ಅಭಿಪ್ರಾಯ
ಅಮಿತಾಭ್ ಕಾಂತ್
ಸಿಇಒ, ನೀತಿ ಆಯೋಗ
ಗುಜರಿ ನಾವು ಚಲಾಯಿಸುವ ಕಾರುಗಳು ನಮ್ಮ ಬಗ್ಗೆ ಬಹಳಷ್ಟು ಹೇಳುತ್ತವೆ. ಹವಾಮಾನ ಪ್ರಜ್ಞೆಯುಳ್ಳ, ನವಯುಗದ ಪ್ರಜೆಯಾಗಿ, ನೀವು ನಿಮ್ಮ ವಾಹನದ
ಎಂಜಿನ್ ಆರಂಭಿಸಿದಾಗ, ಸಹ ಪ್ರಯಾಣಿಕರ ಸುರಕ್ಷತೆಯ ಖಾತ್ರಿಯೊಂದಿಗೆ, ಈ ಗ್ರಹದ ಸುಸ್ಥಿರ ಹಸಿರು ಭವಿಷ್ಯದ ಕಡೆಗೆ ಚಾಲನೆ ಮಾಡುತ್ತಿರುವಿರಾ?
ಎಂದು ಯೋಚಿಸಿ.
ಏರುತ್ತಿರುವ ಜಾಗತಿಕ ತಾಪಮಾನದ ಮಟ್ಟಗಳು ನಾವು ಈ ಬಗ್ಗೆ ಚಿಂತನೆ ನಡೆಸುವಂತೆ ಮಾಡಿವೆ. ಜಗತ್ತು ಬೃಹತ್ ಹವಾಮಾನ ಬಿಕ್ಕಟ್ಟಿನ ಅಂಚಿನಲ್ಲಿದೆ. ಮನುಷ್ಯನ ಹಸ್ತಕ್ಷೇಪವು ಕಳೆದ 2000 ವರ್ಷಗಳಲ್ಲಿ ಅಸಾ ಧಾರಣ ಪ್ರಮಾಣದಲ್ಲಿ ಹವಾಮಾನವನ್ನು ಬಿಸಿಯಾಗಿಸಿದೆ ಎಂದು ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಅಂತರ್ ಸರಕಾರಿ ಸಮಿತಿ (ಐಪಿಸಿಸಿ) ಹೇಳುತ್ತದೆ. ನಾನು ಈ ಲೇಖನ ಬರೆಯುವಾಗ, ಕ್ಯಾಲಿಫೋರ್ನಿಯಾ ಐತಿಹಾಸಿಕ ಬರಗಾಲದ ಕಪಿಮುಷ್ಠಿ ಯಲ್ಲಿ ಸಿಲುಕಿದೆ, ಕಾಳ್ಗಿಚ್ಚುಗಳು ಗ್ರೀಸ್ ಅನ್ನು ಸುಡುತ್ತಿವೆ ಮತ್ತು ಚೀನಾ ಹಾಗೂ ನಮ್ಮದೇ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳವನ್ನು ಪ್ರವಾಹ ಆವರಿಸಿದೆ.
ಜಾಗತಿಕ ಸಮುದಾಯವು ಘೋರ ಬಿಕ್ಕಟ್ಟಿಗೆ ಹತ್ತಿರವಾಗುತ್ತಿದೆ. ಭಾರತವು ಅತ್ಯಂತ ಹೆಚ್ಚಿನ ಅಪಾಯ ದಲ್ಲಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ವಿಶ್ವದ 30 ಅತ್ಯಂತ ಕಲುಷಿತ ನಗರಗಳಲ್ಲಿ 22 ನಗರಗಳಿಗೆ ನೆಲೆ ಯಾಗಿರುವ ಭಾರತದಲ್ಲಿ ವಾಹನ ಮಾಲಿನ್ಯವು ಸುಮಾರು ಶೇ.30 ರಷ್ಟು ಇಂಗಾಲದ ಹೊರ ಸೂಸುವಿಕೆಗೆ ಕಾರಣ ವಾಗಿದೆ. ಇದು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಇಂಗಾಲ ಹೊರಸೂಸುವ ದೇಶ ವನ್ನಾಗಿಸಿದೆ. ಭಾರತದಲ್ಲಿ ಹಳೆಯ ಮತ್ತು ಅನರ್ಹ ವಾಹನಗಳು ಹೊಸ ವಾಹನಗಳಿಗಿಂತ ಸುಮಾರು 6-7 ಪಟ್ಟು ಹೆಚ್ಚು ಇಂಗಾಲ ಹೊರಸೂಸುವಿಕೆಯ ಮೂಲಕ ವಾಯುಮಾಲಿನ್ಯಕ್ಕೆ ಗಮನಾರ್ಹವಾಗಿ ಕಾರಣ ವಾಗುತ್ತಿವೆ.
ಭಾರತವು ಆಟೋಮೊಬೈಲ್ ಕ್ಷೇತ್ರದಲ್ಲಿ ಅದ್ಭುತವಾದ ಉತ್ಕರ್ಷವನ್ನು ಕಂಡಿದೆ. 2020ರ ಹಣಕಾಸು ವರ್ಷದಲ್ಲಿ ಸುಮಾರು 2.1 ಕೋಟಿ ವಾಹನ ಮಾರಾಟ ದಾಖಲಾಗಿದೆ. ಈ ಕ್ಷೇತ್ರವು ಕಳೆದ ಎರಡು ದಶಕಗಳಲ್ಲಿ ಶೇ.9.4 ರಷ್ಟು ವಾರ್ಷಿಕ ಬೆಳವಣಿಗೆಯ ದರವನ್ನು ದಾಖಲಿಸಿದೆ. ಇದುವರೆಗೆ, ಭಾರತದಲ್ಲಿ ಸುಮಾರು ೩೩ ಕೋಟಿ ವಾಹನಗಳು ನೋಂದಣಿಯಾಗಿವೆ. ೧೯೫೦ ರ ದಶಕದಲ್ಲಿ ನೋಂದಾಯಿಸಲಾದ ವಾಹನವು ರಸ್ತೆ ಸಾರಿಗೆ ಪ್ರಾಽಕಾರಗಳ ಪ್ರಕಾರ ಇನ್ನೂ
ನೋಂದಣಿಯಾಗಿರಬಹುದು’. ದ್ವಿಚಕ್ರ ವಾಹನಗಳು ಇವುಗಳ ಅತಿದೊಡ್ಡ ಭಾಗವಾಗಿದ್ದು, ಇವು ಎಲ್ಲಾ ವಾಹನಗಳ ಪೈಕಿ ಶೇ.೭೫ ರಷ್ಟಿವೆ. ನಂತರ ಕಾರು ಗಳು/ ಜೀಪ್‌ಗಳು/ ಟ್ಯಾಕ್ಸಿಗಳು ಎರಡನೇ ದೊಡ್ಡ ಭಾಗವಾಗಿದ್ದು, ಇವು ಶೇ.೧೩ರಷ್ಟು ಇವೆ.
