Saturday, 23rd November 2024

ನಕಾರಾತ್ಮಕ ಪ್ರದರ್ಶನ: ಶೇ.0.17ನಷ್ಟು ಕುಸಿತ ಕಂಡ ನಿಫ್ಟಿ

ಮುಂಬೈ: ಸೆನ್ಸೆಕ್ಸ್ ಸೋಮವಾರ 162.8 ಪಾಯಿಂಟ್‌ಗಳಲ್ಲಿ 58,142.27 ವಹಿವಾಟು ನಡೆಸಿದ್ದು, ಬಿಎಸ್‌ಇ ಸೆನ್ಸೆಕ್ಸ್ 58,050ರ ಆಸುಪಾಸಿನಲ್ಲಿದೆ.

ನಿಫ್ಟಿ 50, 30 ಪಾಯಿಂಟ್‌ಗಳಲ್ಲಿ 0.17%ನಷ್ಟು ಕುಸಿತದೊಂದಿಗೆ 17,339 ವಹಿವಾಟನ್ನು ದಾಖಲಿಸಿದೆ ಯಾದರೂ ಪ್ರಸ್ತುತ ಮೌಲ್ಯ 17,350 ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.

ಭಾರತೀಯ ಮಾರುಕಟ್ಟೆಯು ನಕಾರಾತ್ಮಕವಾಗಿ ಪ್ರದರ್ಶನ ತೋರಿದ್ದು (Asian Market) ಏಷ್ಯಾದ ಮಾರುಕಟ್ಟೆಗಳು ಅತೃಪ್ತ ಪ್ರದರ್ಶನವನ್ನು ತೋರಿದ್ದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ವಹಿವಾಟುಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕೆಲವು ಸಂಸ್ಥೆಗಳೆಂದರೆ ಕೋಲ್ ಇಂಡಿಯಾ, ಹಿಂಡಾಲ್ಕೊ ಉತ್ತಮ ಪ್ರದರ್ಶಕರ ಸ್ಥಾನಗಳಲ್ಲಿವೆ.

ಕೋಲ್ ಇಂಡಿಯಾ 1.48% ನಷ್ಟು ಏರಿಕೆ ಕಂಡಿದ್ದು, ಹಿಂಡಾಲ್ಕೊ 1.42% ನಷ್ಟು ಹೆಚ್ಚಳ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ಅಗ್ರ ಗಳಿಕೆ ನಡೆಸಿದ ಹಿರಿಮೆ ನಿಫ್ಟಿ ಮೀಡಿಯಾದ್ದಾಗಿದೆ. ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ, ನಿಫ್ಟಿ ಫೈನಾನ್ಶಿಯಲ್ ಸರ್ವೀಸಸ್ ಕಡಿಮೆ ವಹಿವಾಟು ನಡೆಸುತ್ತಿದೆ.