ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 62
ವಿಶ್ವವಾಣಿ ಕ್ಲಬ್ ಹೌಸ್’ನಲ್ಲಿ ಡಾ.ಬಿ.ಟಿ.ರುದ್ರೇಶ್ ಅಭಿಮತ
ದೇಶದಲ್ಲಿ ಸುಲಭವಾಗಿ ಸಿಗುವ ವೈದ್ಯ ಪದ್ಧತಿ ಹೋಮಿಯೋಪಥಿ
ಬೆಂಗಳೂರು: ಆಧುನಿಕ ವೈದ್ಯಕೀಯ ರಂಗ ಡ್ರಗ್ ಮಾಫಿಯಾದಲ್ಲಿ ತೊಡಗಿದೆ. ವೈದ್ಯ ವೃತ್ತಿ ಕಲೆಯೇ ಹೊರೆತು ಉದ್ಯಮವಲ್ಲ, ಅದು ಪ್ರೇರಣೆ ಹೊರತು ವ್ಯಾಪಾರವಲ್ಲ. ನಾವು ಆರೋಗ್ಯಕರ ವೈದ್ಯ ಪದ್ಧತಿ ಒಪ್ಪಬೇಕು ಎಂದು ನಾಡೋಜ, ವೈದ್ಯ ಡಾ. ಬಿ.ಟಿ. ರುದ್ರೇಶ್ ಹೇಳಿದರು.
ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಮಾತನಾಡಿದ ಅವರು, ಹೋಮಿಯೋಪಥಿ ಈ ದೇಶದಲ್ಲಿ ಸುಲಭವಾಗಿ ಸಿಗುವ ವೈದ್ಯ ಪದ್ಧತಿ. ಕಡಿಮೆ ದರದಲ್ಲಿ ಸಂಪೂರ್ಣ ಗುಣಮುಖರನ್ನಾಗಿಸುತ್ತದೆ. 100 ಕ್ಕೆ 40 ರಷ್ಟು ರೋಗಿಗಳಿಗೆ ಔಷಧ ಬೇಕಾಗಿಲ್ಲ. ಒಂದು ಕಾಯಿಲೆಗೆ ಹೆಸರಿಟ್ಟು ಔಷಧ ಕೊಡಬಾರದು. ರೋಗವಿಲ್ಲದೆ ಬದುಕುವುದು ಜೀವನ ಪದ್ಧತಿಗಳಿಂದ ಎಂದು ಹೇಳಿದರು.
20 ರು. ದರದಲ್ಲಿ ಕರೋನಾದಿಂದ ಗುಣಮುಖರಾಗಲು ಹೋಮಿಯೋಪಥಿ ಔಷಧ ಸಿದ್ಧ. ಆದರೆ ನಮ್ಮ ವೈದ್ಯ ಕೀಯ ಪದ್ಧತಿ ಇದನ್ನು ಒಪ್ಪಿಲ್ಲ. ಯಾವುದೇ ವೈದ್ಯಕೀಯ ವಿಜ್ಞಾನ, ವಿಜ್ಞಾನ ಆಗಲು ಸಾಧ್ಯವಿಲ್ಲ. ವೈದ್ಯಕೀಯ ವಿಜ್ಞಾನ ಸೈ ಆಫ್ ಮೆಟಿರಿಯಲ್ ಮಾಡುತ್ತಿದ್ದೇವೆ. ಸೈ ಆಫ್ ಮ್ಯಾನ್ ಮಾಡಿಲ್ಲ. ಹೋಮಿಯೋಪಥಿ ನೈಸರ್ಗಿಕ ಸಿದ್ಧಾಂತದ ಮೇಲೆ ನಿಂತಿದೆ ಎಂದು ತಿಳಿಸಿದರು.