ವಾಹನದ ಗುಜರಿ ನೀತಿಯು ವಾಹನದ ನೋಂದಣಿ ರದ್ದುಪಡಿಸುವ ಮೊಟ್ಟಮೊದಲ ಸಾಂಸ್ಥಿಕ ಕಾರ್ಯವಿಧಾನವಾಗಿದೆ. ರಸ್ತೆ ಸಾರಿಗೆ ಮತ್ತು ಹೆzರಿ ಸಚಿವಾಲಯದ ವಾಹನ್ ಅಂಕಿಅಂಶಗಳ ಪ್ರಕಾರ, ಸೂಕ್ತ ಫಿಟ್‌ನೆಸ್ ಅಥವಾ ನೋಂದಣಿ ಪ್ರಮಾಣಪತ್ರವನ್ನು ಹೊಂದಿರದ ಸುಮಾರು ಒಂದು ಕೋಟಿಗೂ ಹೆಚ್ಚು ವಾಹನಗಳಿವೆ. ವಾಹನದ ಗುಜರಿ ನೀತಿಯೂ ಅತ್ಯಂತ ಹಳೆಯ ವಾಹನಗಳ ನಿವೃತ್ತಿಗೆ ಒಂದು ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಇವುಗಳು ರಸ್ತೆಗಳಲ್ಲಿ ಓಡಿಸಲು ಸೂಕ್ತವಲ್ಲ ಮತ್ತು ಮಾಲಿನ್ಯ ಹೊರಸೂಸುವಿಕೆ, ಕಡಿಮೆ ಇಂಧನ ದಕ್ಷತೆ ಮತ್ತು ಪ್ರಯಾಣಿಕರಿಗೆ ಸುರಕ್ಷತೆಯ ಅಪಾಯದಂತಹ ಹೆಚ್ಚಿನ ಋಣಾತ್ಮಕ ಅಂಶಗಳನ್ನು ಹೊಂದಿರುತ್ತವೆ. ಈ ಜೀವಿತಾವಧಿ ಮುಗಿದಿರುವ ವಾಹನಗಳು ಗುಜರಿಗೆ ಹಾಕಲು ಅತ್ಯಂತ ಸೂಕ್ತವಾಗಿವೆ.
ಇದಲ್ಲದೆ, ಮುಂದಿನ ೧೦ ವರ್ಷಗಳಲ್ಲಿ ಸುಮಾರು ೧೩-೧೭ ಕೋಟಿ ವಾಹನಗಳು ತಮ್ಮ ಜೀವಿತಾವಧಿಯ ಅಂತ್ಯವನ್ನು ತಲುಪುತ್ತವೆ ಎಂದು ಅಂದಾಜಿಸ ಲಾಗಿದೆ. ನಮ್ಮ ಗ್ರಹದ ಮೇಲಿನ ಪರಿಸರ ಒತ್ತಡವನ್ನು ನಿವಾರಿಸಲು ಮರುಬಳಕೆಯ ಆರ್ಥಿಕತೆಯು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಪ್ರಧಾನ
ಮಂತ್ರಿಯವರು ಘೋಷಿಸಿದ್ದಾರೆ. ಕೇಂದ್ರ ಸರಕಾರವು ಈ ಆರ್ಥಿಕತೆ ಪರಿಕಲ್ಪನೆಯ ಮೂಲಕ ಫಲಿತಾಂಶದ ದಕ್ಷತೆಯನ್ನು ಗರಿಷ್ಠಗೊಳಿಸಲು ಮತ್ತು ಶೂನ್ಯ ತ್ಯಾಜ್ಯ, ಸುಸ್ಥಿರ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸಲು ಉತ್ಸುಕವಾಗಿದೆ.
ವಾಹನಗಳನ್ನು ಗುಜರಿಗೆ ಹಾಕುವುದರಿಂದ ಕಬ್ಬಿಣಯುಯಕ್ತ ಮತ್ತು ಕಬ್ಬಿಣೇತರ ಲೋಹಗಳು ಮಾತ್ರವಲ್ಲದೆ ಪ್ಲಾಸ್ಟಿಕ್, ಗ್ಲಾಸ್, ರಬ್ಬರ್, ಜವಳಿ ಇತ್ಯಾದಿಗಳನ್ನು ಇಂಧನವಾಗಿ ಮರುಬಳಕೆ ಮಾಡಬಹುದು. ಇವುಗಳ ಮರುಬಳಕೆಯು ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆಗೆ ಹಾಗೂ ತ್ಯಾಜ್ಯ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಒಂದು ಮಹತ್ವದ ಬದಲಾವಣೆಯನ್ನು ತರುತ್ತದೆ. ೨೦೦೮-೦೯ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಸಮಯದಲ್ಲಿ, ಅಮೆರಿಕ ಕ್ಯಾಶ್ ಫಾರ್ ಕ್ಲಂಕರ್ಸ್ ಮತ್ತು ಕಾರ್ ಅಲೋವೆ ರಿಬೇಟ್ ಸಿಸ್ಟಮ್‌ನಂತಹ ಇದೇ ರೀತಿಯ ಉಪಕ್ರಮಗಳನ್ನು ತಂದಿತು. ಹಳೆಯ ಮತ್ತು ಇಂಧನ-ದಕ್ಷತೆಯಿಲ್ಲದ ವಾಹನಗಳ
ಮಾಲೀಕರು ಹೊಸ ಇಂಧನ ದಕ್ಷತೆಯ ವಾಹನಗಳನ್ನು ಕೊಳ್ಳಲು ಹಣಕಾಸಿನ ನೆರವು ನೀಡಲಾಯಿತು.
