Saturday, 23rd November 2024

ಬೊಜ್ಜು ವರ, ಶಾಪವಲ್ಲ; ದೈಹಿಕ ಸ್ಥಿತಿ ಅಷ್ಟೆ

ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಡಾ. ಎಂ.ಬಿ. ಕವಿತಾ ಹೇಳಿಕೆ

ಬೊಜ್ಜನ್ನು ನಿರ್ವಹಣೆ ಮಾಡುವುದು ನಿಜ ಸವಾಲು

ಬೆಂಗಳೂರು: ಭಾರತದಲ್ಲಿ ಐವರಲ್ಲಿ ಒಬ್ಬರಿಗೆ ಬೊಜ್ಜಿನ ಸಮಸ್ಯೆ ಇದೆ. ಬೊಜ್ಜು ವರ- ಶಾಪವಲ್ಲ, ದೈಹಿಕ ಸ್ಥಿತಿಯಷ್ಟೆ. ಬೊಜ್ಜನ್ನು ಬೇಗ ಕಡಿಮೆ ಮಾಡುವುದು
ಸುಲಭ. ಆದರೆ ಅದನ್ನು ನಿರ್ವಹಣೆ ಮಾಡುವುದು ನಿಜವಾದ ಸವಾಲು ಎಂದು ಖ್ಯಾತ ವೈದ್ಯೆ ಡಾ. ಎಂ.ಬಿ. ಕವಿತಾ ತಿಳಿಸಿದರು.

ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬೊಜ್ಜು ರೋಗದ ಲಕ್ಷಣವೇ ಎಂಬ ಪ್ರಶ್ನೆ ಎದುರಾಗುವುದು ಸಾಮಾನ್ಯ. ವಿಶ್ವ ಆರೋಗ್ಯ ಸಂಸ್ಥೆ ಹೇಳಿದಂತೆ ’ಬೊಜ್ಜು ಒಂದು ರೋಗವಲ್ಲ, ಬಹಳಷ್ಟು ರೋಗಕ್ಕೆ ಕಾರಣವಾಗುವ ದೇಹದ ಸ್ಥಿತಿ’. ಬೊಜ್ಜು ನಿಯಂತ್ರಣ ಮಾಡುವುದೆ ಇತ್ತೀಚಿಗಿನ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು.

ಆಹಾರ ಮತ್ತು ಚಟುವಟಿಕೆ, ಅನುವಂಶೀಯತೆಯಿಂದ ಬೊಜ್ಜು ಬರುತ್ತದೆ. ಅನುವಂಶೀಯತೆಯಿಂದ ಬರುವ ಬೊಜ್ಜನ್ನು ಹುಷಾರಾಗಿ ತಡೆಗಟ್ಟಬೇಕು. ಅಮೆರಿಕ ಫಿಲಾಸಫರ್ ರಾಲ್ಫ್ ವಾಲ್ಡೋ ಎಮರ್ಸನ್ ಹೇಳಿದಂತೆ ನಾನು ಯಾವ ತರಹದ ಆಹಾರ ಸೇವಿಸಿದ್ದೇನೆ ನೆನಪಿಲ್ಲ, ನನ್ನ ಸ್ಥಿತಿಗೆ ಅದು ಕಾರಣವಾಗಿದೆ ಎಂದು ಹೇಳಿ ದ್ದಾರೆ. ಆಯುರ್ವೇದ ನುಡಿಯಂತೆ ’ಆಹಾರದಿಂದಲೇ ನಮ್ಮ ಜೀವನ ಶುರು, ರೋಗಗಳಿಗೂ ಕಾರಣ’ ಎಂದು ಅವರು ವಿವರಿಸಿದರು.

ಮಿದುಳಿನ ಮೇಲೆ ದಾಳಿ: ಯಾರ ಎದೆಯ ಹಾಗೂ ಹೊಟ್ಟೆಯ ಭಾಗ ಅಲುಗಾಡುತ್ತದೆ ಅಂತಹ ಜನರನ್ನು ಸ್ಥೂಲಕಾಯ ಅಥವಾ ಬೊಜ್ಜುಳ್ಳವರು ಎಂದು ಕರೆಯಲಾಗುತ್ತದೆ. ಚಯಾಪಚಯ ಕ್ರಿಯೆ ಸರಿಯಾಗಿ ಇಟ್ಟು ಕೊಂಡರೆ ಆರೋಗ್ಯದಿಂದ ಇರಲು ಸಾಧ್ಯ. ಅತಿಯಾಗಿ ಯಾರು ಮಾನಸಿಕ ತೊಂದರೆಯಿಂದ ಇರುತ್ತಾರೋ ಅವರು ಚೆನ್ನಾಗಿ ಆಹಾರ ಸೇವನೆ ಮಾಡುತ್ತಾರೆ. ಆಗ ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಆಗದಿದ್ದರೆ ವಿಷವನ್ನು ದೇಹ ಬಿಡುಗಡೆ ಮಾಡುತ್ತದೆ. ಅದು ಮಿದುಳಿನ ಮೇಲೆ ದಾಳಿ ಮಾಡುತ್ತದೆ ಎಂದು ವಿವರಿಸಿದರು.

ನೀವು ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಆಗ ಮಾತ್ರ ಬೊಜ್ಜಿನ ನಿವಾರಣೆ ಸಾಧ್ಯ. ಇದಕ್ಕೆ ಒಂದು ನಿದರ್ಶನವಿದೆ. ಒಂದು ಹುಡುಗಿ ಕೆಟ್ಟ ಆಹಾರ ಪದ್ಧತಿ ರೂಢಿಸಿಕೊಂಡಿರುತ್ತಾಳೆ. ನಾಲ್ಕು ದಿನ ವ್ಯಾಯಾಮ ಮಾಡುವುದು. ಮತ್ತೆ ಚೆನ್ನಾಗಿ ಊಟ ಮಾಡುವುದು. ಎಷ್ಟು ಕಷ್ಟಪಟ್ಟರೂ ತೂಕ ಇಳಿಯಲಿಲ್ಲ. ಒಂದು ಸಲ ಆಕೆಗೆ ಅಪಘಾತವಾಯಿತು. ಆಗ ಆಯುರ್ವೇದ ವೈದ್ಯರು, ನಿಮ್ಮ ತೂಕ ಕಡಿಮೆ ಮಾಡಿ, ಓಡಾಡಲು ಕಾಲು ಸಹಕರಿಸುತ್ತದೆ ಎಂಬ ಸಲಹೆ ನೀಡಿದರು.
ಆಕೆ ಒಂದು ವರ್ಷದಲ್ಲಿ ಯಾವುದೇ ಔಷಧ ಸಹಾಯವಿಲ್ಲದೆ ೨೦ ಕೆ.ಜಿ. ತೂಕ ಕಡಿಮೆ ಮಾಡಿಕೊಳ್ಳುತ್ತಾಳೆ ಎಂದು ಅವರು ಮಾಹಿತಿ ನೀಡಿದರು.

ಬೊಜ್ಜನ್ನು ಕರಗಿಸಲು ಯೋಗಾಸನಗಳಾದ ಪಾದಹಸ್ತಾಸನ, ಭುಜಂಗಾಸನ, ಶಲಭಾಸನ ಮತ್ತು  ಣಾಯಾಮಗಳಾದ ನಾಡಿಶೋಧನ, ಭ್ರಾಮರಿ ಮುಂತಾದ
ಅಭ್ಯಾಸದಿಂದ ಸಾಧ್ಯ ಎಂದರು.

ಬೊಜ್ಜು ಬರಲು ಕಾರಣವೇನು ?

ಅತಿಯಾಗಿ ತಿನ್ನುವುದು. ಒಂದೇ ಸಲ ಹೊಟ್ಟೆ ತುಂಬಾ ಊಟ ಅಥವಾ ಪದೇಪದೆ ತಿನ್ನುವುದು.
? ಅಜೀರ್ಣ ಕ್ರಿಯೆ. ಜೀರ್ಣ ಶಕ್ತಿಗಿಂತಲೂ ಮೀರಿ ಆಹಾರ ತಿನ್ನುವುದು. ಜಿಡ್ಡುಳ್ಳ ಆಹಾರ ಸೇವನೆ.
? ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಸೇವನೆ.
? ವ್ಯಾಯಾಮ ರಹಿತ ಜೀವನ.
? ಫಾಸ್ಟ್ ಫುಡ್ ಆಹಾರಗಳ ಸೇವನೆ. ಬಿಂದಾಸ್ ಜೀವನದ ಯೋಚನೆ.

ಬೊಜ್ಜು ತಡೆಗಟ್ಟಲು ಏನು ಮಾಡಬೇಕು ?

? ಆರೋಗ್ಯವಂತನಾಗುವ ಉದ್ದೇಶ ನಮ್ಮದಾಗಿರಬೇಕು.
? ನಮ್ಮ ಜೀವನಶೈಲಿ ಬದಲಾವಣೆ ಮಾಡಿಕೊಳ್ಳಬೇಕು.
? ನಿತ್ಯವೂ ವ್ಯಾಯಾಮ ಮಾಡಬೇಕು.
? ದೇಹ ಸ್ಥಿತಿಗೆ ಅನುಗುಣವಾದ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು.
? ಗಂಟೆ ನೋಡಿ ತಿನ್ನಬಾರದು, ಹೊಟ್ಟೆಯ ನಮಗೆ ಗಡಿಯಾರ

ಆಹಾರ ವಿಧಾನಗಳು ಹೀಗಿರಲಿ

? ಮನಸ್ಸು, ಏಕಾಗ್ರತೆಯಿಂದ ಆಹಾರ ಸೇವಿಸಬೇಕು.
? ಸಿಹಿ,ಕಹಿ, ಹುಳಿ, ಉಪ್ಪು, ಖಾರ, ಒಗರು ಪ್ರತಿ ಆಹಾರದಲ್ಲೂ ಇರಬೇಕು.
? ಕಹಿ ಮತ್ತು ಒಗರನ್ನು ನಾವು ಸೇವನೆ ಮಾಡಬೇಕು.
? ಬೇಗ ತಯಾರಿಸಿದ ಆಹಾರ ರೋಗಗಳನ್ನು ತಂದೊಡ್ಡುತ್ತದೆ. ಇಂತಹ ತಿಂಡಿಗಳಿಂದ ದೂರವಿರಬೇಕು.
? ಆಹಾರದಕಡೆ ಸಂಪೂರ್ಣ ಗಮನಕೊಟ್ಟು ಸವಿಯಬೇಕು. ತಿನ್ನೋದಲ್ಲ, ಸವಿಯಬೇಕು.
? ಪಾಲಿಷ್ ಮಾಡಿದ ಅಕ್ಕಿಯಾವಾಗಲೂ ಒಳ್ಳೆಯದಲ್ಲ. ಕುಚ್ಚುಲು ಅಕ್ಕಿ ತುಂಬಾ ಒಳ್ಳೆಯದು.

ಯಾವ ಆಹಾರ ಸೇವನೆ, ಹೇಗಿರಬೇಕು ?

? ಬಣ್ಣಕಟ್ಟಿದ ಅಕ್ಕಿ. ಪಾಲಿಶ್ ಮಾಡಿದ ಧಾನ್ಯಗಳನ್ನು ತಿನ್ನಬಾರದು.
? ಎ ತರಹದ ಧಾನ್ಯಗಳನ್ನು ನಿಯಮಿತವಾಗಿ ತಿನ್ನಬೇಕು.
? ತರಕಾರಿ ಇರುವ ಆಹಾರ ಸೇವಿಸಬೇಕು.
? ವ್ಯಾಯಾಮ ರೂಪದ ದೈಹಿಕ ಚಟುವಟಿಕೆ ಮಾಡಬೇಕು.

***

ಡಾ. ಕವಿತಾ ಅವರು ಆಯುರ್ವೇದದಲ್ಲಿ ಎಂ.ಡಿ. ಮಾಡಿ, ಪಿಎಚ್.ಡಿ ಮಾಡಿದ್ದಾರೆ. ಯೋಗದಲ್ಲಿ ೧೯ ವರ್ಷ ಅನುಭವ ಹೊಂದಿದ್ದಾರೆ. ೩೦ಕ್ಕೂ ಹೆಚ್ಚು ಸಂಶೋ ಧನಾ ಜರ್ನಲ್‌ಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿದ್ದಾರೆ. ರಾಜೀವ್ ಗಾಂಽ ವಿವಿಯಲ್ಲಿ ಮಾರ್ಗದರ್ಶಕರಾಗಿದ್ದಾರೆ. ಮಧುಮೇಹ, ಬೊಜ್ಜು ನಿರ್ವಹಣೆ ಕುರಿತು ವಿಷಯದ ಬಗ್ಗೆ ಅಗಾಧ ಜ್ಞಾನ ಹೊಂದಿದ್ದಾರೆ.
– ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು