ಮುಂಬೈ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 209 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 69 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 209.36 ಪಾಯಿಂಟ್ಸ್ ಹೆಚ್ಚಳಗೊಂಡು 52,653.07 ತಲುಪಿದೆ. ಎನ್ಎಸ್ಇ ಸೂಚ್ಯಂಕ ನಿಫ್ಟಿ 69.10 ಪಾಯಿಂಟ್ಸ್ ಏರಿಕೆ ಗೊಂಡು 15,778.50 ಪಾಯಿಂಟ್ಸ್ ಮುಟ್ಟಿದೆ. ದಿನದ ವಹಿವಾಟು ಅಂತ್ಯಕ್ಕೆ 1781 ಷೇರುಗಳು ಏರಿಕೆಗೊಂಡರೆ, 1170 ಷೇರುಗಳು ಕುಸಿದಿವೆ.
ಹಿಂಡಾಲ್ಕೊ, ಟಾಟಾ ಸ್ಟೀಲ್, ಬಜಾಜ್ ಫಿನ್ಸರ್ವ್, ಎಸ್ಬಿಐ ಮತ್ತು ಜೆಎಸ್ಡಬ್ಲ್ಯೂ ಸ್ಟೀಲ್ ನಿಫ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ ಷೇರುಗಳಾಗಿದ್ದು, ಮಾರುತಿ ಸುಜುಕಿ, ಪವರ್ ಗ್ರಿಡ್ ಕಾರ್ಪ್, ಬಜಾಜ್ ಆಟೋ, ಐಟಿಸಿ ಮತ್ತು ಕೋಲ್ ಇಂಡಿಯಾ ಕುಸಿತ ಕಂಡಿವೆ.
ಲೋಹದ ಸೂಚ್ಯಂಕ ಶೇಕಡಾ 5ರಷ್ಟು ಗಳಿಸಿದರೆ, ಎಫ್ಎಂಸಿಜಿ ಸೂಚ್ಯಂಕ ಶೇ 1ರಷ್ಟು ಕುಸಿದಿದೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಶೇಕಡಾ 0.4 ರಿಂದ 0.9 ರಷ್ಟು ಏರಿಕೆಯಾಗಿದೆ. ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ 9 ಡಾಲರ್ ಹೆಚ್ಚಳದಿಂದ ಪ್ರತಿ ಡಾಲರ್ಗೆ 74.28 ಕ್ಕೆ ತಲುಪಿದೆ.