Saturday, 23rd November 2024

41, 831 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆ

#corona

ನವದೆಹಲಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 40 ಸಾವಿರಕ್ಕಿಂತ ಅಧಿಕ ಕೋವಿಡ್ 19 ಹೊಸ ಪ್ರಕರಣ ಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.

ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 41, 831 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ.

ಜುಲೈ 27ರಂದು ಭಾರತದಲ್ಲಿ 30,000ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗಿತ್ತು. ಜುಲೈ 28ರಂದು 43,654 ಪ್ರಕರಣ ಪತ್ತೆಯಾಗಿತ್ತು. ನಂತರ ಜುಲೈ 29ರಂದು 43,509 ಪ್ರಕರಣ, ಜುಲೈ 30 ರಂದು 44,230 ಪ್ರಕರಣ, ಜುಲೈ 31 ರಂದು 41, 649 ಪ್ರಕರಣ ದಾಖಲಾಗಿತ್ತು.

ಏತನ್ಮಧ್ಯೆ ಸೋಂಕಿನಿಂದ ಕಳೆದ 24ಗಂಟೆಗಳಲ್ಲಿ 541 ಮಂದಿ ಮೃತಪಟ್ಟಿದ್ದು, ಪ್ರಕರಣಗಳ ಸಂಖ್ಯೆ ಒಟ್ಟು 3,16,55,824ಕ್ಕೆ ಏರಿಕೆಯಾಗಿದೆ. ಅದೇ ರೀತಿ ಕೋವಿಡ್ ನಿಂದ ಮೃತರ ಸಂಖ್ಯೆ 4,24,351ಕ್ಕೆ ಹೆಚ್ಚಳವಾಗಿದೆ.

ಕೇರಳವು ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು 20,624 ಎಂದು ವರದಿ ಮಾಡಿದೆ. ಮಹಾರಾಷ್ಟ್ರ 6,959 ಪ್ರಕರಣಗಳು, ಆಂಧ್ರ ಪ್ರದೇಶ 2,058 ಪ್ರಕರಣಗಳು, ಕರ್ನಾಟಕ 1,987 ಪ್ರಕರಣಗಳು ಮತ್ತು ತಮಿಳುನಾಡು 1,986 ಪ್ರಕರಣಗಳು ದಾಖಲಾಗಿವೆ.