ಯಾವುದೇ ಮಾಹಿತಿ ನೀಡದ ಸರಕಾರ
ಜಿಲ್ಲಽಕಾರಿ ಬಳಿಯೂ ಮಾಹಿತಿ ಇಲ್ಲ
ವಿಶೇಷ ವರದಿ: ಹೆಗ್ಗೆರೆ ರೇಣುಕಾರಾಧ್ಯ ಶಿವಮೊಗ್ಗ
ಶಾಲಾ ಕಾಲೇಜುಗಳ ಆರಂಭಕ್ಕೆ ಹಸಿರು ನಿಶಾನೆ ತೋರಿಸಿರುವ ಸರಕಾರ ಅದೇ ಸಮಯಕ್ಕೆ ಮಕ್ಕಳು ಇರಲು ವಿದ್ಯಾರ್ಥಿನಿಲಯಗಳನ್ನು ಸಿದ್ಧತೆ ಮಾಡಿಕೊಳ್ಳ ದಿರುವುದು ದೊಡ್ಡ ಆತಂಕಕ್ಕೆ ಎಡೆ ಮಾಡಿದೆ. ನಾಳೆ ಬೆಳಗ್ಗೆಯಿಂದ 9 ರಿಂದ 12 ನೇ ತಗರತಿಗಳು ಆರಂಭವಾಗುತ್ತಿವೆಯಾದರೂ, ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಹಾಸ್ಟೆಲ್ಗಳನ್ನು ಆರಂಭ ಮಾಡಲು ಇದುವರೆಗೆ ಸರಕಾರ ಹಸಿರು ನಿಶಾನೆ ತೋರಿಲ್ಲ.
ಸರಕಾರದಿಂದ ಯಾವುದೇ ಮಾರ್ಗಸೂಚಿಗಳು ಬಿಡುಗಡೆಯಾಗಿಲ್ಲ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಯಾಗಲಿ ಅಥವಾ ಹಿಂದುಳಿದ ವರ್ಗಗಳ ಇಲಾಖೆ ಯಾಗಲಿ ಯಾವುದೇ ಖಚಿತ ಮಾಹಿತಿಯನ್ನು ನೀಡುತ್ತಿಲ್ಲ. ಸರಕಾರ ಇದುವರೆಗೆ ನಮಗೆ ಯಾವುದೇ ಆದೇಶವನ್ನು ನೀಡಿಲ್ಲ. ಆದ್ದರಿಂದ ನಾವು ಯಾವ ವಿದ್ಯಾರ್ಥಿಯನ್ನು ಹಾಸ್ಟೆಲ್ಗಳಿಗೆ ಸೇರಿಸಲು ಸಾಧ್ಯವಿಲ್ಲ. ಸರಕಾರ ಸೂಚನೆ ನೀಡಿದ ತಕ್ಷಣ ಎಲ್ಲ ಸಿದ್ಧತೆಗಳನ್ನು ಆರಂಭಿಸುವು ದಾಗಿ ತಾಲೂಕು ಅಧಿಕಾರಿ ಗಳು ಹೇಳುತ್ತಾರೆ.
ಶಿಕ್ಷಣ ಇಲಾಖೆಯ ಪ್ರಕಾರ ಪ್ರತಿ ವರ್ಷದಂತೆ ಕಾಲೇಜುಗಳು ಆರಂಭವಾದ ತಕ್ಷಣ ಸಂಬಂಧಪಟ್ಟ ಇಲಾಖೆ ಗಳು ವಿದ್ಯಾರ್ಥಿನಿಲಯಗಳನ್ನು ಆರಂಭ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇರುವುದಿಲ್ಲ. ಸರಕಾರದ ಆದೇಶದಂತೆ ನಾವು ಶಾಲೆಗಳನ್ನು ಆರಂಭ ಮಾಡುತ್ತೇವೆ ಎಂದು ಅಽಕಾರಿಗಳು ಹೇಳುತ್ತಾರೆ.
