ಚೆಂಗಳಿಕೆವ್ವನಿಕೆ ಹರಕೆಗಾಗಿ ಓಕುಳಿ
ಕರೋನಾ ಸುಳಿನ ಮಧ್ಯೆ ಭರ್ಜರಿ ಓಕುಳಿ
ವಿಶೇಷ ವರದಿ:ರಾಘವೇಂದ್ರ ಕಲಾದಗಿ
ಬಾಗಲಕೋಟೆ ಜಿಲ್ಲೆಯ ಗಿರಿಸಾಗರದಲ್ಲಿ ಪುರುಷ- ಮಹಿಳೆಯರ ಸಗಣಿ ಎರಚಾಟದ ಓಕುಳಿ ಸಂಭ್ರಮ ಭರ್ಜರಿ ಯಾಗಿ ನಡೆಯಿತು.
ಗ್ರಾಮದ ಸಂಗಮೇಶ್ವರ ದೇವಸ್ಥಾನದ ಎದುರು ಪ್ರತಿವರ್ಷದಂತೆ ಈ ವರ್ಷವೂ ಚೆಂಗಳಿಕೆವ್ವನ ಹರಕೆ ತೀರಿಸಲು ನೂರಾರು ಪುರುಷರು ಹಾಗೂ ಮಹಿಳೆಯರು ಪರಸ್ಪರ ಸಗಣಿ ಎರಚಿ ತಮ್ಮ ಇಚ್ಛೆಯ ಹರಕೆ ಈಡೇರಿಕೆ ಬಳಿಕೆ ಚೆಂಗಳಿಕೆವ್ವನಿಗೆ ಹರಕೆ ತಿರಿಸಿಕೊಂಡರು. ಗ್ರಾಮಸ್ಥರು ಸಾಕಿದ ಆಕಳು-ಎಮ್ಮೆ ಸಗಣಿಯನ್ನು ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶೇಖರಿಸಿ ಪರಸ್ಪರ ಎರಚಾಟಕ್ಕೆ ಸಿದ್ದಗೊಳಿಸುವದು ವಾಡಿಕೆ.
ಇದೀಗ ಕರೋನಾ ೩ನೇ ಅಲೆಯ ಭೀತಿ ನಡುವೆಯೂ ನೂರಾರು ಮಹಿಳೆ-ಪುರುಷರು ಎನ್ನುವ ಭೇದ ಭಾವವನ್ನು ತೊರೆದು ಸಗಣಿ ಎರಚುವ ಸಾಂಪ್ರದಾಯಿಕ ಪದ್ಧತಿಯು ಗ್ರಾಮದಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಸಗಣಿ ಓಕುಳಿಗೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮ ಪ್ರಸಿದ್ಧಿಯಾಗಿದೆ.
ಚೆಂಗಳಿಕೆವ್ವನಿಗೆ ಗ್ರಾಮದ ಜನರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುವುದು ರೂಢಿಯಲ್ಲಿದೆ ಈ ನಿಮತ್ತ ಸಗಣಿ ಓಕುಳಿಯಾಡುವ ಮೂಲಕ ತಮ್ಮ ಹರಕೆ ತೀರಿಸಿಕೊಂಡು ದೇವಿಗೆ ಕೃತಾರ್ಥರಾಗುತ್ತಾರೆ ಮತ್ತು ಗ್ರಾಮಕ್ಕೆ ರೋಗ ರುಜಿನೆಗಳು ಬಾರದಂತೆ ನಂಬಿಕೆ ಗ್ರಾಮಸ್ಥರಲ್ಲಿ ಇದ್ದು ಕಾರಣ ಸಗಣಿ ಓಕುಳಿಯಾಡುತ್ತಾರೆ.
ಎಲ್ಲೆಡೆ ಬಹುತೇಕವಾಗಿ ಹಾಲೋಕಳಿ, ನೀರೋಕಳಿ ಆಡಿದರೆ ಇಲ್ಲಿ ಗೋಮಾತೆಯ ಸಗಣಿ ಆಡುವುದು ವಿಶಿಷ್ಟವಾಗಿ ನೇರವೇರುತ್ತಿದೆ.