ಯುರೋಪಿಯನ್ ಒಕ್ಕೂಟವು ಪ್ರತಿ ವರ್ಷವ ಸರಿಸುಮಾರು ೯ ಮಿಲಿಯನ್ ಟನ್ ವಾಹನಗಳ ಗುಜರಿಯನ್ನು ಉತ್ಪಾದಿಸುತ್ತದೆ. ವಾಹನಗಳ ಉತ್ಪಾದಕರಿಗೆ ಇವುಗಳ ನಿರ್ವಹಣೆಯ ಜವಾಬ್ದಾರಿ ನೀಡಲಾಗಿದೆ. ಅಂತೆಯೇ, ಜಪಾನ್‌ನಲ್ಲಿ ಗುಜರಿ ನಿರ್ವಹಣೆಯನ್ನು ಒಂದು ಪ್ರಮುಖ ಸವಾಲಾಗಿ ಗುರುತಿಸಲಾಗಿದ್ದು, ವಾರ್ಷಿಕವಾಗಿ ಸುಮಾರು ಐದು ಮಿಲಿಯನ್ ವಾಹನಗಳನ್ನು ರಸ್ತೆಗಳಿಂದ ತೆಗೆಯಲಾಗುತ್ತದೆ. ಭವಿಷ್ಯದ ಆಟೋಮೊಬೈಲ್ ತಯಾರಿಕೆಗೆ ಸಂಪನ್ಮೂಲವಾಗಿ ಗುಜರಿಯ ಸೂಕ್ತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಮರುಬಳಕೆಯ ಆರ್ಥಿಕ ತತ್ವಗಳನ್ನು ಅಳವಡಿಸಿಕೊಂಡಿವೆ. ಭಾರತ ಸರ್ಕಾರದ ವಾಹನ ಗುಜರಿ ನೀತಿಯು ಈ ಜಾಗತಿಕ ಅತ್ಯುತ್ತಮ ಅಭ್ಯಾಸಗಳಿಗೆ ಹೊಂದಿಕೆಯಾಗಿದೆ.
ದೆಹಲಿಯ ಮಾಯಾಪುರಿ, ಮುಂಬೈನ ಕುಲಾರ್, ಚೆನ್ನೈನ ಪುದುಪೇಟೈ, ಕೋಲ್ಕತ್ತಾದ ಮಲ್ಲಿಕ್ ಬಜಾರ್, ವಿಜಯವಾಡದ ಜವಾಹರ್ ಆಟೋ ನಗರ,
ಗುಂಟೂರಿನ ಆಟೋ ನಗರ – ಭಾರತದ ನಗರ ಪ್ರದೇಶಗಳಲ್ಲಿನ ಬೃಹತ್ ವಾಹನಗಳ ಗುಜರಿ ವ್ಯವಸ್ಥೆಯ ಉದಾಹರಣೆಗಳಾಗಿವೆ. ಪ್ರಸ್ತುತ, ಭಾರತದಲ್ಲಿ ವಾಹನಗಳನ್ನು ಗುಜರಿಗೆ ಹಾಕಲು ಅಸಂಘಟಿತ ಅನೌಪಚಾರಿಕ ಮಾರುಕಟ್ಟೆ ಇದೆ. ಈ ಅಸಂಘಟಿತ ವಲಯ ಮೌಲ್ಯ ಸರಪಳಿಯು ಹೆಚ್ಚು ರಚನಾತ್ಮಕವಲ್ಲದ, ಹೆಚ್ಚು ಕಾರ್ಮಿಕರನ್ನು ಬೇಡುವ ಮತ್ತು ಪರಿಸರ ಸ್ನೇಹಿ ಅಲ್ಲದ ವ್ಯವಸ್ಥೆಯಾಗಿದೆ.