ಆರೋಗ್ಯ ಎಂದರೆ ಕಾಯಿಲೆ ರಹಿತ ಸ್ಥಿತಿ ಎಂದು ಹೇಳಿತ್ತು ಡಬ್ಲ್ಯುಎಚ್‌ಒ. ಈಗ ಆರೋಗ್ಯದ ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ, ರಾಗ ದ್ವೇಷಗಳಿಲ್ಲದ ಸಮತೂಕದ ಸ್ಥಿತಿ, ಬದಲಾಗುತ್ತಿರುವ ಆಧುನಿಕ ಬದುಕಿನ ನಿರ್ಲಜ್ಜ ಅಶಿಸ್ತು ಆರೋಗ್ಯ ಹಾಳು ಮಾಡು ತ್ತಿದೆ. ಕಾಯಿಲೆಗಳು ಬ್ಯಾಕ್ಟೀರಿಯಾ, ವೈರಸ್‌ನಿಂದ ಬರುವುದು ಶೇ.೫೦. ವೈದ್ಯರು ಫ್ರೆಂಡ್ ಪಿಲಾಸಫರ್, ಗೈಡ್ ಆಗಿರಬೇಕು. ಆರ್ಥಿಕ ಸಾಮಾಜಿಕ ಸ್ಥಿತಿ ತಿಳಿದಿರಬೇಕು. ಕಾಯಿಲೆ ಬರಿ ಮೈಕ್ರೋಸ್‌ನಿಂದ ಬರುತ್ತದೆ ಎಂಬುದು ಸುಳ್ಳು ಎಂದು ಮಾಹಿತಿ ನೀಡಿದರು.
ಪುಡಿ ಎಂದು ಹೇಳಿದವರು: ಹೋಮಿಯೋಪಥಿ ವೈದ್ಯ ಪದ್ಧತಿಯನ್ನು ಪುಡಿ ಎಂದು ಹೇಳಿದವರು, ಇವತ್ತು ಅವರ ಮಕ್ಕಳು ನನ್ನ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ನಿಂದಕರನ್ನು ಆರಾಧಕರನ್ನು ಮಾಡಿದ ಕೀರ್ತಿ ನನಗಿದೆ. ಆಫ್ರಿಕ, ಅಮೆರಿಕ, ಕೆನಡಾ ಅನೇಕ ದೇಶಗಳಿಂದ ನಮ್ಮ ಕ್ಲಿನಿಕ್‌ಗೆ ಚಿಕಿತ್ಸೆಗೆ ಬರುತ್ತಾರೆ. ಕಬ್ಬಿನ ರಸಹೋದ ಸಿಪ್ಪೆಯಂತೆ ಬರುವವರನ್ನು ಆರೋಗ್ಯವಂತರನ್ನಾಗಿಸಿದ್ದೇನೆ. ನೂರಕ್ಕೆ 20 ರಷ್ಟು ದೊಡ್ಡ ದೊಡ್ಡ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರು, ವೈದ್ಯರು, ಸಿಬ್ಬಂದಿ ನಮ್ಮಲ್ಲಿ ಬರುತ್ತಾರೆ. ಹೋಮಿಯೋಪಥಿ ಗುಳಿಗೆ ಸಣ್ಣವು. ಯಾವುದು ಒಳ್ಳೆಯದು ಅದನ್ನು ಜನರಿಗೆ ಪುಗ್ಸಟ್ಟೆ ಕೊಡಬಾರದು ಎಂದರು.
ಆರೋಗ್ಯ ನಿಜವಾದ ಸಂಪತ್ತ
ಒಬ್ಬ ವೈದ್ಯ ಜನಪರ ಕಾಳಜಿ ಇಟ್ಟುಕೊಂಡರೆ ಜಗತ್ತು ನಮಗೆ ಏನು ಕೊಡುತ್ತದೆ ಎಂಬುದಕ್ಕೆ ನಾನೇ ನಿದರ್ಶನ. ಸಂತರು- ಶರಣರು ಹೇಳಿದಂತೆ ಆರೋಗ್ಯವೇ ಮಹಾಭಾಗ್ಯ. ಆರೋಗ್ಯ ನಿಜವಾದ ಸಂಪತ್ತು, ಚಿನ್ನದ ತುಣಕುಗಳಲ್ಲ ಎಂದು ಮಹಾತ್ಮಗಾಂಧಿ ಹೇಳಿದ್ದಾರೆ. ಮಹಾಮಹಿಮರಿಗೆ ಆರೋಗ್ಯದ ಮಹತ್ವ ಅರ್ಥ ವಾದಷ್ಟು ಈಗಿನ ಜನರಿಗೆ ಅರ್ಥ ಆಗಿಲ್ಲ ಎಂದರು. ವೈದ್ಯರು, ವೈದ್ಯ ಪದ್ಧತಿಗಳ ಗುಲಾಮರಾಗದೆ ಆರೋಗ್ಯ ಸಾಧಿಸಬಹುದು ಎಂದು ಹೋಮಿಯೋಪಥಿ ಹೇಳುತ್ತದೆ. ಮನಸು, ಬುದ್ಧಿ, ದೇಹ ಮೂರು ಸಾಂಗತ್ಯ ಸಾಮರಸ್ಯದಲ್ಲಿ ಕೆಲಸ ಮಾಡುತ್ತದೆ. ಹೆದರಿ ಬದುಕಬೇಕಾಗಿಲ್ಲ. ದೇವರು ಹುಟ್ಟಿದ ದಿನವೇ ಎಲ್ಲರಿಗೂ ವರ ಕೊಟ್ಟಿದ್ದೇನೆ. ಬುದ್ಧಿ, ಆಯ್ಕೆ, ನಿಯಂತ್ರಣ ಸಾಮರ್ಥ್ಯ ನಮ್ಮನ್ನು ಸಾಯೋವರೆಗೂ ಕಾಪಾಡುತ್ತದೆ. ಔಷಧವನ್ನು ಹೆಣಕ್ಕೆ ಹಾಕಿದರೆ ಮಾತನಾಡುತ್ತಾ? ಅನಾರೋಗ್ಯದಿಂದ ಆರೋಗ್ಯಕ್ಕೆ ತರುವುದು ಚಿಕಿತ್ಸೆ ಎಂದು ಡಾ. ರುದ್ರೇಶ್ ಹೇಳಿದರು.