ಮೈ ಮರೆತ ಜಿಲ್ಲಾಡಳಿತ: ಶಾಲೆಗಳ ಆರಂಭಕ್ಕೆ ಕುರಿತಂತೆ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯನ್ನು ಸಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಪ್ರತಿ ತಾಲೂಕುಗಳ ಶಿಕ್ಷಣಾ ಧಿಕಾರಿಗಳು ಇದರಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ಜಿಲ್ಲೆಯಲ್ಲಿ ಇದುವರೆಗೆ ಅಂತಹ ಯಾವುದೇ ಸಭೆಯನ್ನು ಸಚಿವರಾಗಲಿ, ಜಿಲ್ಲಾಧಿಕಾರಿಯಾಗಲಿ ಮಾಡ ಲಿಲ್ಲ. ಶಾಲೆಗಳು ಹೇಗೆ ಆರಂಭವಾಗುತ್ತಿವೆ ಎಂಬುದರ ಕುರಿತು ಯಾವ ವಿವರಗಳನ್ನು ಜಿಲ್ಲಾಡಳಿತ ಗಳು ಸಂಗ್ರಹ ಮಾಡಿಲ್ಲ. ಕೇವಲ ಜಿಲ್ಲಾ ಮಟ್ಟದ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಗಮನಹರಿಸದ ಜಿಲ್ಲಾಧಿಕಾರಿ: ಕರೋನಾ ಮೂರನೇ ಅಲೆಯ ಭಯದ ನಡುವೆಯೆ ಶಾಲೆಗಳು ಆರಂಭವಾಗುತ್ತಿರುವುದರಿಂದ ಅದರ ಬಗ್ಗೆ ಜಿಲ್ಲಾಧಿಕಾರಿ ಯಾದರೂ ಸಭೆ ಮಾಡಿ ಮಾಹಿತಿ ಪಡೆಯಬೇಕಾಗಿತ್ತು. ಮಕ್ಕಳು ಶಾಲೆಗೆ ಬಂದರೆ ಅವರ ಸುರಕ್ಷಿತ ವ್ಯವಸ್ಥೆ ಏನು ಸಿದ್ಧತೆ ಮಾಡಿಕೊಳ್ಳಲಗಿದೆ ಎಂಬುದರ
ಕುರಿತು ವಿವರಗಳನ್ನು ಪಡೆಯಬಹುದಿತ್ತು. ಆದರೆ, ಅಂತಹ ಪ್ರಯತ್ನಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿದ್ಯಾರ್ಥಿ ನಿಲಯಗಳನ್ನು ನಿಭಾಯಿಸುತ್ತಿರುವ ಇಲಾಖೆಯ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ.
ಶಿವಮೊಗ್ಗ ನಗರ ಹೊರತುಪಡಿಸಿ ಇತರ ತಾಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿನಿಲಯಗಳಲ್ಲಿ ಇದ್ದು ಓದು ಮಕ್ಕಳ ಸಂಖ್ಯೆ ಬಹು ದೊಡ್ಡದಿದೆ. ಸೋಮವಾರ ದಿಂದಲೇ ಶಾಲೆಗೆ ಬನ್ನಿ ಎಂದರೆ, ಅವರು ಬಂದು ಎಲ್ಲಿ ಉಳಿದುಕೊಳ್ಳಬೇಕು ಎಂಬ ಸಾಮಾನ್ಯ ಅಂಶವನ್ನಾದರೂ ಅಧಿಕಾರಿಗಳು ಚಿಂತಿಸಬೇಕಾಗಿತ್ತು.
ಅಥವಾ ನೇರವಾಗಿ ವಿದ್ಯಾರ್ಥಿನಿಲಯಗಳಿಗೆ ಮಕ್ಕಳು ಬರಬಹುದೇ ಎಂಬ ಮಾಹಿತಿಯನ್ನು ಅಧಿಕಾರಿಗಳು ಹಂಚಿಕೊಂಡಿಲ್ಲ. ಇದು ಅನೇಕ ಗೊಂದಲಗಳಿಗೆ
ಕಾರಣವಾಗಿದೆ.
