Saturday, 23rd November 2024

ಲಸಿಕಾ ಕೇಂದ್ರದಲ್ಲಿ ಕಾಲ್ತುಳಿತ: 20 ಮಂದಿಗೆ ಗಂಭೀರ ಗಾಯ

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯದ ಲಸಿಕಾ ಕೇಂದ್ರದಲ್ಲಿ ಕಾಲ್ತುಳಿತ ಉಂಟಾಗಿದ್ದು, 20 ಮಂದಿಗೆ ಗಂಭೀರ ಗಾಯಗಳಾಗಿವೆ.

ಉತ್ತರ ಬಂಗಾಳದ ಜಲಪೈ ಗುರಿಯ ದುಪ್ಗುರಿ ಬ್ಲಾಕ್ ನಲ್ಲಿ ಲಸಿಕಾ ಕೇಂದ್ರವಾಗಿ ಶಾಲೆಯೊಂದನ್ನು ಪರಿ ವರ್ತಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಟೀ ಗಾರ್ಡನ್ ಜನರಿಂದ ಒಮ್ಮೆಲ್ಲೆ ನೂಕು ನೂಗಲು ಉಂಟಾದ್ದರಿಂದ ಈ ಘಟನೆ ಸಂಭವಿಸಿದೆ. 2 ಸಾವಿರ ಜನರು ಲಸಿಕಾ ಕೇಂದ್ರದ ಬಳಿ ನೆರೆದಿದ್ದರು. ಭದ್ರತೆಗೆ ಪೊಲೀಸರನ್ನು ನಿಯೋಜಿಸಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಜಲ ಪೈಗುರಿ ಜಿಲ್ಲೆಯ ಕೋವಿಡ್-19 ಲಸಿಕಾ ಕೇಂದ್ರವೊಂದರ ಬಳಿ ಕಾಲ್ತುಳಿತ ಸಂಭವಿಸಿದ್ದು, ಸುಮಾರು 10 ಜನರು ಗಾಯಗೊಂಡಿದ್ದಾರೆ. 30 ಜನ ಗಾಯಗೊಂಡಿದ್ದರೂ ಪೊಲೀಸರು 20 ಜನ ಗಾಯಗೊಂಡಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಗಾಯಾಳುಗಳ ಪೈಕಿ ಐವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯರು ಹೇಳಿ ದ್ದಾರೆ.

ಸುಮಾರು 30 ಮಂದಿ ಗಾಯಗೊಂಡಿದ್ದು, 8 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಅಪಾರ ಪ್ರಮಾಣದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ಪರಿಸ್ಥಿತಿ ತಹಬದಿಗೆ ಬಂದಿದೆ.

ಕಳೆದ ವಾರವಷ್ಟೇ ಭಾರತದಲ್ಲಿ ಒಂದೇ ದಿನದಲ್ಲಿ 1 ಕೋಟಿ ಕೊರೊನಾ ಲಸಿಕೆ ವಿತರಣೆ ಮಾಡಲಾಗಿತ್ತು, ಇದೀಗ ಮತ್ತೊಂದು ದಾಖಲೆ ಸೃಷ್ಟಿಸಿದ್ದು ಮಂಗಳ ವಾರ ಸಂಜೆ 8 ಗಂಟೆಯವರೆಗೆ 1.21 ಕೋಟಿ ಕೊರೊನಾ ಲಸಿಕೆಯನ್ನು ವಿತರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.