ಇದಲ್ಲದೆ, ಅನೌಪಚಾರಿಕ ವಲಯವು ವಾಹನಗಳನ್ನು ಮುರಿಯಲು ಮತ್ತು ಮರುಬಳಕೆ ಮಾಡಲು ಕಚ್ಚಾ ವಿಧಾನಗಳನ್ನು ಬಳಸುವುದರಿಂದ, ಹೆಚ್ಚಿನ ಸಾಮರ್ಥ್ಯದ ಉಕ್ಕಿನ ಮಿಶ್ರಲೋಹಗಳು ಮತ್ತು ಅಮೂಲ್ಯವಾದ ಲೋಹಗಳ ಸಂಪೂರ್ಣ ಮೌಲ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅನೌಪಚಾರಿಕ
ಮತ್ತು ಅಸಂಘಟಿತ ವಾಹನ ಮರುಬಳಕೆ ವಲಯವು ಮುಖ್ಯವಾಗಿ ವ್ಯಾಪಾರಿಗಳು, ಒಡೆಯುವವರು, ಗುಜರಿ ವಿತರಕರು ಮತ್ತು ಮರುಬಳಕೆದಾರರನ್ನು
ಒಳಗೊಂಡಿದೆ. ಕೇಂದ್ರ ಸರಕಾರದ ಹೊಸ ವಾಹನ ಗುಜರಿ ನೀತಿಯು ಅಸಂಘಟಿತ ಮಾರುಕಟ್ಟೆಯನ್ನು ಸುಧಾರಿಸುತ್ತದೆ ಮತ್ತು ಅನೌಪಚಾರಿಕ ವಲಯದ
ಕಾರ್ಮಿಕರನ್ನು ಔಪಚಾರಿಕ ವಲಯದ ವ್ಯಾಪ್ತಿಗೆ ತರುತ್ತದೆ.
ರಸ್ತೆ ಸಾರಿಗೆ ಮತ್ತು ಹೆzರಿಗಳ ಸಚಿವಾಲಯವು ಕೈಗೊಂಡ ಅಧ್ಯಯನವು ಅಸ್ತಿತ್ವದಲ್ಲಿರುವ ಬಹು ಮೆಕ್ಯಾನಿಕ್ಸ್ ಮತ್ತು ರಿಪೇರಿ ಅಂಗಡಿಗಳು ಹಂಚಿಕೊಂಡ
ಸಾಮಾನ್ಯ ತೆರೆದ ಪ್ರದೆಶದಲ್ಲಿ ಸ್ಥಾಪಿಸಲಾಗಿರುವ ಈ ಗುಜರಿ ಯಾರ್ಡ್‌ಗಳ ಕಾರ್ಯಾಚರಣೆಗಳನ್ನು ಮೌಲ್ಯಮಾಪನ ಮಾಡಲು ಮತ್ತು ಅರ್ಥಮಾಡಿಕೊಳ್ಳಲು
ಸಾಧ್ಯವಾಯಿತು. ವಾಹನಗಳನ್ನು ಪ್ರಾಥಮಿಕವಾಗಿ ದಳಿಗಳು, ಬಳಸಿದ ಕಾರ್ ಡೀಲರ್‌ಗಳು, ಖಾಸಗಿ ಬಸ್/ ಟ್ಯಾಕ್ಸಿ ಆಪರೇಟರ್ ಅಸೋಸಿಯೇಶನ್‌ಗಳು
ಅಥವಾ ಮೆಕ್ಯಾನಿಕ್ ಅಂಗಡಿಗಳಿಂದ ಪಡೆಯಲಾಗುತ್ತದೆ ಮತ್ತು ಕೆಲವೊಮ್ಮೆ ಕದ್ದ ವಾಹನಗಳನ್ನು ಕೂಡ ಇಲ್ಲಿಗೆ ತರಲಾಗುತ್ತದೆ. ದಳಿಗಳು ಸಾಮಾನ್ಯವಾಗಿ ವಾಹನ ಹಣಕಾಸು ಕಂಪನಿಗಳು, ವಿಮಾ ಕಂಪನಿಗಳು ಮತ್ತು ಪೊಲೀಸ್ ಇಲಾಖೆಗಳ ಮೂಲಕ ಹರಾಜಿನಿಂದ ಪಡೆಯುತ್ತಾರೆ.
ವಾಹನಗಳನ್ನು ಒಡೆದು ಹಾಕುವುದು ಮತ್ತು ಬಿಡಿ ಭಾಗಗಳನ್ನು ಬೇರ್ಪಡಿಸುವ ಕೆಲಸ ಯಾವುದೇ ವಿಶೇಷ ಯಂತ್ರೋಪಕರಣಗಳಿಲ್ಲದೆ ೩-೪ ಜನರಿಂದ ಸಂಪೂರ್ಣವಾಗಿ ಕೈಯಾರೆ ನಡೆಯುವ ಪ್ರಕ್ರಿಯೆಯಾಗಿದೆ. ಸರಕಾರದ ವಾಹನ ಗುಜರಿ ನೀತಿಯು ಸ್ವಯಂಚಾಲಿತ ಫಿಟ್‌ನೆಸ್ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ಹೆಚ್ಚು ಹೂಡಿಕೆಗಳನ್ನು ಬಯಸುತ್ತದೆ, ಇವು ವಾಹನಗಳ ‘ರಸ್ತೆ-ಯೋಗ್ಯತೆಯನ್ನು’ ಪರೀಕ್ಷಿಸುವ ಅತ್ಯಾಧುನಿಕ ಸೌಲಭ್ಯಗಳಾಗಿರುತ್ತವೆ. ಈ ಕೇಂದ್ರಗಳನ್ನು ರಾಜ್ಯ ಸರಕಾರಗಳು, ಖಾಸಗಿ ವಲಯದ ಸಂಸ್ಥೆಗಳು, ಆಟೋಮೊಬೈಲ್ ತಯಾರಕರು ಮತ್ತು ಇತರರಿಂದ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಸ್ಥಾಪಿಸಲಾಗುವುದು.
ಇದು ನಿಸ್ಸಂದೇಹವಾಗಿ ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಇದರ ಜತೆಯಲ್ಲಿ, ದೇಶಾದ್ಯಂತ ಗುಜರಿ ಕೇಂದ್ರಗಳನ್ನು ಸ್ಥಾಪಿಸಲು ದೊಡ್ಡ ಹೂಡಿಕೆಗಳು ಸಹ ಬರುತ್ತವೆ. ಇದು ಕೂಡ ಮೌಲ್ಯ ಸರಪಳಿಯಲ್ಲಿ ಉದ್ಯೋಗ ಅವಕಾಶಗಳ ಸೃಷ್ಟಿಗೆ ಕಾರಣವಾಗುತ್ತದೆ. ಗುಜರಿ ನೀತಿಯ ಪ್ರಕಾರ, ಹಳೆಯ ವಾಹನಗಳ ಮಾಲೀಕರಿಗೆ (೧೫ ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳು) ಪ್ರೋತ್ಸಾಹಧನ ನೀಡಲಾಗುವುದು ಮತ್ತು ಅದರ ಠೇವಣಿ ಪ್ರಮಾಣಪತ್ರವನ್ನು ನೀಡಲಾಗುವುದು. ಹೊಸ ವಾಹನಗಳನ್ನು ಖರೀದಿಸುವಾಗ ಈ ಪ್ರಮಾಣಪತ್ರವನ್ನು ಬಳಕೆ ಮಾಡಬಹುದು ಮತ್ತು ಗ್ರಾಹಕರು ನೋಂದಣಿ ಶುಲ್ಕದ ಸಂಪೂರ್ಣ ಮನ್ನಾ ಪಡೆಯುತ್ತಾರೆ.
