Friday, 13th December 2024

ವಿಶೇಷ ಜನಸ್ಪಂದನಾ ಮತ್ತು ಕುಂದು ಕೊರತೆ ವಿಚಾರಣಾ ಸಭೆ

ಹರಪನಹಳ್ಳಿ: ಸಾರ್ವಜನಿಕರಂತೆ ಬಿಜೆಪಿಯ ಹಿರಿಯ ಮುಖಂಡರು ಸರತಿ ಸಾಲಿನಲ್ಲಿ ಕುಳಿತು ಅಹವಾಲು ಸಲ್ಲಿಸಿದ ಪ್ರಸಂಗ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಬಾಬುಜಗಜೀವನ್ ರಾಮ್ ಭವನದಲ್ಲಿ ನಡೆದಿದೆ.

ಶಾಸಕ ಜಿ.ಕರುಣಾಕರರೆಡ್ಡಿ ಅವರ ಸಮ್ಮುಖದಲ್ಲಿ ತಾಲೂಕು ಆಡಳಿತದ ವತಿಯಿಂದ ಗುರವಾರದಂದು ನಡೆದ ವಿಶೇಷ ಜನಸ್ಪಂದನಾ ಸಭೆ ಮತ್ತು ಸಾರ್ವಜ ನಿಕರ ಕುಂದು ಕೊರತೆ ವಿಚಾರಣೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಬಹುತೇಕ ಬಿಜೆಪಿಯ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಹೊತ್ತು ಶಾಸಕರು ಮತ್ತು ಅಧಿಕಾರಿಗಳ ಎದುರು ದೂರುಗಳ ಸುರಿಮಳೆ ಗೈದಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ಬೆಣ್ಣಿಹಳ್ಳಿ ಕರೆಗೌಡ ಚಿಗಟೇರಿ ನಾಡಕಛೇರಿಯಲ್ಲಿ ಗಣಕಯಂತ್ರ ನಿರ್ವಾಹಕರು ಜಮೀನಿಗೆ ಸಂಬ0ಧಿಸಿದ ನಕಾಶೆ ತೆರೆದು ಕೊಡಲು ಹದಿನೈದು ನೂರರಿಂದ ಎರಡು ಸಾವಿರದವರೆಗೆ ಹಣ ಕೇಳುತ್ತಾನೆ ಎಂದು ದೂರು ನೀಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಸಕರ ಎದುರು ತಮ್ಮ ಅಳಲು ತೋಡಿಕೊಂಡರು. ಆಗ ಶಾಸಕರು ಮಾತನಾಡಿ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷರು, ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಸಹ ಹೀಗೆ ಮಾಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬಂದಿವೆ ಹಾಗಾಗಿ ಇವರುಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಇದ್ದ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಅವರಿಗೆ ಸೂಚಿಸಿದರು.

ಬಿಜೆಪಿ ಹಿರಿಯ ಮುಖಂಡ ಬಾಗಳಿ ಕೊಟ್ರೇಶಪ್ಪ ಮಾತನಾಡಿ ಬಾಗಳಿ ಹಾಗೂ ಕೋಡಿಹಳ್ಳಿ ಗ್ರಾಮಗಳಲ್ಲಿ ೧೦ಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳು ದುರಸ್ಥಿ ಯಲ್ಲಿದ್ದರೂ ಇದುವರೆಗೂ ಅಧಿಕಾರಿಗಳು ದುರಸ್ಥಿಗೆ ಮುಂದಾಗಿಲ್ಲ ಎಂದರು ಆಗ ಅಧಿಕಾರಿಗಳ ಮೇಲೆ ಗರಂ ಆದ ಶಾಸಕರು ಕೂಡಲೇ ಸರಿಪಡಿಸುವಂತೆ ತಿಳಿಸಿದರು.

ಮುಖಂಡ ನಿಟ್ಟೂರು ಸಣ್ಣಹಾಲಪ್ಪ ಮಾತನಾಡಿ ಕಳೆದ ಎರಡು ವರ್ಷಗಳ ಹಿಂದೆ ಪುರಸಭೆ ವ್ಯಾಪ್ತಿಯ ಮನೆಗಳಿಗೆ ಅಕ್ರಮ ಸಕ್ರಮದಲ್ಲಿ ಹಕ್ಕುಪತ್ರ ನೀಡಿದ್ದು ಇದುವರೆಗೂ ಫಲಾನುಭವಿಗಳಿಗೆ ಖಾತೆ ನೀಡಿಲ್ಲ ಎಂದು ದೂರು ನೀಡಿದರು ಆಗ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿಗಳಿಗೆ ಇರುವ ತೊಡಕುಗಳನ್ನು ಸರಿಪಡಿಸಿ ಎಂದು ತಾಕಿತು ಮಾಡಿದರು.

ಕಾರ್ಮಿಕ ಸಂಘಟನೆ ಮುಖಂಡ ಗುಡಿಹಳ್ಳಿ ಹಾಲೇಶ್ ಮಾತನಾಡಿ ತಾಲೂಕಿ ಅರಸೀಕೆರೆ ನಾಡಕಛೇರಿಯಲ್ಲಿ ಸರ್ವರ್, ಯುಪಿಎಸ್ ತೊಂದರೆ ಇರುವುದರಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದ್ದು ಕೂಡಲೇ ಸರಿಪಡಿಸುವಂತೆ ದೂರು ಸಲ್ಲಿಸಿದರು ಆಗ ಶಾಸಕ ಕರುಣಾಕರರೆಡ್ಡಿ ಅವರು ಸಾಸ್ವಿಹಳ್ಳಿ, ಹುಣಿಸಿಹಳ್ಳಿ ಗ್ರಾಮಗಳಲ್ಲಿಯೂ ಇದೆ ಸಮಸ್ಯೆ ಎದುರಾಗಿದ್ದು ಕೂಡಲೆ ಸರಿ ಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಶಾಸಕ ಜಿ.ಕರುಣಾಕರರೆಡ್ಡಿಯವರು ಕೋವಿಡ್ ಹಿನ್ನಲೆಯಲ್ಲಿ ಈಗ ಪಟ್ಟಣದಲ್ಲಿ ಮಾತ್ರ ಜನಸ್ಪಂದನಾ ಕಾರ್ಯಕ್ರಮ ಮಾಡುತ್ತಿದ್ದೇವೆ, ಕೋವಿಡ್ ಇಳಿಮುಖವಾದ ನಂತರ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ಹೇಳಿದರು. ಕಂದಾಯ ಇಲಾಖೆ, ಕೃಷಿ, ತೊಟಗಾರಿಕೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಸಮಸ್ಯೆಗಳನ್ನು ಸಾರ್ವಜನಿಕರ ಎದುರೇ ಬಗೆ ಹರಿಸಲಾಯಿತು.

ಸಭೆಯಲ್ಲಿ ಡಿವೈಎಸ್ಪಿ ವಿ.ಎಸ್.ಹಾಲಮೂರ್ತಿರಾವ್, ತಹಶೀಲ್ದಾರ ಎಲ್.ಎಂ.ನAದೀಶ, ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಸಿಪಿಐ ನಾಗರಾಜ ಎಂ ಕಮ್ಮಾರ, ಪಿಎಸ್‌ಐ ಸಿಪ್ರಕಾಶ್, ವಲಯ ಅರಣ್ಯಾಧಿಕಾರಿ ಭರತ ಡಿ ತಳವಾರ, ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.