ಆಧುನಿಕ ಅಶ್ವಿನಿ ದೇವತೆ
ದಿನಕ್ಕೆ 200ಕ್ಕೂ ಹೆಚ್ಚು ರೋಗಿಗಳ ತಪಾಸಣೆ ನಡೆಸುವ ಅತ್ಯಂತ ಹೆಚ್ಚು ಕಾರ್ಯನಿರತ ಡಾಕ್ಟರಲ್ಲಿ ಒಬ್ಬರಾದ ಡಾ.ಬಿ.ಟಿ. ರುದ್ರೇಶ್ ಅವರು ರೋಗಿಗಳ
ಆಶಾಕಿರಣ. ಒಂದರ್ಥದಲ್ಲಿ ಇವರು ಕಾಯಕವೇ ಕೈಲಾಸ ಎಂಬ ತತ್ತ್ವದಲ್ಲಿ ವಿಶ್ವಾಸ ಇಟ್ಟವರು. ಇವರಿಗೆ ವೃತ್ತಿ ಪ್ರವೃತ್ತಿ ಎರಡೂ ಒಂದೇ. ದಿನಕರ್ಮ ಕರ್ಮ ಯೋಗವಾಗಿದೆ. ಸಹಸ್ರಾರು ಬಂಜೆ ಮಹಿಳೆಯರಿಗೆ ಚಿಕಿತ್ಸೆ ನೀಡಿ ಅವರ ಮಡಿಲ ತುಂಬಿಸಿದ ಆಧುನಿಕ ಅಶ್ವಿನಿ ದೇವತೆ ಇವರಾಗಿದ್ದಾರೆ. ಅದಕ್ಕೆಂದೇ ಇವರ ಕ್ಲಿನಿಕ್ ಅಶ್ವಿನಿ, ಮನೆ ಮಡಿಲು ಎಂಬ ಅನ್ವರ್ಥಕನಾಮ ಪಡೆದಿವೆ.
ವೈದ್ಯರು ಹೇಳಿದ ಕಿವಿಮಾತು
ಗುರಿ ಸರಿಯಾಗಿದ್ದರೆ ದಾರಿ ಸರಿಯಾಗಿರಬೇಕು. ಅಡ್ಡದಾರಿಗಳನ್ನು ಹಿಡಿಯಬಾರದು.
ಔಷಧ ಕೊಡುವವರು ಫ್ರೆಂಡ್, ಫಿಲಾಸಫರ್ ಆಗಬೇಕು. ಹಾವು ಕಚ್ಚಿದರೆ ಹಾವಿನ ವಿಷವೆ (ಆಂಟಿ ವೆನಮ್ ಸ್ನೇಕ್) ಔಷಧ. ಇದನ್ನು ಒಪ್ಪುತ್ತದೆ ಹೋಮಿಯೋಪಥಿ.
