ಕೋಲ್ಕತ್ತ: ಪ.ಬಂಗಾಳದ ವಿಷ್ಣುಪುರದ ಬಿಜೆಪಿಯ ಮಾಜಿ ಶಾಸಕ ತನ್ಮಯ್ ಘೋಷ್ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
‘ಬಿಜೆಪಿಯು ಸೇಡಿನ ರಾಜಕೀಯದಲ್ಲಿ ತೊಡಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸುವಂತೆ ನಾನು ಎಲ್ಲ ರಾಜಕಾರಣಿಗಳಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ 292 ಸ್ಥಾನಗಳ ಪೈಕಿ ಟಿಎಂಸಿ 212 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಮಮತಾ ಸತತ 3ನೇ ಅವಧಿಗೆ ಅಧಿಕಾರ ಉಳಿಸಿಕೊಂಡಿ ದ್ದರು. 77 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿರುವ ಬಿಜೆಪಿಯು ಪ್ರಮುಖ ವಿರೋಧ ಪಕ್ಷವಾಗಿ ರೂಪು ಗೊಂಡಿತ್ತು.
ಬ್ಯಾನರ್ಜಿ ಅವರು ಸಿಎಂ ಆದ ನಂತರ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಮತ್ತು ಅವರ ಪುತ್ರ ಸುಭ್ರಾಘ್ಷು ರಾಯ್ ಅವರು ಎರಡು ತಿಂಗಳ ಹಿಂದೆ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು.