ಸಿಂಧನೂರು: ನೈರುತ್ಯ ರೈಲ್ವೆ ವಿಭಾಗದ ಮುಖ್ಯ ವ್ಯವಸ್ಥಾಪಕ ಸಂಜೀವ್ ಕಿಶೋರ್, ಮುಖ್ಯ ಕಾರ್ಯಾಚರಣೆ ವ್ಯವಸ್ಥಾಪಕ ಹರಿಶಂಕರ್ ವರ್ಮಾ, ಮುಖ್ಯ ಪ್ರವಾಸಿ ಸಾರಿಗೆ ವ್ಯವಸ್ಥಾಪಕ ರಾಮ ಲಿಂಗಮ್ ಹಾಗೂ ಮುಖ್ಯ ವ್ಯವಸ್ಥಾಪಕ ಅವರ ಕಾರ್ಯದರ್ಶಿ ಸಂತೋಷ ಹೆಗ್ಡೆಯವರನ್ನು ಆ.24 ರಂದು ಭೇಟಿ ಆಗಿ ಕಲ್ಯಾಣ ಕರ್ನಾಟಕದ ಭಾಗದಲ್ಲಿನ ಎಲ್ಲಾ ರೈಲು ಪ್ರಶ್ನೆಗಳ ಬಗ್ಗೆ ಚರ್ಚಿಸಲಾಯಿತು.
ಗಿಣಿಗೇರಿ-ರಾಯಚೂರು ಹೊಸ ರೈಲು ಮಾರ್ಗವನ್ನು ಸಿಂಧನೂರು ತನಕ ನಿರ್ಮಿಸಿ ಆದಷ್ಟು ಬೇಗ ಸಿಂಧ ನೂರು ನಗರಕ್ಕೆ ರೈಲ್ವೇ ಸಂಪರ್ಕ ನೀಡಬೇಕೆಂದು ಒಂದು ಬೇಡಿಕೆ ಪತ್ರ ನೀಡಲಾಯಿತು. ನಮ್ಮ ಈ ಬೇಡಿಕೆ ಗಳ ಉತ್ತರವಾಗಿ ವರ್ಷದೊಳಗಾಗಿ ಸಿಂಧನೂರು ನಗರಕ್ಕೆ ರೈಲು ಸಂಪರ್ಕಿಸುವ ಆಶ್ವಾಸನೆ ಸಂಜೀವ ಕಿಶೋರ್ ಅವರು ನೀಡಿದರು. ಹುಬ್ಬಳ್ಳಿ-ಗಂಗಾವತಿ ಮತ್ತು ಯಶವಂತಪುರ-ಹೊಸಪೇಟೆ ಎಕ್ಸ್ಪ್ರೆಸ್ ರೈಲು ಗಳನ್ನು ಶೀಘ್ರವೇ ಕಾರಟಗಿತನಕ ವಿಸ್ತರಣೆ ಮಾಡುವು ದಾಗಿ ಹರಿಶಂಕರ ವರ್ಮ ತಿಳಿಸಿದರು.
ಹಾಗೇನೇ ಈ ಚರ್ಚೆಯಲ್ಲಿ, ಲಾಕ್ಡೌನ್ ಮುಂಚೆ ಹೊಸಪೇಟೆ- ಹರಿಹರ ಮಾರ್ಗದಲ್ಲಿ ಚಲಿಸುತ್ತಿದ್ದ ವಿಜಯಪುರ – ಯಶವಂತಪುರ ಎಕ್ಸ್ಪ್ರೆಸ್ ರೈಲನ್ನು ಮೊದಲಿ ನಂತೆ ಪುನರಾರಂಭಿಸಬೇಕು, ಗುಂತಕಲ್- ಬಳ್ಳಾರಿ ಡೆಮೋ ಲೋಕಲ್ ಹುಬ್ಬಳ್ಳಿ ತನಕ ವಿಸ್ತರಿಸಬೇಕು, ಬಳ್ಳಾರಿ ಯಿಂದ ದಾವಣಗೆರೆಗೆ ಹೊಸಪೇಟೆ- ಹರಿಹರ ಮಾರ್ಗ ದಿಂದ ಹೊಸ ಡೆಮೋ ಲೋಕಲ್ ಆರಂಭಿಸಬೇಕು.
ಯಶವಂತಪುರ- ಗಂಗಾವತಿ, ಮತ್ತು ಹುಬ್ಬಳ್ಳಿ- ಗಂಗಾವತಿ ಎಕ್ಸ್ಪ್ರೆಸ್ ರೈಲುಗಳನ್ನು ಕಾರಟಗಿ ತನಕ ವಿಸ್ತರಿಸಿ ಆದಷ್ಟು ಬೇಗ ಆರಂಭಿಸಬೇಕು ಹಾಗೇನೇ ಕೊಲ್ಲಾಪುರದಿಂದ ಕಾರಟಗಿ ಹೊಸ ಎಕ್ಸ್ಪ್ರೆಸ್ ರೈಲನ್ನು ಪ್ರಾರಭಿಸ ಬೇಕೆಂದು ಕರ್ನಾಟಕ ರೈಲು ಪ್ರವಾಸಿ ಸಂಘದ ಸದಸ್ಯರಾದ ಅರುಣ್ ಮೇಘರಾಜ, ವಿನಾಯಕ್ ಕಾಟ್ವಾ, ಮಹೇಶ್ ಕಡತಿನಿ, ವೈ ಯಮುನೇಶ್, ಮುಂತಾ ದವರು ಒತ್ತಾಯಿಸಿ ಮನವಿ ಮಾಡಿದ್ದಾರೆ.