗಿತ್ತು.
ಎಚ್‌ಡಿಎಫ್‌ಸಿ ಬ್ಯಾಂಕಿನ ಬಡ್ಡಿ ಆದಾಯವೂ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. 15,665.7 ಕೋಟಿ ರೂ.ಗಳಿಂದ ಬ್ಯಾಂಕಿನ ಬಡ್ಡಿ ಆದಾಯವು ಶೇ.8.57 ರಷ್ಟು ಏರಿಕೆಯಾಗಿ 17009 ಕೋಟಿ ರೂ. ತಲುಪಿದೆ. ಬ್ಯಾಂಕಿನ ಪ್ರಗತಿಯು ಶೇ.14.4 ರಷ್ಟು ಏರಿಕೆಯಾಗಿದೆ.
ಒಟ್ಟು ನಿಷ್ಕ್ರಿಯ ಆಸ್ತಿ (ಎನ್‌ಪಿಎ) ಮಾರ್ಚ್ ತ್ರೈಮಾಸಿಕದಲ್ಲಿ ಶೇ 1.32 ಕ್ಕೆ ಹೋಲಿಸಿದರೆ, ಶೇ. 1.47 ರಷ್ಟಿದೆ ಮತ್ತು ವರ್ಷದ ಹಿಂದಿನ ತ್ರೈಮಾಸಿಕದಲ್ಲಿ ಶೇ 1.36 ರಷ್ಟಿದೆ.