ಹೈದರಾಬಾದ್: ಫ್ರೆಂಚ್ ಮಹಿಳೆಯ ಶವ ಗೋಣಿ ಚೀಲದೊಳಗೆ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಮೇರಿ ಕ್ರಿಸ್ಟೀನ್ ಎಂಬ 68ರ ಪ್ರಾಯದ ಮಹಿಳೆ ಹೈದರಾಬಾದಿನ ರಾಜೇಂದ್ರನಗರದಲ್ಲಿ ವಾಸವಿದ್ದರು.
ಫ್ರಾನ್ಸ್ ಪ್ರಜೆ ಮೇರಿ 20 ವರ್ಷಗಳ ಹಿಂದೆ ಹೈದರಾಬಾದಿಗೆ ಇಬ್ಬರು ಪುತ್ರಿಯರೊಡನೆ ಆಗಮಿಸಿದ್ದರು. ಇಬ್ಬರು ಪುತ್ರಿಯರು ವಿವಾಹವಾಗಿ ಫ್ರಾನ್ಸ್ ಗೆ ಹಿಂದಿರು ಗಿದ್ದರು. ನಂತರ ಮೇರಿ ಒಬ್ಬಳು ಹೆಣ್ಣುಮಗಳನ್ನು ದತ್ತು ಪಡೆದು, ಒಂದೇ ಮನೆಯಲ್ಲಿ ವಾಸವಿದ್ದರು.
ಇತ್ತೀಚಿಗೆ ದತ್ತು ಪುತ್ರಿ ಓರ್ವ ಹುಡುಗನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ನಂತರ ಆಕೆ ಮೇರಿ ಆಸ್ತಿಯಲ್ಲಿ ಪಾಲು ನೀಡಬೇಕೆಂದು ಒತ್ತಾಯಿಸಿದ್ದಲ್ಲದೇ, ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ದತ್ತು ಪುತ್ರಿ ತನ್ನ ಪ್ರಿಯಕರನೊಡನೆ ಸೇರಿ ಮೇರಿ ಕೊಲೆ ಮಾಡಿ ಆಕೆಯ ದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಕೆರೆಗೆ ಎಸೆದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.