ಆರೋಗ್ಯ ನಿರ್ವಹಣೆ ವೈದ್ಯರಿಂದ ಸಾಧ್ಯವಿಲ್ಲ. ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳಿಂದ ದೂರವಿರಬೇಕು. ಮನಸು ಬುದ್ಧಿ ಸಮರ್ಪಕವಾಗಿರಬೇಕು. ಅರ್ಥ ಅಂದರೆ ದುಡ್ಡು ಮಾತ್ರವಲ್ಲ. ಕಾಮ ಅಂದರೆ ಸೆಕ್ಸ್ ಅಲ್ಲ. ಅರ್ಥ ಮತ್ತು ಕಾಮಗಳು ಧರ್ಮದ ತಳಹದಿಯ ಮೇಲೆ ಇರದಿದ್ದರೆ ಆರೋಗ್ಯ ಕೆಟ್ಟು ಹೋಗುತ್ತದೆ.
ರೋಗವಿಲ್ಲದೆ ಬದುಕುವುದು ಈಗಲೂ ಸಾಧ್ಯ. ಆದರೆ ನಮ್ಮ ಜೀವನ ಶೈಲಿ ಬದಲಾಗಬೇಕು.
ಮಾನವೀಯ ಮೌಲ್ಯಗಳಿಗೆ ಎಲ್ಲಿಯ ತನಕ ಬೆಲೆ ಇರುತ್ತ ದೆಯೋ ಅಲ್ಲಿಯ ತನಕ ಆರೋಗ್ಯಕರ ಜೀವನ ನಡೆಸಲು ಸಾಧ್ಯ.
ಮಾಡುವುದೆಲ್ಲ ಮಾಡಿ ಆರೋಗ್ಯ ಚೆನ್ನಾಗಿರಬೇಕು ಎಂದರೇನು ಪ್ರಯೋಜನ? ನಾವು ಮೊದಲು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು.
ವಿಜ್ಞಾನಿಗಳ ದುಸ್ಸಾಹಸದ ಸವಾರಿ ನಿಸರ್ಗದ ವಿರುದ್ಧ.
ಮಕ್ಕಳ ಮುಂದೆ ಸೌಜನ್ಯದಿಂದ ವರ್ತಿಸಬೇಕು. ಸಮಾಜವೇ ಒಂದು ಕುಟುಂಬ ಇದ್ದ ಹಾಗೆ.
***
ಕರ್ನಾಟಕದಲ್ಲಿ ಹೋಮಿಯೋಪಥಿಯನ್ನು ’ಹೋಮ’ ನಂತೆ ಪರಿಗಣಿಸಿ ’ಪತಿ’ಯಂತೆ ನಡೆಸಿದವರು ಬಿ.ಟಿ. ರುದ್ರೇಶ್ ಅವರು. ದಿನಕ್ಕೆ ೨೦೦ಕ್ಕೂ ಹೆಚ್ಚು ಮಂದಿಗೆ ಅಶ್ವಿನಿ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ. ಪಾದರಸದಂಥ ವ್ಯಕ್ತಿತ್ವ ಹಾಗೂ ವಾಗ್ಮಿಗಳು ಅವರು. ಅವರಂತೆ ಆಗುವುದು ಬಹಳ ಕಷ್ಟ. ಕರ್ನಾಟಕದ ಹೋಮಿ ಯೋಪಥಿ ಮಂಡಳಿ ಸ್ಥಾಪಿಸಿದ ವ್ಯಕ್ತಿ. ರೋಗಿಗಳಿಗೆ ಮಾತ್ರವಲ್ಲ, ಬಡವರಿಗೂ ಸಹಾಯ ಮಾಡುವ ಅಪರೂಪದ ವ್ಯಕ್ತಿ.
-ವಿಶ್ವೇಶ್ವರ ಭಟ ವಿಶ್ವವಾಣಿ ಪ್ರಧಾನ ಸಂಪಾದಕರು
*
ವೈದ್ಯಕೀಯ ಜತೆಗೆ ಎಲ್ಲ ವಿಷಯಗಳ ಬಗ್ಗೆ ಓದುವ ಆಸಕ್ತಿ ಬಿ.ಟಿ. ರುದ್ರೇಶ್ ಅವರಿಗಿದೆ. ಅನೇಕ ಲೇಖನಗಳನ್ನು ಬರೆದಿದ್ದಾರೆ. ರೋಗಿಗಳಿಗೆ ಮರುಜೀವ ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ನಟ ರಾಜ್‌ಕುಮಾರ್ ಅವರಿಗೂ ಚಿಕಿತ್ಸೆ ನೀಡಿzರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದ್ದಾರೆ.
– ಷಡಕ್ಷರಿ ಅಂಕಣಕಾರರು