ಇದರೊಂದಿಗೆ, ವೈಯಕ್ತಿಕ ವಾಹನಗಳಿಗೆ ರಸ್ತೆ ತೆರಿಗೆಯ ಮೇಲೆ ಶೇ.೨೫ ರಷ್ಟು ರಿಯಾಯಿತಿ ಮತ್ತು ವಾಣಿಜ್ಯ ವಾಹನಗಳಿಗೆ ಶೇ.೧೫ ರವರೆಗೆ ರಿಯಾಯಿತಿ ನೀಡುವ ಕರಡು ಅಧಿಸೂಚನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಪ್ರಕಟಿಸಿದೆ. ಭಾರತೀಯ ಆಟೋಮೊಬೈಲ್ ತಯಾರಕರ ಸಂಘ
(ಸಿಯಾಮ) ದಂತಹ ಉದ್ಯಮ ಸಂಸ್ಥೆಗಳು ಸಹ ಈ ಉಪಕ್ರಮವನ್ನು ಬೆಂಬಲಿಸಿವೆ. ಸ್ಕ್ರ್ಯಾಪ್ ಮಾಡಿದ ವಾಹನಗಳ ಬದಲಿಗೆ ಖರೀದಿಸಿದ ಹೊಸ ವಾಹನಗಳ
ಮೇಲೆ ಶೇ. ೫ ರಷ್ಟು ರಿಯಾಯಿತಿ ನೀಡುವಂತೆ ರಸ್ತೆ ಸಾರಿಗೆ ಮತ್ತು ಹೆzರಿಗಳ ಸಚಿವಾಲಯವು ಸಿಯಾಮ್ ಗೆ ಸಲಹೆ ನೀಡಿದೆ. ೧೫ ವರ್ಷಕ್ಕಿಂತ ಹಳೆಯದಾದ
ಖಾಸಗಿ ವಾಹನಗಳಿಗೆ ಮರು ನೋಂದಣಿ ಶುಲ್ಕವನ್ನು ಹೆಚ್ಚಿಸಲು ಹಾಗೂ ೧೫ ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣೀಕರಣ
ಶುಲ್ಕವನ್ನು ಹೆಚ್ಚಿಸಲು ನೀತಿಯು ಬಯಸುತ್ತದೆ. ಹಳೆಯ ಮಾಲಿನ್ಯಕಾರಕ ವಾಹನಗಳ ಮೇಲೆ ‘ಹಸಿರು ತೆರಿಗೆ’ ವಿಧಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.
ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳು ಈಗಾಗಲೇ ಈ ದಿಕ್ಕಿನಲ್ಲಿ ಕ್ರಮಗಳನ್ನು ಆರಂಭಿಸಿವೆ.
