ನವದೆಹಲಿ: ದೇಶದಲ್ಲಿ 24 ಅವಧಿಯಲ್ಲಿ 39,742 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆ ಯಾಗಿದೆ, 535 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ದೇಶದ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 3,13,71,901ಕ್ಕೆ ಏರಿಕೆಯಾಗಿದೆ. ಇದುವರೆಗೆ ದೇಶದಲ್ಲಿ 4,20,551 ಮಂದಿ ಕೋವಿಡ್ 19 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ನೀಡಿದ ಮಾಹಿತಿ ನೀಡಿದೆ.
ಐದು ರಾಜ್ಯಗಳಲ್ಲಿ ಗರಿಷ್ಠ ಪ್ರಕರಣಗಳು ಪತ್ತೆಯಾಗಿದೆ. ಕೇರಳದಲ್ಲಿ 18,531 ಪ್ರಕರಣಗಳು, ನಂತರದ ಸ್ಥಾನ ದಲ್ಲಿರುವ ಮಹಾರಾಷ್ಟ್ರದಲ್ಲಿ 6,269 ಪ್ರಕರಣ ಗಳು, ಆಂಧ್ರಪ್ರದೇಶದಲ್ಲಿ 2,174 ಪ್ರಕರಣಗಳು, ಒಡಿಶಾದಲ್ಲಿ 1,864 ಪ್ರಕರಣಗಳು ಮತ್ತು ಕರ್ನಾಟಕದಲ್ಲಿ 1,857 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಈ ಐದು ರಾಜ್ಯ ಗಳು ದೇಶದ ಶೇ.77.23 ರಷ್ಟು ಹೊಸ ಪ್ರಕರಣಗಳಿಗೆ ಕಾರಣವಾಗಿದ್ದು, ಕೇರಳ ರಾಜ್ಯವೊಂದೇ 46.63 ರಷ್ಟು ಹೊಸ ಪ್ರಕರಣಗಳಿಗೆ ಕಾರಣ ವಾಗಿದೆ.
ದೇಶದಲ್ಲಿಂದು 535 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಅದರಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ 234 ಮಂದಿ ಮೃತಪಟ್ಟಿದ್ದರೆ, ಕೇರಳ ರಾಜ್ಯದಲ್ಲಿ 98 ಮಂದಿ ಮೃತಪಟ್ಟಿದ್ದಾರೆ.