ಇದು ಶಿವಮೊಗ್ಗ ಜಿಲ್ಲೆಯ ಸಮಸ್ಯೆ ಮಾತ್ರವಲ್ಲ ಎಲ್ಲ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಮಕ್ಕಳು ಶಾಲೆಗೆ ಬರುತ್ತಾರೆ ಎಂದಾದರೆ, ಅವರಿಗೆ ವಿದ್ಯಾರ್ಥಿನಿಲಯಗಳ ಅವಶ್ಯಕತೆ ಇರುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅದು ಅನಿವಾರ್ಯ. ಆದರೆ, ಸರಕಾರ ಯಾವುದೇ ಸೂಚನೆ ನೀಡದೆ ನಾವು ವಿದ್ಯಾರ್ಥಿನಿಲಯಗಳನ್ನು ಆರಂಭಿಸುವಂತಿಲ್ಲ. ಈಗಾಗಲೇ ಪೋಷಕರು ದಿನವೂ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ನಮಲ್ಲಿಯೇ ಗೊಂದಲವಿರುವುದರಿಂದ ಅವರಿಗೆ ಉತ್ತರ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಅಽಕಾರಿಯೊಬ್ಬರು ಹೇಳುತ್ತಾರೆ. ಮೊರಾರ್ಜಿ, ಆದರ್ಶ ಶಾಲೆಗಳಲ್ಲಿ ಮಕ್ಕಳನ್ನು ಸ್ವಾಗತಿಸಲು ವ್ಯವಸ್ಥೆ ಮಾಡಲಾಗಿದೆಯಾದರೂ, ಇತರ ವಿದ್ಯಾರ್ಥಿ ನಿಲಯಗಳಲ್ಲಿ ಅಂತಗ ಯಾವುದೇ ಸಿದ್ದತೆಯಾಗಿಲ್ಲ.
ಪುನರ್ ಪ್ರವೇಶಕ್ಕೆ ಕಾಯಬೇಕು
ವಿದ್ಯಾರ್ಥಿನಿಲಯಗಳು ಆರಂಭವಾದರೂ, ಹಿಂದಿನ ಸಾಲಿನಲ್ಲಿ ನಿಲಯದಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಮತ್ತೆ ಪ್ರವೇಶ ಪ್ರಕ್ರಿಯೆ ಮುಗಿಸಬೇಕು. ಅಲ್ಲದೆ, ಅವರ ಪೋಷಕರು ಎಲ್ಲ ವಿವರಗಳನ್ನು ವಿದ್ಯಾರ್ಥಿನಿಲಯದ ಮೇಲ್ವಿಚಾರಕರಿಗೆ ನೀಡಬೇಕು. ಇದೆಲ್ಲವೂ ಒಂದು ವಾರಗಳ ಕಾಲ ಹಿಡಿಯುತ್ತದೆ. ಅನಂತರವಷ್ಟೇ ಪೂರ್ಣ ಪ್ರಮಾಣವಾಗಿ ವಿದ್ಯಾರ್ಥಿ ನಿಲಯಗಳು ಕಾರ್ಯಾರಂಭ ಮಾಡಲು ಸಾಧ್ಯ ಎಂಬುದು ಇಲಾಖೆಯ ಅಧಿಕಾರಿಗಳ ವಿವರಣೆ.
ತಾಲೂಕು ಮಟ್ಟದಿಂದ ಬಂದು ಜಿಲ್ಲಾಕೇಂದ್ರದಲ್ಲಿ ಓದುತ್ತಿರುವ ೧೨ ನೇ ತರಗತಿಯ ವಿದ್ಯಾರ್ಥಿಗಳು ಮತ್ತೆ ವಿದ್ಯಾರ್ಥಿ ನಿಲಯಗಳು ಇಲ್ಲದೆ, ಪರಿಚಯಸ್ಥರ
ಮನೆಗಳನ್ನು ಆಶ್ರಯಿಸಬೇಕಾಗಿದೆ. ಶಾಲಾ ಕಾಲೇಜುಗಳನ್ನು ಆರಂಭಿಸುವ ಮುನ್ನ ಶಿಕ್ಷಣ ಇಲಾಖೆಯು ಸಾರಿಗೆ, ಆರೋಗ್ಯ, ಸಮಾಜ ಕಲ್ಯಾಣ ಹಾಗೂ ಹಿಂದು ಳಿದ ವರ್ಗಗಳ ಇಲಾಖೆಯೊಂದಿಗೆ ಜಂಟಿ ಸಭೆ ಸೇರಿ ಚರ್ಚೆ ಮಾಡುತ್ತಿತ್ತು. ಆದರೆ, ಸರಕಾರ ಬದಲಾವಣೆಯಾದ ನಂತರ ಇಂತಹ ಯಾವುದೇ ಸಭೆಗಳು ನಡೆದಿಲ್ಲವಾದ್ದರಿಂದ ಎಲ್ಲರೂ ಗೊಂದಲಕ್ಕೆ ಸಿಲುಕಿದ್ದಾರೆ.