ಈ ನೀತಿಯು ಬಳಕೆದಾರರಿಗೆ ಆರ್ಥಿಕ ಲಾಭಗಳ ಗುರಿಯನ್ನು ಹೊಂದಿದೆ. ಆಂತರಿಕ ವಿಶ್ಲೇಷಣೆಯ ಪ್ರಕಾರ, ಕಾರು ಬಳಕೆದಾರರು ಮತ್ತು ಟ್ರಕ್ ಬಳಕೆದಾರರು ೫ ವರ್ಷಗಳ ಅವಧಿಯಲ್ಲಿ ಕ್ರಮವಾಗಿ ೮ ಲಕ್ಷ ಮತ್ತು ೨೦ ಲಕ್ಷ ರು. ಮೌಲ್ಯದ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ. ಸ್ಥೂಲವಾಗಿ ಹೇಳುವುದಾದರೆ, ಹಳೆ ವಾಹನವು ಹೊಸ ವಾಹನಗಳಿಗೆ ಬೇಡಿಕೆಯನ್ನು ಸೃಷ್ಟಿಸುವುದರಿಂದ ವಾಹನ ಉದ್ಯಮ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುತ್ತದೆ. ಕೋವಿಡ್ ನಂತರದ ಸನ್ನಿವೇಶದಲ್ಲಿ, ಆಟೋಮೊಬೈಲ್ ಮಾರಾಟವು ಶೇ.೧೪ ಕುಸಿತವನ್ನು ಕಂಡಿದೆ. ಈ ನೀತಿಯು ಹಳೆಯ ವಾಹನಗಳನ್ನು ನಿವೃತ್ತಿಗೊಳಿಸುವ ಮೂಲಕ ಪ್ರಯಾಣಿಕರಿಂದ ಹೊಸ ವಾಹನಗಳಿಗೆ ಬೇಡಿಕೆಯನ್ನು ಸೃಷ್ಟಿಸುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ಉದ್ಯಮದ ವಾರ್ಷಿಕ ವಹಿವಾಟು ಶೇ. ೩೦ ರಷ್ಟು ವೃದ್ಧಿಯಾಗುತ್ತದೆ.
ಹಳೆಯ ವಾಹನಗಳ ಗುಜರಿ ಪ್ರಕ್ರಿಯೆಯಿಂದ ನಾವು ಭಾರತದ ಸಂಚಾರ ವ್ಯವಸ್ಥೆಯಲ್ಲಿ ಹೊಸ ಯುಗದ ಆರಂಭಕ್ಕೆ ಅವಕಾಶ ಸೃಷ್ಟಿಸುವುದಷ್ಟೇ ಅಲ್ಲ, ಭವಿಷ್ಯ ವನ್ನು ಹವಾಮಾನ ಪ್ರಜ್ಞೆ, ಪಾದಚಾರಿ ಮತ್ತು ಪ್ರಯಾಣಿಕ ಸ್ನೇಹಿ ಮತ್ತು ತಾಂತ್ರಿಕವಾಗಿ ಸಕ್ರಿಯಗೊಳಿಸಬಹುದು. ಕೇಂದ್ರ ಸರಕಾರದ ವಾಹನ ಗುಜರಿ ನೀತಿ ಅಥವಾ ಸ್ವಯಂಪ್ರೇರಿತ ವಾಹನಗಳ ಆಧುನೀಕರಣ ಕಾರ್ಯಕ್ರಮವು ಮರು ಬಳಕೆ ಆರ್ಥಿಕತೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ಭಾರತದ ನಗರಗಳಲ್ಲಿ
ವಾಯುಮಾಲಿನ್ಯದ ಅಪಾಯವನ್ನು ತಗ್ಗಿಸುತ್ತದೆ, ಆರ್ಥಿಕ ವೃದ್ಧಿಗೆ ನೆರವಾಗುತ್ತದೆ, ಆಟೋಮೊಬೈಲ್ ಕ್ಷೇತ್ರವನ್ನು ಆಧುನೀಕರಿಸುತ್ತದೆ. ಅತ್ಯಂತ ಮುಖ್ಯವಾಗಿ,
ಈ ನೀತಿಯು ಭಾರತದ ರಸ್ತೆಗಳನ್ನು ಮುಂದಿನ ಹಲವು ತಲೆಮಾರುಗಳ ನಾಗರಿಕರಿಗೆ ಸುರಕ್ಷಿತಗೊಳಿಸುವ ನಿಜವಾದ ಚಾಲಕ ಶಕ್ತಿಯಾಗಿದೆ.