Saturday, 23rd November 2024

ಮುಂಬೈ ಷೇರುಪೇಟೆ: ಸಂವೇದಿ ಸೂಚ್ಯಂಕ 355 ಅಂಕ ಕುಸಿತ

ಮುಂಬೈ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟಿನ ಪರಿಣಾಮ ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 355 ಅಂಕ ಕುಸಿತ ಕಂಡಿದೆ. ಎಚ್ ಡಿಎಫ್ ಸಿ ಷೇರುಗಳು ಭಾರೀ ನಷ್ಟ ಅನುಭವಿಸಿದೆ.

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 354.89 ಅಂಕ ಇಳಿಕೆಯಾಗಿದ್ದು, 52,198.51 ಅಂಕಗಳ ವಹಿವಾಟು ನಡೆಸಿದೆ. ಎನ್ ಎಸ್ ಇ ನಿಫ್ಟಿ 120.30 ಅಂಕ ಕುಸಿತ ಕಂಡಿದ್ದು, 15,632.10ರ ಗಡಿ ತಲುಪಿದೆ. ಸೆನ್ಸೆಕ್ಸ್ ನಷ್ಟದಿಂದ ಇಂಡಸ್ ಇಂಡ್ ಬ್ಯಾಂಕ, ಟಾಟಾ ಸ್ಟೀಲ್, ಎನ್ ಟಿಪಿಸಿ, ಭಾರ್ತಿ ಏರ್ ಟೆಲ್, ಎಚ್ ಸಿಎಲ್ ಟೆಕ್, ಐಸಿಐಸಿಐ ಬ್ಯಾಂಕ್, ಮಹೀಂದ್ರ ಆಯಂಡ್ ಮಹೀಂದ್ರಾ, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ.

ಮತ್ತೊಂದೆಡೆ ಏಷ್ಯನ್ ಪೇಂಟ್ಸ್, ಆಲ್ಟ್ರಾ ಟೆಕ್ ಸಿಮೆಂಟ್, ಬಜಾಜ್ ಆಟೋ, ಎಚ್ ಯುಎಲ್ ಮತ್ತು ನೆಸ್ಲೆ ಇಂಡಿಯಾ ಷೇರುಗಳು ಲಾಭಗಳಿಸಿದೆ.